ಇದು ಮಾರುಕಟ್ಟೆಗೆ ಲಗ್ಗೆ ಇಡಲಿವೆ ಲಾವಾ, ಮೋಟೊ ಕಂಪನಿಯ ಮೊಬೈಲ್
ಭಾರತದ ಮಾರುಕಟ್ಟೆಯಲ್ಲಿ ಚೀನಿ ಕಂಪನಿಯ ಮೊಬೈಲ್‌ಗಳು ಪಾರುಪತ್ಯ ಮೆರೆದಿವೆ. ಈ ಮಾರುಕಟ್ಟೆಗೆ ದಿನವೂ ಒಂದಿಲ್ಲ ಒಂದು ಹೊಸ ತಂತ್ರಜ್ಞಾನ ಹೊಂದಿರುವ ಮೊಬೈಲ್‌ಗಳು ಲಾಂಚ್ ಆಗುತ್ತವೆ. ಬುಧವಾರವೂ ಎರಡು ಮೊಬೈಲ್ ಕಂಪನಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ಲಾಂಚ್ ಮಾಡುತ್ತಿವೆ.
ಈಗಾಗಲೇ ಮೊಬೈಲ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಮೊಟೊರೊಲಾ ಹಾಗೂ ಲಾವಾ ಕಂಪನಿಗಳು ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನ್ನು ಟಾರ್ಗೆಟ್ ಮಾಡಿವೆ. ಈ ಬಾರಿಯೂ ಈ ಎರಡೂ ಕಂಪನಿಗಳು ಭರ್ಜರಿ ಫೀಚರ್ಸ್ ಹೊಂದಿರುವ ಕ್ಲಾಸಿಕ್ ಲುಕ್ ಮೊಬೈಲ್ ಲಾಂಚ್ ಮಾಡಲು ತುದಿಗಾಲಿನಲ್ಲಿ ನಿಂತಿವೆ. Moto g85 5G ಹಾಗೂ Lava Blaze X 5G ನೂತನ ಫೋನ್‌ಗಳನ್ನು ಲಾಂಚ್ ಮಾಡಲಿವೆ.

ಹೇಗಿದೆ ಮೊಟೊ ಜಿ 85 5ಜಿ?
ಮೊಟೊ ಜಿ 85 5ಜಿ ಫೋನ್ 6.7 ಇಂಚಿನ ಪಿಓಎಲ್‌ಇಡಿ ಕರ್ವಡ್ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ 120Hz ರಿಫ್ರೆಶ್ ದರವನ್ನು ಹೊಂದಿದ್ದು, 1600 ನೀಟ್ಸ್ ಗರಿಷ್ಠ ಹೊಳಪು ಹೊಂದಿದೆ. ಈ ಮೊಬೈಲ್ 172 ಗ್ರಾಮ್ ತೂಕವನ್ನು ಹೊಂದಿದೆ. ಅಲ್ಲದೆ 7.59 ಎಂಎಂ ಥಿಕ್‌ನೆಸ್ ಹೊಂದಿದೆ. ಈ ಮೊಬೈಲ್ ನೀಲಿ, ಗ್ರೇ, ಓಲಿವ್ ಗ್ರೀನ್ ಬಣ್ಣಗಲ್ಲಿ ಹೊರ ಬರಲಿದೆ.
ಈ ಮೊಬೈಲ್ 2 ವರ್ಷದ ಅಪ್‌ಗ್ರೇಡ್ ನೀಡಲಿದೆ. ಮೊಟೊ ಜಿ 85 5ಜಿ ಮೊಬೈಲ್ ಆಂಡ್ರಾಯ್ಡ್ 14 ಅನ್ನು ಬೆಂಬಲಿಸುತ್ತದೆ. ಈ ಮೊಬೈಲ್‌ನಲ್ಲಿ ಸ್ನ್ಯಾಪ್ ಡ್ರ್ಯಾಗನ್ 6ಎಸ್ ಜನರೇಷನ್ 3 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ ಎರಡು ರೂಪಾಂತರಗಳಲ್ಲಿ ಸಿಗಲಿದೆ. 12 ಜಿಬಿ ಹಾಗೂ 256 ಇಂಟರ್ನಲ್ ಸ್ಟೋರೇಜ್ ಹಾಗೂ 8 ಜಿಬಿ ಹಾಗೂ 128 ಇಂಟರ್ನಲ್ ಸ್ಟೋರೇಜ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ.
ಈ ಮೊಬೈಲ್‌ನಲ್ಲಿ 5000 ವ್ಯಾಟ್ ಬ್ಯಾಟರಿ, 33 ಟರ್ಬ ಪವರ್ ಚಾರ್ಜರ್ ಹೊಂದಿದೆ. ಈ ಮೊಬೈಲ್ ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಪ್ರೈಮರಿ ಕ್ಯಾಮೆರಾ, 50 ಮೆಗಾ ಪಿಕ್ಸಲ್ ಹೊಂದಿದೆ. 32 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿವೆ ಲಾವಾ ಮೊಬೈಲ್?
ಲಾವಾ ಬ್ಲೇಜ್ ಎಕ್ಸ್ 5 ಜಿ ಮೊಬೈಲ್ ಸಖತ್ ಲುಕ್ ಹೊಂದಿದೆ. ಈ ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120 HZ ರಿಫ್ರೆಶ್ ರೆಟ್ ದರವನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ನಲ್ಲಿ MediaTek ಡೈಮೆನ್ಸಿಟಿ 7050 ಪ್ರೊಸೆಸರ್ನೊಂದಿಗೆ ಬರಲಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಸಿಗಲಿದೆ. ಈ ಮೊಬೈಲ್‌ನಲ್ಲಿ ಸೈಡ್ ಮೌಂಟೇನಡ್ ಫಿಂಗರ್ ಪ್ರಿಂಟ್ ಹೊಂದಿದೆ.
ಈ ಫೋನ್‌ನಲ್ಲಿ 5000mAh ದೊಡ್ಡ ಬ್ಯಾಟರಿ ಹೊಂದಿದೆ. ಇದರಿಂದ ನೀವು ಒಮ್ಮೆ ಚಾರ್ಜ್ ಮಾಡುವ ಮೂಲಕ ಇಡೀ ದಿನ ಬಳಸಬಹುದು. ವೇಗವಾಗಿ ಚಾರ್ಜಿಂಗ್ ಮಾಡಲು 33 ವ್ಯಾಟ್ ಚಾರ್ಜಿಂಗ್ ಸೌಲಭ್ಯ ಇದೆ.
ಕ್ಯಾಮೆರಾ ಹೇಗಿದೆ?
ನಿಮ್ಮ ಕೆಲಸವನ್ನು ಸುಲಭವಾಗಿ ಮಾಡಬಹುದು. ಫೋನ್ ಅನ್ನು ತ್ವರಿತವಾಗಿ ಚಾರ್ಜ್ ಮಾಡಲು, ಇದು 33W ವೇಗದ ಚಾರ್ಜಿಂಗ್ ಅನ್ನು ಪಡೆಯುತ್ತದೆ. ಈ ಮೊಬೈಲ್ ಹಿಂಭಾಗದಲ್ಲಿ ಡ್ಯೂಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಪ್ರೈಮರಿ ಕ್ಯಾಮೆರಾ 64 ಮೆಗಾ ಪಿಕ್ಸಲ್ ಹೊಂದಿದೆ. ಇನ್ನು ಮುಂಭಾಗದಲ್ಲಿ 32 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಈ ಕ್ಯಾಮೆರಾ ಸಹಾಯದಿಂದ ಸೆಲ್ಪಿ ಹಾಗೂ ವಿಡಿಯೋಗಳನ್ನು ಬಳಸಬಹುದು.
ಈ ಫೋನ್ ಮೂರು ರೂಪಾಂತರಗಳನ್ನು ಕಾಣಬಹುದು. 4GB, 6GB ಮತ್ತು 8GB RAM ಆಯ್ಕೆಗಳೊಂದಿಗೆ ಭಾರತದಲ್ಲಿ ಬಿಡುಗಡೆ ಆಗಲಿದೆ. ಕಂಪನಿಯು 256GB ವರೆಗೆ ಇಂಟರ್ನಲ್ ಸ್ಟೋರೇಜ್ ಹೊಂದಿರಲಿದೆ. ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ರೂ.15 ಸಾವಿರಕ್ಕಿಂತ ಕಡಿಮೆ ಬಜೆಟ್‌ನಲ್ಲಿ ನೀಡಬಹುದು.












Click it and Unblock the Notifications