ಹೊಸದಾಗಿ ಪ್ರೀತಿಸುವ ಹುಡುಗಿಯಂತೆ ಸೆಳೆಯುತ್ತಿದೆ ಥಾರ್-5 ಡೋರ್‌-ವಿಶೇಷತೆ ಹಾಗೂ ಬಿಡುಗಡೆ ಯಾವಾಗ?

ಮಹೀಂದ್ರ ಥಾರ್‌ ಇತ್ತೀಚಿನ ದಿನಗಳಲ್ಲಿ ತುಂಬಾ ಪ್ರಖ್ಯಾತಿ ಪಡೆಯುತ್ತಿದೆ. ಯಾಕೆಂದರೆ ಇದನ್ನು ಇಷ್ಟಪಡದವರೇ ಇಲ್ಲ. ಯುವಕರಿಗಂತೂ ಮಹೀಂದ್ರ ಥಾರ್‌ ಹೆಸರು ಕೇಳಿದರೆ ಸಾಕು ಅಬ್ಬಬ್ಬಾ ಏನ್‌ ಗಾಡಿ ಮಗ.. ಒಂದು ಬಾರಿಯಾದರೂ ಇದರಲ್ಲಿ ಪ್ರಯಾಣ ಮಾಡಬೇಕು ಎಂದು ಮಾತನಾಡಿಕೊಳ್ಳುತ್ತಾರೆ. ಅಲ್ಲದೆ ಅವರ ಕನ್ನಸ್ಸೂ ಆಗಿರುತ್ತದೆ. ಅಷ್ಟರ ಮಟ್ಟಿಗೆ ಈ ಕಾರು ಹೆಸರುವಾಸಿಯಾಗಿದೆ. ಇನ್ನೂ ಇದೀಗ ಮತ್ತೊಂದು ಅಪ್ಡೇಟ್‌ ಅನ್ನು ಮಹೀಂದ್ರಾ ಥಾರ್‌ ಕೊಟ್ಟಿದೆ ಹಾಗಾದರೆ ಆ ಅಪ್ಡೇಟ್‌ ಏನು ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.

ಹಿಂದಿನಿಂದಲೂ ಯುವಪೀಳಿಗೆಯವರ ಮನಸ್ಸನ್ನು ಗೆದ್ದಿರುವ ಮಹೀಂದ್ರ ಕಂಪನಿಯು, ಮಹೀಂದ್ರ ಥಾರ್ -5 door ಈ ವರ್ಷದ ಅತ್ಯಂತ ನಿರೀಕ್ಷಿತ ಮಾದರಿಗಳಲ್ಲಿ ಒಂದಾಗಿದೆ. ಮತ್ತು ದೀರ್ಘಕಾಲಗಳಿಂದ ಇದರ ತಯಾರಿ ಪ್ರಕ್ರಿಯೆಯಲ್ಲಿದೆ. ಪ್ರತಿ ಬಾರಿಯೂ, ಆಫ್-ರೋಡರ್‌ನ ಪರೀಕ್ಷಾ ಆವೃತ್ತಿಗಳು ರಸ್ತೆಯಲ್ಲಿ ಅಪರೂಪಕ್ಕೊಂದರಂತೆ ಕಾಣುತ್ತವೆ.

Mahindra Thar 5 door When is the Thar-5 door release know details

ಇನ್ನು ಅದರ ವಿನ್ಯಾಸ ಸೇರಿದಂತೆ ಇನ್ನಿತರ ಮಾಹಿತಿಯನ್ನು ಕಂಪನಿಯು ನೀಡುತ್ತಾ ಬರುತ್ತಿದೆ. ಮಹೀಂದ್ರಾ ಥಾರ್‌ 5-ಡೋರ್‌ನ ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಿದೆ ಎನ್ನುವ ಮಾಹಿತಿ ಇದೆ. ಇದು ಈ ವರ್ಷ 4X4 ಆಗಿ ಹೊರ ಬರಲಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಥಾರ್ 5-ಡೋರ್‌ನ ಎಲ್ಲಾ ಆವೃತ್ತಿಗಳು ಆರಂಭದಲ್ಲಿ 4×4 ವಿಶೇಷತೆಯನ್ನು ಹೊಂದಿರುತ್ತದೆ. ಥಾರ್‌ನ ಈ ಆವೃತ್ತಿಯು 3 ಡೋರ್ 4WD ಮಾದರಿಯ ಅದೇ ಇಂಜಿನ್ ಅನ್ನು ಹೊಂದಿರುತ್ತದೆ. 2 ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಇದೆ. ಈ ಇಂಜಿನ್‌ಗಳು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಾಗಿವೆ.

5 ಡೋರ್‌ ಥಾರ್‌ನ ಇನ್ನು ಹಲವು ಮಾಹಿತಿಗಳು ನುಈಗಾಗಲೇ ಹೊರಬಿದ್ದಿವೆ. ಇದು ದೊಡ್ಡ ಟಚ್ ‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್, ಸನ್‌ರೂಫ್ ಅನ್ನು ಒಳಗೊಂಡಿರಲಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಮಹತ್ವ ನೀಡಿದ್ದು, 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಇನ್ನು ಹಲವು ವಿಶೇಷತೆಗಳನ್ನು ಒಳಗೊಂಡಿದೆ.

Mahindra Thar 5-Doorನ ಎಕ್ಸ್-ಶೋರೂಮ್ ಬೆಲೆ 15 ಲಕ್ಷ ರೂಪಾಯಿನಿಂದ ಆರಂಭ ಆಗುವ ನಿರೀಕ್ಷೆಯಿದೆ ಮತ್ತು ಮುಂಬರುವ 5-ಡೋರ್ ಫೋರ್ಸ್ ಗೂರ್ಖಾಗೆ ಇದು ನೇರ ಪ್ರತಿಸ್ಪರ್ಧಿಯಾಗಿದೆ. ಇನ್ನು ಇದು ಮಾರುತಿ ಜಿಮ್ನಿಗೆ ಪೈಪೋಟಿ ನೀಡಲಿದೆ ಎನ್ನಲಾಗುತ್ತಿದೆ.

ಥಾರ್‌ ಅನ್ನು ಹೆಚ್ಚಾಗಿ ಟ್ರಾವೆಲ್ಲರ್‌ಗಳು ಉಪಯೋಗಿಸುತ್ತಾರೆ. ಮೊದಲೆಲ್ಲ ಇದನ್ನು ದೊಡ್ಡ ದೊಡ್ಡ ಉದ್ಯಮಿಗಳು ಉಪಯೋಗಿಸುತ್ತಿದ್ದರು. ಇದೀಗ ಇದು ವಿನ್ಯಾಸದಲ್ಲಿ ಬದಲಾವಣೆ ಮೂಲಕ ಯುವಕರ ಹೃದಯವನ್ನು ಹೊಸದಾಗಿ ಪ್ರೀತಿಸುತ್ತಿರುವ ಹುಡುಗಿಯಂತೆ ಸೆಳೆಯುತ್ತಿದೆ. ಹಾಗೆಯೇ ಇದನ್ನು ತೆಗೆದುಕೊಳ್ಳಲು ಯುವಪೀಳಿಯವರಂತೂ ತುದಿಗಾಲಲ್ಲಿ ನಿಲ್ಲುತ್ತಿದ್ದಾರೆ. ನೋಡಿದರೆ ಸಾಕು ಇದು ಹೊಸ ಲವರ್‌ ರೀತಿ ಸೆಳೆಯುತ್ತದೆ. ಇನ್ನು ಇದರಲ್ಲಿ ಪ್ರಯಾಣ ಬೆಳೆಸಿದರೆ ಎಲ್ಲೋ ಸ್ವರ್ಗದಲ್ಲಿದ್ದೆವೋ ಅನುಭವ ಆಗುತ್ತದೆ. ಅದರಲ್ಲೂ ಇದರಲ್ಲಿ ಬಿಡುತ್ತಿರುವ ಹೊಸ ಹೊಸ ಮಾಡೆಲ್‌ಗಳಿಗಾಗಿ ಕಾತರದಿಂದ ಕಾಯುತ್ತಿರುತ್ತಾರೆ.

ಮಹೀಂದ್ರಾ ಥಾರ್ ಎಸ್‍ಯುವಿಯು ತುಂಬಾ ವರ್ಷಗಳಿಂದ ದೇಶದ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆಯುತ್ತಲೆ ಇದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಜನರೇಷನ್ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ದಾಖಲೆ ಮಟ್ಟದಲ್ಲಿ ಮಾರಾಟ ಆಗುತ್ತಿದೆ. ಮಹೀಂದ್ರಾ ಥಾರ್ ಎಸ್‍ಯುವಿಯುಗೆ ಭಾರತದಲ್ಲಿ ಅಪಾರ ಅಭಿಮಾನಿ ಬಳಗವೇ ಇದೆ.

ಮಹೀಂದ್ರಾ ಕಳೆದ ಎರಡು ವರ್ಷಗಳಿಂದ ಮಹೀಂದ್ರಾ ಥಾರ್ 5-ಡೋರ್ ಅನ್ನು ಪರೀಕ್ಷಿಸುತ್ತಿದೆ. ಈ ಮಹೀಂದ್ರಾ ಥಾರ್ ಎಸ್‍ಯುವಿ ಸ್ಟೈಲಿಂಗ್, ಇಂಟೀರಿಯರ್ ಮತ್ತು ಮೆಕ್ಯಾನಿಕ್ಸ್‌ನಲ್ಲಿ ಲೈಫ್‌ಸ್ಟೈಲ್ ಎಸ್‌ಯುವಿ ಗಮನಾರ್ಹ ಬದಲಾವಣೆಗಳೊಂದಿಗೆ ರಸ್ತೆಗಿಳಿಯಲಿದೆ. ಮಹೀಂದ್ರಾ ಥಾರ್ 5-ಡೋರ್ ಲೈಫ್‌ಸ್ಟೈಲ್ ಎಸ್‌ಯುವಿಯು 3-ಡೋರ್ ಮಾದರಿಯಂತೆಯೇ ಅದೇ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ಬರಲಿದೆ ಎನ್ನುವ ಅಪ್ಡೇಟ್‌ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+