ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Long Weekends in 2023ರಲ್ಲಿವೆ ಸುದೀರ್ಘವಾದ ವಾರಾಂತ್ಯದ ರಜೆಗಳು, ಇಲ್ಲಿದೆ ಪಟ್ಟಿ

|
Google Oneindia Kannada News

ಬೆಂಗಳೂರು, ಡಿಸೆಂಬರ್‌ 5: 2023 ರಲ್ಲಿ ದೀರ್ಘ ವಾರಾಂತ್ಯ ರಜೆಗಳು ಬರಲಿವೆ. ಹೊಸ ವರ್ಷದಲ್ಲಿ ನಿಮಗೆ ರಜಾದಿನಗಳು ಹೆಚ್ಚಾಗಿ ಸಿಗಲಿದ್ದು, ಅವುಗಳ ಪಟ್ಟಿ ಸಂಪೂರ್ಣವಾಗಿ ಇಲ್ಲಿ ನೀಡಲಾಗಿದೆ. ಈ ಮೂಲಕ ನೀವು ನಿಮ್ಮ ರಜೆಗಳನ್ನು ಯೋಜಿಸಲು ಇದು ಸಹಾಯಕವಾಗಬಲ್ಲದು.

2022 ಇನ್ನೇನು ಮುಗಿಯುತ್ತಾ ಬಂದಿದೆ. ಇನ್ನು ಕೇವಲ ನಾಲ್ಕು ವಾರಗಳಲ್ಲಿ ಹೊಸ ಕ್ಯಾಲೆಂಡರ್ ಅನ್ನು ಮತ್ತೊಮ್ಮೆ ನೋಡಲು ಹಾಗೂ ಮುಂಬರುವ ಹೊಸ ವರ್ಷಕ್ಕೆ ತಯಾರಿ ಮಾಡುವ ಸಮಯ ಇದಾಗಿದೆ. ಈ ವೇಳೆ ಪ್ರವಾಸ ಕೈಗೊಳ್ಳುವವರಿಗೆ ಸಾಕಷ್ಟು ಅನುಕೂಲ ಮಾಡಿಕೊಡುತ್ತದೆ. ಹೊಸ ವರ್ಷವು ದೀರ್ಘ ವಾರಾಂತ್ಯಗಳ ಅದ್ಭುತ ನಿರೀಕ್ಷೆಯನ್ನು ತರುತ್ತದೆ.

Bank Holidays in December 2022; ಡಿಸೆಂಬರ್‌ ತಿಂಗಳಿನಲ್ಲಿ 14 ದಿನಗಳ ಕಾಲ ಬ್ಯಾಂಕ್‌ಗೆ ರಜೆBank Holidays in December 2022; ಡಿಸೆಂಬರ್‌ ತಿಂಗಳಿನಲ್ಲಿ 14 ದಿನಗಳ ಕಾಲ ಬ್ಯಾಂಕ್‌ಗೆ ರಜೆ

ಇದು ಅವರ ಪ್ರಯಾಣದ ಪಟ್ಟಿಗಳನ್ನು ನೀಡಲು ಸಹಾಯ ಮಾಡುತ್ತದೆ. 2023ರಲ್ಲಿ ಅನೇಕ ಸ್ಥಳಗಳಿಗೆ ಭೇಟಿ ನೀಡಲು ಬಯಸುವವರಿಗೆ ಇದು ಒಳ್ಳೆಯ ಸುದ್ದಿಯಾಗಿದೆ. ಏಕೆಂದರೆ 2023ರ ವರ್ಷವು ದೀರ್ಘ ವಾರಾಂತ್ಯಗಳಿಂದ ತುಂಬಿರುತ್ತದೆ. ಮಾರ್ಚ್, ಏಪ್ರಿಲ್ ಮತ್ತು ಆಗಸ್ಟ್ ಐದರಿಂದ ಆರು ದಿನಗಳ ರಜಾದಿನಗಳನ್ನು ಹೊಂದಿರುತ್ತದೆ. ನೀವು ಉತ್ತಮವಾಗಿ ಯೋಜಿಸಿದರೆ 2023ರಲ್ಲಿ ಸುಮಾರು 18 ರಜಾದಿನಗಳನ್ನು ಯೋಜಿಸಬಹುದು. ಆದ್ದರಿಂದ 2023ರಲ್ಲಿ ಬರುವ ದೀರ್ಘ ವಾರಾಂತ್ಯಗಳ ಸಂಪೂರ್ಣ ಪಟ್ಟಿಯನ್ನು ನೋಡೋಣ.

1. ಡಿಸೆಂಬರ್ 31 ಶನಿವಾರ ಹೊಸ ವರ್ಷದ ಮುನ್ನಾದಿನ, ಜನವರಿ 1, ಭಾನುವಾರ ಹೊಸ ವರ್ಷದ ದಿನ. ಆದ್ದರಿಂದ, ನೀವು ಡಿಸೆಂಬರ್ 30 ಶುಕ್ರವಾರದಂದು ರಜೆ ತೆಗೆದುಕೊಂಡರೆ ನಿಮಗೆ ಮೂರು ದಿನಗಳ ರಜೆ ಸಿಗುತ್ತದೆ. ಜನವರಿ 2 ಸೋಮವಾರದಂದು ರಜೆ ತೆಗೆದುಕೊಳ್ಳುವ ಮೂಲಕ ನೀವು ಈ ರಜೆಯನ್ನು ವಿಸ್ತರಿಸಬಹುದು.

Karnataka Public Holidays : 2023ನೇ ವರ್ಷದ ಸಾರ್ವತ್ರಿಕ ರಜಾದಿನಗಳ ಪಟ್ಟಿ ಬಿಡುಗಡೆKarnataka Public Holidays : 2023ನೇ ವರ್ಷದ ಸಾರ್ವತ್ರಿಕ ರಜಾದಿನಗಳ ಪಟ್ಟಿ ಬಿಡುಗಡೆ

2. ಜನವರಿ 14 ಶನಿವಾರ ಲೋಹ್ರಿ, ಮಕರ ಸಂಕ್ರಾಂತಿ, ಜನವರಿ 15 ಭಾನುವಾರ ಪೊಂಗಲ್ ಬರಲಿದೆ. ನಾಲ್ಕು ದಿನಗಳ ರಜೆ ಪಡೆಯಲು ಜನವರಿ 13 (ಶುಕ್ರವಾರ) ಮತ್ತು ಜನವರಿ 16 (ಸೋಮವಾರ) ರಂದು ನೀವು ರಜೆ ತೆಗೆದುಕೊಳ್ಳಬಹುದು. 3. ಜನವರಿ 26, ಗುರುವಾರ ಗಣರಾಜ್ಯೋತ್ಸವ ರಜೆ ಇರಲಿದೆ. ಜನವರಿ 28 ಶನಿವಾರ ಇರಲಿದೆ. ಜನವರಿ 29 ಭಾನುವಾರ. ನಾಲ್ಕು ದಿನಗಳ ರಜೆಯನ್ನು ಮಾಡಲು ಜನವರಿ 27, ಶುಕ್ರವಾರ ರಜೆ ತೆಗೆದುಕೊಳ್ಳಬಹುದು.

ಫೆಬ್ರವರಿ 19 ಭಾನುವಾರ, ಫೆಬ್ರವರಿ 17 ಶುಕ್ರವಾರ

ಫೆಬ್ರವರಿ 19 ಭಾನುವಾರ, ಫೆಬ್ರವರಿ 17 ಶುಕ್ರವಾರ

2023ರ ಫೆಬ್ರವರಿ ದೀರ್ಘ ವಾರಾಂತ್ಯಗಳು ಇವೆ. 1. ಫೆಬ್ರವರಿ 18, ಶನಿವಾರ ಮಹಾಶಿವರಾತ್ರಿ, ಫೆಬ್ರವರಿ 19 ಭಾನುವಾರ, ಫೆಬ್ರವರಿ 17, ಶುಕ್ರವಾರದಂದು ರಜೆ ತೆಗೆದುಕೊಂಡರೆ ಮೂರು ದಿನಗಳ ರಜೆ ಸಿಗಲಿದೆ. ಮಾರ್ಚ್ ನಲ್ಲಿ ವಾರಾಂತ್ಯ ರಜೆಗಳು 1. ಮಾರ್ಚ್ 8, ಬುಧವಾರ ಹೋಳಿ ಹಬ್ಬ ಇರಲಿದೆ. ಮಾರ್ಚ್ 11 ಶನಿವಾರ ಬರಲಿದೆ. ಮಾರ್ಚ್ 12, ಭಾನುವಾರ ಇರಲಿದೆ. ಐದು ದಿನಗಳ ವಿಹಾರಕ್ಕಾಗಿ ನೀವು ಮಾರ್ಚ್ 9, ಗುರುವಾರ ಮತ್ತು ಮಾರ್ಚ್ 10, ಶುಕ್ರವಾರದಂದು ಪ್ರವಾಸ ಹೊರಡಬಹುದು.

ಏಪ್ರಿಲ್ 7 ಶುಕ್ರವಾರ ಶುಭ ಶುಕ್ರವಾರ

ಏಪ್ರಿಲ್ 7 ಶುಕ್ರವಾರ ಶುಭ ಶುಕ್ರವಾರ

ಏಪ್ರಿಲ್‌ನಲ್ಲಿ ವಾರಾಂತ್ಯದ ರಜೆಗಳು ಏಪ್ರಿಲ್ 4, ಮಂಗಳವಾರ ಮಹಾವೀರ ಜಯಂತಿ, ಏಪ್ರಿಲ್ 7 ಶುಕ್ರವಾರ ಶುಭ ಶುಕ್ರವಾರ ಇರಲಿದೆ. ಏಪ್ರಿಲ್ 8, ಶನಿವಾರ, ಏಪ್ರಿಲ್ 9, ಭಾನುವಾರ, ಆರು ದಿನಗಳ ರಜೆಗಾಗಿ ಏಪ್ರಿಲ್ 5, ಬುಧವಾರ ಮತ್ತು ಏಪ್ರಿಲ್ 6, ಗುರುವಾರದಂದು ರಜೆ ತೆಗೆದುಕೊಳ್ಳಬಹುದು. ಮೇನಲ್ಲಿ ದೀರ್ಘ ವಾರಾಂತ್ಯದ ರಜೆ ಇದೆ. ಮೇ 5, ಶುಕ್ರವಾರ ಬುದ್ಧ ಪೂರ್ಣಿಮೆ ಇದೆ. ಮೇ 6, ಶನಿವಾರ, ಮೇ 7, ಭಾನುವಾರ ರಜೆ ಇದೆ.

ಜೂನ್ 17 ಶನಿವಾರ, ಜೂನ್ 18, ಭಾನುವಾರ

ಜೂನ್ 17 ಶನಿವಾರ, ಜೂನ್ 18, ಭಾನುವಾರ

ಜೂನ್ ಮತ್ತು ಜುಲೈ 2023ರಲ್ಲಿ ದೀರ್ಘ ವಾರಾಂತ್ಯದ ರಜೆ. ಜೂನ್ 17 ಶನಿವಾರ, ಜೂನ್ 18, ಭಾನುವಾರ, ಜೂನ್ 20, ಮಂಗಳವಾರ ರಥ ಯಾತ್ರೆ (ನಿರ್ಬಂಧಿತ ರಜೆ), ನಾಲ್ಕು ದಿನಗಳವರೆಗೆ ರಜೆಯ ವಿಸ್ತರಿಸಲು ಜೂನ್ 19, ಸೋಮವಾರದಂದು ರಜೆ ತೆಗೆದುಕೊಳ್ಳಬಹುದು. ಜೂನ್ 29, ಗುರುವಾರ ಬಕ್ರಿದ್, ಜುಲೈ 1 ಶನಿವಾರ, ಜುಲೈ 2 ಭಾನುವಾರ, ಜೂನ್ 30, ಶುಕ್ರವಾರದಂದು ನಿಮ್ಮ ಪ್ರಯಾಣವನ್ನು ಯೋಜಿಸಬಹುದು.

ಆಗಸ್ಟ್ 15 ಮಂಗಳವಾರ ಸ್ವಾತಂತ್ರ್ಯ ದಿನ

ಆಗಸ್ಟ್ 15 ಮಂಗಳವಾರ ಸ್ವಾತಂತ್ರ್ಯ ದಿನ

ಆಗಸ್ಟ್ 2023ರಲ್ಲಿ ವಾರಾಂತ್ಯ ರಜೆಗಳು. ಆಗಸ್ಟ್ 12 ಶನಿವಾರ, ಆಗಸ್ಟ್ 13 ಭಾನುವಾರ, ಆಗಸ್ಟ್ 15 ಮಂಗಳವಾರ ಸ್ವಾತಂತ್ರ್ಯ ದಿನ, ಆಗಸ್ಟ್ 16 ಬುಧವಾರ ಪಾರ್ಸಿ ಹೊಸ ವರ್ಷ (ನಿರ್ಬಂಧಿತ ರಜೆ), ಐದು ದಿನಗಳ ಪ್ರವಾಸಕ್ಕೆ ಹೋಗಲು ಆಗಸ್ಟ್ 14, ಸೋಮವಾರ ರಜೆ ತೆಗೆದುಕೊಳ್ಳಬಹುದು. ಆಗಸ್ಟ್ 26 ಶನಿವಾರ, ಆಗಸ್ಟ್ 27 ಭಾನುವಾರ, ಆಗಸ್ಟ್ 29 ಮಂಗಳವಾರ ಓಣಂ (ನಿರ್ಬಂಧಿತ ರಜೆ), ಆಗಸ್ಟ್ 30 ಬುಧವಾರ ರಕ್ಷಾ ಬಂಧನ ಇದೆ. ಐದು ದಿನಗಳ ಆನಂದವನ್ನು ಆನಂದಿಸಲು ನೀವು ಆಗಸ್ಟ್ 28 ಸೋಮವಾರದಂದು ಪ್ರವಾಸ ಹೊರಡಬಹುದು.

ಸೆಪ್ಟೆಂಬರ್ 9 ಶನಿವಾರ

ಸೆಪ್ಟೆಂಬರ್ 9 ಶನಿವಾರ

ಸೆಪ್ಟೆಂಬರ್‌ನಲ್ಲಿ ಸೆಪ್ಟೆಂಬರ್ 7 ಗುರುವಾರ ಜನ್ಮಾಷ್ಟಮಿ (ನಿರ್ಬಂಧಿತ ರಜೆ), ಸೆಪ್ಟೆಂಬರ್ 9 ಶನಿವಾರ, ಸೆಪ್ಟೆಂಬರ್ 10 ಭಾನುವಾರ, ಸೆಪ್ಟೆಂಬರ್ 8 ಸೋಮವಾರ ರಜೆ ತೆಗೆದುಕೊಳ್ಳುವ ಮೂಲಕ ನೀವು ನಾಲ್ಕು ದಿನಗಳ ಸುದೀರ್ಘ ರಜೆ ತೆಗೆದುಕೊಳ್ಳಬಹುದು. ಸೆಪ್ಟೆಂಬರ್ 16 ಶನಿವಾರ, ಸೆಪ್ಟೆಂಬರ್ 17 ಭಾನುವಾರ, ಸೆಪ್ಟೆಂಬರ್ 19 ಮಂಗಳವಾರ ಗಣೇಶ ಚತುರ್ಥಿ (ನಿರ್ಬಂಧಿತ ರಜೆ), ನಾಲ್ಕು ದಿನಗಳ ರಜೆಗಾಗಿ ಸೆಪ್ಟೆಂಬರ್ 18 ಸೋಮವಾರ ರಜೆ ತೆಗೆದುಕೊಳ್ಳಬಹುದು.

ಅಕ್ಟೋಬರ್ 2 ಸೋಮವಾರ ಗಾಂಧಿ ಜಯಂತಿ

ಅಕ್ಟೋಬರ್ 2 ಸೋಮವಾರ ಗಾಂಧಿ ಜಯಂತಿ

ಅಕ್ಟೋಬರ್‌ನಲ್ಲಿ ಸೆಪ್ಟೆಂಬರ್ 30 ಶನಿವಾರ, ಅಕ್ಟೋಬರ್ 1 ಭಾನುವಾರ, ಅಕ್ಟೋಬರ್ 2 ಸೋಮವಾರ ಗಾಂಧಿ ಜಯಂತಿ, ಅಕ್ಟೋಬರ್ 21 ಶನಿವಾರ, ಅಕ್ಟೋಬರ್ 22 ಭಾನುವಾರ, ಅಕ್ಟೋಬರ್ 24 ಮಂಗಳವಾರ ದಸರಾ, ಅಕ್ಟೋಬರ್ 23 ಸೋಮವಾರದಂದು ರಜೆ ತೆಗೆದುಕೊಳ್ಳಬಹುದು. ನವೆಂಬರ್ 11 ಶನಿವಾರ, ನವೆಂಬರ್ 12 ಭಾನುವಾರ ದೀಪಾವಳಿ ರಜೆ ಇರಲಿದೆ. ನವೆಂಬರ್ 13 ಸೋಮವಾರ ಗೋವರ್ಧನ ಪೂಜೆ (ನಿರ್ಬಂಧಿತ ರಜೆ) ಇರಲಿದೆ. ನವೆಂಬರ್ 25 ಶನಿವಾರ, ನವೆಂಬರ್ 26 ಭಾನುವಾರ, ನವೆಂಬರ್ 27 ಸೋಮವಾರ ಗುರುನಾನಕ್ ಜಯಂತಿ, ಡಿಸೆಂಬರ್ 23 ಶನಿವಾರ, ಡಿಸೆಂಬರ್ 24 ಭಾನುವಾರ, ಡಿಸೆಂಬರ್ 25 ಸೋಮವಾರ ಕ್ರಿಸ್ಮಸ್, ದೀರ್ಘವಾದ ವಾರಾಂತ್ಯದ ರಜೆ ಆನಂದಿಸಲು ನೀವು ಡಿಸೆಂಬರ್ 22 ಶುಕ್ರವಾರದಂದು ರಜೆ ಪಡೆಯಬಹುದು.

English summary
Long weekend holidays are coming in 2023. You will get more holidays in New Year and their list is given here in full. This can help you plan your vacations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X