ನ್ಯೂಕ್ಲಿಯರ್ ಬಾಂಬ್ ಫಿಕ್ಸ್! ಉತ್ತರ ಕೊರಿಯಾ ನಡೆಗೆ ಅಮೆರಿಕ ಥಂಡಾ..!
ಉತ್ತರ ಕೊರಿಯಾ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇಲ್ಲ ಅಂತಾ ಕಾಣುತ್ತೆ. ಇದೇ ಕಾರಣಕ್ಕೆ ದೊಡ್ಡ ದೊಡ್ಡ ರಾಷ್ಟ್ರಗಳ ವಿರುದ್ಧ ಕೆಂಡಕಾರುತ್ತಾ ಯುದ್ಧಕ್ಕೂ ಸನ್ನದ್ಧವಾಗುತ್ತಿದೆ. ಅದರಲ್ಲೂ ಉತ್ತರ ಕೊರಿಯಾದಲ್ಲಿ ನ್ಯೂಕ್ಲಿಯರ್ ಬಾಂಬ್‌ಗಳು ಮಕ್ಕಳ ಆಟ ಸಾಮಾಗ್ರಿಯಂತೆ ಆಗಿವೆ. 60ಕ್ಕೂ ಹೆಚ್ಚು ನ್ಯೂಕ್ಲಿಯರ್ ಬಾಂಬ್‌ಗಳನ್ನು ಈಗಾಗಲೇ ಉತ್ತರ ಕೊರಿಯಾ ರೆಡಿ ಇಟ್ಟುಕೊಂಡಿದೆ. ಆದ್ರೆ ಈಗ ಮತ್ತಷ್ಟು ಅಣುಬಾಂಬ್‌ಗಳನ್ನು ಸಿದ್ಧಪಡಿಸಿ, ಶತ್ರುಗಳ ಎದೆ ನಡುಗಿಸಲು ಕಿಮ್ ಜಾಂಗ್ ಉನ್ ಟೀಂ ಸಿದ್ಧವಾಗಿದೆ.
ಅಂದಹಾಗೆ ಉತ್ತರ ಕೊರಿಯಾ ತನ್ನ ಯೊಂಗ್‌ಬಿಯಾನ್ ಪರಮಾಣು ಸ್ಥಾವರ ಮತ್ತೆ ಪ್ರಾರಂಭಿಸಿದೆ ಎಂಬ ವರದಿಗಳು ಕಳೆದ ತಿಂಗಳಷ್ಟೇ ರಿವೀಲ್ ಆಗಿದ್ದವು. ಈಗ ಆ ಸುದ್ದಿ ಪಕ್ಕಾ ಅನ್ನೋದಕ್ಕೆ ಸಾಕ್ಷಿಗಳು ಸಿಕ್ಕಿವೆ.
ಯೊಂಗ್‌ಬಿಯಾನ್ ಪರಮಾಣು ಸ್ಥಾವರದ ವಿಸ್ತರಣೆಗೆ ಉತ್ತರ ಕೊರಿಯಾ ಕೈಗೊಂಡಿರುವ ಕಾಮಗಾರಿ ದೃಶ್ಯ ಸ್ಯಾಟಲೈಟ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸುಮಾರು 11 ಸಾವಿರ ಚದರ ಅಡಿಯ ವಿಸ್ತಿರ್ಣದಲ್ಲಿ ಕಾಮಗಾರಿ ನಡೆಯುತ್ತಿದೆ. ಯೊಂಗ್‌ಬಿಯಾನ್ ಸ್ಥಾವರ ವಿಸ್ತರಣೆ ಕೆಲಸ ವೇಗವಾಗಿ ಸಾಗಿದ್ದು, ಅಮೆರಿಕ ಮತ್ತು ಮಿತ್ರ ಪಡೆಗಳ ಎದೆಯಲ್ಲಿ ನಡುಕ ಶುರುವಾಗಿದೆ.

ಮರ ಕತ್ತರಿಸಿ ಸಿದ್ಧತೆ..!
ಪರಮಾಣು ಸ್ಥಾವರ ಅಂದ್ರೆ ನ್ಯೂಕ್ಲಿಯರ್ ರಿಯಾಕ್ಟರ್‌ಗಳಲ್ಲಿ ರಿಯಾಕ್ಟರ್ ಬಿಸಿ ಹೆಚ್ಚಾಗದಂತೆ ತಂಪಾಗಿಸಲು ನೀರು ಬಳಸಲಾಗುತ್ತದೆ. ಹೀಗೆ ಯೊಂಗ್‌ಬಿಯಾನ್ ಪರಮಾಣು ಸ್ಥಾವರದಿಂದ ನೀರನ್ನು ಹೊರಹಾಕುತ್ತಿರುವ ಚಿತ್ರಗಳು ಉಪಗ್ರಹದ ಕಣ್ಣಿಗೆ ಕಳೆದ ತಿಂಗಳಷ್ಟೇ ಬಿದ್ದಿದ್ದವು. ಯೊಂಗ್‌ಬಿಯಾನ್ 5 ಮೆಗಾವ್ಯಾಟ್ ವಿದ್ಯುತ್ ತಯಾರಿಕೆ ಸಾಮರ್ಥ್ಯ ಹೊಂದಿರುವ ಪರಮಾಣು ಸ್ಥಾವರ. ಇದೀಗ ಇದೇ ಸ್ಥಾವರದ ಅಕ್ಕಪಕ್ಕ ಹರಡಿರುವ ಮರಗಳನ್ನೂ ಕಿಮ್ ಗ್ಯಾಂಗ್ ಕಡಿದು ಹಾಕಿದೆ. ಹಾಗೇ ಫೌಂಡೇಷನ್ ಕೆಲಸ ಕೂಡ ವೇಗವಾಗಿ ಸಾಗುತ್ತಿದ್ದು, ಇನ್ನೇನು ಕೆಲ ದಿನಗಳಲ್ಲಿ ಕೆಲಸ ಕಂಪ್ಲೀಟ್ ಆಗಿ, ಹೊಸ ಅಣುಬಾಂಬ್ ಅಥವಾ ಬಾಂಬ್ ಹೊತ್ತೊಯ್ಯಬಲ್ಲ ಕ್ಷಿಪಣಿಗಳು ತಯಾರಾಗುವ ಬಗ್ಗೆ ಸುಳಿವು ಸಿಕ್ಕಿದೆ.

2018ರಲ್ಲಿ ಬಾಗಿಲು ಮುಚ್ಚಿದ್ದರು..!
2018ರಲ್ಲಿ ಟ್ರಂಪ್ ಭೇಟಿ ಬಳಿಕ ಕಿಮ್ ಯೊಂಗ್‌ಬಿಯಾನ್ ಅಣುಸ್ಥಾವರವನ್ನು ಕಿಮ್ ಬಂದ್ ಮಾಡಿಸಿದ್ದ. 2018ರಿಂದ ಈವರೆಗೆ ಅಣುಸ್ಥಾವರದಲ್ಲಿ ಯಾವುದೇ ಚಟುವಟಿಕೆ ನಡೆದಿರಲಿಲ್ಲ. ಆದರೆ 2021ರ ಜುಲೈವರೆಗೆ 5 ತಿಂಗಳ ಕಾಲ ಅಣುಸ್ಥಾವರ ಸಿಕ್ಕಾಪಟ್ಟೆ ಆಕ್ಟಿವ್ ಆಗಿತ್ತು ಎಂದಿದ್ದರು ತಜ್ಞರು. ಹೀಗೆ ಇಷ್ಟುದಿನ ಕದ್ದುಮುಚ್ಚಿ ನಡೆಯುತ್ತಿದ್ದ ಕಾಮಗಾರಿ ಈಗ ಜಗತ್ತಿಗೇ ಗೊತ್ತಾಗುವಂತೆ ಮುಂದುವರಿದಿದೆ. ಮೊನ್ನೆ ಮೊನ್ನೆ ತಾನೆ ಮಿಸೈಲ್ ಟೆಸ್ಟ್ ಮಾಡಿರುವ ಕಿಮ್ & ಗ್ಯಾಂಗ್, ನಾವು ಸುಮ್ಮನೆ ಕೂರೋದಿಲ್ಲ ಅನ್ನೋದನ್ನ ಅಮೆರಿಕಗೆ ತಿಳಿಸುತ್ತಿದೆ.

ಮುಂದೇನು ಕಿಮ್ ಕಥೆ..?
ಸುಮ್ಮನೆ ಇದ್ದ ಗಾಯವನ್ನು ಕಿಮ್ ಮತ್ತೆ ಕೆರೆದುಕೊಂಡಂತೆ ಕಾಣುತ್ತಿದೆ. ಎಲ್ಲವೂ ತಣ್ಣಗಾಗುವ ಹೊತ್ತಲ್ಲೇ ಈ ಸರ್ವಾಧಿಕಾರಿ ಮತ್ತೊಂದು ಎಡವಟ್ಟು ಮಾಡಿಕೊಂಡಿರುವುದು ಸ್ಪಷ್ಟವಾಗುತ್ತಿದೆ. ಕಿಮ್‌ನ ಇಂತಹ ತಪ್ಪುಗಳಿಗೆ ಕಾದು ಕೂತಿರುವ ಅಮೆರಿಕ ಮತ್ತೊಮ್ಮೆ ಉತ್ತರ ಕೊರಿಯಾ ವಿರುದ್ಧ ಮುಗಿಬೀಳೋದು ಪಕ್ಕಾ. ಅದು ಉತ್ತರ ಕೊರಿಯಾ ಜನರ ಮೇಲೆ ನೇರ ಪರಿಣಾಮ ಬೀರಲಿದೆ. ಏಕೆಂದರೆ ಈಗಾಗಲೇ ಉತ್ತರ ಕೊರಿಯಾ ಆಹಾರದ ಅಭಾವಕ್ಕೆ ಸಿಲುಕಿ ನರಳುತ್ತಿದೆ. ಇಂತಹ ಹೊತ್ತಲ್ಲೇ ನ್ಯೂಕ್ಲಿಯರ್ ವಿಚಾರ ದೊಡ್ಡ ಸದ್ದು ಮಾಡುತ್ತಿದೆ. ಹೀಗೇ ಮತ್ತೊಮ್ಮೆ ಕಿಮ್‌ನ ವಿಲನ್ ಮಾಡೋದಕ್ಕೆ ಅಮೆರಿಕ ಸಿದ್ಧವಾಗಿದೆ.

ಬಾಂಬ್ ಪರೇಡ್ ನಡೆಸಿದ್ದರು..!
ಉ. ಕೊರಿಯಾ ಜನವರಿ 14ರಂದು ನಡೆಸಿದ್ದ ಮಿಸೈಲ್ ಪರೇಡ್ ಜಗತ್ತಿನ ಗಮನ ಸೆಳೆದಿತ್ತು. ಖುದ್ದು ಕಿಮ್ ಮಿಸೈಲ್ ಪರೇಡ್ ವೀಕ್ಷಿಸಿದ್ದ. ಜನವರಿ 20ರಂದು ಬೈಡನ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದ್ದರೆ, ಜೋ ಬೈಡನ್ ಆಗಮನಕ್ಕೂ ಒಂದು ವಾರ ಮುನ್ನ ಮಿಸೈಲ್‌ಗಳನ್ನ ಪ್ರದರ್ಶನ ಮಾಡಿದ್ದ ಕಿಮ್ ಜಾಂಗ್ ಉನ್. ಅಲ್ಲದೆ ಈ ಪರೇಡ್ ವೇಳೆ ಮಾತನಾಡಿದ್ದ ಕಿಮ್ ಜಾಂಗ್ ಉನ್, ಏಷ್ಯಾದಲ್ಲಿರುವ ಉ.ಕೊರಿಯಾ ಶತ್ರು ರಾಷ್ಟ್ರಗಳಿಗೂ ಹಾಗೂ ಅಮೆರಿಕಕ್ಕೆ ತಕ್ಕ ಉತ್ತರ ನೀಡುವ ಸಲುವಾಗಿ ಮಿಲಿಟರಿ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸುತ್ತೇವೆ ಹಾಗೂ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ವೇಗ ನೀಡಲಾಗುವುದು ಎಂದಿದ್ದ.

ಅಮೆರಿಕ ನೆಲೆಗಳೇ ಟಾರ್ಗೆಟ್..?
ಕಿಮ್ ಕ್ಷಿಪಣಿ ಯಾರನ್ನು ಟಾರ್ಗೆಟ್ ಮಾಡಿದೆ ಎಂಬ ಪ್ರಶ್ನೆ ಇದೀಗ ಜಗತ್ತನ್ನ ಕಾಡುತ್ತಿದೆ. ಆದರೆ ತಜ್ಞರು ಹೇಳುವಂತೆ ಕಿಮ್ ಕ್ಷಿಪಣಿಗಳು ಕಣ್ಣಿಟ್ಟಿರುವುದು ಅಮೆರಿಕದ ಕ್ಷಿಪಣಿ ಕೇಂದ್ರಗಳ ಮೇಲೆ. ಅಲಾಸ್ಕಾ ಸೇರಿ ಹಲವು ಪ್ರಾಂತ್ಯಗಳಲ್ಲಿ ಅಮೆರಿಕದ ಕ್ಷಿಪಣಿ ಕೇಂದ್ರಗಳಿವೆ. ಇದನ್ನೇ ಟಾರ್ಗೆಟ್ ಮಾಡಿ, ನ್ಯೂಕ್ಲಿಯರ್ ವೆಪನ್ ಉತ್ಪಾದನೆ ಮಾಡುತ್ತಿದೆ ಉತ್ತರ ಕೊರಿಯಾ. ಆದರೆ ಆದ್ರೆ ಅದು ಅಷ್ಟು ಸುಲಭವಲ್ಲ, ಆದರೂ ಕಿಮ್ ಜಾಂಗ್ ಉನ್ ಭಂಡತನ ಪ್ರದರ್ಶಿಸಲು ಮುಂದಾಗಿದ್ದಾನೆ. ಇದು ಅಮೆರಿಕ ನಾಯಕರಲ್ಲೂ ಆತಂಕ ಮೂಡಿಸಿದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications