ಕಣ್ಮುಂದೆ ಮದ್ಯ ನಾಶ! 'ನಮ್‌ ಹೊಟ್ಟೆ ಎಷ್ಟ್‌ ಉರ್ಸ್‌ತಾರೋ..ʼ ಅಂತ ಬಾಟಲಿ ಹೊತ್ತೊಯ್ದ ಜನ

ಮದ್ಯ ಪ್ರಿಯರು ಎಣ್ಣೆಗಾಗಿ ಪ್ರಾಣ ಬಿಡುವ ಮಟ್ಟಕ್ಕೂ ಇಳಿಯುತ್ತಾರೆ. ಎಣ್ಣೆಯ ಚಮತ್ಕಾರವೇ ಅಂತದ್ದೇನೋ ಗೊತ್ತಿಲ್ಲ. ಒಂದು ಎಣ್ಣೆ ಪಾರ್ಟಿ ಅಂದ ಕೂಡಲೇ ಬಾಯಿ ಬಿಟ್ಕೊಂಡು ಕೇಳೋ ಮಂದಿ ಮುಂದೆ ನೂರಾರು ಬಾಟಲಿ ಇಟ್ಟು ಕಣ್ಮುಂದೆಯೇ ಅದನ್ನು ಮಣ್ಣುಪಾಲು ಮಾಡ್ತಿದ್ರೆ ಎಷ್ಟು ಹೊಟ್ಟೆ ಉರಿಯೋದಿಲ್ಲ ಹೇಳಿ?

ಇನ್ನೇನು ಮದ್ಯ ನಾಶ ಮಾಡೋಕೆ ಅಂತಾ ಸ್ಟೈಲಾಗಿ ಜೋಡಿಸಿದ್ದ ಬಾಟಲಿಗಳನ್ನು ನೋಡಿದ್ದೇ ತಡ, ಕೈಗೆ ಸಿಕ್ಕಷ್ಟು ಎತ್ತಾಕೊಂಡು ಅಲ್ಲಿಂದ ಜನ ಪರಾರಿಯಾಗಿದ್ದಾರೆ. ಇಂತಹ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

People Carrying Bottles Of Liquor That Were Being Destroyed

ಈ ತಮಾಷೆಯ ಸಂಗತಿ ಆಂಧ್ರಪ್ರದೇಶದ ಗುಂಟೂರು ಬಳಿ ನಡೆದಿದೆ ಎಂದು ವರದಿಯಾಗಿದೆ. ಅವಧಿ ಮುಗಿದಿದ್ದ ಹಾಗೂ ಅಕ್ರಮ ಮದ್ಯವನ್ನು ಪತ್ತೆ ಹಚ್ಚಿದ್ದ ಪೊಲೀಸರು ಅವುಗಳನ್ನು ನಾಶ ಮಾಡಲು ಒಂದೆಡೆ ತಂಡು ಸಾಲಾಗಿ ಜೋಡಿಸಿ, ಯಂತ್ರ ಹರಿಸಲು ಮುಂದಾಗಿದ್ದರು.

ಪೊಲೀಸರು ಭಾರಿ ಪ್ರಮಾಣದ ಅಕ್ರಮ ಮದ್ಯವನ್ನು ಸೀಜ್‌ ಮಾಡಿ ಇಲ್ಲಿಗೆ ತಂದಿದ್ದರು. ಏನಿಲ್ಲವೆಂದರೂ 50 ಲಕ್ಷ ಬೆಲೆಬಾಲುವ ಮದ್ಯದ ಬಾಟಲಿಗಳನ್ನು ಪೊಲೀಸರು ವಿಲೇವಾರಿ ಮಾಡಲು ಮುಂದಾಗಿದ್ದರು. ಕಣ್ಣಮುಂದೆ ಸಾವಿರಾರು ಬಾಟಲಿಗಳ ಮಾರಣಹೋಮಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಇತ್ತು. ಈ ವೇಳೆಗೆ ಅಲ್ಲಿಗೆ ಮದ್ಯಪ್ರಿಯರು ಜಮಾಯಿಸಿದ್ದರು.

ಕೆಲಕಾಲ ಸುಮ್ಮನೆ ನಿಂತು ನೋಡಿದ ಮದ್ಯ ಪ್ರಿಯರಿಗೆ ಯಾಕೋ ಇಷ್ಟು ಎಣ್ಣೆ ಬಾಟಲಿಗಳು ಕಣ್ಣಮುಂದೆಯೇ ನಾಶವಾಗುವುದನ್ನು ಸಹಿಸಿಕೊಳ್ಳಲು ಆಗಲಿಲ್ಲ ಅನಿಸುತ್ತೆ. ಎಲ್ಲರೂ ಕಣ್ಸನ್ನೆಯಲ್ಲಿ ಮಾತಾಡಿಕೊಂಡು, ಏಕಾಏಕಿ ಬಾಟಲಿಗಳ ಮೇಲೆ ಮುಗಿಬಿದ್ದಿದ್ದಾರೆ. ಕೈಗೆ ಸಿಕ್ಕಷ್ಟು ಬಾಟಲಿಗಳನ್ನು ದೋಚಿಕೊಂಡು, ಓಡ್ರೋ ಓಡ್ರೋ ಅಂತ ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ.

People Carrying Bottles Of Liquor That Were Being Destroyed

ಸ್ಥಳದಲ್ಲಿ ಪೊಲೀಸರು ಇದ್ದರೂ ಅದನ್ನು ಲೆಕ್ಕಿಸದೆ, ಬಾಟಲಿ ಕದ್ದೊಯ್ದಿದ್ದಾರೆ. ಪೊಲೀಸರು ಕೂಡ ಮದ್ಯಪ್ರಿಯರ ಹಾವಳಿಗೆ ಬೆಚ್ಚಿಬಿದ್ದಿದ್ದಲ್ಲದೆ, ಅವರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಕೊನೆಗೂ ಸಿಕ್ಕಿದ್ದು ಸೀರುಂಡೆ ಅನ್ಕೊಂಡು ಬಾಟಲಿಗಳನ್ನು ಕೆಲ ನಿಮಿಷಗಳಲ್ಲೇ ಕದ್ದೊಯ್ದಿದ್ದಾರೆ ಎಂದು ವರದಿಯಾಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಈ ಘಟನೆಯ ವಿಡಿಯೋ ವೈರಲ್‌ ಆಗಿದ್ದು, ನಾಶಕ್ಕೆ ಮುಂದಾಗಿದ್ದ ಮದ್ಯದ ಬಾಟಲಿಗಳನ್ನು ಹೊತ್ತೊಯ್ದವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ವಿಡಿಯೋ ಆಧರಿಸಿ ಆ ಸ್ಥಳದಲ್ಲಿದ್ದವರ ಪತ್ತೆಗಾಗಿ ಹುಡುಕಾಟ ಕೂಡ ಶುರುವಾಗಿದೆ ಎನ್ನಲಾಗಿದೆ.

ಇನ್ನು ಇದಕ್ಕೆ ಮದ್ಯಪ್ರಿಯರೆಲ್ಲ ಬಗೆಬಗೆಯಾಗಿ ಕಾಮೆಂಟ್‌ ಕೂಡ ಮಾಡಿದ್ದು, ಇಷ್ಟು ಎಣ್ಣೇನಾ ಒಂದ್‌ ಸಲನೂ ಕಣ್ಣಲ್ಲಿ ನೋಡೋ ಭಾಗ್ಯ ನಮಗೆ ಸಿಗಲಿಲ್ಲ. ಮದ್ಯ ನಾಶ ಮಾಡೋದಾದ್ರೆ ಪೊಲೀಸರು ದೂರದ ಪ್ರದೇಶದಲ್ಲಿ ಎಲ್ಲಾದರೂ ಮಾಡಬೇಕಿತ್ತು. ಜನರ ಎದುರೇ ಮಾಡಿದ್ರೆ ಪಾಪ! ಅವರ ಹೊಟ್ಟೆ ಉರಿಯಲ್ವಾ? ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ.

People Carrying Bottles Of Liquor That Were Being Destroyed

ಇನ್ನೂ ಕೆಲವರು ಎಣ್ಣೆನೇ ನಮ್‌ ಮನೆ ದ್ಯಾವ್ರು. ಅದು ಫ್ರೀಯಾಗಿ ಈ ರೀತಿ ಸಿಗೋದಕ್ಕೂ ಪುಣ್ಯ ಮಾಡಿರಬೇಕು ಗುರುವೇ, ಎಂದು ರಿಪ್ಲೈ ಕೊಟ್ಟಿದ್ದಾರೆ. ಏನೇ ಆದರೂ ಎಣ್ಣೆ ಆಸೆಗೆ ಕೈಹಾಕಿದವರಿಗೆ ಪೊಲೀಸರು ಕೋಳ ತೊಡಿಸುವುದಕ್ಕೂ ರೆಡಿಯಾಗಿರುವುದಂತೂ ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+