ಟಾಟಾ ನೆಕ್ಸಾನ್ ಹೊಸ ರೂಪಾಂತರದ ದರ, ವಿಶೇಷತೆಗಳನ್ನು ತಿಳಿಯಿರಿ

Tata Nexon CNG: ಗ್ರಾಹಕರ ಕೈಗೆಟಕುವ ದರದಲ್ಲಿ ಎಲ್ಲಾ ಕಂಪನಿಗಳು ಸ್ಪರ್ಧೆಯ ರೀತಿಯಲ್ಲಿ ಹೊಸ ಹೊಸ ಮಾದರಿಯ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಅದರಲ್ಲೂ ಟಾಟಾ ಕಂಪನಿಯ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಇದೀಗ ತನ್ನ ನೆಕ್ಸಾನ್ ಅನ್ನು ಸಿಎನ್‌ಜಿ ರೂಪಾಂತರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಹಾಗಾದರೆ ಇದರ ವಿಶೇಷತೆ ದರಗಳನ್ನು ಇಲ್ಲಿ ತಿಳಿಯಿರಿ.

ಟಾಟಾ ಮೋಟಾರ್ಸ್ ಈ ವರ್ಷದ ಹಬ್ಬದ ಋತುವಿನಲ್ಲಿ ನೆಕ್ಸಾನ್ ಸಿಎನ್‌ಜಿಯನ್ನು ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಿದೆ. ಸದ್ಯ ಇದೀಗ ಮಾರುತಿ ಸುಜುಕಿ ಬ್ರೆಝಾ ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಪೈಪೋಟಿ ನೀಡುತ್ತಿದೆ. ಆದರೆ ಈಗ ಟಾಟಾ ಕಂಪನಿಯು ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಿಎನ್‌ಜಿ ಎಸ್‌ಯುವಿ ವಿಭಾಗದಲ್ಲಿ ತೋರಲು ಸಜ್ಜಾಗಿದೆ.

Know Tata Nexon New Variant Price and Features

ಈ ಕಾರಿನ ವಿಶೇಷತೆಗಳೇನು?: ಇದೀಗ ಟಾಟಾ ಮೋಟಾರ್ಸ್ ತನ್ನ ಎಸ್‌ಯುವಿ ಕೂಪೆ ಕರ್ವ್‌ನ ಡೀಸೆಲ್‌, ಪೆಟ್ರೋಲ್ ರೂಪಾಂತರಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಟಾಟಾ ಕರ್ವ್‌ನ ಪೆಟ್ರೋಲ್-ಡೀಸೆಲ್ ಮಾದರಿಯ ಬೆಲೆ ಸೆಪ್ಟೆಂಬರ್ 2ರಂದು ಬಹಿರಂಗವಾಗಲಿದೆ. ಬಳಿಕ ನೆಕ್ಸಾನ್ ಸಿಎನ್‌​​ಜಿ ಅನಾವರಣಗೊಳ್ಳಲಿದ್ದು, ಈ ಸಿಎನ್‌ಜಿ ಎಸ್‌ಯುವಿಯನ್ನು ಈ ವರ್ಷ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು.

ಪಂಚ್ ಸಿಎನ್‌ಜಿಯಂತೆ ಡ್ಯುಯಲ್ ಸಿಎನ್‌ಜಿ ಸಿಲಿಂಡರ್‌ಗಳು ಇದರಲ್ಲಿ ಕಂಡುಬರುತ್ತವೆ. ಆದ್ದರಿಂದ ಗ್ರಾಹಕರಿಗೆ ಯಾವುದೇ ಬೂಟ್ ಸ್ಪೇಸ್ ಸಮಸ್ಯೆ ಆಗುವುದಿಲ್ಲ ಎಂದು ಕಂಪನಿ ತಿಳಿಸಿದೆ. ನೆಕ್ಸಾನ್ ಸಿಎನ್‌ಜಿಯ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ರೂಪಾಂತರವನ್ನು ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ. ಆದರೆ ಈಗ ಇದು ಎಎಮ್‌ಟಿ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಯನ್ನು ಸಹ ಪಡೆಯಲಿದೆ ಎಂದು ತಿಳಿದುಬಂದಿದೆ.

ಟಾಟಾ ನೆಕ್ಸಾನ್ ಸಿಎನ್‌ಜಿಯನ್ನು 1.2 ಲೀಟರ್ ಟರ್ಬೋಚಾರ್ಜ್ಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುವುದು ಮತ್ತು ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿರುವ ದೇಶದ ಮೊದಲ ಸಿಎನ್‌ಜಿ ಎಸ್‌ಯುವಿ ಆಗಿದೆ. ಟಾಟಾ ಮೋಟಾರ್ಸ್ ತನ್ನ ಸಿಎನ್‌ಜಿ ಕಾರುಗಳಲ್ಲಿ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತದೆ. ಆದ್ದರಿಂದ ನೆಕ್ಸಾನ್ ಸಿಎನ್‌ಜಿ ಅತ್ಯಂತ ಸುರಕ್ಷಿತ ಕಾರಾಗಿರುತ್ತದೆ ಎಂದು ಹೇಳಲಾಗುತ್ತಿದೆ.

ಟಾಟಾ ನೆಕ್ಸಾನ್ ಸಿಎನ್‌ಜಿಯಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360 ಡಿಗ್ರಿ ಕ್ಯಾಮೆರಾ, ಮಲ್ಟಿಪಲ್ ಏರ್‌ಬ್ಯಾಗ್‌ಗಳು ಮತ್ತು 5 ಸ್ಟಾರ್ ಸುರಕ್ಷತಾ ವೈಶಿಷ್ಟ್ಯಗಳನ್ನು ಇದರಲ್ಲಿ ಕಾಣಬಹುದಾಗಿದ್ದು, ಇದರ ದರ ಬಹಿರಂಗವಾಗಬೇಕಿದೆ. ಒಟ್ಟಿನಲ್ಲಿ ಟಾಟಾ ಕಂಪನಿ ತಾವೇನೂ ಯಾವ ಕಂಪನಿಗಳಿಗೂ ಕಡಿಮೆಯಿಲ್ಲವೆಂಬಂತೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಾರುಗಳನ್ನು ಮಾರುಕಟ್ಟೆಗೆ ತರುತ್ತಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+