Maha Shivratri 2025: ಮಹಾಶಿವರಾತ್ರಿಯಂದು ಭಕ್ತರು ಹೆಚ್ಚು ಭೇಟಿ ನೀಡುವ ಶಿವನ ದೇವಸ್ಥಾನಗಳಿವು

ಕೈಲಾಸವಾಸಿ ಶಿವನಿಗೆ ಅತ್ಯಂತ ಪ್ರಿಯವಾದ ದಿನ ಶಿವರಾತ್ರಿ. ಆ ದಿನ ಭಕ್ತರು ಉಪವಾಸ ವ್ರತ ಕೈಗೊಳ್ಳುವ ಮೂಲಕ ಶಿವನನ್ನ ಆರಾಧಿಸುತ್ತಾರೆ. ಅಂದು ವಿಶೇಷವಾಗಿ ಶಿವಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ದಿನವಿಡೀ ಉಪವಾಸದೊಂದಿಗೆ ಆ ದಿನ ರಾತ್ರಿಯಿಡೀ ಜಾಗರಣೆ ಮಾಡುವ ಮೂಲಕ ಶಿವನನ್ನು ಸ್ಮರಿಸುತ್ತಾರೆ. ಕೆಲವರು ಮಹಾಶಿವರಾತ್ರಿಯಂದು ಶಿವನ ದೇವಾಲಯಗಳಿಗೆ ಭೇಟಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅದರಂತೆ ಬೆಂಗಳೂರು ಭಾಗದಲ್ಲೇ ಇರುವ ಶಿವನ ದೇವನಸ್ಥಾನಗಳ ಮಾಹಿತಿ ಇಲ್ಲಿ ತಿಳಿಯಿರಿ.

* ಶಿವಗಂಗೆ ಬೆಟ್ಟ: ಬೆಂಗಳೂರಿನ ಸಮೀಪವೇ ಇರುವ ಈ ದೇವಾಲಯವನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ. ಇಲ್ಲಿ ಗಂಗಾಧರೇಶ್ವರ ದೇವಸ್ಥಾನವಿದೆ.

Maha Shivratri 2025 Visit These Shiva Temples In Bengaluru For Divine Blessings

* ಶ್ರೀ ಕಣ್ಣೇಶ್ವರ ದೇವಸ್ಥಾನ: ಕಣ್ಣೇಶ್ವರ ದೇವಸ್ಥಾನವು ಬೆಂಗಳೂರಿನ ಬಸವನಗುಡಿ ಪ್ರದೇಶದಲ್ಲಿದೆ. ಹೆಸರೇ ಸೂಚಿಸುವಂತೆ ಇಲ್ಲಿ ಶಿವನ ಕಣ್ಣುಗಳು ಪ್ರತೀತಿ ಪಡೆದಿದೆ.

* ಭೋಗನಂದೀಶ್ವರ ದೇವಾಲಯ: ಇದು ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿದೆ. ಈ ದೇವಾಲಯ ಸುಮಾರು10 ನೇ ಶತಮಾನದಷ್ಟು ಹಳೆಯದು ಎಂದು ನಂಬಲಾಗಿದೆ. ದ್ರಾವಿಡ ವಾಸ್ತುಶಿಲ್ಪ ಹಾಗೂ ನೊಳಂಬವಾದಿ ಶೈಲಿಯಲ್ಲಿದೆ.

* ಹಲಸೂರು ಸೋಮೇಶ್ವರ ದೇವಸ್ಥಾನ: ಇದು ಚೋಳರ ಕಾಲಕ್ಕೆ ಸೇರಿದ್ದು, ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದು. ಇದು ವಿಜಯನಗರ ವಾಸ್ತುಶೈಲಿಯಲ್ಲಿದೆ.

* ಕಾಡು ಮಲ್ಲೇಶ್ವರ ದೇವಸ್ಥಾನ: ಮಲ್ಲೇಶ್ವರವನ್ನು ಈ ದೇವಸ್ಥಾನದ ಹೆಸರಿನಿಂದಲೇ ಕರೆಯಲಾಗುತ್ತದೆ. ಇದು ಸುಮಾರು 17 ನೇ ಶತಮಾನದ ಶಿವನ ದೇವಾಲಯವಾಗಿದೆ. ನಂದೀಶ್ವರ ತೀರ್ಥ ಇಲ್ಲಿನ ಪ್ರಮುಖ ಆಕರ್ಷಣೆ. ಇದೇ ವೃಷಭಾವತಿ ನದಿಯ ಮೂಲ ಎಂಬ ನಂಬಿಕೆಯೂ ಇದೆ.

* ಬೇಗೂರು ನಾಗೇಶ್ವರ ದೇವಸ್ಥಾನ: ಇದನ್ನು ಗಂಗ ರಾಜವಂಶಸ್ಥರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. ಬಳಿಕ ಚೋಳ ರಾಜವಂಶದ ಆಳ್ವಿಕೆಯಲ್ಲೂ ಇದರ ಉಲ್ಲೇಖವಿದೆ. ಬೇಗೂರಿನಲ್ಲಿ ಈ ಶಿವನ ದೇವಾಲಯವಿದೆ.

* ಕೋಟೆ ಜಲಕಂಠೇಶ್ವರ ದೇವಸ್ಥಾನ: ಇದು ಕೂಡ ಚೋಳ ರಾಜವಂಶಕ್ಕೆ ಸೇರಿದ ಬೆಂಗಳೂರಿನ ಮತ್ತೊಂದು ಶಿವನ ದೇವಾಲಯವಾಗಿದ್ದು, ನಗರ ಕೇಂದ್ರ ಭಾಗವಾದ ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿಯೇ ಇದೆ.

Maha Shivratri 2025 Visit These Shiva Temples In Bengaluru For Divine Blessings

* ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯ: ಇದು ಬನಶಂಕರಿ ಎರಡನೇ ಹಂತದಲ್ಲಿದೆ. ಶಿವರಾತ್ರಿಯ ಹಬ್ಬದಂದು ಇಲ್ಲಿ ವಿಶೇಷ ಕಾರ್ಯಕ್ರಮ ಇರುತ್ತದೆ. ಹಬ್ಬವನ್ನು ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ.

* ಹುಳಿಮಾವು ಗುಹೆ ದೇವಾಲಯ: ಇದು ಹುಳಿಮಾವು ಸಮೀಪದ ಬನ್ನೇರುಘಟ್ಟ ರಸ್ತೆಯ ಬಳಿ ಇದೆ. ಈ ಗುಹೆಯನ್ನು ಸುಮಾರು 2000 ವರ್ಷಗಳಷ್ಟು ಹಳೆಯದಾದ ರಚನೆ ಎಂದು ಗುರುತಿಸಲಾಗಿದ್ದು, ಇದು ಸಂಪೂರ್ಣವಾಗಿ ಒಂದೇ ಬಂಡೆಯಿಂದ ಕೆತ್ತಿರುವುದು ಗಮನ ಸೆಳೆದಿದೆ.

* ಶ್ರೀ ದಕ್ಷಿಣಮುಖ ನಂದಿ ತೀರ್ಥ ಕಲ್ಯಾಣಿ ಕ್ಷೇತ್ರ: ಇದು ಬೆಂಗಳೂರಿನ ಗಂಗಮ್ಮ ದೇವಸ್ಥಾನದ ಸಮೀಪದಲ್ಲಿ ಹಾಗೂ ಕಾಡು ಮಲ್ಲೇಶ್ವರ ದೇವಸ್ಥಾನದ ಬಳಿಯೇ ಇದೆ.

* ಶ್ರೀಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ: ಇದು ಎಲೆಕ್ಟ್ರಾನಿಕ್ ಸಿಟಿಯಲ್ಲಿದೆ. ವಾರಣಾಸಿಯಲ್ಲಿರುವ ಮೂಲ ಕಾಶಿ ವಿಶ್ವನಾಥ ದೇವಾಲಯಕ್ಕೆ ಇದನ್ನು ಹೋಲಿಸಲಾಗಿದೆ. ಶಿವನ ಭಕ್ತರಿಗೆ ಇದು ನೆಚ್ಚಿನ ತಾಣ.

* ಗವಿ ಗಂಗಾಧರೇಶ್ವರ ದೇವಸ್ಥಾನ: ಗವಿಪುರಂನಲ್ಲಿರುವ ಪುರಾತನ ಗುಹಾ ದೇವಾಲಯವಿದು. ಮಕರ ಸಂಕ್ರಾಂತಿಯಂದು ಸೂರ್ಯರಶ್ಮಿ ಸ್ಪರ್ಶಕ್ಕೆ ಈ ದೇವಾಲಯ ಪ್ರಖ್ಯಾತಿ.

* ಕೆಂಪುಕೋಟೆ ಶಿವ ದೇವಾಲಯ: ಇದನ್ನು ಶಿವೋಹಂ ಶಿವ ದೇವಾಲಯ ಎಂದೂ ಕರೆಯುತ್ತಾರೆ. ಇಲ್ಲಿ 65 ಅಡಿ ಶಿವನ ಪ್ರತಿಮೆ, ದೊಡ್ಡ ಗಣೇಶನ ವಿಗ್ರಹವಿದ್ದು ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+