ಅಂಚೆ ಕಚೇರಿಯಲ್ಲಿ ಎಟಿಎಂ ಏನಿದು? ಹೇಗೆ ಬಳಕೆ?

ಭಾರತೀಯ ಅಂಚೆ, ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಮಾದರಿ ಅನೇಕ ವ್ಯವಸ್ಥೆಗಳಿವೆ. ಉಳಿತಾಯ ಖಾತೆ, ರೆಕರಿಂಗ್ ಡೆಪಾಸಿಟ್ ಖಾತೆ(ಆರ್ ಡಿ), ಪಿಪಿಎಫ್, ಕಿಸಾನ್ ವಿಕಾಸ್ ಪತ್ರ, ಮಾಸಿಕ ಆದಾಯ ಯೋಜನೆ(ಎಂಐಎಸ್), ಸುಕನ್ಯಾ ಸಮೃದ್ಧಿ, ನಿಶ್ಚಿತ ಠೇವಣಿ, ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆ(ಎಸ್ ಸಿಎಸ್ಎಸ್) ಹೀಗೆ ವಿವಿಧ ಯೋಜನೆಗಳಿವೆ. ವಿವಿಧ ಯೋಜನೆಗಳಿಗೆ ವಿವಿಧ ಬಡ್ಡಿದರ ಸಿಗಲಿದೆ. ಜೊತೆಗೆ ಖಾತೆಯಿಂದ ಹಣವನ್ನು ಪಡೆದುಕೊಳ್ಳಲು ಎಟಿಎಂ ಕಾರ್ಡ್ ನೀಡಲಾಗುತ್ತದೆ.

ಅಂಚೆ ಕಚೇರಿಯ ಎಟಿಎಂನಲ್ಲಿ ದಿನಕ್ಕೆ ಸುಮಾರು 25 ಸಾವಿರ ರೂ.ವರೆಗೆ ಹಣವನ್ನು ಡ್ರಾ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಖಾತೆ ಹೊಂದಿರುವವರಿಗೆ ಅಂಚೆ ಇಲಾಖೆ ಲಾಂಛನವುಳ್ಳ ಕೆಂಪು ಬಣ್ಣದ ಎಟಿಎಂ ಕಾರ್ಡ್‌ ವಿತರಣೆ ಮಾಡಲಾಗುತ್ತದೆ. ಕರ್ನಾಟಕದಲ್ಲಿನ 76 ಮುಖ್ಯ ಅಂಚೆ ಕಚೇರಿಗಳಲ್ಲಿ ಎಟಿಎಂ ಯಂತ್ರಗಳನ್ನು ಅಳವಡಿಸಲಾಗಿದೆ.

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವ ಯಾವುದೇ ಅಂಚೆ ಕಚೇರಿಯಲ್ಲಿ ಹಣ ಸ್ವೀಕರಿಸಬಹುದು. ಪ್ರಸ್ತುತ ದೇಶದ 676 ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇದ್ದು, ಈ ಕಚೇರಿಗಳಲ್ಲಿ ವ್ಯವಸ್ಥೆಯ ಲಾಭ ಪಡೆಯಬಹುದು.

ಅಂಚೆ ಕಚೇರಿಯಲ್ಲಿ ಎಟಿಎಂ ಏನಿದು? ಹೇಗೆ ಬಳಕೆ?
ಅಂಚೆ ಕಚೇರಿಯಲ್ಲಿ ಎಟಿಎಂ ಬಳಕೆ ಬಗ್ಗೆ ಎಬಿಸಿಡಿ
* ಭಾರತೀಯ ಅಂಚೆ ಕಚೇರಿ ವೆಬ್ ತಾಣದ ಮಾಹಿತಿಯಂತೆ ಎಟಿಎಂ ಕಾರ್ಡಿನಿಂದ ದಿನಕ್ಕೆ ಸುಮಾರು 25 ಸಾವಿರ ರೂ.ವರೆಗೆ ಹಣವನ್ನು ಡ್ರಾ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.
* ಒಂದು ಬಾರಿಗೆ ವಿಥ್ ಡ್ರಾ ಮಿತಿಯನ್ನು ದಿನವೊಂದಕ್ಕೆ 10,000 ರು ಎಂದು ನಿಗದಿಪಡಿಸಿದ್ದಾರೆ.
* ಭಾರತೀಯ ಅಂಚೆ ಹಾಗೂ ಅಂಚೆ ಕಚೇರಿಗಳಲ್ಲಿರುವ ಎಟಿಎಂಗಳ ವ್ಯವಹಾರ ಸಂಪೂರ್ಣ ಉಚಿತವಾಗಿದೆ.

 ಬ್ಯಾಂಕ್ ಗಳಲ್ಲೂ ಅಂಚೆ ಎಟಿಎಂ ಬಳಸಬಹುದು

ಬ್ಯಾಂಕ್ ಗಳಲ್ಲೂ ಅಂಚೆ ಎಟಿಎಂ ಬಳಸಬಹುದು

* ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್ ಗಳ ಎಟಿಎಂಗಳಲ್ಲಿ ಅಂಚೆ ಎಟಿಎಂ ಕಾರ್ಡ್ ಬಳಸಬಹುದು.
* ಎಟಿಎಂ ಕಾರ್ಡ್ ಬೇರೆ ಬ್ಯಾಂಕ್ ಗಳಲ್ಲಿ ಬಳಸುವವರಿಗೆ ಸೂಚನೆ, ಉಚಿತ ವಿಥ್ ಡ್ರಾ ಬಳಕೆ ಪ್ರತಿ ತಿಂಗಳಿಗೆ ಮೂರು ಬಾರಿ ಎಂದು ನಿಗದಿಪಡಿಸಲಾಗಿದೆ. ಡೆಬಿಟ್ ಕಾರ್ಡ್ ಗಳನ್ನು ಬೇರೆ ಬ್ಯಾಂಕಿನ ಎಟಿಎಂನಲ್ಲಿ ಬಳಸುವ ಮುನ್ನ ಮಿತಿಯನ್ನು ತಿಳಿದುಕೊಳ್ಳುವುದು ಒಳ್ಳೆಯದು.
* ಮೆಟ್ರೋ ನಗರಗಳಲ್ಲದಿದ್ದರೆ ಉಚಿತ ವಿಥ್ ಡ್ರಾ ಬಳಕೆ ಪ್ರತಿ ತಿಂಗಳಿಗೆ ಐದು ಬಾರಿ ಎಂದು ನಿಗದಿಪಡಿಸಲಾಗಿದೆ.

 ಬೇರೆ ಬ್ಯಾಂಕಿನ ಎಟಿಎಂ ಬಳಕೆಗೆ ಶುಲ್ಕ

ಬೇರೆ ಬ್ಯಾಂಕಿನ ಎಟಿಎಂ ಬಳಕೆಗೆ ಶುಲ್ಕ

ಮೆಟ್ರೋ ಹಾಗೂ ಮೇಟ್ರೋಯೇತರ ನಗರಗಳಾಗಲಿ ವ್ಯವಹಾರಿಕ ಅಥವಾ ವ್ಯವಹಾರಿಕ ರಹಿತ ಕ್ರಿಯೆಗಳನ್ನು ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ನಡೆಸಿದರೆ, ಅದು ಮಿತಿ ಮೀರಿದ್ದರೆ ಅಂಚೆ ಕಚೇರಿ ಗ್ರಾಹಕರು ಶುಲ್ಕ ತೆರಬೇಕಾಗುತ್ತದೆ.

 ಎಟಿಎಂ ಬಳಕೆ ಶುಲ್ಕ ಎಷ್ಟು?

ಎಟಿಎಂ ಬಳಕೆ ಶುಲ್ಕ ಎಷ್ಟು?

ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ನಡೆಸಿದರೆ, ಅದು ಮಿತಿ ಮೀರಿದ್ದರೆ ಅಂಚೆ ಕಚೇರಿ ಗ್ರಾಹಕರು ಪ್ರತಿ ವಾಣಿಜ್ಯ ವ್ಯವಹಾರಕ್ಕೂ 20 ರು ಹೆಚ್ಚುವರಿ ಶುಲ್ಕ ತೆರಬೇಕಾಗುತ್ತದೆ. ಇದು ಜಿಎಸ್ಟಿಯನ್ನು ಒಳಗೊಂಡಿರುತ್ತದೆ.

 ಅಂಚೆ ಕಚೇರಿ ಗ್ರಾಹಕರಿಗೆ ಶುಲ್ಕ ಎಷ್ಟು?

ಅಂಚೆ ಕಚೇರಿ ಗ್ರಾಹಕರಿಗೆ ಶುಲ್ಕ ಎಷ್ಟು?

ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ನಡೆಸಿದರೆ, ಅದು ಮಿತಿ ಮೀರಿದ್ದರೆ ಅಂಚೆ ಕಚೇರಿ ಗ್ರಾಹಕರು ಪ್ರತಿ ವಾಣಿಜ್ಯಯೇತರ ವ್ಯವಹಾರಕ್ಕೂ 8 ರು ಹೆಚ್ಚುವರಿ ಶುಲ್ಕ ತೆರಬೇಕಾಗುತ್ತದೆ. ಇದು ಜಿಎಸ್ಟಿಯನ್ನು ಒಳಗೊಂಡಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+