ಡಿ.31 ರೊಳಗೆ PAN ಜೊತೆ ಆಧಾರ್ ಕಾರ್ಡ್ ಜೋಡಣೆ ಹೇಗೆ? ಏಕೆ?
Permanent Account Number (PAN) ಕಾರ್ಡ್ ಜತೆಗೆ ಆಧಾರ್ ಕಾರ್ಡ್ ಜೋಡಿಸುವುದನ್ನು ಆದಾಯ ತೆರಿಗೆ ಇಲಾಖೆ ಕಡ್ಡಾಯಗೊಳಿಸಿದೆ. ಈ ವರ್ಷಾಂತ್ಯದೊಳಗೆ ಪ್ಯಾನ್ ಹಾಗೂ ಆಧಾರ್ ಜೋಡಣೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಆಧಾರ ತೆರಿಗೆ ಇಲಾಖೆ ಸೇವೆಗಳು ಲಭ್ಯವಾಗುವುದಿಲ್ಲ.
ಈ ಹಿಂದೆ ಪ್ಯಾನ್ ಹಾಗೂ ಆಧಾರ್ ಕಾರ್ಡ್ ಜೋಡಣೆಗೆ ಸೆಪ್ಟೆಂಬರ್ 30 ಕೊನೆ ದಿನವಾಗಿತ್ತು. ಆದರೆ ನಂತರ ಡಿಸೆಂಬರ್ 31ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಎಸ್ಎಂಎಸ್ ಮೂಲಕ, ಆನ್ ಲೈನ್ ನಲ್ಲೂ ಆಧಾರ್ -ಪ್ಯಾನ್ ಜೋಡಣೆ ಸಾಧ್ಯ, ಈಗ ಎಲ್ಲಾ ತೆರಿಗೆದಾರರು ತಮ್ಮ ಪ್ಯಾನ್ ಕಾರ್ಡ್ಗೆ ಆಧಾರ್ ಸಂಖ್ಯೆ ಜೋಡಿಸುವಂತೆ ಸೂಚಿಸಿದೆ. ಈ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲಿ ಜಾಹೀರಾತು ನೀಡಲಾಗಿದೆ. ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡಲು 567678 ಅಥವಾ 56161 ಗೆ SMS ಕಳುಹಿಸಬಹುದು.
ತೆರಿಗೆ ವಂಚನೆಗೆ ತಡೆ: ನಾಲ್ಕೈದು ಪ್ಯಾನ್ ಕಾರ್ಡ್ ಗಳನ್ನು ಹೊಂದಿ ತೆರಿಗೆ ವಂಚನೆ ಮಾಡುವ ವ್ಯವಹಾರವನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆಧಾರ್ ಕಾರ್ಡಿನಲ್ಲಿ ಬೆರಳಚ್ಚು ಇರುವುದರಿಂದ, ಆಧಾರ್ ಸಂಖ್ಯೆಯನ್ನು ಪ್ಯಾನ್ ನೊಂದಿಗೆ ಜೋಡಿಸಿದರೆ ನಾಲ್ಕೈದು ಪ್ಯಾನ್ ಕಾರ್ಡ್ ಇಟ್ಟುಕೊಂಡು ಮೋಸ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ಎಸ್ಎಂಎಸ್ ಮೂಲಕ ಜೋಡಣೆ ಹೇಗೆ?
ಆದಾಯ ತೆರಿಗೆ ಕಾಯ್ದೆ 139 AA(2) ಪ್ರಕಾರ, ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಯೂ ಸರ್ಕಾರ ನೀಡಿದ ಗಡುವಿನೊಳಗೆ ತಮ್ಮ ಆಧಾರ್ ಸಂಖ್ಯೆಯನ್ನು ಪ್ಯಾನ್ ಸಂಖ್ಯೆಯೊಂದಿಗೆ ಜೋಡಿಸಲೇಬೇಕು. ಇಲ್ಲವಾದಲ್ಲಿ ಪ್ಯಾನ್ ಸಂಖ್ಯೆ ನಿಷ್ಕ್ರಿಯವಾಗುತ್ತದೆ. ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡಲು 567678 ಅಥವಾ 56161 ಗೆ SMS ಕಳುಹಿಸಬಹುದು.

ಆನ್ ಲೈನ್ ನಲ್ಲಿ ಆಧಾರ್ ಜೋಡಣೆಗೆ ಹೇಗೆ?
ಪ್ಯಾನ್ -ಆಧಾರ್ ಅನ್ನು ಆನ್ ಲೈನ್ ನಲ್ಲಿ ಲಿಂಕ್ ಮಾಡುವುದಕ್ಕೆ ಸುಲಭ ಮಾರ್ಗವಿದೆ. ಮೊದಲು ಆದಾಯ ತೆರಿಗೆ ವೆಬ್ ಸೈಟ್ ಗೆ ಭೇಟಿ ನೀಡಿ. ನೋಂದಾಯಿಸಿಕೊಳ್ಳಿ.
ಈ ವೆಬ್ ಸೈಟ್ ನಲ್ಲಿ ಈಗಾಗಲೇ ನೀವು ರಿಜಿಸ್ಟರ್ ಆಗಿದ್ದರೆ, ವೆಬ್ ಸೈಟ್ ನಲ್ಲಿ ನಿಮ್ಮ ಬಲಭಾಗದಲ್ಲಿ ಕಾಣುವ Log in here ಆಯ್ಕೆಯನ್ನು ಕ್ಲಿಕ್ ಮಾಡಿ. ನೀವು ಈ ವೆಬ್ ಸೈಟಿಗೆ ರಿಜಿಸ್ಟರ್ ಆಗಿಲ್ಲದಿದ್ದರೆ "Register yourself" ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿ.

ರಿಜಿಸ್ಟರ್ ಆಗದೆ ಕೂಡಾ ಜೋಡಣೆ ಸಾಧ್ಯ
ಈ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಆಗದೆಯೂ ನೇರವಾಗಿ ಪ್ಯಾನ್ ನೊಂದಿಗೆ ಆಧಾರ್ ನಂಬರ್ ಜೋಡಿಸಬಹುದು. ವೆಬ್ ಸೈಟ್ ನಲ್ಲಿ ನಿಮ್ಮ ಎಡಗಡೆ 'ಲಿಂಕ್ ಆಧಾರ್' ಎಂಬ ಕೆಂಪು ಬಣ್ಣದ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ , ನಿಮ್ಮ ಪ್ಯಾನ್, ಆಧಾರ್ ಮತ್ತು ಆಧಾರ್ ಕಾರ್ಡಿಗನುಗುಣವಾಗಿ ನಿಮ್ಮ ಹೆಸರನ್ನು ಅದು ಕೇಳುತ್ತದೆ. ಅಲ್ಲಿರುವ ಖಾಲಿಜಾಗಗಳ್ನನು ತುಂಬಿ, ಕ್ಯಾಪ್ಚಾ ಕೋಡ್ ಸರಿಯಾಗಿ ತುಂಬಿ. ನಂತರ ಲಿಂಕ್ ಆಧಾರ್ ಎಂದು ಕೊಟ್ಟರೆ ನಿಮ್ಮ ಪ್ಯಾನ್ ನಂಬರ್ ಜೊತೆ ಆಧಾರ್ ಜೋಡಣೆಯಾಗುತ್ತದೆ.

ಆಧಾರ್ -ಪ್ಯಾನ್ ಜೋಡಣೆ ಅಪ್ಡೇಟ್ ನೋಡಿ
ನಿಮ್ಮ ಆಧಾರ್ ನಂಬರ್ ಜೊತೆ ಪ್ಯಾನ್ ನಂಬರ್ ಲಿಂಕ್ ಆಗಿದೆಯೋ, ಇಲ್ಲವೋ ಅಥವಾ ಈ ಮೊದಲೇ ನಾನು ಲಿಂಕ್ ಮಾಡಿದ್ದು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯುವುದಕ್ಕೂ ಸಾಧ್ಯ. ಲಿಂಕ್ ಆಧಾರ್ ಆಯ್ಕೆಗೆ ಹೋದೊಡನೆ, ಸ್ಕ್ರೀನ್ ನಲ್ಲಿ ನೀವು ಈಗಾಗಲೇ ಆಧಾರ್ -ಪ್ಯಾನ್ ಜೋಡಿಸಿದ್ದರೆ ಅದರ ಸ್ಟೇಟಸ್ ತಿಳಿಯಬೇಕೆಂದರೆ, 'click here' ಎಂಬ ಕೆಂಪು ಬಣ್ಣದ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಆಧಾರ್ ಮತ್ತು ಪ್ಯಾನ್ ನಂಬರ್ ಉಲ್ಲೇಖಿಸಿ, View link aadhaar status ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಪ್ಯಾನ್-ಆಧಾರ್ ಜೊತೆ ಲಿಂಕ್ ಆಗಿದೆಯೇ ಇಲ್ಲವೆ ಎಂಬುದು ತಿಳಿಯುತ್ತದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications