ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾನ್‌ ಆಧಾರ್‌ ಕಾರ್ಡ್ ಲಿಂಕ್‌ ಮಾಡಿಸಿಕೊಳ್ಳಿ, ಇಲ್ಲದಿದ್ರೆ 10,000 ದಂಡ!

|
Google Oneindia Kannada News

ನವದೆಹಲಿ, ಮಾರ್ಚ್ 18: ನಿಮ್ಮ ಪ್ಯಾನ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31 ಆಗಿದೆ. ನೀವು ನಿಮ್ಮ ಪ್ಯಾನ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡದಿದ್ದರೆ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಕ್ರಮವು ವಿವಿಧ ಅಕ್ರಮ ಹಣಕಾಸು ವಹಿವಾಟುಗಳಿಗೆ ಬಳಸುವ ನಕಲಿ ಪ್ಯಾನ್ ಕಾರ್ಡ್‌ಗಳನ್ನು ತೊಡೆದುಹಾಕುವ ಗುರಿಯನ್ನು ಹೊಂದಿದೆ.

ಮಾರ್ಚ್ 31 ರ ನಂತರ ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ದಂಡದ ಮೊತ್ತವನ್ನು ನೀವು ಪಾವತಿ ಮಾಡಬೇಕಾಗುತ್ತದೆ. ಅದಕ್ಕಾಗಿ ಗಡುವಿನ ಮೊದಲು ಲಿಂಕ್ ಮಾಡುವ ಪ್ರಕ್ರಿಯೆಯನ್ನು ಮಾಡುವುದು ಉತ್ತಮ. ಅನಗತ್ಯ ಶುಲ್ಕಗಳಿಂದ ನಿಮ್ಮನ್ನು ಉಳಿಸಿಕೊಳ್ಳುವುದು ಉತ್ತಮ. ಅಷ್ಟಕ್ಕೂ ಈ ದಂಡ ಒಂದೆರಡು ಸಾವಿರವಲ್ಲ ಸುಮಾರು ಹತ್ತು ಸಾವಿರ ರೂಪಾಯಿ ಆಗಿದೆ.

ಜೂನ್ 30ರವರೆಗೂ ಆಧಾರ್- ಪ್ಯಾನ್‌ ಜೋಡಣೆ ಗಡುವು ವಿಸ್ತರಣೆಜೂನ್ 30ರವರೆಗೂ ಆಧಾರ್- ಪ್ಯಾನ್‌ ಜೋಡಣೆ ಗಡುವು ವಿಸ್ತರಣೆ

ಸರ್ಕಾರವು 2021 ರ ಹಣಕಾಸು ಮಸೂದೆಗೆ ತಿದ್ದುಪಡಿಯನ್ನು ಪರಿಚಯಿಸಿದೆ, ಅದರ ಅಡಿಯಲ್ಲಿ ಒಬ್ಬ ವ್ಯಕ್ತಿಯು ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದಲ್ಲಿ ರೂ 1,000 ವರೆಗೆ ವಿಳಂಬ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಪ್ಯಾನ್ ನಿಷ್ಕ್ರಿಯಗೊಂಡರೆ ವ್ಯಕ್ತಿಯು ಎದುರಿಸುವ ಇತರ ಪರಿಣಾಮಗಳ ಜೊತೆಗೆ ರೂ 1,000 ದಂಡವನ್ನು ನೀಡಲಾಗುತ್ತದೆ.

PAN-Aadhar linking deadline: How you can avoid a penalty of rs 10,000 on pan card

ಪ್ಯಾನ್‌ ಆಧಾರ್‌ ಎರಡನ್ನು ಲಿಂಕ್ ಮಾಡಲು ನೀವು ಗಡುವು ತಪ್ಪಿದರೆ ಹೆಚ್ಚಿನ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಇದಲ್ಲದೆ, ನಿಯಮಗಳ ಪ್ರಕಾರ, ರದ್ದಾದ ಅಥವಾ ನಿಷ್ಕ್ರಿಯವಾಗಿರುವ ಪ್ಯಾನ್ ಅನ್ನು ನೀವು ಹೊಂದಿದರೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 272B ಅಡಿಯಲ್ಲಿ ರೂ 10,000 ವರೆಗೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.

ನೀವು ಪ್ಯಾನ್ ಕಾರ್ಡ್ ಅನ್ನು ಹೊಂದಿದ್ದರೆ, ಆ ಪ್ಯಾನ್‌ ಕಾರ್ಡ್ ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 272N ಅಡಿಯಲ್ಲಿ ಮಾನ್ಯವಾಗಿಲ್ಲದಿದ್ದರೆ, ಆ ಪ್ಯಾನ್‌ ಕಾರ್ಡ್ ಹೊಂದಿರುವ ವ್ಯಕ್ತಿಯ ಮೇಲೆ ಅಂದರೆ ನಿಮ್ಮ ಮೇಲೆ ರೂ 10,000 ದಂಡವನ್ನು ವಿಧಿಸುವ ಸಾಧ್ಯತೆಗಳು ಇದೆ. ಹಾಗಾದರೆ ನೀವು ಕೊನೆಯ ದಿನಾಂಕ ಮಾರ್ಚ್ 31, 2022 ರೊಳಗೆ ಪ್ಯಾನ್‌ಗೆ ಆಧಾರ್‌ ಅನ್ನು ಈಗಲೇ ಲಿಂಕ್‌ ಮಾಡಿಕೊಳ್ಳಿ, ಹಾಗಾದರೆ ಮೊದಲು ಲಿಂಕ್‌ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ

ಸರ್ವರ್ ಸಮಸ್ಯೆ: ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ದಿನಾಂಕ ವಿಸ್ತರಿಸಲು ಪಟ್ಟುಸರ್ವರ್ ಸಮಸ್ಯೆ: ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ದಿನಾಂಕ ವಿಸ್ತರಿಸಲು ಪಟ್ಟು

ಇ-ಫೈಲಿಂಗ್ ವೆಬ್‌ಸೈಟ್ ಮೂಲಕ ಆಧಾರ್ ಕಾರ್ಡ್ ಅನ್ನು ಹೇಗೆ ಲಿಂಕ್ ಮಾಡುವುದು?

* ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ incometaxindiaefiling.gov.in
* ಪೋರ್ಟಲ್‌ನ ಎಡಭಾಗದಲ್ಲಿರುವ ಲಿಂಕ್ ಆಧಾರ್' ವಿಭಾಗದ ಮೇಲೆ ಕ್ಲಿಕ್ ಮಾಡಿ
* ಪ್ಯಾನ್‌ ಸಂಖ್ಯೆ, ಆಧಾರ್ ಸಂಖ್ಯೆ, ಹೆಸರು ಮತ್ತು CAPTCHA ಅನ್ನು ನಮೂದಿಸಿ
* 'ಲಿಂಕ್ ಆಧಾರ್' ಬಟನ್ ಮೇಲೆ ಕ್ಲಿಕ್ ಮಾಡಿ.
* ಪರಿಶೀಲನೆಯ ನಂತರ, ನಿಮ್ಮ ಪ್ಯಾನ್ ಆಧಾರ್ ಲಿಂಕ್ ಸ್ಥಿತಿ ಲಭ್ಯವಾಗುತ್ತದೆ

ಎಸ್‌ಎಂಎಸ್ ಮೂಲಕ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡುವುದು ಹೇಗೆ?

ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು, UIDPAN (12-ಅಂಕಿಯ ಆಧಾರ್ ಸಂಖ್ಯೆ) (10-ಅಂಕಿಯ PAN ಸಂಖ್ಯೆ) ಅನ್ನು ಟೈಪ್ ಮಾಡಿ ಮತ್ತು ಅದನ್ನು 567678 ಅಥವಾ 56161 ಗೆ ಕಳುಹಿಸಿ.

ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಮಾಡಿರುವುದನ್ನು ಪರಿಶೀಲಿಸುವುದು ಹೇಗೆ?

ನೀವು ಈಗಾಗಲೇ ನಿಮ್ಮ ಆಧಾರ್‌ನೊಂದಿಗೆ ನಿಮ್ಮ ಪ್ಯಾನ್ ಅನ್ನು ಲಿಂಕ್ ಮಾಡಿದ್ದರೆ, ನೀವು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸ್ಥಿತಿಯನ್ನು ಪರಿಶೀಲಿಸಬಹುದು. www.incometaxindiaefiling.gov.in/aadhaarstatus ಗೆ ಭೇಟಿ ನೀಡಿ. ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. 'ವೀವ್ ಲಿಂಕ್ ಆಧಾರ್ ಸ್ಟೇಟಸ್' ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಆಧಾರ್‌ ಪ್ಯಾನ್‌ ಲಿಂಕ್‌ ಆಗಿದೆಯೇ ಎಂದು ತಿಳಿದುಬರಲಿದೆ.

English summary
PAN-Aadhar linking deadline on March 31: How to avoid Rs 10,000 penalty charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X