• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆ ಮನೆಗೂ ಮಸಾಲೆ ಸುವಾಸನೆ ಹರಡಿಸಿದ ಗುಲಾಟಿ ವ್ಯಕ್ತಿಚಿತ್ರ

|

ಪಾಕಿಸ್ತಾನದ ಸಿಯೋಲ್ ಕೋಟ್ ಮೂಲದ ಚುನ್ನಿಲಾಲ್ ಗುಲಾಟಿ ಅವರು ಭಾರತದಲ್ಲಿ ಉದ್ಯಮ ಮಾಡಲು ಬಂದು ಸ್ಥಾಪಿಸಿದ ಸಂಸ್ಥೆ Mahashian Di Hatti(MDH) ನೂರು ವರ್ಷ ಕಂಡಿದೆ. ಭಾರತ ವಿಭಜನೆಗೊಂಡ ಬಳಿಕ ಭಾರತದಲ್ಲಿನ ಉದ್ಯಮವನ್ನು ಮುಂದುವರೆಸಿಕೊಂಡು ಹೋದ ಚುನ್ನಿಲಾಲ್ ಅವರ ಪುತ್ರ ಮಹಾಶಯ್ ಧರ್ಮಪಾಲ್ ಗುಲಾಟಿ ಅವರು ಕಿಂಗ್ ಆಫ್ ಸ್ಪೈಸಸ್ ಎನಿಸಿಕೊಂಡರು. ಗುಲಾಟಿ ಅವರ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ...

   ಎಮ್‌ಡಿಹೆಚ್‌ ಮಸಾಲೆ ಕಂಪನಿ ಸಂಸ್ಥಾಪಕ ಧರಮ್‌ಪಾಲ್‌ ಗುಲಾಟಿ ನಿಧನ

   ಪಾಕಿಸ್ತಾನದ ಸಿಯೋಲ್ ಕೋಟ್ ಮೂಲದ ಗುಲಾಟಿ ಕುಟುಂಬದ ಚುನ್ನಿಲಾಲ್ ಅವರು 1919ರಲ್ಲಿ ಸ್ಥಾಪಿಸಿದ ಮಹಾಶಿಯನ್ ಡಿ ಹಟ್ಟಿ(ಎಂಡಿಎಚ್) ಮಸಾಲ ಪುಡಿ ಉತ್ಪಾದನಾ ಸಂಸ್ಥೆಗೆ 1959ರಿಂದ ಮಹಾಶಯ್ ಧರ್ಮ್ ಪಾಲ್ ಗುಲಾಟಿ ಅವರು ಮುಖ್ಯಸ್ಥರಾಗಿದ್ದವರು. ಚುನ್ನಿಲಾಲ್ ಅವರು ಸೋಪ್, ಮರಗೆಲಸ, ಜವಳಿ, ಹಾರ್ಡ್ ವೇರ್, ಅಕ್ಕಿ ವ್ಯಾಪಾರ ಎಲ್ಲದರಲ್ಲೂ ಅದೃಷ್ಟ ಪರೀಕ್ಷೆ ಮಾಡಿ ಕೊನೆಗೆ ಮಸಾಲೆ ವ್ಯಾಪಾರ ಮಾಡಲು ಟಾಂಗಾ ಏರಿದರು.

   ಎಂಡಿಎಚ್ ಮಸಾಲದ ಮಾಲೀಕ King of Spices ಇನ್ನಿಲ್ಲ

   ದೀರ್ಘಕಾಲ ಸಂಸ್ಥೆಯೊಂದನ್ನು ಮುನ್ನಡೆಸಿದ ಸಾಧನೆ ಇವರ ಹೆಸರಿನಲ್ಲಿದೆ. ಜೊತೆಗೆ ಗೊದ್ರೇಜ್, ಐಟಿಸಿ, ಹಿಂದೂಸ್ತಾನ್ ಯೂನಿ ಲಿವರ್ ನಂಥ ಸಂಸ್ಥೆ ಬಾಸ್ ಗಳಿಗೂ ಅಧಿಕ ಸಂಬಳ ಪಡೆಯುತ್ತಿದ್ದ ಅತ್ಯಂತ ಹಿರಿಯ ಸಿಇಒ, ಎಂಡಿ ಎನಿಸಿಕೊಂಡಿದ್ದರು. ಉದ್ಯಮಿ ಮಹಾಶಯ್ ಧರ್ಮಪಾಲ್ ಗುಲಾಟಿ ಅವರಿಗೆ ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

   FMCG ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಬಳ ಪಡೆದ ಸಿಇಒ

   FMCG ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಬಳ ಪಡೆದ ಸಿಇಒ

   Food Moving Consumer Goods(FMCG) ಕ್ಷೇತ್ರದಲ್ಲಿ ಧರ್ಮಪಾಲ್ ಅವರು ಅತ್ಯಂತ ಹೆಚ್ಚಿನ ಸಂಬಳ ಪಡೆಯುವ ಸಿಇಒ ಆಗಿದ್ದರು. 2017ರ ಆರ್ಥಿಕ ವರ್ಷದಲ್ಲಿ ಧರ್ಮಪಾಲ್ ಅವರು 21 ಕೋಟಿ ರು ಸಂಬಳ ಪಡೆದಿದ್ದರು.

   ಅಷ್ಟೇ ಅಲ್ಲದೆ, ತಮಗೆ ಬರುತ್ತಿದ್ದ ಕೋಟ್ಯಂತರ ರುಪಾಯಿ ಸಂಬಳದಲ್ಲಿ ಶೇ 90 ರಷ್ಟು ಧಾನ ಧರ್ಮಕ್ಕೆ ವಿನಿಯೋಗಿಸುತ್ತಾ ಕೊಡುಗೈ ದಾನಿ ಎನಿಸಿಕೊಂಡಿದ್ದರು. ತಂದೆ ಚುನ್ನಿಲಾಲ್ ಹಾಗೂ ತಾಯಿ ಚನ್ನನ್ ದೇವಿ ಅವರು ಧಾನ ಧರ್ಮದಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದರು. ಹೀಗಾಗಿ ಗುಲಾಟಿ ಅವರು ಈ ಅಭ್ಯಾಸವನ್ನು ಹಲವು ದಶಕಗಳ ಕಾಲ ಮುಂದುವರೆಸಿಕೊಂಡು ಬಂದರು.

   ಚಾಂದಿನಿ ಚೌಕ್ ನಿಂದ ದೇಶದ ಮೂಲೆ ಮೂಲೆಗೂ

   ಚಾಂದಿನಿ ಚೌಕ್ ನಿಂದ ದೇಶದ ಮೂಲೆ ಮೂಲೆಗೂ

   ದೆಹಲಿಯ ಕರೋಲ್ ಬಾಗ್ ನ ಅಜ್ಮಲ್ ಖಾನ್ ರಸ್ತೆಯಲ್ಲಿ 14 X 9 ಪೆಟ್ಟಿಗೆ ಗೂಡಂಗಡಿ ಹಾಗೂ ಚಾಂದಿನಿ ಚೌಕ್(1953) ನ ಪುಟ್ಟ ಅಂಗಡಿಗಳಲ್ಲಿ ಆರಂಭವಾದ ಎಂಡಿಎಚ್ ಬ್ರ್ಯಾಂಡ್ ಇಂದು ದೇಶದ ಪ್ರಮುಖ ಮಸಾಲೆ ಬ್ರ್ಯಾಂಡ್ ಆಗಿ ಬೆಳೆದಿದ್ದು ಇತಿಹಾಸ. 1959ರಿಂದ ವೈವಿಧ್ಯಮಯ ಬ್ರ್ಯಾಂಡ್ ಆಗಿ ಬೆಳೆಯಲು ಗುಲಾಟಿ ಅವರ ದೂರದರ್ಶಿತ್ವ ಕಾರಣ.

   ದೆಹಲಿಯ ಕೀರ್ತಿ ನಗರದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಿದ ಗುಲಾಟಿ ಅವರು ಹಿಂತಿರುಗಿ ನೋಡಲಿಲ್ಲ. ಇಂದು ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಎಂಡಿಎಚ್ ಸುಮಾರು 62ಕ್ಕೂ ಅಧಿಕ ಉತ್ಪನ್ನಗಳನ್ನು 150ಕ್ಕೂ ಅಧಿಕ ವಿವಿಧ ಶ್ರೇಣಿಗಳಲ್ಲಿ ಮಾರಾಟ ಮಾಡುತ್ತಿದೆ.

   5ನೇ ತರಗತಿ ತನಕ ಮಾತ್ರ ಓದಿದ್ದ ಗುಲಾಟಿ

   5ನೇ ತರಗತಿ ತನಕ ಮಾತ್ರ ಓದಿದ್ದ ಗುಲಾಟಿ

   ಅಪ್ಪ ಚುನ್ನಿಲಾಲ್ ಅವರಿಗೆ ಮಗ ಗುಲಾಟಿ ಚೆನ್ನಾಗಿ ಓದಿ ವಿದ್ಯಾವಂತನಾಗಬೇಕು ಎಂಬ ಕನಸಿತ್ತು. ಆದರೆ, ಅಪ್ಪನ ವ್ಯಾಪಾರ ವಹಿವಾಟು ನೋಡಿಕೊಂಡು ಬೆಳೆದ ಧರ್ಮಪಾಲ್ ಅವರಿಗೆ 5ನೇ ತರಗತಿ ನಂತರ ಓದಲು ಸಾಧ್ಯವಾಗಲಿಲ್ಲ. ಅಪ್ಪನ ಜೊತೆ ಹೊಸದಾಗಿ ಸ್ಥಾಪನೆಯಾಗಿದ್ದ ಮಸಾಲೆ ಬ್ರ್ಯಾಂಡ್ ಹಾಗೂ ಅಂಗಡಿ ಪ್ರಚಾರಕ್ಕಿಳಿದರು.

   ಜೀವನ ಕಲಿಸಿದ ಪಾಠದಿಂದಲೇ ವ್ಯವಹಾರ ಜ್ಞಾನ ಬೆಳೆಸಿಕೊಂಡ ಧರ್ಮಪಾಲ್ ಅವರು ಅಮೃತ್ ಸರ್ ದ ವಲಸಿಗರ ಕ್ಯಾಂಪ್ ಗಳಲ್ಲಿ ಕಷ್ಟದ ದಿನಗಳನ್ನು ಕಂಡವರು. ಸಿಯೋಲ್ ಕೋಟ್ ನಿಂದ ಬಂದ ಮಸಾಲೆ ಚೆನ್ನಾಗಿದೆ ಎಂಬ ಜನರ ಬಾಯಿ ಮಾತಿನ ಮನ್ನಣೆ ಮನೆ ಮನೆಗೂ ತಲುಪಿ ಬಹುಬೇಗ ಬ್ರ್ಯಾಂಡ್ ಅಭಿವೃದ್ಧಿಯಾಯಿತು.

   ಬ್ರ್ಯಾಂಡ್ ವಿಸ್ತರಣೆ ಯೋಜನೆ ರೂಪಿಸಿದ್ದ ಗುಲಾಟಿ

   ಬ್ರ್ಯಾಂಡ್ ವಿಸ್ತರಣೆ ಯೋಜನೆ ರೂಪಿಸಿದ್ದ ಗುಲಾಟಿ

   ಕರೋಲ್ ಬಾಗ್ ನ ಪುಟ್ಟ ಅಂಗಡಿಯಿಂದ ಆರಂಭವಾದ ಮಸಾಲೆ ವ್ಯಾಪಾರ, 1953ರಲ್ಲಿ ಚಾಂದಿನಿ ಚೌಕ್, 1959ರಲ್ಲಿ ಕೀರ್ತಿ ನಗರ್ ನಲ್ಲಿ ಸ್ವಂತ ಕಾರ್ಖಾನೆ ಸ್ಥಾಪಿಸುವ ತನಕ ಬೆಳೆಯಿತು.

   ಸಾಮಾನ್ಯವಾಗಿ ಇಂಥ ಬ್ರ್ಯಾಂಡ್ ಜಾಹೀರಾತಿಗೆ ರೂಪದರ್ಶಿಯಾಗಿ ಗೃಹಿಣಿಯರನ್ನು ಅಥವಾ ಸೆಲೆಬ್ರಿಟಿಗಳನ್ನು ಬಳಸಲಾಗುತ್ತದೆ. ಆದರೆ, ದಾದಾಜಿ, ಮಹಾಶಯ್ ಜಿ ಎಂದು ಕರೆಯಲ್ಪಡುವ ಅಜ್ಜ ಗುಲಾಟಿ ಅವರ ಭಾವಚಿತ್ರವೇ ಎಂಡಿಎಚ್ ನ ಹೆಗ್ಗುರುತಾಗಿ ಬೆಳೆಸಿದ್ದು ನಿಜಕ್ಕೂ ಅಚ್ಚರಿ.

   ಎಂಡಿಎಚ್ ಯಶಸ್ಸಿಗೆ ಏನು ಕಾರಣ

   ಎಂಡಿಎಚ್ ಯಶಸ್ಸಿಗೆ ಏನು ಕಾರಣ

   ಎಂಡಿಎಚ್ ಯಶಸ್ಸಿಗೆ ಮುಖ್ಯ ಕಾರಣ, ಪರಿಶುದ್ಧವಾದ ಕಚ್ಚಾವಸ್ತುಗಳ ಬಳಕೆ ಹಾಗೂ ಉತ್ತಮ ಗುಣಮಟ್ಟ ಎಂದು ಗುಲಾಟಿ ಅವರೇ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. ಭಾರತದಲ್ಲಿ ಮಸಾಲೆ ಬಹುಮುಖ್ಯ ಪದಾರ್ಥ. ಇದರಲ್ಲಿ ಕಲಬೆರೆಕೆ ಮಾಡಿ ಉಳಿಯಲು ಸಾಧ್ಯವಿಲ್ಲ. ಉತ್ತಮವಾದದ್ದನ್ನು ನೀಡಿದರೆ ಮಾತ್ರ ಜನರ ಮನೆ ಮನದಲ್ಲಿ ಉಳಿಯಲು ಸಾಧ್ಯ ಎಂದಿದ್ದರು.

   ಚಾಟ್ ಮಸಾಲ, ಚನ್ನಾ ಮಸಾಲ ಇಂದು 100ಕ್ಕೂ ಅಧಿಕ ದೇಶಗಳಿಗೆ ಅತ್ಯಧಿಕ ರಫ್ತಾಗುವ ಪದಾರ್ಥ. ಲಂಡನ್, ದುಬೈನಲ್ಲಿ ಕಚೇರಿ ಹೊಂದಿರುವ ಎಂಡಿಎಚ್ ಬಹು ನಂಬುಗೆಯ ಬ್ರ್ಯಾಂಡ್ ಆಗಿದೆ.

   ಧಾನ ಧರ್ಮ, ದೇಣಿಗೆ ಮುಖ್ಯ ಎನ್ನುತ್ತಿದ್ದ ಗುಲಾಟಿ

   ಧಾನ ಧರ್ಮ, ದೇಣಿಗೆ ಮುಖ್ಯ ಎನ್ನುತ್ತಿದ್ದ ಗುಲಾಟಿ

   ಮಸಾಲೆ ಬ್ರ್ಯಾಂಡ್ ಬೆಳೆಸಿ ವಾರ್ಷಿಕ 21 ಕೋಟಿ ಸಂಬಳ ಗಳಿಸುತ್ತಿದ್ದ ಗುಲಾಟಿ ಅವರು ತಮ್ಮ ಸಂಬಳದಲ್ಲಿ ಬಹುಪಾಲು ಮಹಾಶಯ್ ಚುನ್ನಿಲಾಲ್ ದತ್ತಿ ಸಂಸ್ಥೆಗೆ ನೀಡುತ್ತಿದ್ದರು. ಆರ್ಯ ಸಮಾಜದ ಅನುಯಾಯಿಯಾಗಿದ್ದ ಗುಲಾಟಿ ಕುಟುಂಬ 250 ಹಾಸಿಗೆಯುಳ್ಳ ಆಸ್ಪತ್ರೆ ಸ್ಥಾಪಿಸಿದೆ. ಸ್ಲಂ ನಿವಾಸಿಗಳಿಗಾಗಿ ಮೊಬೈಲ್ ಆಸ್ಪತ್ರೆ ಆರಂಭಿಸಿದರು. ಟ್ರಸ್ಟ್ ನಿಂದ ಶಾಲೆ, ಕಾಲೇಜುಗಳು, ಆರ್ಥಿಕ ನೆರವು ಎಲ್ಲವೂ ಸಿಗುತ್ತಿದೆ. ದೇಶದ ಅತಿದೊಡ್ಡ ಬ್ರ್ಯಾಂಡ್ ಆದರೂ ಬೆಲೆ ಏರಿಕೆ ಮಾಡದೆ ಕಡಿಮೆ ಮಾರ್ಜಿನ್ ನಲ್ಲೇ ವಹಿವಾಟು ನಡೆಸಿ, ಎಲ್ಲರಿಗೂ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂಬ ನಿಯಮ ಪಾಲಿಸಿಕೊಂಡು ಬಂದಿದ್ದರು.

   English summary
   Obituary: Mahashay Dharampal Gulati Biography in Kannada: Read on to know about king of Spices.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X