ಇನ್ನೋವಾ ರೀತಿಯಲ್ಲೇ ಮಾರುಕಟ್ಟೆಗೆ ಬರಲಿರುವ ಮಾರುತಿಯ ಹೊಸ 7 ಸೀಟರ್ ಕಾರಿನ ದರ, ವಿಶೇಷತೆ ತಿಳಿಯಿರಿ
Maruti XL7: ಭಾರತದಲ್ಲಿ ಕಾರುಗಳ ಅತೀ ಹೆಚ್ಚು ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿ ಮೊದಲ ಸ್ಥಾನವನ್ನು ಅಲಂಕರಿಸಿದೆ. ಈ ಕಂಪನಿಯು ಹೊಸ ವಿನ್ಯಾಸದಲ್ಲಿ, ಕೈಗೆಟಕುವ ದರದಲ್ಲಿ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಇದ್ದು, ಈ ಮೂಲಕ ಗ್ರಾಹಕರನ್ನು ತನ್ನಡೆಗೆ ಸೆಳೆಯುತ್ತಲೇ ಇದೆ. ಇದೀಗ ಮಾರುತಿ ಕಂಪನಿ 7 ಸೀಟರ್‌ನ ಹೊಸ ಕಾರು ಇನ್ನೋವಾಗೆ ಪ್ರಬಲ ಪೈಪೋಟಿ ಆಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಇದರ ದರ, ವಿಶೇಷತೆಗಳನ್ನು ಇಲ್ಲಿ ತಿಳಿಯಿರಿ.
ಮಾರುಪಿ XL7 ಕಾರಿನಲ್ಲಿ ಯೂಸರ್ ಫ್ರೆಂಡ್ಲಿ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಕಾಣಬಹುದಾಗಿದೆ. ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಡ್ಯುಯಲ್ ಏರ್ ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಸನ್ರೂಫ್ ಅನ್ನು ಸಹ ಇದು ಒಳಗೊಂಡಿದೆ.

ಇದರಲ್ಲಿ 1.5 ಲೀಟರ್ K15 ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಕೆ ಮಾಡಲಾಗಿದೆ. 5 ಸ್ಪೀಡ್ ಮಾನ್ಯುಯಲ್ ಅಥವಾ 4 ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಒಳಗೊಂಡಿರಲಿದೆ. ಏಳು ಇಂಚಿನ ಸ್ಮಾರ್ಟ್ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಕೂಡ ಈ ಕಾರಿನಲ್ಲಿ ಕಾಣಬಹುದಾಗಿದೆ.
Maruti XL7 ಕಾರು ಇನ್ನೋವಾ ಕಾರಿನ ವಿನ್ಯಾಸದಲ್ಲಿ ಇರಲಿದ್ದು, ಇದು ಈ ಕಾರಿಗೆ ಪ್ರಬಲ ಪೈಪೋಟಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರಲ್ಲಿ ಹೆಚ್ಚು ಸ್ಪೇಸ್ ಹಾಗೂ ಉತ್ತಮ ಸೌಲಭ್ಯಗಳನ್ನು ಕಾಣಬಹುದಾಗಿದೆ. ಒಂದಿ ಫ್ಯಾಮಿಲಿ ಪ್ರಯಾಣ ಮಾಡಲು ಹೇಳಿ ಮಾಡಿಸಿದ ಕಾರು ಇದಾಗಿದೆ. ಈ ಕಾರಿನ ಬೇಸ್ ವೇರಿಯಂಟ್ 11.61 ಲಕ್ಷಗಳಿಂದ ಪ್ರಾರಂಭವಾಗಿ ಟಾಪ್ ವೇರಿಯಂಟ್ 14.75 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನಿಮಗೆ ಲಭ್ಯವಿರಲಿದೆ ಎಂದು ತಿಳಿದುಬಂದಿದೆ.
ಅತ್ಯಾಧುನಿಕ ತಂತ್ರಜ್ಞಾಣದ ಜೊತೆಗೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಬೆಲೆಯನ್ನು ನಿಗದಿಪಡಿಸಲಾಗಿದೆ. ಇನ್ನು ಇದು ಇನ್ನೋವಾ ಕಾರಿಗೆ ಪ್ರಬಲ ಪೈಪೋಟಿ ನೀಡಲಿದೆ ಎನ್ನಲಾಗುತ್ತಿದೆ.
ಎಂಜಿ ಎಲೆಕ್ಟ್ರಿಕ್ ಕಾರಿನ ದರ, ವಿಶೇಷತೆ: ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಲಗ್ಗೆ ಇಡುತ್ತಿದ್ದಂತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಪೈಪೋಟೀ ಹೆಚ್ಚಾಗಿದೆ. ಕಡಿಮೆ ದರದಲ್ಲಿ ಉತ್ತಮ ಸೌಲಭ್ಯಗಳನ್ನೊಳಗೊಂಡ ಕಾರು, ಬೈಕ್‌ಗಳು ಎಲೆಕ್ಟ್ರಿಕ್ ವಿಭಾಗದಲ್ಲಿ ಬಿಡುಗಡೆಯಾಗುತ್ತಿವೆ. ಇದರಿಂದ ಇದೀಗ ಎಲ್ಲಾ ಕಂಪನಿಗಳು ತಾವೇನು ಕಡಿಮೆಯಿಲ್ಲವೆಂಬಂತೆ ಹೊಸ ಹೊಸ ಮಾದರಿಯಲ್ಲಿ ವಾಹನಗಳನ್ನು ಮಾರುಕಟ್ಟೆಗೆ ತರುವ ಮೂಲಕ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿವೆ. ಹಾಗೆಯೇ ಇದೀಗ ಎಂಜಿ ಮೋಟಾರ್ ಕಂಪನಿಯು ಕೂಡ ಹೊಸ ಎಲೆಕ್ಟ್ರಿಕ್ ಕಾರು ಬಿಡಲು ಮುಂದಾಗಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆನೆ ಶೀಘ್ರದಲ್ಲಿಯೇ ಎಂಜಿ ಮೋಟಾರ್ ಕಂಪನಿ ಸಹ ತನ್ನ ಹೊಸ ಕ್ಲೌಡ್ ಎಲೆಕ್ಟ್ರಿಕ್ ಎಂಪಿವಿ ಪರಿಚಯಿಸಲು ನಿರ್ಧರಿಸಿದೆ. ಹೊಸ ಇವಿ ಕಾರನ್ನು ಬಿಡುಗಡೆ ಮಾಡಲು ಈಗಾಗಲೇ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಮಧ್ಯಮ ಕ್ರಮಾಂಕದ ಕಾರು ಮಾರಾಟ ವಿಭಾಗದಲ್ಲಿ ಬೇಡಿಕೆ ಹೆಚ್ಚಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಲೇ ಇವೆ.
ಭಾರತದಲ್ಲಿ ಸದ್ಯ ಜೆಡ್ಎಸ್ ಇವಿ ಮತ್ತು ಕಾಮೆಟ್ ಇವಿ ಕಾರುಗಳ ಮೂಲಕ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಇದನ್ನು ಗಮನಿಸಿದ ಎಂಜಿ ಮೋಟಾರ್ ಕಂಪನಿಯು ಇದೀಗ ಕ್ಲೌಡ್ ಇವಿ ಕಾರನ್ನು ರಸ್ತೆಗಿಳಿಸಲಿ ನಿರ್ಧರಿಸಿದೆ. ಇದು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಅಲ್ಲದೆ, ಇದಯ ಜೆಡ್ಎಸ್ ಇವಿ ಮತ್ತು ಕಾಮೆಟ್ ಇವಿ ಕಾರುಗಳ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬರಲಿದೆ.
ಚೀನಾ ಮಾರುಕಟ್ಟೆಯಲ್ಲಿ ಸದ್ಯ ಮಾರಾಟದಲ್ಲಿರುವ ವುಲ್ಲಿಂಗ್ ಮೋಟಾರ್ ನಿರ್ಮಾಣದ ಕ್ಲೌಡ್ ಇವಿ ಕಾರು ಮಾದರಿಯನ್ನೇ ಎಂಜಿ ಮೋಟಾರ್ ಕಂಪನಿ ಭಾರತದಲ್ಲಿ ಹೊಸ ಬದಲಾವಣೆಗೊಂದಿಗೆ ಬಿಡುಗಡೆ ಮಾಡಲು ಮುಂದಾಗಿದೆ. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸಗಳೊಂದಿಗೆ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕಂಪನಿಯ ಮೂಲಗಳು ಹೇಳುತ್ತಿವೆ.
ಚೀನಾದಲ್ಲಿರುವ ವುಲ್ಲಿಂಗ್ ಮೋಟಾರ್ ಕಂಪನಿ ಸದ್ಯ ಎಂಜಿ ಮಾತೃ ಸಂಸ್ಥೆಯಾದ ಸೈಕ್ ಜೊತೆ ಕಾರ್ಯನಿರ್ವಹಿಸುತ್ತಿದ್ದು, ಉದ್ಯಮ ವಿಸ್ತರಣೆಯ ಭಾಗವಾಗಿ ಎಂಜಿ ಕಂಪನಿಯು ವುಲ್ಲಿಂಗ್ ಕಂಪನಿಯ ಜನಪ್ರಿಯ ಇವಿ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.
ವುಲ್ಲಿಂಗ್ ಕಂಪನಿಯ ಕಾಮೆಟ್ ಇವಿ ಬಳಿಕ ಇದೀಗ ಕ್ಲೌಡ್ ಎಂಪಿವಿ ಕಾರನ್ನು ಸಹ ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ವಿನ್ಯಾಸಗಳೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದು 4,295 ಎಂಎಂ ಉದ್ದ ಇರಲಿದ್ದು, ಇದು ಅತ್ಯಾಧುನಿಕ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಇನ್ನು ಈ ಹೊಸ ಇವಿ ಕಾರು ಮಾದರಿಯಲ್ಲಿ ಎಂಜಿ ಕಂಪನಿಯು ಭರ್ಜರಿ ಮೈಲೇಜ್ ನೀಡುವ ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆ ನೀಡಲಿದ್ದು, ಹೊಸ ಕಾರಿನ ಟಾಪ್ ಎಂಡ್ ಮಾದರಿಯು 50.6 kWh ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಒಂದು ಬಾರಿ ಚಾರ್ಜ್ ಮಾಡಿದರೆ, 460 ಕಿಲೋ ಮೀಟರ್ ಮೈಲೇಜ್ ಕೊಡಲಿದೆ ಎನ್ನಲಾಗುತ್ತಿದೆ.












Click it and Unblock the Notifications