• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭೆ ಹೊಸ ಸಂಸದರ ಪೈಕಿ ಶೇ 43ರಷ್ಟು ಮಂದಿ ಪದವೀಧರರು

|

ಶಾಸಕರು, ಸಂಸದರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಪದವಿ ಹೊಂದಿರುವುದು ಕಡ್ಡಾಯ ಮಾಡಿದರೆ ಹೇಗೆ ಎಂಬ ಚರ್ಚೆ ಬಹುಕಾಲದಿಂದ ಜಾರಿಯಲ್ಲಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಯ್ಕೆಯಾಗಿರುವ ಸಂಸದರ ಪೈಕಿ ಶೇ 43ರಷ್ಟು ಮಂದಿ ಪದವೀಧರರಿದ್ದಾರೆ.

ಶೇ 25ರಷ್ಟು ಮಂದಿ ಸ್ನಾತಕೋತ್ತರ ಪದವೀಧರರು ಹಾಗೂ ಶೇ 4ರಷ್ಟು ಮಂದಿ ಡಾಕ್ಟರೇಟ್ ಪಡೆದಿದ್ದಾರೆ ಎಂದು ಪಿಆರ್ ಎಸ್ ಲೆಜಿಸ್ಲೇಟಿವ್ ರಿಸರ್ಚ್ ಸಂಸ್ಥೆ ತಿಳಿಸಿದೆ.

ಲೋಕಸಭೆ ಚುನಾವಣೆ ಫಲಿತಾಂಶ 2019: ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

17ನೇ ಲೋಕಸಭೆಗೆ ಆಯ್ಕೆಯಾಗಿರುವ ಸರಿ ಸುಮಾರು 394 ಸಂಸದರು ಕನಿಷ್ಠ ವಿದ್ಯಾರ್ಹತೆ ಪದವಿ ಹೊಂದಿದ್ದಾರೆ. ಶೇ 27ರಷ್ಟು ಮಂದಿ 12ನೇ ತರಗತಿ ತನಕ ಓದಿದ್ದಾರೆ, 16ನೇ ಲೋಕಸಭೆಯಲ್ಲಿ ಶೇ 20ರಷ್ಟು ಮಂದಿ 12ನೇ ತರಗತಿ ತನಕ ಓದಿದವರು ಇದ್ದರು.

2014ರಲ್ಲಿ ಶೇ15ರಷ್ಟು ಪದವಿಧರರು, 15ನೇ ಲೋಕಸಭೆಯಲ್ಲಿ ಶೇ 3ರಷ್ಟು ಮಂದಿ ಇದ್ದರು. 2019ರಲ್ಲಿ ತೆಲುಗುದೇಶಂ ಪಕ್ಷದ ಸಂಸದರೊಬ್ಬರು ಅನಕ್ಷರಸ್ಥ ಎಂದು ಘೋಷಿಸಿಕೊಂಡಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ: ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

2019ರಲ್ಲಿ ಬಿಜೆಪಿ ನೇತೃತ್ವ ಎನ್ಡಿಎ 353 ಸ್ಥಾನಗಳನ್ನು ಗೆದ್ದು ಅಧಿಕಾರ ಸ್ಥಾಪಿಸಲು ಮುಂದಾಗಿದೆ. ಬಿಜೆಪಿ 303 ಸೀಟು ಗಳಿಸಿದೆ.

English summary
The importance of education for someone who represents a large number of people in Parliament cannot be overemphasised. Among the newly-elected MPs, 43 per cent are graduates, 25 per cent post graduates, and 4 per cent are doctorates, according to data collated by the PRS Legislative Research.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X