ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ವರ್ಷಕ್ಕೆ ಲಕ್ಷ ಕಾರುಗಳ ಕಳ್ಳತನ; ರಕ್ಷಣೆಗೆ ಏನು ಮಾಡಬೇಕು?

|
Google Oneindia Kannada News

ಭಾರತದಲ್ಲಿ ಕಾರುಗಳ ಕಳ್ಳತನದ್ದೇ ದೊಡ್ಡ ಸಮಸ್ಯೆ. ಅದಕ್ಕೆಂದೇ ಕಳ್ಳರ ಗ್ಯಾಂಗ್ ಭಾರತದ ಉದ್ದಗಲಕ್ಕೂ ಬಹಳ ಇವೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತೀ ವರ್ಷವೂ ಒಂದು ಲಕ್ಷ ಕಾರುಗಳ ಕಳ್ಳತನ ಆಗುತ್ತವಂತೆ.

ಆರ್ಥಿಕತೆ ಬೆಳೆದಂತೆ ಕಾರು ಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಭಾರತದಲ್ಲಿ ಕಾರು ಮಾರುಕಟ್ಟೆ ಕಳೆದ ಐದು ವರ್ಷದಲ್ಲಿ ಶೇ. 20ಕ್ಕಿಂತ ಹೆಚ್ಚು ಬೆಳೆದಿದೆ. ಇನ್ನೊಂದು ವರ್ಷದಲ್ಲಿ ಭಾರತದಲ್ಲಿ ಮೂರು ಕೋಟಿಗೂ ಹೆಚ್ಚು ಕಾರುಗಳು ಇರಲಿವೆಯಂತೆ.

ಎಂಟು ಆಸನಗಳ ವಾಹನಗಳಲ್ಲಿ ಆರು ಏರ್ ಬ್ಯಾಗ್ ಕಡ್ಡಾಯ: ಕೇಂದ್ರ ಸಚಿವ ಗಡ್ಕರಿಎಂಟು ಆಸನಗಳ ವಾಹನಗಳಲ್ಲಿ ಆರು ಏರ್ ಬ್ಯಾಗ್ ಕಡ್ಡಾಯ: ಕೇಂದ್ರ ಸಚಿವ ಗಡ್ಕರಿ

ಹಾಗೆಯೇ, ಕಳ್ಳರಿಗೆ ಇದೊಂದು ಸುಗ್ಗಿಯ ಸಂತೆಯಂತಾಗುತ್ತಿದೆ. ಮನೆಯ ಮುಂದೆ ಸಿಸಿಟಿವಿ ಹಾಕಿಸಿಕೊಂಡರೂ ಚಹರೆ ಗೊತ್ತಾಗದಂತೆ ಕಳ್ಳರು ತಮ್ಮ ಕರಾಮತ್ತು ತೋರುವುದನ್ನು ಮರೆಯುವುದಿಲ್ಲ. ಭಾರತದಲ್ಲಿ ಅತಿ ಹೆಚ್ಚು ಕಾರುಗಳು ಕಳ್ಳತನವಾಗುವುದು ಮಹಾರಾಷ್ಟ್ರ ರಾಜ್ಯದಲ್ಲಿಯಂತೆ. ಮುಂಬೈನಲ್ಲೇ ಅತಿ ಹೆಚ್ಚು ಕಳ್ಳತನ ಪ್ರಕರಣಗಳು ನಡೆಯುತ್ತವೆ. ಮುಂಬೈನಲ್ಲಿ ಜನಸಂಖ್ಯೆ ದಟ್ಟಣೆ ಹೆಚ್ಚಿರುವುದರಿಂದ ಕಳ್ಳತನ ಮಾಡಿ ಸುಲಭವಾಗಿ ತಪ್ಪಿಸಿಕೊಳ್ಳಬಹುದು.

ಹಾಗಾದರೆ, ಕಾರುಗಳ ಕಳ್ಳತನ ಹೇಗೆ ತಡೆಯುವುದು? ಅದಕ್ಕಿರುವ ಒಂದು ಪ್ರಬಲ ಮಾರ್ಗ ಎಂದರೆ ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಂ ಅಳವಡಿಸುವುದು. ಜಿಪಿಎಸ್ ಅಳವಡಿಸಿದರೆ ಕಾರನ್ನು ಟ್ರ್ಯಾಕ್ ಮಾಡುವುದು ಸುಲಭವಾಗುತ್ತದೆ. ಪೊಲೀಸರಿಗೂ ಕಳ್ಳರನ್ನು ಬೆನ್ನಟ್ಟಲು ಸಾಧ್ಯವಾಗುತ್ತದೆ.

 ಸ್ವಿಫ್ಟ್, ಐ20 ಕಾರುಗಳ ಕಳ್ಳತನ ಹೆಚ್ಚು

ಸ್ವಿಫ್ಟ್, ಐ20 ಕಾರುಗಳ ಕಳ್ಳತನ ಹೆಚ್ಚು

ಭಾರತದಲ್ಲಿ ಕಡಿಮೆ ಬೆಲೆಯ ಹಾಗು ಹೆಚ್ಚು ಜನಪ್ರಿಯವಾಗಿರುವ ಕಾರುಗಳ ಕಳ್ಳತನವೇ ಹೆಚ್ಚಾಗಿ ಆಗುವುದು ಎಂಬುದು ಅಂಕಿಅಂಶಗಳಿಂದ ತಿಳಿದುಬರುತ್ತದೆ. ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ i20 ಕಾರುಗಳು ಕಳ್ಳರ ಫೇವರಿಟ್ ಎನಿಸಿವೆ. ಈ ವಾಹನಗಳಿಗೆ ಸೆಕೆಂಡ್ಸ್ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಇವುಗಳನ್ನು ಸುಲಭವಾಗಿ ಮರುಮಾರಾಟ ಮಾಡಬಹುದು ಎಂಬ ಕಾರಣಕ್ಕೆ ಕಳ್ಳರು ಈ ಕಾರುಗಳ ಮೇಲೆ ಹೆಚ್ಚು ಕಣ್ಣಿಡುತ್ತಾರಂತೆ.

ಉಪಯೋಗಿಸಿದ ಕಾರು ಮಾರಾಟ ನಿಲ್ಲಿಸಿದ ಓಲಾ!ಉಪಯೋಗಿಸಿದ ಕಾರು ಮಾರಾಟ ನಿಲ್ಲಿಸಿದ ಓಲಾ!

 ಜಿಪಿಎಸ್ ಟ್ರ್ಯಾಕರ್ ವೆಚ್ಚ ಎಷ್ಟು?

ಜಿಪಿಎಸ್ ಟ್ರ್ಯಾಕರ್ ವೆಚ್ಚ ಎಷ್ಟು?

ಕಾರಿಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಸುವುದು ಅಷ್ಟು ದುಬಾರಿ ಅಲ್ಲ. ಸರಾಸರಿಯಾಗಿ ಒಂದು ಜಿಪಿಎಸ್ ಟ್ರ್ಯಾಕರ್ 2000-3000 ಸಾವಿರ ರೂ ಬೆಲೆ ಇದೆ. ಆನ್‌ಲೈನ್‌ನಲ್ಲೂ ಕಡಿಮೆ ಬೆಲೆಗೆ ಜಿಪಿಎಸ್ ಟ್ರ್ಯಾಕರ್ ಸಿಗುತ್ತದೆ. ಉದಾಹರಣೆಗೆ ಆ್ಯಪಲ್‌ನ ಏರ್‌ಟ್ಯಾಗ್ (AirTag) ಎಂಬ ಜಿಪಿಎಸ್ ಟ್ರ್ಯಾಕರ್ 1800 ರೂ ಸಿಗುತ್ತದೆ. ಇದು ಐಫೋನ್ ಬಳಕೆದಾರರಿಗೆ ಉಪಯುಕ್ತವೆನಿಸುವ ಟ್ರ್ಯಾಕರ್. ಆಂಡ್ರಾಯ್ಡ್ ಆ್ಯಪ್‌ಗಳಿಗೂ ಹೊಂದಿಕೆಯಾಗುವ ಹಲವು ಜಿಪಿಎಸ್ ಟ್ರ್ಯಾಕರ್‌ಗಳು ಲಭ್ಯ ಇವೆ.

ಯಾವ ಜಿಪಿಎಸ್ ಟ್ರ್ಯಾಕರ್ ಅಳವಡಿಸಬೇಕೆಂದು ಗೊಂದಲ ಇದ್ದರೆ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ವಿಚಾರಿಸಬಹುದು. ಭಾರತಕ್ಕೆ ಸೂಕ್ತವಾದ ಜಿಪಿಎಸ್ ಟ್ರ್ಯಾಕರ್ ಯಾವುದೆಂದು ಪೊಲೀಸರು ಸಲಹೆ ನೀಡಬಹುದು.

 ಭಾರತದ ಕಾರುಗಳ ಜನಪ್ರಿಯತೆ

ಭಾರತದ ಕಾರುಗಳ ಜನಪ್ರಿಯತೆ

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ತಯಾರಿಸಿದ ವಾಹನಗಳು ಬೇರೆ ದೇಶಗಳಲ್ಲಿ ಜನಪ್ರಿಯವಾಗುತ್ತಿವೆ. ಇದಕ್ಕೆ ಒಂದು ಕಾರಣ ಬೇರೆ ದೇಶಗಳ ಕಾರುಗಳಿಗೆ ಹೋಲಿಸಿದರೆ ಭಾರತೀಯ ಕಾರುಗಳು ಅಗ್ಗದಾಗಿರುತ್ತವೆ. ಒಂದು ನಿರ್ದಿಷ್ಟ ಬೆಲೆಯ ವಿಭಾಗದಲ್ಲಿರುವ ಕಾರುಗಳ ಪೈಕಿ ಭಾರತೀಯ ಕಾರುಗಳು ಹೆಚ್ಚು ಸಾಮರ್ಥ್ಯದ್ದು ಹಾಗೂ ಹೆಚ್ಚು ಫೀಚರ್‌ಗಳನ್ನು ಒಳಗೊಂಡಿರುತ್ತವೆ. ಇದು ಭಾರತದ ಕಾರು ಮಾರುಕಟ್ಟೆ ಬೆಳೆಯಲು ಕಾರಣವಾಗಿದೆ.

 ಅಪಘಾತಗಳು

ಅಪಘಾತಗಳು

ಭಾರತದಲ್ಲಿರುವ ಕಾರುಗಳ ಸರಾಸರಿ ವಯಸ್ಸು 12 ವರ್ಷವಿದೆ. ಇತ್ತೀಚಿನ ವರ್ಷಗಳಲ್ಲಿ ಕಾರು ಮಾಲೀಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಹೆಚ್ಚಿನ ಜನರು ಈಗಲೂ ಯೂಸ್ಡ್ ಕಾರ್ ಅಥವಾ ಸೆಕೆಂಡ್ಸ್ ಕಾರುಗಳನ್ನು ಕೊಳ್ಳಲು ಆದ್ಯತೆ ಕೊಡುತ್ತಿದ್ದಾರೆ. ಹೀಗಾಗಿ, ಇನ್ನೂ ಹಳೆಯ ಕಾರುಗಳೇ ಹೆಚ್ಚಾಗಿ ರಸ್ತೆಯಲ್ಲಿವೆ.

ಯಾವುದೇ ವಾಹನ ಸುಸ್ಥಿತಿಯಲ್ಲಿರಬೇಕೆಂದರೆ ನಿಯಮಿತವಾಗಿ ಸರ್ವಿಸ್ ಮಾಡಿಸುತ್ತಿರಬೇಕು. ಭಾರತದಲ್ಲಿ ಕಾರುಗಳನ್ನು ನಿಯಮಿತವಾಗಿ ಸರ್ವಿಸ್ ಮಾಡಿಸುವುದು ಕಡಿಮೆಯೇ. ಹೀಗಾಗಿ, ಕಾರುಗಳು ಹೆಚ್ಚಾಗಿ ಸುಸ್ಥಿತಿಯಲ್ಲಿರುವುದಿಲ್ಲ. ಇದೇ ಕಾರಣಕ್ಕೆ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ.

(ಒನ್ಇಂಡಿಯಾ ಸುದ್ದಿ)

English summary
More than one lakh cars are getting stolen in India every year. Highest car theft cases are in Maharashra. It is suggested to have GPS tracker to face the situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X