ಹೊಸ ಫೋನ್ ತೆಗೆದುಕೊಳ್ಳುತ್ತಿದ್ದಾರಾ, ಇನ್ನೇನು ಕೆಲವೇ ದಿನಗಳಲ್ಲಿ ಭರ್ಜರಿ ಫೀಚರ್ಸ್ ಹೊಂದಿರುವ Oppo ಬಿಡುಗಡೆ
ಭಾರತದ ಮೊಬೈಲ್ ಮಾರುಕಟ್ಟೆ ದೊಡ್ಡದಾಗಿದೆ. ಈ ಮಾರುಕಟ್ಟೆಯಲ್ಲಿ ತಮ್ಮ ಛಾಪು ಮೂಡಿಸಲು ಕಂಪನಿಗಳು ತಾ ಮುಂದೆ ನಾ ಮುಂದೆ ಎಂದು ಜಿದ್ದಾಜಿದ್ದಿಗೆ ಬಿದ್ದಿವೆ. ಈ ಮಾರುಕಟ್ಟೆಯಲ್ಲಿ ಚೀನಾ ಮೂಲದ ಕಂಪನಿಗಳಿಗೆ ಅಗ್ರ ಸ್ಥಾನ. ದಿನವೂ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು, ಕಡಿಮೆ ದರದಲ್ಲಿ ಬೆಸ್ಟ್ ಸ್ಮಾರ್ಟ್‌ಫೋನ್ ನೀಡುವಲ್ಲಿ ಚೀನಾ ಕಂಪನಿಗಳು ಮುಂದಿರುತ್ತವೆ.
ಚೀನಾ ಮೂಲದ Oppo ತನ್ನ ಎರಡು ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಸದ್ಯದರಲ್ಲೇ ಲಾಂಚ್ ಮಾಡಲಿದೆ. ಈ ಬಗ್ಗೆ ಚೀನಾ ಕಂಪನಿ ಸಾಮಾಜಿಕ ತಾಣದಲ್ಲಿ ತಿಳಿಸಿದೆ. ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನ್ನು ಟಾರ್ಗೆಟ್ ಮಾಡುವ ಈ ಮೊಬೈಲ್ ಹಲವು ಭರ್ಜರಿ ಫೀಚರ್ಸ್ ಹೊಂದಿವೆ. ಈ ಫೀಚರ್ಸ್‌ಗಳನ್ನು ನೋಡಿದರೆ ನೀವು ಈ ಫೋನ್‌ಗಳನ್ನು ತೆಗೆದುಕೊಳ್ಳುವುದು ಗ್ಯಾರಂಟಿ.. Oppo F27 Pro Plus 5G ಯ ಬಿಡುಗಡೆಯ ದಿನಾಂಕ ಬಹಿರಂವಾಗಿದ್ದು, ಈಗಾಗಲೇ ಇದರ ಫೀಚರ್ಸ್ ಸೋರಿಕೆ ಆಗಿದೆ.

ಏಪ್ರಿಲ್‌ನಲ್ಲಿ ಚೀನಾ ಮಾರುಕಟ್ಟೆಯಲ್ಲಿ Oppo A3 Pro ಬಿಡುಗಡೆ ಮಾಡಲಾಗಿತ್ತು. ಈಗ ಭಾರತದಲ್ಲಿ ಬಿಡುಗಡೆ ಆಗಲಿರುವ Oppo F27 Pro Plus 5G, ಚೀನಾದಲ್ಲಿ ಏಪ್ರಿಲ್‌ನಲ್ಲಿ ಬಿಡುಗಡೆಯಾದ ಮೊಬೈಲ್‌ನ ಮರು ಬ್ರಾಂಡಿಂಗ್ ಆವೃತ್ತಿ. Oppo F27 Pro Plus 5G ವಿನ್ಯಾಸವು Oppo A3 Pro ಹೋಲುತ್ತದೆ ಎಂದು ಹೇಳಲಾಗುತ್ತಿದೆ.
ಏನೆಲ್ಲಾ ವಿಶೇಷತೆ ಹೊಂದಿದೆ?
ಫೋನ್ ಡಿಸ್ಪ್ಲೇ 6.7 ಇಂಚಿನದ್ದಾಗಿರಬಹುದು. ಅಲ್ಲದೆ ಇದು 120Hz ರಿಫ್ರೆಶ್ ದರವನ್ನು ಹೊಂದಿರಲಿದ್ದು, ಫುಲ್ ಎಚ್‌ಡಿ ಪ್ಲಸ್ AMOLED ಕರ್ವಡ್ ಡಿಸ್‌ಪ್ಲೇ ಹೊಂದಿರಲಿದೆ. ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಹೊಂದಿರುವ ಸಾಧ್ಯತೆ ಇದೆ. ಈ ನೂತನ ಸ್ಮಾರ್ಟ್‌ಫೋನ್ 177 ಗ್ರಾಂ ತೂಕ ಮತ್ತು 7.89 ಎಂಎಂ ದಪ್ಪವಿದ್ದು, ಧೂಳು, ಕೊಳಕು ಮತ್ತು ನೀರಿನಿಂದ ಸುರಕ್ಷಿತವಾಗಿರಿಸಲು IP69, IP68 ಮತ್ತು IP66 ಪ್ರಮಾಣೀಕರಿಸಲ್ಪಟ್ಟಿದೆ.
ಫೋನ್ 5,000mAh ಬ್ಯಾಟರಿಯನ್ನು ಹೊಂದಿರುವ ಸಂಭವವಿದ್ದು, ಇದು 67W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಸಂಭವವಿದೆ.
ಯಾವ ಬಣ್ಣಗಳಲ್ಲಿ ಲಭ್ಯ?
Oppo F27 Pro Plus 5G ಅನ್ನು ಡಸ್ಕ್ ಪಿಂಕ್ ಮತ್ತು ಮಿಡ್ನೈಟ್ ನೇವಿಯಂತಹ ಎರಡು ಬಣ್ಣಗಳಲ್ಲಿ ಲಭ್ಯ. ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್ ಟಾರ್ಗೆಟ್ ಮಾಡಿ ಕಂಪನಿ ಫೋನ್ ಲಾಂಚ್ ಮಾಡಲಿದೆ. ಇದರ ಬೆಲೆ ರೂ 25000 ರಿಂದ ರೂ 35000 ರ ನಡುವೆ ಇರುತ್ತದೆ ಎಂದು ಹೇಳಲಾಗುತ್ತಿದೆ. ಇದು ಎರಡು ರೂಪಾಂತರಗಳಲ್ಲಿ ಲಭ್ಯ. ಇದು 8GB RAM + 128GB ಇಂಟರ್ನಲ್ ಸ್ಟೋರೇಜ್ ಮತ್ತು 8GB RAM + 256GB ಇಂಟರ್ನಲ್ ಸ್ಟೋರೇಜ್ ಹೊಂದಿರಲಿದೆ.
ಬಿಡುಗಡೆ ಯಾವಾಗ?
Oppo F27 Pro Plus 5G ಬಿಡುಗಡೆ ದಿನಾಂಕವನ್ನು ದೃಢಪಡಿಸಿದೆ. ಫ್ಲಿಪ್‌ಕಾರ್ಟ್‌ನ ವೆಬ್‌ಸೈಟ್‌ನಲ್ಲಿ ಇದರ ಮೈಕ್ರೋ ಪೇಜ್ ಓಪನ್ ಆಗಿದೆ. ಕಂಪನಿಯ ಪ್ರಕಾರ, Oppo F27 Pro Plus 5G ಭಾರತದಲ್ಲಿ ಜೂನ್ 13, 2024 ರಂದು ಬಿಡುಗಡೆಯಾಗಲಿದೆ. ಗ್ರಾಹಕ ಭಾರತದಲ್ಲಿ Oppo ನ ಅಧಿಕೃತ ಸೈಟ್ ಮತ್ತು Flipkart ನಲ್ಲಿ ಈ ಸ್ಮಾರ್ಟ್ ಫೋನ್ ಖರೀಧಿಸಬಹುದು.
-
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ












Click it and Unblock the Notifications