Maha Kumbh Mela 2025: ಮಹಾ ಕುಂಭಮೇಳದಲ್ಲಿ ಗ್ರೀಸ್‌ ದೇಶದ ವಧುವನ್ನು ವರಿಸಿದ ಭಾರತದ ವರ

ಹಿಂದೂ ಧರ್ಮದಲ್ಲಿ ಅತ್ಯಂತ ದೊಡ್ಡ ಮತ್ತು ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಪ್ರಮುಖವಾದ, ಜಾಗತೀಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮಹಾ ಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಈ ಮಹಾ ಕುಂಭಮೇಳವು ಹೊಸ ವರ್ಷದ ಮೊದಲ ಹುಣ್ಣಿಮೆ ಅಂದರೆ ಇಂದು (ಜನವರಿ 13) ರಂದು ಆರಂಭವಾಗಿದ್ದು, 2025ರ ಮಹಾ ಶಿವರಾತ್ರಿಯ ದಿನ ಅಂದರೆ ಫೆಬ್ರವರಿ 26ರವರೆಗೆ ನಡೆಯಲಿದೆ.

ಮಹಾ ಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು, ಸಾಧು-ಸಂತರು ನಾಗಸಾಧುಗಳು, ವಿದೇಶಿ ಭಕ್ತರು ಮಾತ್ರವಲ್ಲದೇ ದೇಶದ ಹಾಗೂ ವಿದೇಶದ ಗಣ್ಯರು ಕೂಡ ಭಾಗಿಯಾಗುತ್ತಿದ್ದಾರೆ. ಈಗಾಗಲೇ ಹತ್ತು ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದು, ಪ್ರತಿ ದಿನ ಅಂದಾಜು ಒಂದು ಕೋಟಿ ಭಕ್ತರು ಪವಿತ್ರ ಸ್ನಾನ ಕೈಗೊಳ್ಳುತ್ತಿದ್ದಾರೆ.

Maha Kumbh 2025 India s Siddharth Married Greece s Penelope During Kumbh Mela

ಈ ಬಾರಿಯ ಮಹಾ ಕುಂಭ ಮೇಳ ಅನೇಕ ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದ್ದು, ಇದೀಗ ಗಡಿ ಮೀರಿದ ಪ್ರೀತಿಯನ್ನು ಗೆಲ್ಲಿಸಿ ಪ್ರೇಮಿಗಳನ್ನು ಒಂದು ಮಾಡಿದೆ. ಹೌದು ಭಾರತದ ವರ ಹಾಗೂ ಗ್ರೀಸ್‌ನ ವಧು ಮಹಾ ಕುಂಭಮೇಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ವಿಶೇಷವಾದ ತಮ್ಮ ಪ್ರೀತಿಯನ್ನು ಇನಷ್ಟು ವಿಶೇಷವಾಗಿ ಭದ್ರಪಡಿಸಿಕೊಂಡಿದ್ದಾರೆ.

ಗ್ರೀಸ್‌ನ ಪೆನೆಲೋಪ್ ಮತ್ತು ಭಾರತದ ಸಿದ್ಧಾರ್ಥ್ ಪರಸ್ಪರ ಪ್ರೀತಿಸುತ್ತಿದ್ದರು. ಗಡಿ ದಾಟಿದ ಇವರ ಪ್ರೀತಿಗೆ ಕುಟುಂಬಸ್ಥರ ಒಪ್ಪಿಗೆ ಕೂಡ ಸಿಕ್ಕಿದ್ದು, ಇನ್ನೇನು ಮದುವೆಗೆ ಸಿದ್ಧತೆ ಆರಂಭವಾಗಿತ್ತು. ಆದರೆ ತಮ್ಮ ಮದುವೆ ಸರಳವಾಗಿ ನಡೆದರೂ ದೈವಿಕವಾಗಿ ಹಾಗೂ ವಿಶೇಷವಾದ ಸಂದರ್ಭದಲ್ಲಿ ನಡೆಯಬೇಕು ಎಂದು ನಿರ್ಧರಿಸಿ ಪೆನೆಲೋಪ್ ಮತ್ತು ಸಿದ್ಧಾರ್ಥ್ ಮಹಾ ಕುಂಭ ಮೇಳದಲ್ಲಿ ಮದುವೆಯಾಗಲು ನಿರ್ಧರಿಸಿದರು. ಇದಕ್ಕೆ ಪೋಷಕರ ಒಪ್ಪಿಗೆ ಕೂಡ ಪಡೆದುಕೊಂಡರು.

Maha Kumbh 2025 India s Siddharth Married Greece s Penelope During Kumbh Mela

ಗ್ರೀಸ್‌ನಿಂದ ಬಂದ ಪೆನೆಲೋಪ್ ಕುಟುಂಬಸ್ಥರು, ಭಾರತದ ಸಂಪ್ರದಾಯದಂತೆ ಜುನಾ ಅಖಾರದ ಮಹಾಮಂಡಲೇಶ್ವರ ಸ್ವಾಮಿ ಯತೀಂದ್ರಾನಂದ ಗಿರಿ ನೇತೃತ್ವದಲ್ಲಿ ಮಹಾ ಕುಂಭ ಮೇಳದಲ್ಲಿ ತಮ್ಮ ಮಗಳು ಪೆನೆಲೋಪ್‌ಳನ್ನು ಭಾರತ ಮೂಲದ ಸಿದ್ಧಾರ್ಥ್‌ಗೆ ಕನ್ಯಾದಾನ ಮಾಡಿದ್ದಾರೆ. ಪೆನೆಲೋಪ್ ಹಾಗೂ ಸಿದ್ಧಾರ್ಥ್ ವಿವಾಹ ಧಾರ್ಮಿಕವಾಗಿ ಎಲ್ಲಾ ಶಾಸ್ತ್ರೋಸ್ತ್ರಗಳೊಂದಿಗೆ ನೆರವೇರಿದೆ. ಈ ಸಂಭ್ರಮದಲ್ಲಿ ಪೆನೆಲೋಪ್ ತಾಯಿ ಮತ್ತು ಇತರ ಸಂಬಂಧಿಕರು ಭಾಗಿಯಾಗಿದ್ದು, ಮಗಳ ಮದುವೆಯನ್ನು ನೋಡಿ ಖುಷಿಪಟ್ಟರು.

ಇನ್ನು ಜಾಗತೀಕ ಮಟ್ಟದ ಅತ್ಯಂತ ದೊಡ್ಡ ಉತ್ಸವ ಮಹಾ ಕುಂಭ ಮೇಳದಲ್ಲಿ ಭಾಗಿಯಾಗಿರುವುದಲ್ಲದೇ ಈ ವಿಶೇಷ ಕ್ಷಣದಲ್ಲೇ ಪ್ರೀತಿಸಿ ಹುಡುಗಿಯನ್ನು ವರಿಸಿದ ಖುಷಿಯಲ್ಲಿರುವ ಸಿದ್ಧಾರ್ಥ್ ನಿಜಕ್ಕೂ ನಾವು ಭಾಗ್ಯಶಾಲಿಗಳು ಎಂದು ಸಂತಸ ಹಂಚಿಕೊಂಡಿದ್ದಾರೆ. ಇನ್ನು ಮಹಾ ಕುಂಭ ಮೇಳದ ಮಹತ್ವದ ದಿನ ಜನವರಿ 29ರಂದು ಮೌನಿ ಅಮಾವಾಸ್ಯೆ ಪುಣ್ಯಸ್ನಾನದಲ್ಲಿ ಭಾಗವಹಿಸಿ ಈ ಕುಟುಂಬ ಮತ್ತೆ ತಮ್ಮ ಮೂಲಸ್ಥಾನಕ್ಕೆ ಮರಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+