'ಒನ್ಇಂಡಿಯಾ' ಓದುಗರ ಪ್ರಕಾರ ಅನಂತ್ ಕುಮಾರ್ ಹೆಗಡೆ 'ನ್ಯೂಸ್ ಮೇಕರ್ 2017'

Subscribe to Oneindia Kannada

ಬೆಂಗಳೂರು, ಜನವರಿ 8: 2017ರಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿದ್ದವರು ಯಾರು ಎಂಬ ಬಗ್ಗೆ 'ಒನ್ಇಂಡಿಯಾ ಕನ್ನಡ ' ಸುದ್ದಿ ಕೇಂದ್ರದಲ್ಲಿದ್ದ ಒಂದಷ್ಟು ಖ್ಯಾತನಾಮರ ನಡುವೆ ಮತದಾನ ನಡೆಸಿತ್ತು.

ಹಲವು ದಿನಗಳ ಕಾಲ ನಡೆದ ಈ ಮತದಾನದಲ್ಲಿ ಸರಿಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಅಂತಿಮವಾಗಿ ಇವರಲ್ಲಿ ಅನಂತ್ ಕುಮಾರ್ ಹೆಗಡೆ ಅತೀ ಹೆಚ್ಚಿನ ಮತಗಳನ್ನು ಪಡೆದು 'ನ್ಯೂಸ್ ಮೇಕರ್ 2017' ಆಗಿ ಹೊರಹೊಮ್ಮಿದ್ದಾರೆ.

2017ರ ಉತ್ತರಾರ್ಧದಲ್ಲಿ ಅಚ್ಚರಿ ಎಂಬಂತೆ ಕೇಂದ್ರ ಸಚಿವರಾಗಿ ಆಯ್ಕೆಯಾದ ಅನಂತ್ ಕುಮಾರ್ ಹೆಗಡೆ ಅಲ್ಲಿಂದ ನಿರಂತರ ಸುದ್ದಿ ಕೇಂದ್ರದ ಸುತ್ತವೇ ಗಿರಕಿ ಹೊಡೆಯುತ್ತಿದ್ದಾರೆ.

ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಹಿಂದಿಕ್ಕಿ 2017ರ ನ್ಯೂಸ್ ಮೇಕರ್ ಪಟ್ಟವನ್ನು ಹೆಗಡೆ ಅಲಂಕರಿಸಿದ್ದಾರೆ.

ಅನಂತ ಕುಮಾರ್ ಹೆಗಡೆ

ಅನಂತ ಕುಮಾರ್ ಹೆಗಡೆ

ಒನ್ ಇಂಡಿಯಾ ಕನ್ನಡ ಓದುಗರು ಚಲಾಯಿಸಿದ ಸುಮಾರು 10,000 ಮತಗಳಲ್ಲಿ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಅವರೊಬ್ಬರೇ ಶೇ. 45 ಮತಗಳನ್ನು ಪಡೆದಿದ್ದಾರೆ. ಅವರಿಗೆ 4186 ಜನರು ಮತ ಹಾಕಿದ್ದಾರೆ.

ಅಚ್ಚರಿಯ ರೀತಿ ಕೇಂದ್ರ ಸಚಿವರಾಗಿದ್ದು, ಟಿಪ್ಪು ಜಯಂತಿ ವಿವಾದ, ಪ್ರಚೋದನಕಾರಿ ಮತ್ತು ವಿವಾದಾತ್ಮಕ ಹೇಳಿಕೆಗಳ ಮೂಲಕ ಈ ವರ್ಷ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ರಾರಾಜಿಸಿದ ಅನಂತ್ ಕುಮಾರ್ ಹೆಗಡೆ ಸಹಜವಾಗಿಯೆ 2017ರ ನ್ಯೂಸ್ ಮೇಕರ್ ಪಟ್ಟ ಅಲಂಕರಿಸಿದ್ದಾರೆ.

ವರ್ಷದ ವ್ಯಕ್ತಿ: ಸಂಸದ ಅನಂತ ಕುಮಾರ್ ಹೆಗಡೆ

ಸಿದ್ದರಾಮಯ್ಯ

ಸಿದ್ದರಾಮಯ್ಯ

ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಬಹುದಾದ ಗಟ್ಟಿ ನಾಯಕ ಎನಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜನರು ಎರಡನೇ ಅತಿ ಹೆಚ್ಚು ಮತ ಹಾಕಿದ್ದಾರೆ. ಅವರಿಗೆ ಶೇ. 14 ಅಂದರೆ 1,316 ಮತಗಳು ಬಿದ್ದಿವೆ.

ಸಿದ್ದರಾಮಯ್ಯ ಎರಡನೇ ಸ್ಥಾನನದಲ್ಲಿದ್ದರೂ ಅನಂತ್ ಕುಮಾರ್ ಹೆಗಡೆ ಮತ್ತು ಅವರ ಮಧ್ಯೆ ಸುಮಾರು 3 ಸಾವಿರ ಮತಗಳ ಅಂತರವಿದೆ.

ವರ್ಷದ ವ್ಯಕ್ತಿ : ಖಡಕ್ ಮಾತು, ಮೃದು ಮನಸಿನ ಸಿದ್ದರಾಮಯ್ಯ

ಕೆ. ಅಣ್ಣಾಮಲೈ

ಕೆ. ಅಣ್ಣಾಮಲೈ

ಚಿಕ್ಕಮಗಳೂರು ಜಿಲ್ಲೆಯ ಎಸ್ಪಿಯಾಗಿದ್ದುಕೊಂಡು ರಾಜ್ಯದಾದ್ಯಂತ ಻ಅಭಿಮಾನಿಗಳನ್ನು ಸಂಪಾದಿಸಿರುವ ಖಡಕ್ ಮಾತ್ರವಲ್ಲ ಅಷ್ಟೇ ಮಾನವೀಯ ಮುಖ ಹೊಂದಿರುವ ಅಣ್ಣಾಮಲೈ ಶೇಕಡಾ 10 ಮತಗಳನ್ನು ಪಡೆದಿದ್ದಾರೆ. ಅಣ್ಣಾಮಲೈರನ್ನು ಬೆಂಬಲಿಸಿ 963 ಜನರು ಮತ ಹಾಕಿದ್ದಾರೆ.

ವರ್ಷದ ವ್ಯಕ್ತಿ: ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ

ಡಿ.ರೂಪ

ಡಿ.ರೂಪ

ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಬಯಲಿಗೆಳೆದು ದೇಶದಾದ್ಯಂತ ಸುದ್ದಿಯಾದವರು ಪೊಲೀಸ್ ಅಧಿಕಾರಿ ಡಿಐಜಿ ಡಿ. ರೂಪ. ಅವರಿಗೆ ಓದುಗರು ಶೇಕಡಾ 8 ಮತಗಳನ್ನು ದಯಪಾಲಿಸಿದ್ದಾರೆ. 736 ಮತಗಳು ಅವರ ಪರವಾಗಿ ಬಿದ್ದಿವೆ.

ವರ್ಷದ ವ್ಯಕ್ತಿ 2017: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗೀಲ್

ಉಪೇಂದ್ರ

ಉಪೇಂದ್ರ

ಸಿನಿಮಾ ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದ ನಟ ಉಪೇಂದ್ರ ಕಳೆದ ವರ್ಷ ರಾಜಕೀಯದತ್ತ ಮುಖಮಾಡಿದ್ದು ವಿಶೇಷ. ನವೆಂಬರ್ 1 ರಂದು ತಮ್ಮ 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'ಕ್ಕೆ ಚಾಲನೆ ನೀಡಿದ ಉಪೇಂದ್ರ ಮಾಧ್ಯಮಗಳ ಶೀರ್ಷಿಕೆಗಳಲ್ಲಿ ನಿರಂತರ ಸ್ಥಾನ ಪಡೆಯುತ್ತಾ ಬಂದರು. ಪರಿಣಾಮ ಅವರಿಗೆ ಶೇ. 6ರಷ್ಟು ಜನರು ಮತ ಹಾಕಿದ್ದು 559 ಮತಗಳು ಅವರಿಗೆ ಬಿದ್ದಿವೆ.

ವರ್ಷದ ವ್ಯಕ್ತಿ: ರಿಯಲ್ ಸ್ಟಾರ್, ಪ್ರಜಾಕಾರಣಿ ಉಪೇಂದ್ರ

 ರವಿ ಡಿ. ಚನ್ನಣ್ಣನವರ್

ರವಿ ಡಿ. ಚನ್ನಣ್ಣನವರ್

ಸಾಂಸ್ಕೃತಿಕ ನಗರಿ ಮೈಸೂರಿನ ಎಸ್ಪಿ ರವಿ ಡಿ. ಚನ್ನಣ್ಣನವರ್ ತಮ್ಮ ವಿಶಿಷ್ಟ ಭಾಷಣ, ಪ್ರತಾಪ್ ಸಿಂಹ ಜತೆಗಿನ ಗಲಾಟೆಯಿಂದ 2017ರಲ್ಲಿ ಸುದ್ದಿಯಲ್ಲಿದ್ದರು. ಇವರನ್ನು ಬೆಂಬಲಿಸಿ ಶೇಕಡಾ 5 ಮತಗಳು ಬಿದ್ದಿದ್ದು, ರವಿ ಡಿ. ಚನ್ನಣ್ಣನವರ್ ಗೆ 496 ಜನರು ಮತ ಹಾಕಿದ್ದಾರೆ.

2017ರಲ್ಲಿ ಸದ್ದು ಮಾಡಿದ ವ್ಯಕ್ತಿ: 'ಕರ್ನಾಟಕದ ಸಿಂಗಂ' ರವಿ ಡಿ. ಚನ್ನಣ್ಣನವರ್

ಅನಿಲ್ ಕುಂಬ್ಳೆ

ಅನಿಲ್ ಕುಂಬ್ಳೆ

ಭಾರತ ಕ್ರಿಕೆಟ್ ಕಂಡ ಅದ್ಭುತ ಬೌಲರ್ ಅನಿಲ್ ಕುಂಬ್ಳೆ ಸುಮಾರು 18 ವರ್ಷಗಳ ತಮ್ಮ ಕ್ರಿಕೆಟ್ ಜೀವನದಲ್ಲಿ ಟೀಂ ಇಂಡಿಯಾಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರ ಹುದ್ದೆಗೆ ಅನಿಲ್ ಕುಂಬ್ಳೆ ರಾಜಿನಾಮೆ ಸಲ್ಲಿಸಿದ್ದೇ ತಡ, ಕುಂಬ್ಳೆ ಪರವಾಗಿ ದೊಡ್ಡದೊಂದು ಅನುಕಂಪದ ಅಲೆ ಎದ್ದು ಬಂದಿತ್ತು. ಕುಂಬ್ಳೆಯಂಥ ದಿಗ್ಗಜರನ್ನು ಆಡಳಿತ ಮಂಡಳಿ ನಡೆಸಿಕೊಂಡ ರೀತಿ ಸರಿ ಇಲ್ಲ ಎಂದು ಅಭಿಮಾನಿಗಳು, ಮಾಜಿ, ಹಾಲಿ, ಕ್ರಿಕೆಟರ್ ಗಳು ತಕರಾರು ಎತ್ತಿದ್ದರು. ಅವರಿಗೆ ಶೇಕಡಾ 3 ಅಂದರೆ 306 ಮತಗಳು ಬಿದ್ದಿವೆ.

ವರ್ಷದ ವ್ಯಕ್ತಿ : ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ

ಡಿ.ಕೆ ಶಿವಕುಮಾರ್

ಡಿ.ಕೆ ಶಿವಕುಮಾರ್

ಕರ್ನಾಟಕದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ರಾಜ್ಯದ ಪ್ರಭಾವಿ ಸಚಿವರು. ಈ ವರ್ಷ ರಾಷ್ಟ್ರ ಮಟ್ಟದಲ್ಲಿ ಅವರು ಸುದ್ದಿ ಮಾಡಿದರು. ಐಟಿ ದಾಳಿ, ರಾಜ್ಯಸಭೆ ಚುನಾವಣೆ, ಚನ್ನಪಟ್ಟಣದ ರಾಜಕೀಯ ಮುಂತಾದ ಸಮಯದಲ್ಲಿ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಭಾರೀ ಚರ್ಚೆ ನಡೆಯಿತು. ಆದರೆ ಓದುಗರ ವಿಚಾರಕ್ಕೆ ಬಂದಾಗ ಅವರಿಗೆ ಶೇಕಡಾ 3 ಅಂದರೆ 245 ಮತಗಳು ಬಿದ್ದಿವೆ.

2017ರ ವರ್ಷದ ವ್ಯಕ್ತಿ : ಇಂಧನ ಸಚಿವ ಡಿ.ಕೆ.ಶಿವಕುಮಾರ್

ಎನ್.ಆರ್. ನಾರಾಯಣ ಮೂರ್ತಿ

ಎನ್.ಆರ್. ನಾರಾಯಣ ಮೂರ್ತಿ

ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ನ ಸಹ ಸ್ಥಾಪಕರಾದ ಎನ್. ಆರ್ ನಾರಾಯಣ ಮೂರ್ತಿ ಅವರು ಕಳೆದ ವರ್ಷ ಸಂಸ್ಥೆಯ ಆಡಳಿತ ಮಂಡಳಿ ತಿದ್ದುವುದರಲ್ಲಿ ನಿರತರಾಗಿದ್ದರು. ಇದು ಕರ್ನಾಟಕ ಸಾಫ್ಟ್ ವೇರ್ ಜಗತ್ತು, ಆರ್ಥಿಕ ವಲಯದ ಮೇಲೆ ಪರಿಣಾಮ ಬೀರಿದ್ದು ಸುಳ್ಳಲ್ಲ. ಈ ಕಾರಣಕ್ಕೆ ಅವರು ಸುದ್ದಿಯಲ್ಲಿದ್ದರು. ಅವರಿಗೆ ಶೇಕಡಾ 2ರಷ್ಟು ಅಂದರೆ 186 ಓದುಗರ ಮತಗಳು ಬಿದ್ದಿವೆ.

ವರ್ಷದ ವ್ಯಕ್ತಿ 2017: ಇನ್ಫಿ ಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ

ಪ್ರಕಾಶ್ ರೈ, ಕೆಜೆ ಜಾರ್ಜ್, ಎಂಬಿ ಪಾಟೀಲ್

ಪ್ರಕಾಶ್ ರೈ, ಕೆಜೆ ಜಾರ್ಜ್, ಎಂಬಿ ಪಾಟೀಲ್

ಹಾಗೆ ನೋಡಿದರೆ ತಮ್ಮ ಹೇಳಿಕೆಗಳ ಮೂಲಕ ಬಹುಭಾಷಾ ನಟ ಪ್ರಕಾಶ್ ರೈ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮೂಲಕ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಹಾಗೂ ಡಿವೈಎಸ್ಪಿ ಎಂಕೆ ಗಣಪತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ 2017ರಲ್ಲಿ ಭಾರೀ ಸುದ್ದಿಯಲ್ಲಿದ್ದರು. ಆದರೆ ಇವರಿಗೆ ಕ್ರಮವಾಗಿ 158, 122 ಮತ್ತು 122 ಮತಗಳು ಮಾತ್ರ ಬಿದ್ದಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'Oneindia Kannada' had conducted a survey on Newsmaker 2017. In which union minister Ananth Kumar Hegde has emerged as the first. He has got 45 percent of the votes.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ