ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ನೌ ವಿಎಂಆರ್ ಸಮೀಕ್ಷೆ: ಎನ್ಡಿಎಗೆ ಮುನ್ನಡೆ, ಯುಪಿಎ ಹಿನ್ನಡೆ

|
Google Oneindia Kannada News

ನವದೆಹಲಿ, ಮೇ 19: ಲೋಕಸಭೆ ಚುನಾವಣೆ 2019ರ ಏಳು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಇನ್ನೇನ್ನಿದ್ದರೂ ಮತದಾನೋತ್ತರ ಸಮೀಕ್ಷೆ, ಮತ ಎಣಿಕೆ ಹಾಗೂ ಫಲಿತಾಂಶ ಎದುರು ನೋಡುವ ಕಾಲ.

ಕೇಂದ್ರದಲ್ಲಿ ಅಧಿಕಾರವನ್ನು ಯಾರು ಸ್ಥಾಪಿಸಲಿದ್ದಾರೆ? ಭಾರತದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ? ಐದು ರಾಜ್ಯಗಳಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ? ಉಪ ಚುನಾವಣೆಗಳಲ್ಲಿ ಯಾರ ಕೈ ಮೇಲಾಗಲಿದೆ? ಎಂಬ ಪ್ರಶ್ನೆಗೆ 90ಕೋಟಿಗೂ ಅಧಿಕ ಮತದಾರರು ನೀಡಿದ ಅಂತಿಮ ತೀರ್ಪು ಮೇ 23ರಂದು ಹೊರ ಬರಲಿದೆ.

ಟೈಮ್ಸ್ ನೌ ವಿಎಂಆರ್ : ಕರ್ನಾಟಕದಲ್ಲಿ ಬಿಜೆಪಿ, ಕೈ-ತೆನೆ ಗತಿ? ಟೈಮ್ಸ್ ನೌ ವಿಎಂಆರ್ : ಕರ್ನಾಟಕದಲ್ಲಿ ಬಿಜೆಪಿ, ಕೈ-ತೆನೆ ಗತಿ?

ಟೈಮ್ಸ್ ನೌ -ವಿಎಂಆರ್ ಸಂಸ್ಥೆ ಟೈಮ್ಸ್ ನೌ ಹಾಗೂ ವಿಎಂಆರ್ ಸಂಸ್ಥೆಯು ಹಂತ ಹಂತವಾಗಿ ಸಮೀಕ್ಷೆ ನಡೆಸಿತ್ತು. ವರ್ಷಾರಂಭದಲ್ಲಿ ನಡೆಸಿದ ಮೊದಲ ಸಮೀಕ್ಷೆಗೂ ಇಂದು ಬಂದಿರುವ ಇತ್ತೀಚಿನ ಸಮೀಕ್ಷೆಗೂ ಭಾರಿ ವ್ಯತ್ಯಾಸ ಕಂಡು ಬಂದಿತ್ತು.

ಜನವರಿ ತಿಂಗಳಿನಲ್ಲಿ ಚುನಾವಣೆ ನಡೆದರೆ ಏನಾಗಬಹುದು ಎಂದು ನಡೆಸಿದ್ದ ಸಮೀಕ್ಷೆಯಂತೆ ಎನ್ಡಿಎಗೆ ಮ್ಯಾಜಿಕ್ ನಂಬರ್ ದಾಟಲು 21 ಸ್ಥಾನಗಳು ಕಡಿಮೆ ಬರಲಿವೆ ಎಂದು ಸಮೀಕ್ಷೆ ಹೇಳಿತ್ತು. ಆದರೆ, ಮಾರ್ಚ್, ಏಪ್ರಿಲ್ ತಿಂಗಳುಗಳ ಸಮೀಕ್ಷೆಯಲ್ಲಿ ಎನ್ಡಿಎಗೆ ಬಹುಮತ ಖಚಿತ ಎನ್ನಲಾಗಿತ್ತು.

ಲೋಕಸಮರ 2019ರ ಸಮಗ್ರ ಎಕ್ಸಿಟ್ ಪೋಲ್ ಗಳ ಸಂಗ್ರಹ ಪುಟಲೋಕಸಮರ 2019ರ ಸಮಗ್ರ ಎಕ್ಸಿಟ್ ಪೋಲ್ ಗಳ ಸಂಗ್ರಹ ಪುಟ

Times Now- VMR ಎಕ್ಸಿಟ್ ಪೋಲ್ ಅಂತಿಮ ಫಲಿತಾಂಶ: ಎನ್ಡಿಎ 306, ಯುಪಿಎ 132, ಇತರೆ 104

ಟೈಮ್ಸ್ ನೌ ವಿಎಂಆರ್ ಎಕ್ಸಿಟ್ ಪೋಲ್ 2019

ಟೈಮ್ಸ್ ನೌ ವಿಎಂಆರ್ ಎಕ್ಸಿಟ್ ಪೋಲ್ 2019

2014ರಲ್ಲಿ ಚುನಾವಣೆ ಫಲಿತಾಂಶ : ಎನ್ಡಿಎ 336, ಯುಪಿಎ 60, ಇತರೆ 147.

2019ರ ಲೋಕಸಭೆ ಚುನಾವಣೆಗಾಗಿ ಟೈಮ್ಸ್ ನೌ ವಿಎಂಆರ್ ಸಮೀಕ್ಷೆ ಮಾರ್ಚ್ 22 ರಿಂದ ಏಪ್ರಿಲ್ 04ರ ತನಕದ ಲೆಕ್ಕಾಚಾರದಂತೆ ಎನ್ಡಿಎ : 279 ಯುಪಿಎ : 149 ಇತರೆ : 115 ಮ್ಯಾಜಿಕ್ ನಂಬರ್ 272.

ಟೈಮ್ಸ್ ನೌ ಎಕ್ಸಿಟ್ ಪೋಲ್ ಸಮೀಕ್ಷೆ 2019: ಏಪ್ರಿಲ್ 11 ರಿಂದ ಮೇ 19ರ ತನಕ 3,211 ವಿಶಿಷ್ಟ ತಾಣಗಳಲ್ಲಿ ಸಂಗ್ರಹಿಸಲಾದ ಮತದಾರರ ಅಭಿಪ್ರಾಯ ಸಂಗ್ರಹದ ವರದಿ ಇದಾಗಿದೆ.

Times Now- VMR ಎಕ್ಸಿಟ್ ಪೋಲ್ ಅಂತಿಮ ಫಲಿತಾಂಶ: ಎನ್ಡಿಎ 306, ಯುಪಿಎ 132, ಇತರೆ 104

ಉತ್ತರಪ್ರದೇಶ

ಉತ್ತರಪ್ರದೇಶ

ಎನ್ಡಿಎ 73 ರಿಂದ 56ಕ್ಕೆ ಕುಸಿತ, ಎಸ್ ಪಿ, ಬಿಎಸ್ಪಿ ಆರ್ ಎಲ್ ಡಿ ಮೈತ್ರಿ 5 ರಿಂದ 20ಕ್ಕೇರಿಕೆ.

ಶೇಕಡಾವಾರು ಮತ ಗಳಿಕೆ :
ಬಿಜೆಪಿ: 2019ರಲ್ಲಿ 44.8%, 2014ರಲ್ಲಿ 43.3%
ಮಹಾಘಟಬಂದನ್ : 2019ರಲ್ಲಿ 44.8%, 2014ರಲ್ಲಿ 43.3%
ಕಾಂಗ್ರೆಸ್ : 2019ರಲ್ಲಿ 9.3%, 2014ರಲ್ಲಿ 8.4%
ಇತರೆ : 2019ರಲ್ಲಿ 5.7%, 2014ರಲ್ಲಿ 5.65%

ಮಹಾರಾಷ್ಟ್ರ

ಮಹಾರಾಷ್ಟ್ರ

2019ರಲ್ಲಿ ಬಿಜೆಪಿ + : 38, ಕಾಂಗ್ರೆಸ್ + 10
2014ರಲ್ಲಿ ಬಿಜೆಪಿ + 42, ಕಾಂಗ್ರೆಸ್ + 6

ಶೇಕಡಾವಾರು ಮತಗಳಿಕೆ
2019ರಲ್ಲಿ ಬಿಜೆಪಿ + 48.6%, ಕಾಂಗ್ರೆಸ್ + 36.5%, ಇತರೆ 14.9%
2014ರಲ್ಲಿ ಬಿಜೆಪಿ+ 51.3%, ಕಾಂಗ್ರೆಸ್ + 34.1%. ಇತರೆ 14.6%

ಬಿಹಾರ 40

ಬಿಹಾರ 40

2019ರಲ್ಲಿ ಬಿಜೆಪಿ ಮೈತ್ರಿಕೂಟ : 30, ಕಾಂಗ್ರೆಸ್ : 10

ಶೇಕಡಾವಾರು ಮತ ಗಳಿಕೆ
ಬಿಜೆಪಿ+: 48.52% (2014ರಲ್ಲಿ 51.5%)
ಕಾಂಗ್ರೆಸ್ + : 42.78% (2014ರಲ್ಲಿ 32.8%)

ಗುಜರಾತ್

ಗುಜರಾತ್

ಶೇಕಡಾವಾರು ಫಲಿತಾಂಶ 2014: ಕಾಂಗ್ರೆಸ್ ಪ್ಲಸ್ ಶೇ 32.9, ಬಿಜೆಪಿ ಪ್ಲಸ್ ಶೇ 59.1, ಇತರೆ ಶೇ 8
ಏಕ್ಸಿಟ್ ಪೋಲ್ 2019: ಕಾಂಗ್ರೆಸ್ ಪ್ಲಸ್ ಶೇ 39.3, ಬಿಜೆಪಿ ಪ್ಲಸ್ ಶೇ 53.1, ಇತರೆ ಶೇ 9.50

ಸೀಟು ಗಳಿಕೆ (26) 2014: ಕಾಂಗ್ರೆಸ್ ಪ್ಲಸ್ 0, ಬಿಜೆಪಿ ಪ್ಲಸ್ 26, ಇತರೆ 0
ಎಕ್ಸಿಟ್ ಪೋಲ್ 2019 : ಕಾಂಗ್ರೆಸ್ ಪ್ಲಸ್ 3, ಬಿಜೆಪಿ 26, ಇತರೆ 0

ಕರ್ನಾಟಕ(28)

ಕರ್ನಾಟಕ(28)

ಕರ್ನಾಟಕ(28)
ಟೈಮ್ಸ್ ನೌ ವಿಎಂಆರ್ 2019: ಬಿಜೆಪಿ 21, ಕಾಂಗ್ರೆಸ್ -ಜೆಡಿಎಸ್ : 7, ಇತರೆ 0. ಈ ಮೂಲಕ ಮಂಡ್ಯದಲ್ಲಿ ಸುಮಲತಾ ಗೆಲ್ಲುವುದಿಲ್ಲ ಎಂದು ಹೇಳಲಾಗಿದೆ.

English summary
Exit Poll results 2019: Times Now and VMR survey post poll analysis has shown National Democratic Alliance (NDA) will win simple majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X