ಭರ್ಜರಿ AI ಫೀಚರ್ಸ್ ಹೊಂದಿರುವ ಓಪ್ಪೋ ರೆನೋ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?
ತನ್ನ ಆಕರ್ಷಕ ಲುಕ್ ಹಾಗೂ ಫೀಚರ್ಸ್‌ಗಳಿಂದಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುವ ಒಪ್ಪೋ ತನ್ನ ಎರಡು ನೂತನ ಮೊಬೈಲ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಟ್ಟಿದೆ. ಈ ಮೊಬೈಲ್‌ಗಳಿಗೆ ಒಪ್ಪೊ ರೆನೋ 12 ಹಾಗೂ ಒಪ್ಪೊ ರೆನೋ 12 ಪ್ರೊ ಎಂದು ಹೆಸರಿಸಲಾಗಿದೆ.
ಗುರುವಾರ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಈ ಸ್ಮಾರ್ಟ್‌ಫೋನ್‌ಗಳು, ಗ್ರಾಹಕರನ್ನು ಸೆಳಯುತ್ತಿವೆ. ಈ ಮೊಬೈಲ್ ಸಾಕಷ್ಟು ಎಐ (AI) ಫೀಚರ್ಸ್‌ಗಳನ್ನು ಹೊಂದಿದೆ. ಮಿಡ್ ರೆಂಜ್ ಗ್ರಾಹಕರನ್ನು ಟಾರ್ಗೆಟ್ ಮಾಡಿ ಈ ಫೋನ್‌ಗಳನ್ನು ಲಾಂಚ್ ಮಾಡಲಾಗಿದೆ. ಈ ಎರಡೂ ಫೋನ್‌ಗಳಲ್ಲಿ ಹೆಚ್ಚಿನ ವ್ಯತ್ಯಾಸ ಹೊರ ಭಾಗದಲ್ಲಿ ಕಾಣದೆ ಇದ್ದರೂ, ಪ್ರೋ ಮೊಬೈಲ್ ಲುಕ್ ಸ್ಟೈಲಿಷ್ ಆಗಿದೆ.

ಮೊಬೈಲ್ ಬೆಲೆ ಎಷ್ಟು?
ಒಪ್ಪೋ ರೆನೋ 12 ಪ್ರೋ 5G ಅನ್ನು ಎರಡೂ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. 12 ಜಿಬಿ ರ್ಯಾಮ್ ಹಾಗೂ 256 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುವ ಮೊಬೈಲ್ ಬೆಲೆ 36,999 ಆಗಿದ್ದು, 12 ಜಿಬಿ ರ್ಯಾಮ್ ಹಾಗೂ 512 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುವ ಸ್ಮಾರ್ಟ್‌ಫೋನ್ ಬೆಲೆ 40,000 ಆಗಿರಲಿದೆ.
ಒಪ್ಪೋ ರೆನೋ 12 5G ಸ್ಮಾರ್ಟ್‌ಫೋನ್ ಒಂದೇ ರೂಪಾಂತರವನ್ನು ಹೊಂದಿದೆ. ಈ ಮೊಬೈಲ್ 8 ಜಿಬಿ ಹಾಗೂ 256 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರಲಿದ್ದು, ಇದರ ಬೆಲೆ 32,999 ಆಗಿರಲಿದೆ. ಈ ಮೊಬೈಲ್ ಜುಲೈ 25ಕ್ಕೆ ಲಾಂಚ್ ಆಗಲಿದೆ.
ಡಿಸ್‌ಪ್ಲೇ ಹೇಗಿರಲಿದೆ?
ಈ ಎರಡೂ ಮೊಬೈಲ್ 6.7 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮೋಲ್ಡ್ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ 120 HZ ರಿಫ್ರೇಶ್ ದರವನ್ನು ಹೊಂದಿದ್ದು, 1200 ವರೆಗೆ ಗರಿಷ್ಠ ಹೊಳಪು ನೀಡಲಿದೆ. ಈ ಫೋನ್‌ಗಳಲ್ಲಿ 5000 mAh ಬ್ಯಾಟರಿ ನೀಡಲಾಗಿದ್ದು, 80 ವ್ಯಾಟ್ ಸೂಪರ್ ಓಕ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ.
ಚಿಪ್ ಸೆಟ್ ಯಾವುದು?
ಒಪ್ಪೋ ರೆನೋ 12 5G ಮೊಬೈಲ್‌ನಲ್ಲಿ ಮಿಡಿಯಾ ಟೆಕ್ ಡಿಮೆನ್ಸಿಟಿ 8250 ಸ್ಟಾರ್ ಸ್ಪೀಡ್ ಚಿಪ್ ಸೆಟ್ ನೀಡಲಾಗಿದ್ದು, ಒಪ್ಪೋ ರೆನೋ 12 ಪ್ರೋ 5G ಮಿಡಿಯಾ ಟೆಕ್ ಡಿಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್ ನೀಡಲಾಗಿದೆ. ಈ ಎರಡೂ ಮೊಬೈಲ್‌ಗಳು ಸುಧಾರಿತ ಆಂಡ್ರಾಯ್ಡ್ 14 ಗೆ ಬೆಂಬಲ ನೀಡುತ್ತವೆ.
ಕ್ಯಾಮೆರಾ ಹೇಗಿದೆ?
ಈ ಮೊಬೈಲ್‌ಗಳ ಹಿಂಭಾಗದಲ್ಲಿ ಮೂರು ಕ್ಯಾಮೆರಾ ಸೆಟಪ್ ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 50 ಎಂಪಿ ಇದೆ. ಮುಂಭಾಗದಲ್ಲೂ ವಿಡಿಯೋ ಹಾಗೂ ಕರೆಗಳಿಗಾಗಿ 50 ಎಂಪಿ ಕ್ಯಾಮೆರಾ ನೀಡಲಾಗಿದೆ.

ಬಾಕ್ಸ್‌ನಲ್ಲಿ ಏನಿದೆ?
- ಮೊಬೈಲ್
- ಡಾಕ್ಯೂಮೆಂಟ್
- ಸಿಮ್ ಕಾರ್ಡ್ ಇಜೆಕ್ಟ್ ಟೂಲ್
- ಮೊಬೈಲ್ ಕವರ್
- ಟೈಪ್ ಎ ಟು ಟೈಪ್ ಸಿ ಚಾರ್ಜರ್
- 80 ವ್ಯಾಟ್ ಚಾರ್ಜರ್
ಮೊಬೈಲ್ ಕೆಳಭಾಗದಲ್ಲಿ ಏನಿದೆ?
ಸಿಮ್ ಕಾರ್ಡ್ ಟ್ರೇ, ಮೈಕ್ರೋಫೋನ್, ಯುಎಸ್‌ಬಿ ಟೈಪ್ ಸಿ ಚಾರ್ಜರ್, ಸ್ಪೀಕರ್ ಗ್ರಿಲ್
ಮೇಲ್ಬಾಗದಲ್ಲಿ ಏನಿದೆ?
ಸ್ಪೀಕರ್ ಗ್ರಿಲ್, ಐಆರ್ ಬ್ಲಾಸ್ಟರ್, ನಾಯ್ಸ್ ಕ್ಯಾನ್ಸಲಿಂಗ್ ಮೈಕ್ರೋಫೋನ್,
ಬಲಭಾಗದಲ್ಲಿ ಏನಿದೆ?
ಪವರ್ ಆನ್ ಹಾಗೂ ಆಫ್ ಬಟನ್ ಹಾಗೂ ವ್ಯಾಲ್ಯೂಮ್ ಕಂಟ್ರೋಲ್ ಬಟನ್
-
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ -
Basavaraj Bommai: ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ












Click it and Unblock the Notifications