Monkey Mehendi: ಕೈಗೆ ಮೆಹೆಂದಿ ಹಾಕಿಸಿಕೊಂಡು ಕಿ... ಅಂತ ನಕ್ಕ ಮಂಗ: ವಿಡಿಯೋ ವೈರಲ್
ಪುಟ್ಟ ಪುಟ್ಟ ಕೈ... ಪುಟ್ಟ ಪುಟ್ಟ ಕಾಲ್... ಮುಖದಲ್ಲಿ ಮುಗ್ದತೆ.... ಕರಿದರೆ ಓಡಿ ಬರುವ, ಕೇಳಿದ್ದನ್ನು ತಂದು ಕೊಡುವ ಈ ಮರಿ ಮಂಗ ನೋಡಲು ಅದೆಷ್ಟು ಚಂದ. ನಂಬುವ ಭಕ್ತರಿಗೆ ದೈವ, ಪ್ರಾಣಿ ಪ್ರಿಯರಿಗೆ ಖುಷಿ ನೀಡುವ ವಾನರ. ಬೈಯುವಾಗ ಕೋತಿ ಅಂದರೆ ಬರುವ ಕೋಪ ಇದರೊಂದಿಗೆ ಬೆರೆಯುವಾಗ ಇರುವುದಿಲ್ಲ ನೋಡಿ..
ಹೀಗೆ ಸಾಕಿದವರಿಗೆ ಸ್ನೇಹಿಯಾಗಿ, ಮಾತನಾಡುವವರಿಗೆ ಮಗುವಾಗಿ ಸಣ್ಣ ಮಂಗಗಳು ಪ್ರೀತಿ ತೋರುತ್ತವೆ. ಕೆಲವೊಂದು ಬಾರಿ ಇಂತಹ ಪುಟ್ಟ ಮಂಗಗಳ ತರ್ಲೆ ಕೆಲಸಗಳನ್ನು ನೋಡುವುದೇ ಒಂದು ಭಾಗ್ಯ. ಯಾಕೆಂದರೆ ಅವುಗಳ ತಮಾಷೆ ದೃಶ್ಯಗಳು ನೇರವಾಗಿ ನೋಡಲು ಸಿಗುವುದು ತುಂಬಾ ಅಪರೂಪ.

ಆದರೆ ಪ್ರಾಣಿ ಪ್ರಿಯರು ತಮ್ಮ ಪ್ರಾಣಿಗಳ ವಿಡಿಯೋಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು ನೋಡುಗರ ಮುಖದಲ್ಲಿ ನಗೆ ಮೂಡಿಸಿದೆ.
ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂಥಹದ್ದೇನಿದೆ ಅನ್ನೋದನ್ನು ನೀವು ನೋಡಿದರೆ ನಿಮಗೂ ಈ ವಿಡಿಯೋ ಖುಷಿ ಕೊಡುವುದರಲ್ಲಿ ಅನುಮಾನವೇ ಇಲ್ಲ. ವೈರಲ್ ವಿಡಿಯೋವೊಂದರಲ್ಲಿ ಮರಿ ಮಂಗ ಕುಳಿತುಕೊಂಡು ತನ್ನ ಕೈಗಳಿಗೆ ಮೆಹೆಂದಿಯನ್ನು ಹಾಕಿಸಿಕೊಳ್ಳುತ್ತಿದೆ. ಇದನ್ನು ನೋಡಿದರೆ ಸಾಕು ಮರಿ ಮಂಗ ಅನ್ನೋದರಲ್ಲಿ ಅನುಮಾನವೇ ಇಲ್ಲ.
— हरियाणा Grande (@HanSoloFeels) November 29, 2023
ಸುಮ್ಮನೆ ಕೈಕೊಟ್ಟು ಕುಳಿತಿರುವ ಮಂಗವು ಮೆಹೆಂದಿಯ ಡಿಸೈನ್ ಅನ್ನು ನೋಡುತ್ತದೆ. ಮೊದಲು ತನ್ನ ಒಂದು ಕೈಗೆ ಮೆಹೆಂದಿ ಹಾಕಿಸಿಕೊಂಡ ಬಳಿಕ ಮತ್ತೊಂದು ಕೈಗೆ ಮೆಹೆಂದಿಯನ್ನು ಹಾಕಿಸಿಕೊಳ್ಳುವ ಈ ವಾನರ ತನ್ನ ಮಾಲೀಕರು ತನಗೆ ಮೆಹೆಂದೆ ಹೇಗೆ ಹಾಕುತ್ತಾರೆ ಎನ್ನುವುದನ್ನು ಸೂಕ್ಷ್ಮಿವಾಗಿ ನೋಡುತ್ತದೆ.
ಅದರ ವೀಕ್ಷಣೆ ಹೇಗಿದರೆ ಅಂದರೆ ಅಪ್ಪಿ ತಪ್ಪಿ ಮೆಹೆಂದಿ ಚೆನ್ನಾಗಿ ಬಂದಿಲ್ಲವಾದಲ್ಲಿ ಕೋಪ ಮಾಡಿಕೊಳ್ಳುವಷ್ಟು. ಮನುಷ್ಯರಂತೆ ತಾನೂ ಕೂಡ ತನಗೆ ಹೇಗೆ ಮೆಹೆಂದಿ ಹಾಕುತ್ತಾರೆ ಅನ್ನೋದನ್ನು ಸೂಕ್ಷ್ಮಿವಾಗಿ ವೀಕ್ಷಿಸುತ್ತದೆ. ಮೆಹೆಂದಿ ಪೂರ್ಣಗೊಂಡ ನಂತರ ಕೈಯನ್ನು ತನ್ನ ಮುಖದ ಬಳಿ ಹಿಡಿದುಕೊಂಡು ಹತ್ತಿರದಿಂದ ಡಿಸೈನ್ ನೋಡುತ್ತದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಯಾವುದೋ ಶುಭ ಕಾರ್ಯಕ್ರಮಕ್ಕೆ ಸಿದ್ಧರಾಗುವಂತೆ ಮಂಗ ಮೆಹೆಂದಿಯನ್ನು ತಾಳ್ಮೆಯಿಂದ ಕುಳಿತು ಹಾಕಿಸಿಕೊಂಡಿದೆ. ಮೆಹೆಂದಿ ಹಾಕುವವರೆಗೂ ಮಂಗ ಗಲಾಟೆ ಮಾಡುವುದಿಲ್ಲ. ಜೊತೆಗೆ ಅಲ್ಲಿರುವವರ್ಯಾರೂ ಕೂಡ ಅದಕ್ಕೆ ಬಲವಂತ ಕೂಡ ಮಾಡಿದಂತೆ ಕಾಣಿಸುವುದಿಲ್ಲ. ಆದರೂ ಮಂಗ ತಾನು ಇಷ್ಟಪಟ್ಟು ಮೆಹೆಂದಿ ಹಾಕಿಸಿಕೊಳ್ಳುವಂತೆ ಕೈಕೊಟ್ಟು ಕುಳಿತಿದೆ. ಈ ವಿಡಿಯೋಕ್ಕೆ ಅಪಾರ ಲೈಕ್ಸ್ ಬಂದಿದ್ದು, ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
ಮತ್ತೊಂದು ವಿಡಿಯೋ ವೈರಲ್
ಇತ್ತೀಚಿನ ದಿನಗಳಲ್ಲಿ ಕಾಡು ಬಿಟ್ಟು ಪ್ರಾಣಿಗಳು ನಾಡಿಗೆ ಬರುತ್ತಿವೆ. ನಾಯಿ, ಬೆಕ್ಕು, ಮೇಕೆ, ಹಸು ಮಾತ್ರವಲ್ಲದೆ ಮನುಷ್ಯರ ಮೇಲೂ ದಾಳಿ ಮಾಡುತ್ತಿವೆ. ಇದರಿಂದಾಗಿ ಸಾಕು ಪ್ರಾಣಿಗಳು ಮಾತ್ರವಲ್ಲದೆ ಮನುಷ್ಯರೂ ಬಲಿಯಾಗಿದ್ದಾರೆ. ಹೀಗಿರುವಾಗ ಸಿಂಹ ಹಾಗೂ ಹುಲಿ ನಡುವಿನ ಕಾದಾಟವನ್ನು ನಾಯಿಯೊಂದು ತಡೆದಿದೆ.
Dog stops fight between tiger and lion! pic.twitter.com/tsk5p4whMV
— Nature is Amazing ☘️ (@AMAZlNGNATURE) November 29, 2023
ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಹುಲಿ ಸಿಂಹದ ನಡುವಿನ ಜಗಳವನ್ನು ನಾಯಿಯೊಂದು ತಡೆದಿದೆ. ಆಶ್ಚರ್ಯ ಎನಿಸಿದರೂ ಇದು ನಿಜವೇ. ಧೈರ್ಯಶಾಲಿ ನಾಯಿ ಸಿಂಹದೊಂದಿಗೆ ಕಾದಾಡುತ್ತಿದ್ದ ಹುಲಿಯನ್ನು ತಡೆದಿದೆ. ಹುಲಿಯ ಕಿವಿಯನ್ನು ಹಿಡಿದು ಎಳೆಯುವ ನಾಯಿಯಿಂದ ತಪ್ಪಿಸಿಕೊಂಡು ಹುಲಿ ಸಿಂಹದ ಮೇಲೆ ದಾಳಿಗೆ ಮುಂದಾಗುತ್ತದೆ. ಆದರೂ ನಾಯಿ ಅದರ ಮಧ್ಯ ಪ್ರವೇಶ ಮಾಡಿ ಕಾದಾಟವನ್ನು ತಡೆಯುತ್ತದೆ.
ಇಷ್ಟಾದರೂ ಹುಲಿಯಾಗಲಿ ಅಥವಾ ಸಿಂಹವಾಗಲಿ ನಾಯಿ ಮೇಲೆ ದಾಳಿ ಮಾಡುವುದಿಲ್ಲ. ಈ ವಿಡಿಯೋ ನೋಡಿದರೆ ಮೂರು ಪ್ರಾಣಿಗಳು ಸಾಕಿದವೆಂದು ತೋರುತ್ತದೆ.












Click it and Unblock the Notifications