• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಕೇಶ್ ಅಂಬಾನಿ ದುಬೈನಲ್ಲಿ ಐಷಾರಾಮಿ ಮನೆ ಖರೀದಿ, ವಿಶೇಷತೆ, ಬೆಲೆಯೆಷ್ಟು ತಿಳಿಯಿರಿ

|
Google Oneindia Kannada News

ಮುಕೇಶ್ ಅಂಬಾನಿ ದುಬೈನಲ್ಲಿ 80 ಮಿಲಿಯನ್ ಡಾಲರ್ ಮೌಲ್ಯದ ಅತ್ಯಂತ ದುಬಾರಿ ಮನೆಯನ್ನು ಖರೀದಿಸಿದ್ದಾರೆ. ಆದರೆ, ಈ ಬಗ್ಗೆ ಅಂಬಾನಿ ಕುಟುಂಬ ಅಥವಾ ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಯಾವುದೇ ಮಾಹಿತಿಯು ಅಧೀಕೃತವಾಗಿ ತಿಳಿದು ಬಂದಿಲ್ಲ. ಮಾಧ್ಯಮಗಳ ವರದಿಯ ಪ್ರಕಾರ, ಈ ಮನೆ ತುಂಬಾ ಐಷಾರಾಮಿಯಾಗಿದ್ದು ಇದರಲ್ಲಿ ಅನೇಕ ಐಷಾರಾಮಿ ಸೌಕರ್ಯಗಳಿವೆ.

ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದುಬೈನಲ್ಲಿ $80 ಮಿಲಿಯನ್ (640 ಕೋಟಿ ರೂ.) ಮನೆಯನ್ನು ಖರೀದಿಸಿದೆ, ಇದು ದುಬೈನ ಅತ್ಯಂತ ದುಬಾರಿ ಮನೆಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಮನೆಯನ್ನು ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಹೆಸರಿನಲ್ಲಿ ಖರೀದಿಸಲಾಗಿದೆ. ಇದು ಕರಾವಳಿಯುದ್ದಕ್ಕೂ ದ್ವೀಪಸಮೂಹದ ಉತ್ತರ ಭಾಗದಲ್ಲಿದೆ. ಇದು 10 ಮಲಗುವ ಕೋಣೆಗಳು, 1 ಸ್ಪಾ, ಒಳಾಂಗಣ ಮತ್ತು ಹೊರಾಂಗಣ ಪೂಲ್, ಖಾಸಗಿ ಥಿಯೇಟರ್, ಜಿಮ್ ಸೇರಿದಂತೆ ಹಲವು ಐಷಾರಾಮಿ ಸೌಕರ್ಯಗಳನ್ನು ಹೊಂದಿದೆ.

 ಶ್ರೀಮಂತ ಜನರಿಗೆ ಅಲ್ಟ್ರಾ-ರಿಚ್ ಜೀವನಶೈಲಿ

ಶ್ರೀಮಂತ ಜನರಿಗೆ ಅಲ್ಟ್ರಾ-ರಿಚ್ ಜೀವನಶೈಲಿ

ವಾಸ್ತವವಾಗಿ ದುಬೈ ಪ್ರಪಂಚದಾದ್ಯಂತದ ಶ್ರೀಮಂತ ಜನರಿಗೆ ಅಲ್ಟ್ರಾ-ರಿಚ್ ಜೀವನಶೈಲಿಗಾಗಿ ಆದ್ಯತೆಯ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಮನೆ ಖರೀದಿ ಸೇರಿದಂತೆ ಇತರೆ ಕೆಲಸಗಳಲ್ಲಿ ವಿದೇಶಿಯರಿಗೆ ಅಲ್ಲಿನ ಸರ್ಕಾರ ಹಲವು ವಿನಾಯಿತಿಗಳನ್ನು ನೀಡುತ್ತಿದೆ. ಇದರೊಂದಿಗೆ, ದುಬೈ ಸರ್ಕಾರವು ದೀರ್ಘಾವಧಿಯ "ಗೋಲ್ಡನ್ ವೀಸಾ"ನ್ನು ಸಹ ನೀಡುತ್ತಿದೆ, ಇದು ಇತರ ದೇಶಗಳ ಜನರನ್ನು ಇಲ್ಲಿ ಉಳಿಯಲು ಪ್ರೋತ್ಸಾಹಿಸುತ್ತಿದೆ.

 ಅಂಬಾನಿ , ಶಾರುಖ್ ಖಾನ್ ಹೊಸ ನೆರೆಹೊರೆ

ಅಂಬಾನಿ , ಶಾರುಖ್ ಖಾನ್ ಹೊಸ ನೆರೆಹೊರೆ

ಇನ್ನು ಅಂಬಾನಿ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಮತ್ತು ಬ್ರಿಟಿಷ್ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್ಹ್ಯಾಮ್ ಅವರ ಹೊಸ ನೆರೆಹೊರೆಯವರಾಗಲಿದ್ದಾರೆ.ಮಾಧ್ಯಮ ವರದಿಗಳ ಪ್ರಕಾರ, ಅಂಬಾನಿ ಕುಟುಂಬವು ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಮತ್ತು ಬ್ರಿಟಿಷ್ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್ಹ್ಯಾಮ್ ಅವರ ಹೊಸ ನೆರೆಹೊರೆಯವರಾಗಲಿದೆ. ವಾಸ್ತವವಾಗಿ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಮತ್ತು ಬ್ರಿಟಿಷ್ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್ ಅವರ ಪತ್ನಿ ವಿಕ್ಟೋರಿಯಾ ಅವರೊಂದಿಗೆ ಈಗಾಗಲೇ ಇಲ್ಲಿ ಮನೆಗಳನ್ನು ಖರೀದಿಸಿದ್ದಾರೆ.

 ಅಂಬಾನಿ ಮಕ್ಕಳಿಗೆ ವ್ಯಾಪಾರದ ಹಸ್ತಾಂತರಿಸುತ್ತಿದ್ದಾರೆ

ಅಂಬಾನಿ ಮಕ್ಕಳಿಗೆ ವ್ಯಾಪಾರದ ಹಸ್ತಾಂತರಿಸುತ್ತಿದ್ದಾರೆ

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಮುಕೇಶ್ ಅಂಬಾನಿ $92.8 ಬಿಲಿಯನ್ ನಿವ್ವಳ ಸಂಪತ್ತನ್ನು ಹೊಂದಿದ್ದು, ವಿಶ್ವದ 11ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 65 ವರ್ಷಕ್ಕೆ ಕಾಲಿಟ್ಟಿರುವ ಮುಕೇಶ್ ಅಂಬಾನಿ ಇದೀಗ ನಿಧಾನವಾಗಿ ತಮ್ಮ ವ್ಯಾಪಾರದ ಜವಾಬ್ದಾರಿಯನ್ನು ಮಕ್ಕಳಿಗೆ ಹಸ್ತಾಂತರಿಸುತ್ತಿದ್ದು, ಅದರ ಅಡಿಯಲ್ಲಿ ಹಿರಿಯ ಮಗ ಆಕಾಶ್ ಅವರನ್ನು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.

 'ಅಂಟಿಲಿಯಾ'ದಲ್ಲಿ ಅಂಬಾನಿ ಕುಟುಂಬ ವಾಸಿಸುತ್ತಿದೆ

'ಅಂಟಿಲಿಯಾ'ದಲ್ಲಿ ಅಂಬಾನಿ ಕುಟುಂಬ ವಾಸಿಸುತ್ತಿದೆ

ಅಂಬಾನಿ ಕುಟುಂಬವು ಪ್ರಸ್ತುತ ಮುಖ್ಯವಾಗಿ 2012 ರಿಂದ ಮುಂಬೈನಲ್ಲಿರುವ 'ಅಂಟಿಲಿಯಾ'ದಲ್ಲಿ ನೆಲೆಸಿದೆ. ಅಂಬಾನಿ ಕುಟುಂಬದ ಈ ಮನೆ 27 ಮಹಡಿಗಳನ್ನು ಹೊಂದಿದ್ದು, ಇದನ್ನು 40 ಸಾವಿರ ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ಮನೆಯಲ್ಲಿ 168 ಕಾರುಗಳಿಗೆ 7 ಅಂತಸ್ತಿನ ಗ್ಯಾರೇಜ್ ಕೂಡ ಇದೆ. ಇದರೊಂದಿಗೆ ಈಜುಕೊಳ, 2 ಅಂತಸ್ತಿನ ಆರೋಗ್ಯ ಕೇಂದ್ರ, 50 ಜನರ ಸಾಮರ್ಥ್ಯದ ಹೋಮ್ ಥಿಯೇಟರ್ ಅನ್ನು ಸಹ ಹೊಂದಿದೆ, ಇದರಲ್ಲಿ ಸುಮಾರು 600 ಉದ್ಯೋಗಿಗಳು ಕೆಲಸ ಮಾಡುತ್ತಾರೆ.

English summary
Indian billionaire and Reliance Industries Limited Chairman Mukesh Ambani is reportedly the mystery buyer of the most-expensive villa in Dubai Read More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X