One Day Trip: ಒಂದೇ ದಿನದಲ್ಲಿ ಭೇಟಿ ನೀಡಬಹುದಾದ ಕಲ್ಪತರು ನಾಡಿನ ಪ್ರವಾಸಿ ತಾಣಗಳು
ಮನೆಯಲ್ಲಿ ಇದ್ದು, ಆಫೀಸ್ ಕೆಲಸ ಮಾಡಿ ಬೋರ್ ಆಗ್ತಿದಿಯಾ? ನೀವು ನಿಮ್ಮವರೊಂದಿಗೆ ಕೊಂಚ ಸಮಯ ಕಳಿಬೇಕು ಅನ್ಕೊಂಡಿದಿರಾ? ಅದರಲ್ಲೂ ಆ ಸಮಯ ಆರೋಗ್ಯಕರವಾಗಿರಬೇಕು ಅಂತ ಯೋಚನೆ ಮಾಡ್ತಾಯಿದ್ದೀರಾ? ಹಾಗಾದರೆ ನಾವು ನಿಮಗೆ ಕೆಲ ಚಾರಣ (trekking) ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತೇವೆ.
ಅಯ್ಯೋ ತುಂಬಾ ದೂರ ಆದರೆ ಹೋಗೋಕೆ ಕಷ್ಟ, ನಮಗೆ ಒಂದೇ ದಿನದ ಪ್ರವಾಸ ಆಗಿರಬೇಕು ಅನ್ನೋರಿಗೆ ತುಮಕೂರಿನಿಂದ ಕೆಲ ಕಿಲೋ ಮೀಟರ್ ದೂರದಲ್ಲಿ ಹಲವಾರು ಟ್ರಕಿಂಗ್ ಸ್ಥಳಗಳು ನೋಡಲು ಸಿಗುತ್ತವೆ. ಹಾಗಾದರೆ ಆ ಸ್ಥಳಗಳ ಬಗ್ಗೆ ಒಂದೊಂದಾಗಿ ನೋಡುತ್ತಾ ಹೋಗೋಣ.

ಬೆಂಗಳೂರಿನಿಂದ ತುಮಕೂರು 70 ಕಿಲೋ ಮೀಟರ್ ದೂರದಲ್ಲಿದೆ. ತುಮಕೂರಿನಲ್ಲಿ ಚಾರಣಕ್ಕೆ ಹೋಗಲು ಹಲವಾರು ಸ್ಥಳಗಳಿವೆ. ಅವುಗಳಲ್ಲಿ ಕೆಲವು ಸ್ಥಳಗಳ ಬಗ್ಗೆ ತಿಳಿಯುತ್ತಾ ಹೋಗೋಣ.
ಶಿವಗಂಗೆ
ಶಿವಗಂಗೆ ಒಂದು ಕಪ್ಪು ಗ್ರನೈಟ್ ಬೆಟ್ಟ. ಇದು ಚಾರಣ ಪ್ರಿಯರಿಗೆ ಅತ್ಯಂತ ನೆಚ್ಚಿನ ಸ್ಥಳವಾಗಿದೆ. ಸೂರ್ಯಸ್ತವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಈ ಸ್ಥಳ ಮನಸ್ಸಿಗೆ ಹಿತವನ್ನು ನೀಡುತ್ತದೆ. ಶಿವಗಂಗೆ ಬೆಂಗಳೂರಿನಿಂದ 76 ಕಿ.ಮೀ ದೂರದಲ್ಲಿದೆ. ಈ ಸ್ಥಳಕ್ಕೆ ರೈಲು ಹಾಗೂ ಬಸ್ ಮೂಲಕ ಭೇಟಿ ನೀಡಬಹುದು. ಬೆಂಗಳೂರಿನಿಂದ ತುಮಕೂರಿಗೆ ಹಲವಾರು ರೈಲುಗಳು ನಿಯಮಿತವಾಗಿ ಚಲಿಸುತ್ತವೆ. ದಾಬಾಸ್‌ಪೇಟೆ ತನಕ ಬಸ್ಸುಗಳು ಲಭ್ಯವಿದೆ. ದಾಬಾಸ್‌ಪೆಟೆಯಿಂದ ರೈಲು ಮೂಲಕ ಹೋಗಬಹುದು. ಅಥವಾ ಬೆಂಗಳೂರಿನಿಂದಲೂ ರೈಲು ಮೂಲಕ ಹೋಗಬಹುದು.
ದಾಬಾಸ್‌ಪೇಟ್‌ಯಲ್ಲಿ ಇಳಿದು ಅಲ್ಲಿಂದ ನೀವು ಶಿವಗಂಗೆಗೆ ಬಸ್ ಅಥವಾ ಆಟೋ ರಿಕ್ಷಾವನ್ನು ತೆಗೆದುಕೊಳ್ಳಬಹುದು. ಸ್ವಲ್ಪ ಜನಸಂದಣಿ ಇರುವ ಇನ್ನೊಂದು ಪರ್ಯಾಯವೆಂದರೆ ಬೆಂಗಳೂರು - ಹಾಸನ ಮಾರ್ಗ. ಇದು ಸೋಲೂರಿಗೆ ನಂತರ ಶಿವಗಂಗೆಗೆ ಬಲ ತಿರುವು ತೆಗೆದುಕೊಳ್ಳುತ್ತದೆ.

ಮಂದಾರಗಿರಿ
ಶಿವಗಂಗೆ ಬಳಿಕ 18 ಕಿಲೋ ಮೀಟರ್ ದೂರದಲ್ಲಿ ಮಂದಾರಗಿರಿ ಇದೆ. ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿರುವ ಮಂದರಗಿರಿ ಬೆಟ್ಟಗಳು ಒಂದು ದಿನ ಅಥವಾ ವಾರಾಂತ್ಯಕ್ಕೆ ಹೋಗಲು ಸೂಕ್ತವಾದ ಮತ್ತೊಂದು ತಾಣವಾಗಿದೆ. ತುಮಕೂರಿನ ಮಂದಾರಗಿರಿ ಬೆಟ್ಟಗಳು ಅತ್ಯುತ್ತಮ ಛಾಯಾಗ್ರಹಣ ತಾಣವಾಗಿದೆ.
ಸ್ಥಳೀಯವಾಗಿ ಬಸದಿ ಬೆಟ್ಟ ಎಂದೂ ಕರೆಯಲ್ಪಡುವ ಈ ಬೆಟ್ಟವು ಸುಮಾರು 450 ಮೆಟ್ಟಿಲುಗಳ ಮೂಲಕ ಮೇಲೇರುವ ಬೆಟ್ಟವಾಗಿದೆ. ಒಂದು ಸಣ್ಣ ಚಾರಣ, ಒಂದು ಸಣ್ಣ ಕೊಳ, ಎಲ್ಲಾ ಆಕಾರಗಳು ಮತ್ತು ಗಾತ್ರಗಳ ಹಲವಾರು ಬಂಡೆಗಳು ಮತ್ತು ಅನೇಕ ದೇವಾಲಯಗಳು, ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿವೆ. ಇಲ್ಲಿ ನವಿಲು ಗರಿಗಳ ಚಿತ್ರವಿರುವ ಗುಮ್ಮಟ ಆಕಾರದ 81 ಅಡಿ ಎತ್ತರದ ಜೈನ್ ಗುರು ಮಂದಿರ ಇದೆ. ಇದು ದಕ್ಷಿಣ ರಾಜ್ಯದಲ್ಲಿರುವ ಜೈನರ ಮಹತ್ವದ ಯಾತ್ರಾ ಕೇಂದ್ರವಾಗಿದೆ.
ದೇವರಾಯನ ದುರ್ಗ
ಟ್ರೆಕ್ಕಿಂಗ್ ಮಾಡುವ ಹುಮ್ಮಸ್ಸಲ್ಲಿದ್ದರೆ ಒಂದು ದಿನದ ದೇವರಾಯನ ದುರ್ಗಕ್ಕೆ ಭೇಟಿ ನೀಡಬೇಕು. ಎಷ್ಟು ದೂರ ಕಣ್ಣು ಹಾಯಿಸಿದರೂ ಹಸಿರು ಸಿರಿಯ ನಡುವೆ ತಲೆ ಎತ್ತಿರುವ ದೊಡ್ಡ ದೊಡ್ಡ ಬಂಡೆಗಳು ಗೋಚರಿಸುತ್ತವೆ. ಆ ನುಣುಪಾದ ಬಂಡೆಗಳೇ ಈ ಪ್ರದೇಶದ ವಿಶೇಷ. ಬೆಟ್ಟದ ಮೇಲಿರುವ ನರಸಿಂಹ ದೇವರ ದರ್ಶನ ಮಾಡಿ ಉತ್ಸಾಹ ಇದ್ದರೆ ನಂತರ ಟ್ರೆಕ್ಕಿಂಗ್‍ಗೆ ತೆರಳಬಹುದು. ದೇವರಾಯನದುರ್ಗ ಬೆಂಗಳೂರಿನಿಂದ ದೇವರಾಯನ ದುರ್ಗ 65 ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ 16 ಕಿ.ಮೀ. ತುಮಕೂರಿನಿಂದ 10. ಕಿ.ಮೀ. ದೂರ ದಾಟುತ್ತಿದ್ದಂತೆ ದೇವರಾಯನ ದುರ್ಗದ ಕಾಡು ಕಾಣಲು ಪ್ರಾರಂಭವಾಗುತ್ತದೆ. ಹಾಗೇ ಮುಂದುವರಿದರೆ ದೇವರಾಯನ ದುರ್ಗದ ಬೆಟ್ಟ ಸಿಗುತ್ತದೆ. ಈ ಜಾಗ ಒಂದು ದಿನದ ಪ್ರವಾಸಕ್ಕೆ ಯೋಗ್ಯವಾದದ್ದು.












Click it and Unblock the Notifications