ಭವಿಷ್ಯ ಬದಲಿಸಬಲ್ಲ ಯೋಜನೆ ಸಕ್ಸಸ್, ನಾಸಾ ಸಾಧನೆ ಅವಿಸ್ಮರಣೀಯ..!

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಅಂದುಕೊಂಡಿದ್ದನ್ನು ಸಾಧಿಸಿದೆ. ನಾಸಾ ಸಂಸ್ಥೆಯ 'ಪೆರ್‌ಸೆವೆರನ್ಸ್' ರೋವರ್ ಯಶಸ್ವಿಯಾಗಿ ಮಂಗಳ ಗ್ರಹದ ಮೇಲೆ ಲ್ಯಾಂಡ್ ಆಗಿದೆ. ನಾಸಾ ರೋವರ್ ಮಂಗಳನ ಅಂಗಳಕ್ಕೆ ಲ್ಯಾಂಡ್ ಆಗುವ ಕೊನೆಯ 7 ನಿಮಿಷಗಳು ನಿಜಕ್ಕೂ ಭಯಾನಕ ಎನಿಸಿದವು. ಇದಕ್ಕೂ ಮೊದಲೇ ನಾಸಾ ಕೊನೆಯ 7 ನಿಮಿಷಗಳನ್ನ 'ಸೆವೆನ್ ಮಿನಿಟ್ಸ್ ಆಫ್ ಹಾರರ್' ಎಂದು ಗುರುತಿಸಿತ್ತು.

ಏಕೆಂದರೆ ಮಂಗಳ ಗ್ರಹದ ಮೇಲೆ ನಮ್ಮ, ನಿಮ್ಮ ಊಹೆಗೂ ನಿಲುಕದಷ್ಟು ಗುರುತ್ವ ಬಲ ಇರುತ್ತದೆ. ಭೂಮಿಗಿಂತ ಅತಿಹೆಚ್ಚು ಗುರುತ್ವಾಕರ್ಷಣಾ ಬಲವನ್ನು ಮಂಗಳ ಗ್ರಹ ಹೊಂದಿದೆ. ಹೀಗಾಗಿಯೇ ಮಂಗಳ ಗ್ರಹದ ಮೇಲೆ ಯಾವುದೇ ರೋವರ್ ಅಥವಾ ರಾಕೆಟ್ ಲ್ಯಾಂಡ್ ಮಾಡುವುದು ಹುಡುಗಾಟದ ವಿಚಾರವೇ ಅಲ್ಲ. ಆದರೆ ಅದನ್ನೆಲ್ಲಾ ಮೀರಿ, ನಾಸಾ ಸಂಸ್ಥೆ ಈಗ ಗೆದ್ದು ಬೀಗಿದೆ.

'ಎಲ್ಲಾ ಎಲ್ಲೆಗಳ ಗಲ್ಲಿ ಮೀರಿ' ನಾಸಾ ತಾಕತ್ತು ಪ್ರದರ್ಶಿಸಿದೆ. ಈ ಹಿಂದೆಯೂ ಮಂಗಳ ಗ್ರಹದ ಅಧ್ಯಯನ ನಡೆಸಲು ನಾಸಾ ಹಲವಾರು ಯೋಜನೆಗಳನ್ನು ಕೈಗೊಂಡಿತ್ತು. ಅಂಗಾರಕನ ಅಂಗಳದಲ್ಲಿ ಅತಿಹೆಚ್ಚು ರೋವರ್‌ಗಳನ್ನು ಇಳಿಸಿದ ಕೀರ್ತಿಯನ್ನೂ ನಾಸಾ ಹೊಂದಿದೆ. ನಾಸಾ ಸಾಧನೆಯ ಪಟ್ಟಿಗೆ ಹೊಸ ಗರಿ ಸೇರ್ಪಡೆಯಾಗಿದ್ದು, ಮಾನವನ ಭವಿಷ್ಯ ಬದಲಿಸಬಲ್ಲ ಪೆರ್‌ಸೆವೆರನ್ಸ್ ಯಶಸ್ವಿಯಾಗಿ ಲ್ಯಾಂಡ್ ಆಗಿದೆ.

ಜೀವ ಕೈಲಿಡಿದು ಕೂತಿದ್ದ ವಿಜ್ಞಾನಿಗಳು..!

ಜೀವ ಕೈಲಿಡಿದು ಕೂತಿದ್ದ ವಿಜ್ಞಾನಿಗಳು..!

ಅಬ್ಬಬ್ಬಾ.. ಅದು ಎಂತಹ ಭಯಾನಕ ಘಳಿಗೆ ಎಂದರೆ, ಒಂದು ಕಡೆ 'ಪೆರ್‌ಸೆವೆರನ್ಸ್' ರೋವರ್ ಮಂಗಳನ ನೆಲ ಸ್ಪರ್ಶಿಸಲು ನುಗ್ಗಿತ್ತಿದ್ದರು. ಮತ್ತೊಂದು ಕಡೆ ನಾಸಾದ ವಿಜ್ಞಾನಿಗಳು ಜೀವ ಕೈಯಲ್ಲಿಡಿದು ಕಾಯುತ್ತಿದ್ದರು. ಏನಾಗುತ್ತೋ ಏನೋ ಎಂಬ ಪ್ರಶ್ನೆಗಿಂತಲೂ, 11 ವರ್ಷಗಳ ಪರಿಶ್ರಮ ಮಣ್ಣುಪಾಲಾಗದೇ ಇರಲಿ ಎಂಬ ಪ್ರಾರ್ಥನೆ ಎಲ್ಲರದ್ದಾಗಿತ್ತು. 'ಪೆರ್‌ಸೆವೆರನ್ಸ್' ಮಂಗಳ ಗ್ರಹದ ನೆಲ ಮುಟ್ಟಲು ಮುನ್ನುಗ್ಗುತ್ತಿದ್ದ ಒಂದೊಂದು ಕ್ಷಣವೂ ವಿಜ್ಞಾನಿಗಳ ಮೈ ನಡುಗಿಸಿತ್ತು. ಆದರೆ ಅವರೆಲ್ಲರ ಪ್ರಾರ್ಥನೆ ಫಲಿಸಿತ್ತು. ವಿಜ್ಞಾನಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿತ್ತು. ನಾಸಾ ರೋವರ್ ಯಶಸ್ವಿಯಾಗಿ ಮಂಗಳ ಗ್ರಹದ ಮೇಲೆ ಲ್ಯಾಂಡಿ ಆಗಿಬಿಟ್ಟಿತು.

ಭೂಮಿ ಹೊರಗೂ ಹಾರಲಿದೆ ಕಾಪ್ಟರ್..!

ಭೂಮಿ ಹೊರಗೂ ಹಾರಲಿದೆ ಕಾಪ್ಟರ್..!

ಭೂಮಿ ಮೇಲೆ ಹೆಲಿಕಾಪ್ಟರ್ ಹಾರಾಡಿದರೆ, ಎಂತಹವರೇ ಆದರೂ ಒಮ್ಮೆ ದಿಟ್ಟಿಸಿ ನೋಡುತ್ತಾರೆ. ಏಕೆಂದರೆ ಹೆಲಿಕಾಪ್ಟರ್ ಆಗಲಿ ಅಥವಾ ವಿಮಾನ ಮಾನವನ ಗಮನ ಸೆಳೆಯದೇ ಇರದು. ಆದರೆ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ನಾಸಾ ವಿಜ್ಞಾನಿಗಳು, ಇದೇ ಮೊದಲ ಬಾರಿಗೆ ಭೂ ಗ್ರಹದ ಹೊರಗಡೆಗೂ ಹೆಲಿಕಾಪ್ಟರ್ ಹಾರಿಸಲು ಸಿದ್ಧರಾಗಿದ್ದಾರೆ. ಹೌದು, ನಾಸಾ ರೋವರ್ ಪೆರ್‌ಸೆವೆರನ್ಸ್ ಜೊತೆಯಲ್ಲೇ ಪುಟಾಣಿ ಹೆಲಿಕಾಪ್ಟರ್ ಕೂಡ ಮಂಗಳ ಗ್ರಹದ ಮೇಲೆ ಲ್ಯಾಂಡ್ ಆಗಿ, ಹಾರಾಟ ನಡೆಸಲಿದೆ. ಇದು 'ಪೆರ್‌ಸೆವೆರನ್ಸ್'ಗೆ ಪೂರಕವಾಗಿ ಕಾರ್ಯನಿರ್ವಹಿಸಲಿದ್ದು, ಮಂಗಳ ಗ್ರಹದ ರಚನೆ ಬಗ್ಗೆ ಅಧ್ಯಯನ ನಡೆಸಲಿದೆ.

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

20 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮಂಗಳ ಗ್ರಹದ ಮೇಲೆ ಅತ್ಯುತ್ತಮವಾದ ಸಾಧನ ಬಳಸಿ ಅಧ್ಯಯನ ನಡೆಸುವುದಕ್ಕಾಗಿ ನಾಸಾ ವಿಶಿಷ್ಟವಾದ ರೋವರ್ ಸಿದ್ಧಪಡಿಸಿದೆ. 'ಪೆರ್‌ಸೆವೆರನ್ಸ್' ಎಂದು ರೋವರ್‌ಗೆ ನಾಮಕರಣ ಮಾಡಲಾಗಿದೆ. ಸದ್ಯ ಭೂಮಿ ಮೇಲೆ ಲಭ್ಯವಿರುವ ಅತ್ಯುತ್ತಮ ಟೆಕ್ನಾಲಜಿ ಬಳಸಿ ರೋವರ್‌ ತಯಾರಿಸಿದೆ ನಾಸಾ. ರೋವರ್‌ನಲ್ಲಿ 23 ಕ್ಯಾಮರಾ ಅಳವಡಿಸಲಾಗಿದೆ. ಮಂಗಳನ ನೆಲ ಅಗೆಯಲು ಸಹಾಯಕವಾಗುವಂತೆ 1 ಡ್ರಿಲ್ಲರ್ ಕೂಡ ಇದೆ. ಈ ಡ್ರಿಲ್ಲರ್ ಸಹಾಯದಿಂದ 'ಪೆರ್‌ಸೆವೆರನ್ಸ್' ರೋವರ್ ಮಂಗಳನ ಬಂಡೆ ಹಾಗೂ ಮಣ್ಣು ಅಗೆಯಲಿದೆ. ಹೀಗೆ ಅಗೆಯುವ ಮಣ್ಣು ಮತ್ತು ಕಲ್ಲನ್ನ ಕೊಳವೆ ಆಕಾರದ ಕಂಟೇನರ್‌ಗೆ ತುಂಬಲಿದೆ. ನಂತರ ಕಂಟೇನರ್‌ಗಳನ್ನ ಅಲ್ಲೇ ಬಿಟ್ಟು ಮುಂದೆ ಸಾಗಲಿದೆ. ಹೀಗೆ 10 ವರ್ಷಗಳ ಕಾಲ ರೋವರ್ ಮಂಗಳ ಗ್ರಹವನ್ನು ಸುತ್ತು ಹಾಕುತ್ತಾ, ಜೀವಿಗಳಿಗಾಗಿ ಹುಡುಕಾಟ ನಡೆಸಲಿದೆ.

 2026ಕ್ಕೆ ಮತ್ತೊಂದು ರೋವರ್..!

2026ಕ್ಕೆ ಮತ್ತೊಂದು ರೋವರ್..!

ನಾಸಾ ಸಂಸ್ಥೆಯ 'ಪೆರ್‌ಸೆವೆರನ್ಸ್' ರೋವರ್ ಲ್ಯಾಂಡ್ ಆದ 5 ವರ್ಷಗಳ ನಂತರ ಅಂದರೆ 2026ಕ್ಕೆ ಮತ್ತೊಂದು ರೋವರ್ ಲ್ಯಾಂಡ್ ಆಗಲಿದೆ. ಈ ಬಾರಿ 'ಯೂರೋಪಿಯನ್ ಸ್ಪೇಸ್ ಏಜೆನ್ಸಿ' ಕಳುಹಿಸಿದ ಪುಟ್ಟ ರೋವರ್ ಮಂಗಳ ಗ್ರಹದ ಮೇಲೆ ಇಳಿಯಲಿದೆ. ನಂತರ 'ಪೆರ್‌ಸೆವೆರನ್ಸ್' ಬಿಟ್ಟುಹೋದ ಕೊಳವೆ ಆಕಾರದ ಕಂಟೇನರ್‌ಗಳನ್ನ ಬೇಟೆಯಾಡುವ ಯೂರೋಪಿಯನ್ ರೋವರ್, ತನ್ನೊಳಗೆ ಈ ಪುಟ್ಟ ಪುಟ್ಟ ಕಂಟೇನರ್‌ಗಳನ್ನ ತುಂಬಿಸಿಕೊಳ್ಳಲಿದೆ. ನಂತರ ಅವನ್ನೆಲ್ಲಾ ಒಟ್ಟುಗೂಡಿಸಿ ಮತ್ತೊಂದು ದೊಡ್ಡ ಕಂಟೇನರ್‌ಗೆ ಶಿಫ್ಟ್ ಮಾಡುತ್ತದೆ. ಕೊನೆಯದಾಗಿ ಮಣ್ಣು ತುಂಬಿರುವ ದೊಡ್ಡ ಕಂಟೇನರ್ ತೆಗೆದು ಭದ್ರವಾಗಿ ಪುಟಾಣಿ ರಾಕೆಟ್‌ಗೆ ವರ್ಗಾಯಿಸಲಿದೆ.

 ರಾಕೆಟ್ ಲಾಂಚ್ ಮಾಡಲಿದೆ ರೋವರ್

ರಾಕೆಟ್ ಲಾಂಚ್ ಮಾಡಲಿದೆ ರೋವರ್

ಇದು ಊಹೆಗೂ ನಿಲುಕದ ಅಚ್ಚರಿ. ರೋವರ್ ಮೂಲಕ ರಾಕೆಟ್ ಲಾಂಚ್ ಮಾಡುವ ಸಾಹಸಕ್ಕೆ ನಾಸಾ ಹಾಗೂ ಇಎಸ್‌ಎ ಕೈಹಾಕಿವೆ. ಮಂಗಳನ ಮಣ್ಣು ತುಂಬಿದ ಪುಟಾಣಿ ರಾಕೇಟ್ ಅನ್ನು 2026ರ ವೇಳೆಗೆ ಲಾಂಚ್ ಮಾಡಲಾಗುವುದು. ಈ ಕೆಲಸವನ್ನು ಯುರೋಪಿಯನ್ ರೋವರ್ ಮಾಡಲಿದೆ. ಹೀಗೆ ಪುಟಾಣಿ ರಾಕೆಟ್ ಲಾಂಚ್ ಮಾಡಲು ನಾಸಾ, ಇಎಸ್‌ಎ ಅತ್ಯುತ್ತಮ ತಂತ್ರಜ್ಞಾನ ಬಳಸಿಕೊಳ್ಳಲಿವೆ. ರಾಕೆಟ್ ಲಾಂಚರ್‌ಗೆ ಸ್ಫೋಟಕ ತುಂಬಿ ಬ್ಲಾಸ್ಟ್ ಮಾಡಲಾಗುವುದು. ಹೀಗೆ ಬ್ಲಾಸ್ಟ್ ಮಾಡಿ ಸೂಕ್ಷ್ಮವಾಗಿ ಪುಟಾಣಿ ರಾಕೆಟ್ ಅನ್ನ ಬಾಹ್ಯಾಕಾಶಕ್ಕೆ ಹಾರಿಸಲಾಗುವುದು. ಮಣ್ಣು ಹೊತ್ತು ಮಂಗಳನ ಬಾಹ್ಯಾಕಾಶದ ಕಡೆಗೆ ನುಗ್ಗುವ ರಾಕೆಟ್‌ಗೆ ಮಂಗಳ ಗ್ರಹದ ಕಕ್ಷೆಯಲ್ಲಿ ಸುತ್ತುವ ಯೂರೋಪ್‌ನ ಉಪಗ್ರಹವೇ ಟಾರ್ಗೆಟ್.

ಉಪಗ್ರಹಕ್ಕೆ ಸ್ಯಾಂಪಲ್ ಶಿಫ್ಟ್..!

ಉಪಗ್ರಹಕ್ಕೆ ಸ್ಯಾಂಪಲ್ ಶಿಫ್ಟ್..!

ಕೊನೆಯದಾಗಿ ತನ್ನಲ್ಲಿರುವ ಎಲ್ಲಾ ಸ್ಯಾಂಪಲ್‌ಗಳನ್ನ ಈ ಪುಟಾಣಿ ರಾಕೆಟ್ ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಸೇರಿದ ಸ್ಯಾಟಲೈಟ್‌ಗೆ ಶಿಫ್ಟ್ ಮಾಡಲಿದೆ. ಹೀಗೆ ಅಂಗಾರಕನ ಮಣ್ಣಿನ ಸ್ಯಾಂಪಲ್ ಹೊತ್ತು ಹೊರಡುವ ಉಪಗ್ರಹ 2032ರ ವೇಳೆಗೆ ಭೂಮಿಯನ್ನು ತಲುಪುವ ನಿರೀಕ್ಷೆ ಇದೆ. ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಾ ಉತ್ತರ ಅಮೆರಿಕದ ಕಡೆಗೆ ಮಂಗಳನ ಕಲ್ಲು ಹಾಗೂ ಮಣ್ಣು ಇರುವ ಕಂಟೇನರ್ ಅನ್ನು ಉಪಗ್ರಹ ಎಸೆಯಲಿದೆ. ಹೀಗೆ ಭೂಮಿ ಮೇಲಿಂದ ಬೀಳುವ ಕಂಟೇನರ್ ಉತ್ತರ ಅಮೆರಿಕದಲ್ಲಿಯೇ ಬೀಳುವಂತೆ ಮಾಡಲು ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ.

12 ವರ್ಷ ಕಾಯಬೇಕು..!

12 ವರ್ಷ ಕಾಯಬೇಕು..!

ಇಷ್ಟೆಲ್ಲಾ ಸರ್ಕಸ್ ಮಾಡಿ ಮಂಗಳನ ಮಣ್ಣನ್ನು ಭೂಮಿಗೆ ತಂದ ನಂತರ ನಾಸಾ ಹಾಗೂ ಇಎಸ್‌ಎ ಒಟ್ಟಾಗಿ ಸಂಶೋಧನೆ ನಡೆಸಲಿವೆ. ಭೂಮಿಯಲ್ಲಿ 2032ರ ಹೊತ್ತಿಗೆ ಲಭ್ಯವಿರುವ ಅತ್ಯುತ್ತಮ ಲ್ಯಾಬ್ ಸಾಧನಗಳನ್ನು ಬಳಸಿ ಮಂಗಳನ ಮಣ್ಣಿನ ಸಂಶೋಧನೆ ನಡೆಸಲಾಗುವುದು. ಈ ಸಂಶೋಧನೆಗಾಗಿ ಹೊಸ ಸಾಧನ ಕಂಡುಹಿಡಿಯುವ ಪ್ಲ್ಯಾನ್ ಇದೆ. ಇದಿಷ್ಟನ್ನೂ ನೋಡಲು 12 ವರ್ಷ ಕಾಯಲೇಬೇಕು. ಮಂಗಳನ ಮಣ್ಣಿನ ಅಧ್ಯಯನದ ನಂತರ ವರದಿಗಾಗಿ ವಿಜ್ಞಾನಿಗಳು ಮತ್ತಷ್ಟು ವರ್ಷ ಕಾಯಬೇಕಿದೆ. ಒಟ್ಟಾರೆ ಹೇಳುವುದಾದರೆ ಈ ಯೋಜನೆ ಒಂದು ತಪಸ್ಸು. ಈ ತಪಸ್ಸಿನಲ್ಲಿ ನಾಸಾ ಹಾಗೂ ಇಎಸ್‌ಎ ಯಶಸ್ಸು ಕಾಣಲಿ ಎಂದು ಹಾರೈಸೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+