ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸುರಕ್ಷಿತ ಲೈಂಗಿಕತೆಯಿಂದ ಬದುಕು ಕಸಿಯುತ್ತಿರುವ ಆಗಂತುಕರು

|
Google Oneindia Kannada News

ಬೆಂಗಳೂರು, ಡಿಸೆಂಬರ್ 21 : ಸಾಮಾಜಿಕ ಜಾಲತಾಣಗಳ ಮೂಲಕ ಆಗಂತುಕರು ಸುಂದರ ಯುವತಿಯರನ್ನು ಮರುಳುಗೊಳಿಸಿ ಲೈಂಗಿಕ ಸಂಬಂಧ ಬೆಳೆಸುವುದರಿಂದ ಎಚ್.ಐ.ವಿಯಂತಹ ಮಾರಕ ರೋಗಕ್ಕೆ ಬಲಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

ನಗರ ಪ್ರದೇಶದಲ್ಲಿ ವಾಸಿಸುವ ಯುವತಿಯರನ್ನು ವಾಟ್ಸ್ ಆಪ್, ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿ ಪ್ರೀತಿಸುವ ನಾಟಕವಾಡಿ ಯುವತಿಯರನ್ನು ಪರಿಚಯಿಸಿಕೊಳ್ಳುತ್ತಾರೆ.

ನಂತರ ಕಾಫಿ ಶಾಪ್ ಗಳಿಗೆ, ಐಸ್ ಕ್ರೀಂ ಪಾರ್ಲರ್ ಗಳಿಗೆ ಅಥವಾ ಡಿನ್ನರ್ ಗಳಿಗೆ ಕರೆದೊಯ್ದು ಕ್ರಮೇಣ ಸ್ನೇಹ ಬೆಳೆಸುತ್ತಾರೆ. ಸ್ನೇಹ ಪ್ರೀತಿಗೆ ಪರಿವರ್ತನೆಗೊಂಡು, ಕಾಫಿಶಾಪ್ ಗಳಿಂದ ರೆಸಾರ್ಟ್ ಗಳಿಗೆ ಶಿಫ್ಟ್ ಆಗುತ್ತದೆ.
ಯುವತಿಯರ ಮನ ಒಲಿಸಿ ರೆಸಾರ್ಟ್ ಗಳಿಗೆ ಕರೆದೊಯ್ದು ಅವರೊಂದಿಗೆ ಅಗಂತುಕ ವ್ಯಕ್ತಿಗಳು ಲೈಂಗಿಕ ಸಂಪರ್ಕ ಬೆಳೆಸುತ್ತಾರೆ.

One Condom can save many lives

ನಿಜವಾಗಲೂ ಪ್ರೀತಿಸುತ್ತಿರುವುದಾಗಿ ನಂಬುವ ಯುವತಿಯರು ಇಂತಹ ಸುಂದರ ಯುವಕರಿಗೆ ಅವರು ಬಳಸುವ ದುಬಾರಿ ಕಾರುಗಳಿಗೆ ಮರುಳಾಗಿ ಮೈಮರೆಯುತ್ತಾರೆ. ಇದರಿಂದಾಗಿ ಸ್ನೇಹ ಪ್ರೀತಿಯಾಗಿ ಪರಿವರ್ತನೆಗೊಂಡು, ಪ್ರೀತಿ ಲೈಂಕಿಕ ಸಂಪರ್ಕಕ್ಕೆ ತಿರುಗಿ ಕೊನೆಗೆ ಬದುಕಿನಲ್ಲಿ ಯಾವ ದಡವನ್ನೂ ಸೇರದೆ ಅತಂತ್ರರಾಗುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಗೊಂಡ ಸುರದ್ರೂಪಿ ಯುವಕರು ಒಂದು ಬಾರಿ ಸುಂದರ ಯುವತಿಯರನ್ನು ಲೈಂಗಿಕವಾಗಿ ಬಳಸಿದ ಮೇಲೆ ತಿರುಗಿ ನೋಡುವುದಿಲ್ಲ. ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ನಲ್ಲಿ ನಂಬರ್ ಸಂಗ್ರಹಿಸುವ ಯುವಕರು ಯುವತಿಯರನ್ನು ಬಳಸಿಕೊಂಡ ಮೇಲೆ ತಮ್ಮ ನಂಬರ್ ಬದಲಾಯಿಸುತ್ತಾರೆ.

ವಾಟ್ಸ್ಆಪ್ ಗಳಲ್ಲಿ ಬಳಕೆಯಾದ ಯುವತಿಯರ ನಂಬರ್ ಗಳನ್ನು ಬ್ಲಾಕ್ ಮಾಡುತ್ತಾರೆ. ಇಲ್ಲವೇ ಫೇಸ್ ಬುಕ್ ನಿಂದ ತಮ್ಮ ಅಕೌಂಟ್ ಗಳನ್ನೇ ಅಳಿಸಿ ಹಾಕುತ್ತಾರೆ. ಎಷ್ಟೋ ದಿನದ ಬಳಿಕ ಲೈಂಕಿಕವಾಗಿ ಬಳಕೆಯಾದ ಯುವತಿ ತಾನು ಮೈಮರೆತಿದ್ದ ತಾನು ತಪ್ಪು ಮಾಡಿದೆ ಎಂಬುದು ಕ್ರಮೇಣವಾಗಿ ಅರಿವಿಗೆ ಬರಲಾರಂಭಿಸುತ್ತದೆ.

ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿ ಹೋಗುವ ಯುವತಿ ಅದರಿಂದ ಹೊರಬರಲಾಗುವುದಿಲ್ಲ. ಕೊನೆಗೊಂದು ದಿನ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿದಾಗ ಆ ಯುವತಿಯ ತೂಕದಲ್ಲಿ ಗಣನೀಯ ಇಳಿಕೆ, ದೇಹದಲ್ಲಿ ಸುಕ್ಕುಕಟ್ಟುವುದು ಅನಾರೋಗ್ಯ, ಊಟ ಸೇರಿರದಿರುವುದು ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಬದುಕು ಕರೆದೊಯ್ದ ದಾರಿ ಮಾರಕ ಕಾಯಿಲೆಗೆ ತಂದು ನಿಲ್ಲಿಸಿದೆ ಎಂಬುವುದು ಅರಿವು ಬರುವಷ್ಟರಲ್ಲಿ ಕಾಲ ಮಿಂಚಿರುತ್ತದೆ.

ಇದು ಕೇವಲ ನಿದರ್ಶನ ಇಂತಹ ಸಾವಿರಾರು ಘಟನೆಗಳು ನಗರ ಪ್ರದೇಶಗಳಲ್ಲಿ ಅದರಲ್ಲೂ ಬೆಂಗಳೂರಿನಂತಹ ಮೆಎಟ್ರೊ ಪೊಲಿಟನ್ ಸಿಟಿಗಳನ್ನು ಹೆಚ್ಚಾಗಿ ಸಂಭವಿಸುತ್ತದೆ. ಅದರಲ್ಲಿಯೂ ಯಾರ ಗಮನಕ್ಕೂ ಬರುವುದಿಲ್ಲ, ದುರಂತದ ಬಳಿಕವೂ ಮುಖ್ಯವಾಹಿನಿಗೆ ಈ ವಿಚಾರಗಳು ಗೊತ್ತಾಗುವುದೇ ಇಲ್ಲ.

ಹೀಗಾಗಿ ಕಾಂಡೊಮ್ ಇಲ್ಲದೆ ಮಾಡುವ ಅಸುರಕ್ಷತೆ ಲೈಂಗಿಕತೆ ಜೀವನದ ಸುಖವನ್ನೇ ಕಸಿದುಬಿಡುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ಮಾರುಹೋಗುವುದು ಒಂದೆಡೆಯಾದರೆ, ಪರಿಚಿತು ಅಪರಿಚಿತರು ರೊಂದಿಗೆ ಅಸುರಕ್ಷಿತ ಲೈಂಗಿಕತೆ ನಡೆಸುವುದು ಕೂಡ ಬದುಕನ್ನೇ ಕಸಿಯಬಲ್ಲದು. ಇಂತಹ ಗಟನೆಗಳು ಎಲ್ಲರಿಗೂ ಎಚ್ಚರಿಕೆಯಾಗಬೇಕು.

English summary
Strangers are spoiling many lives. In urban India sex mafia spoiling many lives by having sex without condom. Social medias are using for having date and sex between unknown person. the people will believe unknown person.They will exchange their feelings later it will tern love end with sex.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X