ಪಯ್ಯೋಳಿ ಎಕ್ಸ್‌ಪ್ರೆಸ್ ಪಿ.ಟಿ. ಉಷಾ: ಅಥ್ಲಿಟ್ ಟ್ಯ್ರಾಕ್‌ನಿಂದ ರಾಜ್ಯಸಭೆವರೆಗೆ ಸಾಧನೆಯ ಹಾದಿ
"ಗೋಲ್ಡನ್ ಗರ್ಲ್" ಜೊತೆಗೆ "ಪಯ್ಯೋಳಿ ಎಕ್ಸ್‌ಪ್ರೆಸ್" ಎಂದು ಪ್ರೀತಿಯಿಂದ ಕರೆಯಲಾಗುವ ಪಿಲಾವುಲ್ಲಕಂಡಿ ತೆಕ್ಕೇರಪರಂಬಿಲ್ ಉಷಾ ಅಥವಾ ಜನಮಾನಸದಲ್ಲಿ ಪಿ.ಟಿ. ಉಷಾ ಎಂದೇ ಚಿರಪರಿಚಿತವಾಗಿರುವ ಇವರು ಭಾರತದ ಅತ್ಯಂತ ಯಶಸ್ವಿ ಕ್ರೀಡಾಪಟುಗಳಲ್ಲಿ ಒಬ್ಬರು. ಸುಮಾರು ಎರಡು ದಶಕಗಳ ಕಾಲ ರನ್ನಿಂಗ್ ಟ್ರ್ಯಾಕ್ ಆಳಿದ ಕೀರ್ತಿ ಇವರದ್ದು. ಪಿ.ಟಿ.ಉಷಾ ಸಾಧನೆ ಇಂದಿಗೂ ಸಾಧನೆ ಮಾಡ ಬಯುಸುವ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.
ಈಗ ಪಿ.ಟಿ. ಉಷಾ ಹೆಸರು ಮತ್ತೆ ಮುನ್ನಲೆಗೆ ಬಂದಿದೆ. ರಾಜ್ಯಸಭಾ ಸ್ಥಾನಕ್ಕೆ ಪಿ.ಟಿ.ಉಷಾ ಅವರನ್ನು ಕೇಂದ್ರ ಸರ್ಕಾರ ನಾಮ ನಿರ್ದೇಶನ ಮಾಡಿದೆ. ಸ್ವತಃ ಪ್ರಧಾನಿ ಮೋದಿ ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ನಿಮ್ಮ ಸಾಧನೆ ಹಲವರಿಗೆ ಸ್ಪೂರ್ತಿ ಎಂದು ಹೊಗಳಿದ್ದಾರೆ.
ಭಾರತೀಯ ಅಥ್ಲಿಟ್ ಇತಿಹಾಸದಲ್ಲಿ ಪಿ.ಟಿ.ಉಷಾ ಎಂದಿಗೂ ಮರೆಯಲಾಗದ ಹೆಸರು. ಭಾರತದ ಕ್ರೀಡೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಡಿಮೆ ಇದ್ದ ಸಮಯದಲ್ಲಿ ಇವರು ಮಾಡಿದ ಸಾಧನೆ ಅಮೋಘ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಪಿ.ಟಿ. ಉಷಾ ಮುಡಿಗೆ ರಾಜ್ಯಸಭೆ ನಾಮನಿರ್ದೇಶನ ಮತ್ತೊಂದು ಗರಿಯಂತಾಗಿದೆ.

ಪಿ.ಟಿ. ಉಷಾ ಬಾಲ್ಯ ಮತ್ತು ಕ್ರೀಡಾಸಕ್ತಿ
ಪಿ.ಟಿ. ಉಷಾ ಜೂನ್ 27 1964ರಂದು ಕೇರಳದ ಕ್ಯಾಲಿಕಟ್ ಸಮೀಪದ ಪಯ್ಯೋಳಿ ಗ್ರಾಮದಲ್ಲಿ ಬಡ ಕುಟುಂಬವೊಂದರಲ್ಲಿ ಜನಿಸಿದರು. ಬಾಲ್ಯದಲ್ಲಿ ಬಡತನ ಮತ್ತು ಅನಾರೋಗ್ಯ ಉಷಾ ಅವರನ್ನು ಕಾಡಿತು. ಹದಿಹರೆಯದಲ್ಲಿ ಪಿ.ಟಿ. ಉಷಾ ಕ್ರೀಡೆಯಲ್ಲಿ ಸಾಕಷ್ಟು ಆಸಕ್ತಿ ತೋರಿಸಿದರು. ಕಣ್ಣೂರುನಲ್ಲಿರುವ ಕ್ರೀಡಾ ಶಾಲೆಗೆ ತೆರಳಿದರು. ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಅಲ್ಲಿ ಅಥ್ಲೆಟಿಕ್ ತರಬೇತುದಾರ O.M. ನಂಬಿಯಾರ್ ಅವರ ಮಾರ್ಗದರ್ಶನ ಪಡೆದುಕೊಂಡರು. ಪಿ.ಟಿ.ಉಷಾ 1980 ರಲ್ಲಿ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಮಹಿಳೆಯಾಗಿ ಎನ್ನುವ ಹಿರಿಮೆಗೆ ಭಾಜನರಾದರು. 1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಅವರು ಬೆಳ್ಳಿ ಪದಕ ಪಡೆದರು.

1985ರಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ ಪಿ.ಟಿ.ಉಷಾ
ಪಿ.ಟಿ. ಉಷಾ ಅವರು 1985 ರಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಭಾರಿ ಯಶಸ್ಸು ಕಂಡರು. ಜಕಾರ್ತಾದಲ್ಲಿ ನಡೆದ ಏಷ್ಯನ್ ಕೂಟದಲ್ಲಿ 100 ಮೀಟರ್, 200 ಮೀಟರ್, 400ಮೀಟರ್, 400ಮೀಟರ್ ಹರ್ಡಲ್ಸ್ ಮತ್ತು 4x400ಮೀ ರಿಲೇಯಲ್ಲಿ ಐದು ಚಿನ್ನದ ಪದಕಗಳನ್ನು ಮತ್ತು 4x100ಮೀ ರಿಲೇಯಲ್ಲಿ ಕಂಚಿನ ಪದಕವನ್ನು ಗಳಿಸಿದರು. ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ, ಕಂಚಿನ ಪದಕ ಪಡೆಯುವಲ್ಲಿ ಸೆಕೆಂಡಿನ 1/100 ಅಂತರದಲ್ಲಿ ವಂಚಿತರಾದರು. ಇದು ಅವರ ಮತ್ತು ಅವರ ಅಭಿಮಾನಿಗಳಿಗೆ ಹೃದಯ ವಿದ್ರಾವಕ ಕ್ಷಣವಾಗಿತ್ತು.

1986ರಲ್ಲಿ ಸ್ಪ್ರಿಂಟ್ ಕ್ವೀನ್ ಎನ್ನುವ ಬಿರುದು
ಅವರು 1986 ರ ಸಿಯೋಲ್ ಏಷ್ಯನ್ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಮತ್ತು ಒಂದು ಬೆಳ್ಳಿ ಪದಕವನ್ನು ಗಳಿಸಿ, ಏಷಿಯಾದ "ಸ್ಪ್ರಿಂಟ್ ಕ್ವೀನ್" ಎಂಬ ಬಿರುದನ್ನು ಗಳಿಸಿದರು. 1998 ರಲ್ಲಿ ಅವರ ತಂಡವು 4x100 ಮೀ ರಿಲೇಯಲ್ಲಿ 44.43 ಸೆಕೆಂಡ್‌ಗಳಲ್ಲಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿತ್ತು, ಇದು 2017 ರವರೆಗೂ ದಾಖಲೆಯಾಗಿ ಉಳಿದಿತ್ತು.
ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಒಟ್ಟು 30 ಅಂತಾರಾಷ್ಟ್ರೀಯ ಪ್ರಶಸ್ತಿಗಳು ಮತ್ತು 13 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 1979 ರಲ್ಲಿ ಪ್ರಾರಂಭವಾದ ಪ್ರಯಾಣವು ಈ ಭಾರತೀಯ ಹುಡುಗಿಯನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದಿತು, ಅವರನ್ನು ಜೀವಂತ ದಂತಕಥೆಯನ್ನಾಗಿ ಮಾಡಿತು.

ಅಥ್ಲಿಟ್‌ಗಳಿಗೆ ತರಬೇತಿ ನೀಡುತ್ತಿರುವ ಪಿ.ಟಿ.ಉಷಾ
1991 ರಲ್ಲಿ ಉಷಾ ಅವರು ವಿ. ಶ್ರೀನಿವಾಸನ್ ಅವರನ್ನು ವಿವಾಹವಾದರು ಮತ್ತು ದಂಪತಿಗೆ ಉಜ್ವಲ್ ಎನ್ನುವ ಮಗನಿದ್ದಾನೆ.
ತಮ್ಮ ವೃತ್ತಿ ಜೀವನದ ನಂತರ ಯುವ ಅಥ್ಲಿಟ್‌ಗಳಿಗೆ ತರಬೇತಿ ನೀಡಲು ಮುಂದಾದ ಪಿ.ಟಿ.ಉಷಾ ಕೇರಳದ ಕೊಯಿಲಾಂಡಿಯಲ್ಲಿ ಅಥ್ಲೆಟಿಕ್ ಶಾಲೆಯನ್ನು ಪ್ರಾರಂಭಿಸಿದ್ದಾರೆ. 10-12 ವಯೋಮಾನದ ಮಕ್ಕಳನ್ನು ನೇಮಿಸಿಕೊಳ್ಳುವ ಅವರು ದೇಶಕ್ಕೆ ಅಥ್ಲಿಟ್‌ಗಳನ್ನು ನೀಡುವ ಕೆಲಸದಲ್ಲಿ ತೊಡಗಿದ್ದಾರೆ.
ಈಗ ಹೊಸದೊಂದು ಜವಾಬ್ದಾರಿ ಅವರನ್ನು ಹುಡುಕಿಕೊಂಡು ಬಂದಿದೆ. 1995ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಹಜವಾಗಿಯೇ ಇದು ಅವರ ಸಾಧನೆಗೆ ಸಂದ ಗೌರವ. ಪಿ.ಟಿ. ಉಷಾ ಎಂದಿಗೂ ಯುವ ಅಥ್ಲಿಟ್‌ಗಳಿಗೆ ಸ್ಪೂರ್ತಿ ನೀಡಬಲ್ಲರು.
-
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಬಿ.ಎಸ್.ಯಡಿಯೂರಪ್ಪ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ












Click it and Unblock the Notifications