Smartphone: ಶೀಘ್ರವೇ ಲಾಂಚ್ ಆಗಲಿವೆ OnePlus ಕಂಪನಿಯ ಸ್ಮಾರ್ಟ್‌ಫೋನ್ಸ್
ಈಗಾಗಲೇ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಪ್ರಭುತ್ವ ಮೆರೆದಿರುವ ಚೀನಾ ಕಂಪನಿಗಳು, ಈ ಮಾರುಕಟ್ಟೆಯಲ್ಲಿ ತಮ್ಮ ಬಲವನ್ನು ಬಿಗಿ ಪಡಿಸಿಕೊಳ್ಳಲು ದಿನೇ ದಿನೇ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತವೆ. ಕಂಪನಿಗಳು ತಮ್ಮ ಬ್ರ್ಯಾಂಡ್ ಮೂಲಕ ಗ್ರಾಹಕರಿಗೆ ಹತ್ತಿರವಾಗಲು ಬೇಕಾಗಿರುವ ಯೋಜನೆಗಳನ್ನು ರೂಪಿಸಿಕೊಂಡಿರುತ್ತವೆ. ಈಗ ಚೀನಾ ಕಂಪನಿಯ ಒನ್ ಪ್ಲಸ್ ನಾರ್ಡ್ ಸಿಇ4 ಭಾರತದಲ್ಲಿ ಸದ್ದು ಮಾಡಲು ಸಿದ್ಧವಾಗಿದೆ.
ಒನ್‌ಪ್ಲಸ್ ಫೋನ್ ಕ್ವಾಲಿಟಿ ಬಗ್ಗೆ ಗ್ರಾಹಕರಲ್ಲಿ ಉತ್ತಮ ಮಾತುಗಳು ಇವೆ. ಇದನ್ನೇ ಬಂಡವಾಳ ಮಾಡಿಕೊಂಡು ಕಂಪನಿ ಮತ್ತೊಂದು ಅಗ್ಗದ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಫೋನ್ ಲಾಂಚ್ ಮಾಡುವ ಉದ್ದೇಶದಿಂದ ಮತ್ತೊಂದು ಬಜೆಟ್ ಫ್ರೆಂಡ್ಲಿ ಫೋನ್ ಲಾಂಚ್ ಮಾಡಲು ಕಂಪನಿ ತಯಾರಾಗಿದೆ.

ಬಿಡುಗಡೆ ಆಗಲಿರುವ ಫೋನ್ ಬೆಲೆ ಎಷ್ಟು?
OnePlus Nord CE 4 Lite 5G ಅನ್ನು ಭಾರತೀಯ ಪ್ರಮಾಣೀಕರಣ ವೆಬ್‌ಸೈಟ್ BIS ನಲ್ಲಿ ಪಟ್ಟಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಜೊತೆಗೆ, OnePlus Nord 4 ಅನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ಮಾಹಿತಿಯ ಪ್ರಕಾರ ಈ ಫೋನ್‌ಗಳು ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಜಲ್ವಾ ಮಾಡಲಿವೆ. OnePlus Nord CE 3 Lite 5G ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್ ಗ್ರಾಹಕರನ್ನು ಟಾರ್ಗೆಟ್ ಮಾಡಲಿದ್ದು, ಇದರ ಬೆಲೆ 20 ಸಾವಿರದ ಆಸುಪಾಸಿನಲ್ಲಿರಬಹುದು.
OnePlus Nord 4 ಏನೆಲ್ಲಾ ವಿಶೇಷತೆಗಳಿಂದ ಕೂಡಿದೆ?
ಒನ್ ಪ್ಲಸ್ ಕಂಪನಿಯ ಈ ಸ್ಮಾರ್ಟ್‌ಫೋನ್ ಚೀನಾದಲ್ಲಿ ಬಿಡುಗಡೆಯಾದ OnePlus Ace 3V ಮರುಬ್ರಾಂಡೆಡ್ ಆವೃತ್ತಿ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಎಂದಿನಂತೆ ಈ ಫೋನ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು, ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹೊಂದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ರೆಕಾರ್ಡಿಂಗಾಗಿ 16 ಮೆಗಾ ಪಿಕ್ಸಲ್ ಕ್ಯಾಮೆರ ನೀಡಲಾಗುತ್ತದೆ.

ಈ ಫೋನ್ ಆಂಡರ್ಯಾಡ್ 14 ಆಧಾರಿತ Oxygen OS ನಲ್ಲಿ ಕಾರ್ಯ ನಿವರ್ಹಿಸುತ್ತದೆ. ಇದರಲ್ಲಿ ಕ್ವಾಲ್‌ಕೊಮ್ ಸ್ನ್ಯಾಪ್ ಡ್ರ್ಯಾಗನ್ 6 ಜನರೇಶನ್ 3 ಪ್ರೋಸೆಸರ್ ನೀಡುವ ಸಾಧ್ಯತೆ ಇದೆ. ಈ ಫೋನ್ 16 ಜಿಬಿ ರ್ಯಾಮ್ ಹಾಗೂ 512 ಜಿಬಿ ಇಂಟರ್ನಲ್ ಸ್ಟೋರೆಜ್ ನೊಂದಿಗೆ ಮಾರುಕಟ್ಟೆಗೆ ಬರುವ ಸಂಭವವಿದೆ.
ಒನ್ ಪ್ಲಸ್ ನಾರ್ಡ್ ಸಿಇ 4 ಲೈಟ್ 5G
Qualcomm Snapdragon 6 Gen 1 ಪ್ರೊಸೆಸರ್ ಅನ್ನು OnePlus Nord CE 4 Lite 5G ನಲ್ಲಿ ಬಳಸಬಹುದು. ಅದೇ ಸಮಯದಲ್ಲಿ, ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು OLED ಡಿಸ್ಪ್ಲೇ ಪ್ಯಾನೆಲ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 8GB ರ್ಯಾಮ್ ಮತ್ತು 256GB ಇಂಟರ್ನಲ್ ಸ್ಟೋರೆಜ್ ಹೊಂದಿರುವ ಸಾಧ್ಯತೆ ಇದೆ. ಫೋನ್ 5,500mAh ಬ್ಯಾಟರಿ ಮತ್ತು 67W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಈ ಮೊಬೈಲ್ Android 14 ಆಧಾರಿತ Oxygen OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಹಿಂಭಾಗದಲ್ಲಿ 108 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ನೋಡಬಹುದು. ಫೋನ್‌ನ ಕ್ಯಾಮೆರಾ ಸೇರಿದಂತೆ ಇತರ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.












Click it and Unblock the Notifications