ಆನ್ ಲೈನ್ ಸಮೀಕ್ಷೆ: ನರೇಂದ್ರ ಮೋದಿ ಏಕಮೇವಾದ್ವಿತೀಯ
ದೇಶದ ಜನಪ್ರಿಯ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ಥಾನ ಅಬಾಧಿತವಾಗಿ ಮುಂದುವರಿದಿದೆ. ಅವರಿಗೆ ಯಾರಿಂದಲೂ ಸ್ಪರ್ಧೆ ಇಲ್ಲ ಎಂಬ ಅಂಶವೂ ಟೈಮ್ಸ್ ಸಮೂಹದಿಂದ ನಡೆಸಿದ ಆನ್ ಲೈನ್ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ನೋಟು ನಿಷೇಧ, ಜಿಎಸ್ ಟಿ ಜಾರಿ ಇಂಥ ಯಾವ ಅಂಶವೂ ಪರಿಣಾಮ ಬೀರಿಲ್ಲ. ಒಂಬತ್ತು ಭಾಷೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಇವತ್ತಿಗೆ ಲೋಕಸಭೆ ಚುನಾವಣೆ ನಡೆದರೆ ನರೇಂದ್ರ ಮೋದಿ ಅವರಿಗೇ ಮತ ಚಲಾಯಿಸುವುದಾಗಿ ನಾಲ್ಕನೇ ಮೂರು ಭಾಗಕ್ಕಿಂತ ಹೆಚ್ಚು ಮಂದಿ ಹೇಳಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ನೇತೃತ್ವದ ಸರಕಾರವೇ ಮುಂದುವರಿಯಬಹುದು ಎಂಬ ಅಭಿಪ್ರಾಯವನ್ನು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ 79ರಷ್ಟು ಮಂದಿ ತಿಳಿಸಿದ್ದಾರೆ. ಡಿಸೆಂಬರ್ ಹನ್ನೆರಡನೇ ತಾರೀಕಿನಿಂದ ಹದಿನೈದರವರೆಗೆ ಎಪತ್ತೆರಡು ಗಂಟೆಗಳ ಕಾಲ ಆನ್ ಲೈನ್ ಸಮೀಕ್ಷೆ ಮಾಡಲಾಗಿದೆ. ಇದರಲ್ಲಿ ಐದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ.
ಕೇಳಿದ ಪ್ರಶ್ನೆಗಳೇನು, ಅವುಗಳಿಗೆ ಸಮೀಕ್ಷೆಯಲ್ಲಿ ಭಾಗವಹಿಸಿದವರು ಯಾವ ಪ್ರಮಾಣದಲ್ಲಿ ಉತ್ತರ ನೀಡಿದರು ಎಂಬ ಬಗ್ಗೆ ಮಾಹಿತಿ ಬೇಕು ಅಂದರೆ ಮುಂದೆ ಓದಿ.

ಇಂದೇ ಲೋಕಸಭೆ ಚುನಾವಣೆ ನಡೆದರೆ ಯಾರಿಗೆ ಮತ ಹಾಕ್ತೀರಿ?
ನರೇಂದ್ರ ಮೋದಿ ಶೇ 76
ರಾಹುಲ್ ಗಾಂಧಿ ಶೇ 20
ಇತರರು ಶೇ 4

ನರೇಂದ್ರ ಮೋದಿ ನಾಯಕರಾಗದಿದ್ದರೆ ಬಿಜೆಪಿಗೆ ಮತ ಹಾಕ್ತೀರಾ
ಹೌದು ಶೇ 48
ಇಲ್ಲ ಶೇ 31
ಹೇಳಕ್ಕಾಗಲ್ಲ ಶೇ 21

ರಾಹುಲ್ ಗಾಂಧಿ ಅಧ್ಯಕ್ಷರಾದ ಮೇಲೆ 2019ರ ಚುನಾವಣೆಗೆ ಕಾಂಗ್ರೆಸ್ ಪರ್ಯಾಯ ಪಕ್ಷವಾಗುತ್ತಾ?
ಹೌದು ಶೇ 21
ಇಲ್ಲ ಶೇ 73
ಹೇಳಕ್ಕಾಗಲ್ಲ ಶೇ 6

ರಾಹುಲ್ ಗಾಂಧಿ ಮತದಾರರ ಜತೆ ಹೊಸದಾಗಿ ಸಂಪರ್ಕ ಸಾಧಿಸುತ್ತಾರಾ?
ಹೌದು ಶೇ 34
ಇಲ್ಲ ಶೇ 55
ಹೇಳಕ್ಕಾಗಲ್ಲ ಶೇ 11

ಗಾಂಧಿ ಕುಟುಂಬ ಹೊರತಾಗಿ ಬೇರೆಯವರು ನಾಯಕತ್ವ ವಹಿಸಿದರೆ ಕಾಂಗ್ರೆಸ್ ಗೆ ಮತ ಹಾಕ್ತೀರಾ?
ಹೌದು ಶೇ 37
ಇಲ್ಲ ಶೇ 38
ಹೇಳಕ್ಕಾಗಲ್ಲ ಶೇ 25

2019ರ ಲೋಕಸಭೆ ಚುನಾವಣೆಯಲ್ಲಿ ಏನಾಗಬಹುದು?
ಮೋದಿ ನೇತೃತ್ವದ ಸರಕಾರ ಶೇ 79
ರಾಹುಲ್ ನೇತೃತ್ವದ ಸರಕಾರ ಶೇ 16
ತೃತೀಯ ರಂಗದ ಸರಕಾರ ಶೇ 5












Click it and Unblock the Notifications