ಎಲ್ಲಾ ಧರ್ಮಗಳು ಪ್ರೀತಿಸಲು ಕಲಿಸುತ್ತದೆ: ರಾಮಾಯಣ ರಸಪ್ರಶ್ನೆ ಗೆದ್ದ ಮುಸ್ಲಿಂ ವಿದ್ಯಾರ್ಥಿಗಳು
ರಾಮಾಯಣ ಮಾಸ ಕಾರ್ಯಕ್ರಮದ ಅಂಗವಾಗಿ ಮಲಯಾಳಂ ಪುಸ್ತಕ ಪ್ರಕಾಶನ ಸಂಸ್ಥೆ ಡಿಸಿ ಬುಕ್ಸ್ ನಡೆಸಿದ ರಾಜ್ಯಮಟ್ಟದ ರಾಮಾಯಣ ಆನ್‌ಲೈನ್ ರಸಪ್ರಶ್ನೆಯಲ್ಲಿ ಐವರು ವಿಜೇತರಾಗಿದ್ದಾರೆ. ಇದರಲ್ಲಿ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳ ಹೆಸರು ಇರುವುದು ಇಡೀ ದೇಶದ ಗಮನ ಸೆಳೆದಿದೆ.
Recommended Video
ಮಲಪ್ಪುರಂನ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳಾದ ಮೊಹಮ್ಮದ್ ಜಬೀರ್ ಪಿ.ಕೆ ಮತ್ತು ಮೊಹಮ್ಮದ್ ಬಸಿತ್ ಆನ್‌ಲೈನ್ ರಾಮಾಯಣ ರಸಪ್ರಶ್ನೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ರಸಪ್ರಶ್ನೆ ಸ್ಪರ್ಧೆಯಲ್ಲಿ 1000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಬ್ಬರು ವಿದ್ಯಾರ್ಥಿಗಳು ವಲಂಚೇರಿಯ ಕೆಕೆಎಚ್‌ಎಂ ಇಸ್ಲಾಮಿಕ್ ಮತ್ತು ಆರ್ಟ್ಸ್ ಕಾಲೇಜಿನಲ್ಲಿ ವಾಫಿ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಎಂಟು ವರ್ಷಗಳ ವಾಫಿ (Wafy) ಕಾರ್ಯಕ್ರಮದ ಅಡಿಯಲ್ಲಿ, ಇಬ್ಬರೂ ವಿದ್ಯಾರ್ಥಿಗಳು ಸ್ನಾತಕೋತ್ತರ ಹಂತದವರೆಗೆ ಸ್ಲಾಮಿಕ್ ಅಧ್ಯಯನವನ್ನು ಮಾಡುತ್ತಿದ್ದಾರೆ. ಇದರಲ್ಲಿ ನಿಯಮಿತ ವಿಶ್ವವಿದ್ಯಾಲಯದ ಪದವಿ ಕೋರ್ಸ್ ಕೂಡ ಸೇರಿದೆ.
ವಿದ್ಯಾರ್ಥಿಗಳು ತಮ್ಮ ಬಾಲ್ಯದಿಂದಲೂ ಮಹಾಕಾವ್ಯದ ಬಗ್ಗೆ ತಿಳಿದಿದ್ದರೂ, ವಾಫಿ ಕೋರ್ಸ್‌ಗೆ ಸೇರಿದ ನಂತರ ರಾಮಾಯಣ ಮತ್ತು ಹಿಂದೂ ಧರ್ಮದ ಬಗ್ಗೆ ಆಳವಾಗಿ ಓದಲು ಮತ್ತು ಕಲಿಯಲು ಪ್ರಾರಂಭಿಸಿದರು, ಅದರ ಪಠ್ಯಕ್ರಮವು ಎಲ್ಲಾ ಪ್ರಮುಖ ಧರ್ಮಗಳ ಬೋಧನೆಗಳನ್ನು ಹೊಂದಿದೆ.
ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಧರ್ಮವನ್ನು ಅಧ್ಯಯನ ಮಾಡುವ ಭಾರತೀಯ ಧರ್ಮಗಳ ಕುರಿತಾದ ಪಠ್ಯವನ್ನು ಒಳಗೊಂಡಿರುವ ವಾಫಿ ಕೋರ್ಸ್‌ನ ವಿಶಿಷ್ಟ ಪಠ್ಯಕ್ರಮವು ಸ್ಪರ್ಧೆಯಲ್ಲಿ ಗೆಲ್ಲಲು ಸಹಾಯ ಮಾಡಿತು ನೀಡಿತು ಎಂದು ಜಬೀರ್ ಹೇಳಿದರು. ಕೋರ್ಸ್‌ನ ಭಾಗವು ಕ್ರಿಶ್ಚಿಯನ್ ಧರ್ಮ, ಜುದಾಯಿಸಂ, ಟಾವೊಯಿಸಂ ಇತ್ಯಾದಿಗಳನ್ನು ಪರಿಚಯಿಸುವ ಅಧ್ಯಯನವನ್ನು ಒಳಗೊಂಡಿದೆ.

ಹಲವು ಧರ್ಮಗಳ ಅಧ್ಯಯನ ಮಾಡುವ ವಾಫಿ ಕೋರ್ಸ್
"ನಮ್ಮ ಪ್ರಾಂಶುಪಾಲರಾದ ಅಬ್ದುಲ್ ಹಕೀಂ ಫೈಝಿ ಅಡ್ರಿಸ್ಸೆರಿ ನೇತೃತ್ವದ ಇಸ್ಲಾಮಿಕ್ ಕಾಲೇಜುಗಳ ಸಮನ್ವಯದಿಂದ ವಿನ್ಯಾಸಗೊಳಿಸಲಾದ ವಾಫಿ ಕೋರ್ಸ್‌ನ ಪಠ್ಯಕ್ರಮವು ವಿದ್ಯಾರ್ಥಿಗಳನ್ನು ಬಹು-ಧರ್ಮೀಯ ಸಮಾಜದಲ್ಲಿ ಬದುಕಲು ಸಜ್ಜುಗೊಳಿಸುವ ಉದ್ದೇಶದಿಂದ ಎಲ್ಲಾ ಧರ್ಮಗಳನ್ನು ಅಧ್ಯಯನ ಮಾಡಲು ಪ್ರೋತ್ಸಾಹಿಸುತ್ತದೆ. ಪಠ್ಯಕ್ರಮವು ವಿವಿಧ ಧರ್ಮಗಳನ್ನು ವಿವರವಾಗಿ ಅಧ್ಯಯನ ಮಾಡುವ ಪಠ್ಯಗಳನ್ನು ಹೊಂದಿದೆ" ಎಂದು ಜಬೀರ್ ಹೇಳಿದರು.
ಪಠ್ಯಕ್ರಮದಿಂದ ಸ್ಫೂರ್ತಿ ಪಡೆದ ಕೆಲವು ಹಿರಿಯರು ಈಗ ವಿದೇಶಿ ವಿಶ್ವವಿದ್ಯಾಲಯಗಳಿಂದ ಇಸ್ಲಾಂ ಮತ್ತು ಬೌದ್ಧಧರ್ಮ ಮತ್ತು ಇಸ್ಲಾಂ ಮತ್ತು ಸಿಖ್ ಧರ್ಮ ಸೇರಿದಂತೆ ಧರ್ಮಗಳ ತುಲನಾತ್ಮಕ ಅಧ್ಯಯನದಲ್ಲಿ ಪಿಎಚ್‌ಡಿ ಸಂಶೋಧನೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ರಾಮನ ಸದ್ಗುಣಗಳು ಆದರ್ಶವಾಗಬೇಕು
"ಎಲ್ಲಾ ಭಾರತೀಯರು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನು ಓದಬೇಕು ಮತ್ತು ಕಲಿಯಬೇಕು ಏಕೆಂದರೆ ಅವು ದೇಶದ ಸಂಸ್ಕೃತಿ, ಸಂಪ್ರದಾಯ ಮತ್ತು ಇತಿಹಾಸದ ಭಾಗವಾಗಿದೆ. ಈ ಪಠ್ಯಗಳನ್ನು ಕಲಿಯುವುದು ಮತ್ತು ಅರ್ಥಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ನಾನು ನಂಬುತ್ತೇನೆ" ಎಂದು ಜಬೀರ್ ಹೇಳಿದ್ದಾರೆ.
ಶ್ರೀರಾಮನು ಸದಾಚಾರ, ಸಹನೆ ಮತ್ತು ಪ್ರಶಾಂತತೆಯ ಮೂರ್ತರೂಪ ಎಂದು ತಿಳಿಸಿದ ವಾಫಿ ವಿದ್ಯಾರ್ಥಿ, ಇಂತಹ ಉದಾತ್ತ ಸದ್ಗುಣಗಳು ಪ್ರತಿಯೊಬ್ಬ ಮನುಷ್ಯನ ಭಾಗವಾಗಬೇಕು ಎಂದರು.
"ತನ್ನ ಪ್ರೀತಿಯ ತಂದೆ ದಶರಥನಿಗೆ ನೀಡಿದ ಭರವಸೆಯನ್ನು ಈಡೇರಿಸಲು ರಾಮನು ತನ್ನ ರಾಜ್ಯವನ್ನು ಸಹ ತ್ಯಾಗ ಮಾಡಬೇಕಾಯಿತು. ಅಧಿಕಾರಕ್ಕಾಗಿ ಕೊನೆಯಿಲ್ಲದ ಹೋರಾಟದ ಅವಧಿಯಲ್ಲಿ ನಾವು ರಾಮನಂತಹ ಪಾತ್ರಗಳಿಂದ ಮತ್ತು ರಾಮಾಯಣದಂತಹ ಮಹಾಕಾವ್ಯಗಳ ಸಂದೇಶದಿಂದ ಸ್ಫೂರ್ತಿ ಪಡೆಯಬೇಕು," ಎಂದು ಅವರು ವಿವರಿಸಿದರು.

ಅಯೋಧ್ಯಾ ಕಾಂಡ ತನಗಿಷ್ಟ
ರಾಮಾಯಣ ಮಹಾಕಾವ್ಯದಲ್ಲಿ , ಲಕ್ಷ್ಮಣನ ಕೋಪ ಮತ್ತು ಶ್ರೀರಾಮನ ಸಾಂತ್ವನವನ್ನು ವಿವರಿಸುವ "ಅಯೋಧ್ಯಾ ಕಾಂಡ"ದ ಪದ್ಯಗಳು ತನಗೆ ಇಷ್ಟ ಎಂದು ಮೊಹಮ್ಮದ್ ಬಸಿತ್ ಹೇಳುತ್ತಾರೆ. ತುಂಚತು ರಾಮಾನುಜನ್ ಎಝುತಾಚನ್ ಅವರು ಬರೆದ ಮಹಾಕಾವ್ಯದ ಮಲಯಾಳಂ ಆವೃತ್ತಿಯಾದ 'ಆಧ್ಯಾತ್ಮ ರಾಮಾಯಣ'ದ ಪದ್ಯಗಳನ್ನು ನಿರರ್ಗಳವಾಗಿ ಮತ್ತು ಸುಮಧುರವಾಗಿ ನಿರೂಪಿಸುವುದು ಮಾತ್ರವಲ್ಲದೆ ಆ ಸಾಲುಗಳ ಅರ್ಥ ಮತ್ತು ಸಂದೇಶವನ್ನು ವಿವರಿಸುತ್ತಾರೆ.
ಯಾವುದೇ ಧರ್ಮವು ದ್ವೇಷವನ್ನು ಉತ್ತೇಜಿಸುವುದಿಲ್ಲ ಆದರೆ ಶಾಂತಿ ಮತ್ತು ಸೌಹಾರ್ದತೆಯನ್ನು ಮಾತ್ರ ಪ್ರಚಾರ ಮಾಡುತ್ತದೆ, ರಸಪ್ರಶ್ನೆ ಗೆಲುವು ಮಹಾಕಾವ್ಯವನ್ನು ಹೆಚ್ಚು ಆಳವಾಗಿ ಕಲಿಯಲು ಮತ್ತಷ್ಟು ಪ್ರೇರಣೆ ನೀಡಿದೆ ಎಂದು ಹೇಳಿದರು.

ತಯಾರಿ ಇಲ್ಲದೆ ಸ್ಪರ್ಧೆಯಲ್ಲಿ ಭಾಗಿ
ಡಿಸಿ ಬುಕ್ಸ್‌ನ ಟೆಲಿಗ್ರಾಮ್ ಗುಂಪಿನಿಂದ ರಾಮಾಯಣ ರಸಪ್ರಶ್ನೆ ಬಗ್ಗೆ ತಿಳಿದುಕೊಂಡರು ಮತ್ತು ಅದಕ್ಕೆ ಸಹಿ ಹಾಕಿದರು. ಸಮಯಾವಕಾಶ ಕಡಿಮೆ ಇದ್ದುದ್ದರಿಂದ ಯಾವುದೇ ಪೂರ್ವ ತಯಾರಿ ಇಲ್ಲದೇ ಸ್ಪರ್ಧೆಯಲ್ಲಿ ಭಾಗವಹಿಸಿದೆವು ಎಂದು ಅವರು ಹೇಳಿದ್ದಾರೆ.
ಜಬೀರ್ ಅಂತಿಮ ವರ್ಷದ ವಾಫಿ ಪಿಜಿ ವಿದ್ಯಾರ್ಥಿಯಾಗಿದ್ದು, ಸಮಾಜಶಾಸ್ತ್ರದಲ್ಲಿ ಬಿಎ ಪೂರ್ಣಗೊಳಿಸಿದ್ದಾರೆ. ಸಹ ವಿಜೇತ ಮತ್ತು ಓಮನೂರಿನ ನಿವಾಸಿ ಮೊಹಮ್ಮದ್ ಬಸಿತ್ ಬಿಎ ಸೈಕಾಲಜಿ ಪೂರ್ಣಗೊಳಿಸಿದ್ದು, ಐದನೇ ವರ್ಷದ ವಾಫಿ ವಿದ್ಯಾರ್ಥಿ ವಿದ್ಯಾರ್ಥಿಯಾಗಿದ್ದಾರೆ.
ಅಭಿರಾಮ್ ಎಂ.ಪಿ, ನೀತು ಕೃಷ್ಣನ್ ಮತ್ತು ನವನೀತ್ ಗೋಪನ್ ಸ್ಪರ್ಧೆಯಲ್ಲಿ ಗೆದ್ದ ಇತರೆ ವಿದ್ಯಾರ್ಥಿಗಳಾಗಿದ್ದಾರೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications