ಚಾಪೆಯನ್ನು ಸೀರೆಯಂತೆ ಉಟ್ಟ ಭೂಪ: ವಿಡಿಯೋ ವೈರಲ್
ಸಾಮಾನ್ಯವಾಗಿ ಯಾರಮೇಲಾದ್ರು ಕೋಪ ಬಂದರೆ 'ಚಾಪೆ ಸುತ್ಕೊಂಡು ಹೋಗು' ಎಂದು ಬೈಯೋದನ್ನು ನಾವು ಕೇಳಿದ್ದೇವೆ. ಆದರೆ ಇನ್ಮುಂದೆ ಈ ಬೈಗುಳವನ್ನು ಬಳಕೆ ಮಾಡುವ ಮುನ್ನ ನೀವು ಯೋಚನೆ ಮಾಡಬೇಕು. ಯಾಕಂದ್ರೆ ಇಲ್ಲೊಬ್ಬ ವ್ಯಕ್ತಿ ಚಾಪೆಯನ್ನು ಸೀರೆಯನ್ನಾಗಿ ಮಾರ್ಪಡಿಸಿದ್ದಾನೆ. ಜೊತೆಗೆ ಅದನ್ನು ಉಟ್ಟುಕೊಂಡು ವೈಯ್ಯಾರದಿಂದ ನಡಿಗೆ ಹಾಕಿದ್ದಾನೆ. ಕಿವಿಯಲ್ಲಿ ಓಲೆ, ನಕಲಿ ಜಡೆಯನ್ನ ಹಾಕಿಕೊಂಡು ಕ್ಯಾಟ್ ವಾಕ್ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇಂದು ಮನುಷ್ಯ ಬದಲಾದಂತೆಲ್ಲಾ ಉಡುಗೆಗಳೂ ಕೂಡ ಬದಲಾಗಿವೆ. ಆದರೆ ನಮ್ಮ ಸಾಂಪ್ರದಾಯಿಕ ಉಡುಗೆ ಸೀರೆ ಹೆಣ್ಣುಮಕ್ಕಳ ಅಂದವನ್ನು ಇಮ್ಮಡಿಗೊಳಿಸಿದಷ್ಟು ಯಾವ ಉಡುಪು ಕೂಡ ಮುನ್ನಲೆಗೆ ಬಂದಿಲ್ಲ. ಹೀಗಾಗಿ ಈ ಕಾಲದ ಜನ ಸೀರೆಯಲ್ಲಿ ನಾನಾ ತರಹದ ಉಡಿಗೆಗಳನ್ನಾಗಿ ಸೃಷ್ಟಿಸುತ್ತಾರೆ. ನಾನಾ ವಿಧವಾಗಿ ಸೀರೆ ಉಡುವುದನ್ನು ರೂಢಿಸಿಕೊಂಡಿದ್ದಾರೆ.
ಜಿಲ್ಲಾವಾರು ಸೀರೆ ಉಡುಪ ಶೈಲಿ ಕೊಂಚ ವಿಭಿನ್ನವಾಗಿದ್ದರೂ ಆಧುನಿಕ ಹುಡುಗಿರು ಅದನ್ನು ಸ್ಕರ್ಟ್ ಹಾಗೂ ಪ್ಯಾಂಟ್‌ನೊಂದಿಗೆ ಮಿಕ್ಸ್ ಆ್ಯಂಡ್ ಮ್ಯಾಚ್ ಮಾಡಿ ಉಡುವುದು ಟ್ರೆಂಡ್ ಆಗಿದೆ.
ಅದೇನೇ ಇರಲಿ ಈಗಿನ ಕಾಲಕ್ಕೆ ಚಾಪೆ ಕೂಡ ಸಾರಿ ತರ ಉಡಬಹುದು ಅನ್ನೋದು ಕೂಡ ಈ ವಿಡಿಯೋದಿಂದ ತಿಳಿಯಬಹುದು. ಡಿಫ್ರೆಂಟ್ ಆಗಿ ಯೋಚಿಸುವ ಮಹಿಳೆಯರು ಇದರನ್ನು ಪ್ರಯತ್ನ ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ.

ಈ ವಿಡಿಯೋಕ್ಕೆ ಕೆಲ ಜನ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ವಿಡಿಯೋವನ್ನು ನೋಡಿ ಮುಖ ತಿರಿಗಿಸಿಕೊಂಡವರು ಒಂದೆಡೆಯಾದರೆ ನಗಾಡಿದವರೇ ಹೆಚ್ಚು. ಈವರೆಗೆ ಸಾವಿರಾರು ಜನ ವೀಕ್ಷಿಸಿದ್ದಾರೆ. 'ಎಂಚಿನ ಅವಸ್ಥೆ ಮಾರೆ' ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.












Click it and Unblock the Notifications