Mother's Day 2025: ದೈವಿ ಸ್ವರೂಪಿ ತಾಯಂದಿರ ದಿನಾಚರಣೆ ವಿಶೇಷತೆ! ಸಂದೇಶಗಳು, ಕೋಟ್ಸ್‌ಗಳು ಇಲ್ಲಿವೆ ನೋಡಿ
ಬೆಂಗಳೂರು, ಮೇ 11: ಪ್ರತಿ ಹಂತದಲ್ಲಿ ಹೆಣ್ಣು ಪೂರೈಸುವ ಜವಾಬ್ದಾರಿಗೆ ಅವಳೊಬ್ಬಳೆ ಸಾಟಿ. ಆಕೆಯ ಹೊರತು ಮತ್ಯಾರು ಆ ಸ್ಥಾನ ತುಂಬಲಾಗುವುದಿಲ್ಲ. ಅಂತಹ ಶಕ್ತಿ ಹೆಣ್ಣಿನಲ್ಲಿದೆ. ಅದರಲ್ಲೂ ತಾಯಿಯಾದವಳ ತ್ಯಾಗ, ಪ್ರೀತಿ, ಕರುಣೆ, ವಾತ್ಸಲ್ಯದ ಮುಂದೇ ಬೇರೆನೂ ಇಲ್ಲ. ದೈವಿ ಸ್ವರೂಪ ತಾಯಂದಿರಿಗೆ ಗೌರವ ಸೂಚಿಸಲು, ಅವರ ಕಾರ್ಯಗಳನ್ನು ಶ್ಲಾಘಿಸಲು 'ವಿಶ್ವ ತಾಯಂದಿರ ದಿನಾಚರಣೆ' ಆಚರಿಸಲಾಗುತ್ತದೆ. ನೀವು ಈ ಆಚರಣೆಯಲ್ಲಿ ಪಾಲ್ಗೊಂಡು ತಾಯಿಗೆ ವಿಶೇಷ ಶುಭಾಷಯ ಕೋರಲು ಇಲ್ಲೊಂದಿಷ್ಟು ಬೆಸ್ಟ್ ವಿಷಸ್‌ಗಳು ಇವೆ. ಅವುಗಳನ್ನು ನಿಮ್ಮ ತಾಯಂದಿರಿಗೆ ತಿಳಿದು ಗೌರವ ಸಲ್ಲಿಸಬಹುದು. ಖುಷಿ ಹೆಚ್ಚಿಸಬಹುದು.
ಬುದುಕಿನಲ್ಲಿ ತಾಯಿ ಪಾತ್ರ ಮಹತ್ವದ್ದು. ಮಹಿಳೆಯಾದವಳು ಮಕ್ಕಳಿಂದ ಯಾವೊಂದು ನಿರೀಕ್ಷೆ ಇಲ್ಲದೇ ತಾಯಿ ಪಾತ್ರ ನಿರ್ವಹಿಸುವ ಕರುಣಾಮಯಿ. ಈ ದಿನದಲ್ಲಿ ಆಕೆಗೆ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲಾಗುತ್ತದೆ. ಭಾರತ ಮಾತ್ರವಲ್ಲದೇ ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಮೇ 2ನೇ ಭಾನುವಾರ 'ವಿಶ್ವ ತಾಯಂದಿರ ದಿನ' ಆಚರಿಸುತ್ತಾರೆ. ಈ ವರ್ಷ 2025 ರಲ್ಲಿ ತಾಯಂದಿರ ದಿನವನ್ನು ಇಂದು ಮೇ 11 ರಂದು ಆಚರಿಸಲಾಗುತ್ತದೆ.

ನಿಮ್ಮ ತಾಯಿಗೆ ಶುಭ ಹಾರೈಸಲು ಹೃತ್ಪೂರ್ವಕ ಸಂದೇಶ ಕಳುಹಿಸಲು, ಸುಂದರವಾದ ಚಿತ್ರಗಳನ್ನು ಕಳುಹಿಸುವವರು ಇಲ್ಲಿ ನೋಡಬಹುದು. ನಿಮಗಾಗಿ ಅನೇಕ ಶುಭಾಷಯಗಳ ಕೋಟ್ಸ್ ಇಲ್ಲಿವೆ. ತಾಯಂದಿರ ದಿನಾಚರಣೆ ಮಾಡುವುದು 20 ನೇ ಶತಮಾನದ ಶುರುವಾಗಿದೆ ಎಂದು ಇತಿಹಾಸ ಹೇಳುತ್ತದೆ. 1914 ರಲ್ಲಿ ಯುಎಸ್ ನಲ್ಲಿ ಅನ್ನಾ ಜಾರ್ವಿಸ್ ಎಂಬುವವರು ತಮ್ಮ ದಿವಂಗತ ತಾಯಿಯ ಭಕ್ತಿ ಮತ್ತು ಕಾಳಜಿಯನ್ನು ಗೌರವಿಸಲು ಬಯಸಿದ್ದರು. ಆಚರಿಸಿದರ. ಇದೆಲ್ಲ ನೋಡಿದ್ದ ಅಂದಿನ ಯು.ಎಸ್. ಅಧ್ಯಕ್ಷ ವುಡ್ರೋ ವಿಲ್ಸನ್ ಅವರು ತಾಯಂದಿರ ದಿನವನ್ನು ಅಧಿಕೃತವಾಗಿಸಿದರು. ಕಾಲಾನಂತರ ಇದನ್ನು ಭಾರತ ಸೇರಿದಂತೆ ಬೇರೆ ಬೇರೆ ದೇಶಗಳು ಆಚರಣೆ ಶುರು ಮಾಡಿಕೊಂಡವು.
ಉಡುಗೊರೆ, ಕಾರ್ಡ್ ಹೂವು ನೀಡಿ ಶುಭ ಕೋರಿ
ಒಂದು ದಿನವು ವಿಶ್ರಾಂತಿ ಇಲ್ಲದೇ ಮನೆ ಮಂದಿಗಾಗಿ ದುಡಿಯುವ ತಾಯಿಗೆ ನೀವು ಈ ದಿನ ವಿಶೇಷ ಉಡುಗೊರೆ ನೀಡಬಹುದು. ಒಳ್ಳೆ ಗ್ರೀಟಿಂಗ್ ಕಾರ್ಡ್‌ಗಳು, ಹೂವುಗಳು, ಚೆಂದ ಗಿಫ್ಟ್ ಸಹಿತ ಶುಭ ಕೋರಬಹುದು. ಇಲ್ಲವಾದರೆ ಇಂದು ನೀವು ದಿನಪೂರ್ತಿ ನಿಮ್ಮ ತಾಯಿ ಜೊತೆಗೆ ಕಳೆದು ಅವರನ್ನು ಖುಷಿ ಪಡಿಸಬಹುದು. ಇಲ್ಲವೇ ನೀವು ಮನೆಯಲ್ಲಿಯೇ ಕುಟುಂಬ ಸಮೇತರಾಗಿ ಸರ್‌ಪ್ರೈಸ್ ಆಗಿ ಕೇಕ್ ಕಟ್ ಮಾಡಿಸಬಹುದು. ಅಂದಿನ ಅಡುಗೆ ಎಲ್ಲವನ್ನು ನೀವೇ ಮಾಡುವ ಮೂಲಕ ನೆರವಾಗದಬಹುದು.

ಹೀಗಿ ತಾಯಿಯನ್ನು ಖುಷಿ ಪಡಿಸುವ ನಿಟ್ಟಿನಲ್ಲಿ ಅವರಿಗೊಂದಷ್ಟು ಶುಭ ಸಂದೇಶ ಹೇಳುವ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬಹುದು. ಅದಕ್ಕಾಗಿ ನೀವು ಇಲ್ಲಿನ 'ಅಮ್ಮಂದಿರ ದಿನ' ಸುಂದರ ಕೋಟ್ಸ್‌ಗಳನ್ನು ಇಲ್ಲಿ ನೋಡಬಹುದು.
ತಾಯಂದಿರ ದಿನದ ಶುಭಾಶಯಗಳು, ಸಂದೇಶಗಳು ಇಲ್ಲಿವೆ
* ಇಂದಿನ ವಿಶೇಷ ದಿನದಲ್ಲಿ ತಾಯಿಗೆ ತಾಯಂದಿರ ದಿನದ ಶುಭಾಶಯಗಳು! ನಿಮ್ಮ ಪ್ರೀತಿ ಮತ್ತು ಮಾರ್ಗದರ್ಶನವು ನನ್ನನ್ನು ಇಂದು ನಾನು ಯಾರೆಂದು ರೂಪಿಸಿದೆ.
* ನನ್ನ ಜೀವನದಲ್ಲಿ ಪ್ರೀತಿ, ಸಂತೋಷ ತರುವ ನೀವು ನಿಮ್ಮ ಎಲ್ಲಾ ದಿನಗಳು ಸಂತೋಷದಿಂದ ತುಂಬಿರಲಿ ಎಂದು ಈ ದಿನ ಹಾರೈಸುತ್ತೇನೆ.
* ಜಗತ್ತಿಗೆ, ನೀವು ಒಬ್ಬ ವ್ಯಕ್ತಿಯಾಗಿರಬಹುದು, ಆದರೆ ನನಗೆ, ನೀವೇ ಜಗತ್ತು. ತಾಯಂದಿರ ದಿನದ ಶುಭಾಶಯಗಳು ಅಮ್ಮಾ!
* ನಿಮ್ಮ ಶಕ್ತಿ, ತಾಳ್ಮೆ ಮತ್ತು ಬೇಷರತ್ತಾದ ಪ್ರೀತಿ ನನಗೆ ಪ್ರತಿದಿನ ಸ್ಫೂರ್ತಿ ನೀಡುತ್ತದೆ. ಎಲ್ಲದಕ್ಕೂ ಧನ್ಯವಾದಗಳು, ತಾಯಿ.
* ನಿಮ್ಮ ತಾಯಂದಿರ ದಿನವು ನಿಮ್ಮಂತೆಯೇ ಅದ್ಭುತವಾಗಿರಲಿ. ಜಗತ್ತಿನ ಎಲ್ಲಾ ಪ್ರೀತಿ ಮತ್ತು ಸಂತೋಷಕ್ಕೆ ನೀವು ಅರ್ಹರು ಎಂದು ವಿಶ್ ಮಾಡಬಹುದು.
* 'ನಿಮ್ಮನ್ನು ನಾನು ಅರ್ಥ ಮಾಡಿಕೊಂಡಿದ್ದನ್ನು ಪದಗಳಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ, ನಿಮ್ಮ ಪ್ರೀತಿಯೇ ನನ್ನ ದೊಡ್ಡ ಶಕ್ತಿ ಮತ್ತು ನನ್ನ ಶಾಶ್ವತ ಸಾಂತ್ವನ' ಎಂಬ ಸಂದೇಶ ರವಾನಿಸಬಹುದು.
* ತಾಯಿಯಾದ ನೀವು ನನಗೆ ನಿಮ್ಮ ಸಮಯ, ನಿಮ್ಮ ಪ್ರೀತಿ, ನಿಮ್ಮ ಅಂತ್ಯವಿಲ್ಲದ ಬೆಂಬಲ. ಈ ದಿನ ಸಂಪೂರ್ಣ ನಿಮಗಾಗಿ ಮುಡಿಪಿಡುತ್ತೇವೆ. ತಾಯಂದಿರ ದಿನದ ಶುಭಾಶಯಗಳು!
* ಪ್ರತಿ ಅಪ್ಪುಗೆ, ಪ್ರೋತ್ಸಾಹದ ಪ್ರತಿಯೊಂದು ಮಾತು, ಪ್ರತಿ ನಿಸ್ವಾರ್ಥ ಪ್ರೀತಿ - ನೀವು ನನ್ನ ಸುತ್ತಲೂ ಪ್ರೀತಿಯ ಜೀವನವನ್ನು ನಿರ್ಮಿಸಿದ್ದೀರಿ. ನಾನು ಎಂದೆಂದಿಗೂ ಕೃತಜ್ಞನಾಗಿದ್ದೇನೆ.
* ತಾಯಂದಿರ ದಿನದ ಶುಭಾಶಯಗಳು! ನಿಮ್ಮನ್ನು ನನ್ನ ತಾಯಿಯಾಗಿ ಪಡೆಯಲು ನಾನು ತುಂಬಾ ಅದೃಷ್ಟಶಾಲಿ. ನೀವು ಅತ್ಯಂತ ಪ್ರೀತಿಯ, ಸಮರ್ಪಿತ ಮತ್ತು ತಾಳ್ಮೆಯ ಮಹಿಳೆ ಸದಾ ಮಾದರಿ ತಾಯಿ..
* ನಾನು ನನ್ನ ಮೇಲೆ ನಂಬಿಕೆ ಇಡದಿದ್ದರೂ ಸಹ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನನ್ನ ಮೇಲಿನ ನಿಮ್ಮ ನಂಬಿಕೆ ನನಗೆ ಮಾರ್ಗದರ್ಶಕ ಬೆಳಕಾಗಿದೆ.
* ಅಮ್ಮಾ, ನೀವು ನನ್ನ ಪೋಷಕರು ಮಾತ್ರವಲ್ಲ - ನೀವು ನನ್ನ ಆತ್ಮೀಯ ಸ್ನೇಹಿತ, ನನ್ನ ಶಿಕ್ಷಕ ಮತ್ತು ನನ್ನ ನಾಯಕ ಎಲ್ಲರೂ ಒಂದೇ. ನಾನು ನಿನ್ನನ್ನು ಅನಂತವಾಗಿ ಪ್ರೀತಿಸುತ್ತೇನೆ.
* ನೀವು ಅತ್ಯುತ್ತಮ ಕೇಳುಗ, ಅತ್ಯುತ್ತಮ ಅಡುಗೆಯವ ಮತ್ತು ಅತ್ಯುತ್ತಮ ತಾಯಿ. ತಾಯಂದಿರ ದಿನದ ಶುಭಾಶಯಗಳು! ನೀವು ನನ್ನನ್ನು ರಾಜಕುಮಾರಿಯಂತೆ ಬೆಳೆಸಿದ್ದಕ್ಕಾಗಿ ಧನ್ಯವಾದಗಳು. ನೀವು ನನಗೆ ಇದ್ದ ತಾಯಿಯ ಅರ್ಧದಷ್ಟು ನಾನು ನನ್ನ ಮಕ್ಕಳಿಗೆ ತಾಯಿಯಾಗಬಹುದೆಂದು ನಾನು ಭಾವಿಸುತ್ತೇನೆ.
* ಪ್ರೀತಿಯ ತಾಯಿ ಬಗ್ಗೆ ವರ್ಣಿಸಲು ಪದಗಳು ಸಾಲದು. ನಿಮ್ಮೊಂದಿನ ನನ್ನ ಬಂಧ ಅಘಾದ, ವ್ಯಕ್ತಪಡಿಸಲು ಅಸಾಧ್ಯ. ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ನನಗೆ ಹೇಳಲು ಅಸಾಧ್ಯ. ನೀವು ಅತ್ಯುತ್ತಮ ತಾಯಿ ಮತ್ತು ನಾನು ನಿಮ್ಮ ಮಗಳಾಗಿರುವುದಕ್ಕೆ ಹೆಚ್ಚಿನ ಸಂತೋಷವಾಗಿದೆ. ತಾಯಂದಿರ ದಿನದ ಶುಭಾಶಯಗಳು!
* ನೀವು ಅತ್ಯುತ್ತಮ ತಾಯಿ. ಬದುಕಲು, ಪ್ರೀತಿಸಲು ಮತ್ತು ನಗಲು ಯಾವಾಗಲೂ ನನ್ನನ್ನು ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳು. ಇಂದು ನೀವು ಖುಷಿಯಿಂದ ಇರಬೇಕು. ಆ ಖುಷಿ ಎಲ್ಲ ದಿನಗಳು ತುಂಬಿರಲಿ.
* ಎಲ್ಲಾ ಮಹಿಳೆಯರು ತಾಯಂದಿರಾಗುತ್ತಾರೆ ಎಂದು ಅವರು ಹೇಳುತ್ತಾರೆ. ಅದು ನಿಜವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ತಾಯಂದಿರ ದಿನದಂದು ನಿಮಗೆ ಪ್ರೀತಿ ಮತ್ತು ಶುಭಾಶಯಗಳನ್ನು ಹೇಳುತ್ತಿದ್ದೇನೆ ಎನ್ನಬಹುದು.
* ನನ್ನ ಜೀವನದಲ್ಲಿ ನೀವು ನನಗಾಗಿ ಏನೆಲ್ಲ ಮಾಡಿದ್ಧೀರಿ. ಇನ್ಮುಂದೆ ನೀವು ತೋರಿಸುವ ಬೆಂಬಲ, ಪ್ರೀತಿಗೆ ಹಾಗೂ ಎಲ್ಲದಕ್ಕೂ ಧನ್ಯವಾದಗಳು. ನಾನು ನಿಮ್ಮನ್ನು ಈ ಹಿಂದೆ, ಇನ್ನು ಮುಂದೆಯು ಪ್ರೀತಿಸುತ್ತೇನೆ. ಗೌರವಿಸುತ್ತೇನೆ. ತಾಯಂದಿರ ದಿನದ ಶುಭಾಶಯಗಳು, ಅಮ್ಮ!
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್











Click it and Unblock the Notifications