ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನಿಗಳ ಕೈಯಲ್ಲಿ ಅಫ್ಘಾನಿಸ್ತಾನ ಹೇಗಿದೆ? ಹೀಗೊಂದು ವರದಿ

|
Google Oneindia Kannada News

ನವದೆಹಲಿ, ಜುಲೈ 21: ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಏರಿದ ಬಳಿಕ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಅಮೆರಿಕಾ ಮಧ್ಯಪ್ರವೇಶದ ಬಳಿಕ ಹೆಚ್ಚಿದ್ದ ಅನಿಶ್ಚಿತತೆ ಕಡಿಮೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಹಾಗೆಯೇ, ಮಾನವ ಹಕ್ಕುಗಳ ಉಲ್ಲಂಘನೆ ವಿಪರೀತ ಹೆಚ್ಚುವ ಭಯವೂ ಇತ್ತು.

ಹೆಚ್ಚೂಕಡಿಮೆ ಒಂದು ವರ್ಷದ ಬಳಿಕ ಅಫ್ಘಾನಿಸ್ತಾನದ ಪರಿಸ್ಥಿತಿ ಈಗ ಹೇಗಿದೆ? ವಿಶ್ವಸಂಸ್ಥೆ ವರದಿಯೊಂದರ ಪ್ರಕಾರ ಅಫ್ಘಾನಿಸ್ತಾನದಲ್ಲಿ ರಾಜಕೀಯ ಸ್ಥಿರತೆ, ಭದ್ರತಾ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದೆ. ಆದರೆ, ನಿರೀಕ್ಷಿಸಿದ ರೀತಿಯಲ್ಲೇ ಮಹಿಳೆಯರು ಮತ್ತು ಮಕ್ಕಳ ಸ್ವಾತಂತ್ರ್ಯ ಹರಣವಾಗಿದೆಯಂತೆ.

 ಪಾಕಿಸ್ತಾನದ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತ್ಯ ಚೀನಾ ವಶಕ್ಕೆ? ಅನಾಥ ಕೂಸಾಗಿದೆ ಜಿಬಿ ಪಾಕಿಸ್ತಾನದ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತ್ಯ ಚೀನಾ ವಶಕ್ಕೆ? ಅನಾಥ ಕೂಸಾಗಿದೆ ಜಿಬಿ

ಅಫ್ಘಾನಿಸ್ತಾನದಲ್ಲಿನ ವಿಶ್ವಸಂಸ್ಥೆ ಸಹಾಯ ಯೋಜನೆ (ಯುಎನ್‌ಎಎಂಎ) ಈ ವರದಿ ಬಿಡುಗಡೆ ಮಾಡಿದೆ. ತಾಲಿಬಾನ್‌ನ ೧೦ ತಿಂಗಳ ಆಡಳಿತದ ರಿಪೋರ್ಟ್ ಕಾರ್ಡ್ ರೀತಿ ಈ ವರದಿ ಇದೆ.

ತಾಲಿಬಾನ್ ಆಡಳಿತವರ್ಗದಿಂದ ಜನಸಾಮಾನ್ಯರ ಮೇಲೆ ನಡೆದಿರುವ ದೌರ್ಜನ್ಯ, ಅಕ್ರಮ ಬಂಧನಗಳು, ಹತ್ಯೆಗಳು ಇತ್ಯಾದಿಯನ್ನು ಈ ವರದಿ ಬೆಳಕು ಚೆಲ್ಲಿದೆ. ಮಹಿಳೆಯರು ಮತ್ತು ಹೆಣ್ಮಕ್ಕಳ ಹಕ್ಕುಗಳನ್ನು ಹೇಗೆ ಕಿತ್ತುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಬಂಧಿತ ಸ್ಥಳಗಳಲ್ಲಿ ಪರಿಸ್ಥಿತಿ ಹೇಗಿದೆ, ದೇಶದಲ್ಲಿ ಮೂಲಭೂತ ಸ್ವಾತಂತ್ರ್ಯದ ರಕ್ಷಣೆ ಎಷ್ಟರಮಟ್ಟಿಗೆ ಇದೆ ಎಂಬಿತ್ಯಾದಿ ಅಂಶಗಳನ್ನು ವಿಶ್ವಸಂಸ್ಥೆಯ ವರದಿಯಲ್ಲಿ ಎತ್ತಿತೋರಿಸಲಾಗಿದೆ.

ಅಫ್ಘಾನಿಸ್ತಾನದಲ್ಲಿ ಮತ್ತೆ ರಾಜತಾಂತ್ರಿಕ ಕಚೇರಿ ಆರಂಭಿಸಿದ ಭಾರತಅಫ್ಘಾನಿಸ್ತಾನದಲ್ಲಿ ಮತ್ತೆ ರಾಜತಾಂತ್ರಿಕ ಕಚೇರಿ ಆರಂಭಿಸಿದ ಭಾರತ

 700 ಮಂದಿ ಹತ್ಯೆ

700 ಮಂದಿ ಹತ್ಯೆ

ವಿಶ್ವಸಂಸ್ಥೆಯ ಈ ವರದಿ ಪ್ರಕಾರ 2021 ಆಗಸ್ಟ್ 15ರಿಂದ 2022 ಜೂನ್ 15ರವರೆಗೆ 700 ವ್ಯಕ್ತಿಗಳ ಹತ್ಯೆಯಾಗಿದೆ. 1406 ಮಂದಿ ಗಾಯಗೊಂಡಿದ್ದಾರೆ. ಐಇಡಿ ಬಾಂಬ್ ದಾಳಿಗಳಿಂದಲೇ ಬಹುತೇಕ ಈ ಹತ್ಯೆಗಳು ಸಂಭವಿಸಿರುವುದು ತಿಳಿದುಬಂದಿದೆ.

ಹೆಚ್ಚಿನ ಬಾಂಬ್ ದಾಳಿಗಳನ್ನು ಶಿಯಾ ಪಂಥದ ಅಲ್ಪಸಂಖ್ಯಾತ ಹಜಾರ ಸಮುದಾಯದವರನ್ನೇ ಗುರಿಯಾಗಿಸಿ ಮಾಡಲಾಗಿದೆ. ಅಫ್ಘಾನಿಸ್ತಾನ್ ವಿಭಾಗದ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಈ ಕೃತ್ಯಗಳನ್ನು ಎಸಗಿದೆ.

ಅಫ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿ ಸುಧಾರಣೆಯಾದರೂ ತಾಲಿಬಾನ್ ಆಡಳಿತಕ್ಕೆ ಐಸಿಸ್ ಆರ್ಭಟವನ್ನು ತಡೆಯಲು ಆಗಿಲ್ಲ ಎಂಬುದು ಗಮನಾರ್ಹ.

 ತಾಲಿಬಾನ್ ಆಡಳಿತಗಾರರ ದೌರ್ಜನ್ಯ

ತಾಲಿಬಾನ್ ಆಡಳಿತಗಾರರ ದೌರ್ಜನ್ಯ

ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಾಗ ತಾಲಿಬಾನಿಗಳು ಇಲ್ಲಿ ಎಲ್ಲರಿಗೂ ಭದ್ರತೆ ಒದಗಿಸುತ್ತೇವೆ. ಯಾರೂ ಕೂಡ ಹೆದರಬೇಕಿಲ್ಲ ಎಂದು ಭರವಸೆ ನೀಡಿದ್ದರು. ಆದರೆ, ಅಫ್ಘಾನಿಸ್ತಾನದಲ್ಲಿ ಮೂಲಭೂತ ಸ್ವಾತಂತ್ರ್ಯದ ಪರಿಸ್ಥಿತಿ ಹದಗೆಟ್ಟಿರುವುದು ಗೊತ್ತಾಗಿದೆ.

ಪತ್ರಕರ್ತರನ್ನು ಗುರಿಯಾಗಿಸಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಐಸಿಸ್ ಸಂಘಟನೆ ಅಲ್ಲಿ, ತಾಲಿಬಾನ್ ಆಡಳಿತವರ್ಗದವರೇ ಮಾಧ್ಯಮದವರ ಮೇಲೆ ಹೆಚ್ಚಾಗಿ ದೌರ್ಜನ್ಯ ಎಸಗುತ್ತಿದ್ಧಾರೆ. 173 ಪತ್ರಕರ್ತರನ್ನು ಪೀಡಿಸಲಾಗಿದೆ. 122 ಮಂದಿಯನ್ನು ಸುಖಾಸುಮ್ಮನೆ ಬಂಧಸಲಾಗಿದೆ. 58 ಮಂದಿಗೆ ಕಿರುಕುಳ ನೀಡಲಾಗಿದೆ. 33 ಮಂದಿ ಪತ್ರಕರ್ತರಿಗೆ ಬೆದರಿಕೆ ಹಾಕಲಾಗಿದೆ.

ಇಸ್ಲಾಮಿಕ್ ಸ್ಟೇಟ್ ಸಂಘಟನೆಗಳಿಂದ ಈ ಹತ್ತು ತಿಂಗಳಲ್ಲಿ ಆರು ಪತ್ರಕರ್ತರ ಹತ್ಯೆಯೂ ಆಗಿದೆ ಎಂದು ಯುಎನ್‌ಎಎಂಎ ವರದಿಯಲ್ಲಿ ತಿಳಿಸಲಾಗಿದೆ.

 ಪ್ರತೀಕಾರದ ಕ್ರಮಗಳು

ಪ್ರತೀಕಾರದ ಕ್ರಮಗಳು

ತಾಲಿಬಾನ್ ಅಧಿಕಾರಕ್ಕೆ ಬರುವ ಮುನ್ನ ಆಡಳಿತಯಂತ್ರದಲ್ಲಿದ್ದ ಮಾಜಿ ಸರಕಾರಿ ಅಧಿಕಾರಿಗಳಿಗೆ ಕ್ಷಮಾದಾನ ನೀಡುವುದಾಗಿ ಭರವಸೆ ನೀಡಿದ್ದ ತಾಲಿಬಾನ್, ತಾನಿತ್ತ ಮಾತನ್ನು ಪಾಲಿಸುವ ಗೋಜಿಗೆ ಹೋಗಿಲ್ಲ ಎಂದು ವಿಶ್ವಸಂಸ್ಥೆ ವರದಿಯ ಅಂಕಿ ಅಂಶಗಳು ಹೇಳುತ್ತವೆ.

ಮಾಜಿ ಸರಕಾರಿ ಮತ್ತು ಮಿಲಿಟರಿ ಅಧಿಕಾರಿಗಳನ್ನು ಅಕ್ರಮವಾಗಿ ಕೊಲ್ಲುವುದು ಮತ್ತು ಬಂಧಿಸುವುದು ಹೆಚ್ಚಾಗಿದೆ. 160 ಅಧಿಕಾರಿಗಳನ್ನು ನ್ಯಾಯಾಂಗ ವಿಚಾರಣೆ ಇಲ್ಲದೆಯೇ ಕೊಲ್ಲಲಾಗಿದೆ. 178 ಮಂದಿ ಅಧಿಕಾರಿಗಳನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಳ್ಳಲಾಗಿದೆ.

ಗಮನಿಸಬೇಕಾದ ಅಂಶವೆಂದರೆ ಈ ರೀತಿ ತಾಲಿಬಾನ್‌ನವರಿಂದ ಹಿಂಸೆಗೆ ಒಳಪಟ್ಟ ಮಾಜಿ ಸರಕಾರಿ ನೌಕರರಲ್ಲಿ ಅನೇಕರು ಐಸಿಸ್ ಜೊತೆ ನಂಟಿರುವ ಆರೋಪ ಹೊಂದಿರುವವರಾಗಿದ್ಧಾರೆ. ನ್ಯಾಷನಲ್ ರೆಸಿಸ್ಟೆಂಟ್ ಫ್ರಂಟ್ ಸಂಘಟನೆಯ ಬೆಂಬಲಿಗರೂ ಇದರಲ್ಲಿ ಇದ್ದಾರೆ.

 ಇನ್ನಷ್ಟು ಘಟನೆಗಳು

ಇನ್ನಷ್ಟು ಘಟನೆಗಳು

2021 ಆಗಸ್ಟ್ 15ರಿಂದ ಅಫ್ಘಾನಿಸ್ತಾನದ ಬಹಳ ಕ್ರೂರ ರೀತಿಯಲ್ಲಿ, ಅಮಾನವೀಯ ರೀತಿಯಲ್ಲಿ 217 ಪ್ರಕರಣಗಳಲ್ಲಿ ಶಿಕ್ಷೆಗಳನ್ನು ಜಾರಿ ಮಾಡಲಾಗಿದೆ. ಮಾನವ ಹಕ್ಕು ಹೋರಾಟಗಾರರ ಮೇಲೂ ಬಹಳಷ್ಟು ಹಲ್ಲೆಗಳಾಗಿವೆ. ಕಾರವಿಲ್ಲದೇ ಬಂಧನಗಳಾಗಿವೆ.

ಮಹಿಳೆಯರು ಮತ್ತು ಹೆಣ್ಮಕ್ಕಳಿಗೆ ಸ್ವಾತಂತ್ರ್ಯವೇ ಇಲ್ಲವಾಗಿದೆ ಎಂದು ವಿಶ್ವಸಂಸ್ಥೆಯ ಈ ವರದಿಯಲ್ಲಿ ಹೇಳಲಾಗಿದೆ. ತಾಲಿಬಾನ್ ಆಡಳಿತಕ್ಕೆ ಮುಂಚೆ ಹೆಣ್ಮಕ್ಕಳು ಶಿಕ್ಷಣ ಪಡೆಯಲು ಅವಕಾಶ ಇತ್ತು. ಕೆಲಸ ಮಾಡಲು ಮುಕ್ತ ಸ್ವಾತಂತ್ರ್ಯ ಇತ್ತು. ರಸ್ತೆಗಳಲ್ಲಿ ಅಡ್ಡಾಡಲು ಯಾರೂ ಅಡ್ಡಿಪಡಿಸುತ್ತಿರಲಿಲ್ಲ. ಈಗ ಈ ಎಲ್ಲಾ ಸ್ವಾತಂತ್ರ್ಯಗಳಿಗೆ ನಿರ್ಬಂಧಗಳನ್ನು ಹಾಕಲಾಗಿದೆ. ಹಲವು ಕಡೆ ಹೆಣ್ಮಕ್ಕಳ ಎಲ್ಲಾ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿದೆ ಎಂದು ಹೇಳುತ್ತದೆ ಈ ವರದಿ.

 ತಾಲಿಬಾನ್ ಸ್ಪಷ್ಟನೆ

ತಾಲಿಬಾನ್ ಸ್ಪಷ್ಟನೆ

ವಿಶ್ವಸಂಸ್ಥೆಯ ಈ ವರದಿಯನ್ನು ತಾಲಿಬಾನ್ ಆಡಳಿತ ಸಾರಾಸಗಟಾಗಿ ನಿರಾಕರಿಸಿದೆ. ಈ ವರದಿ ಆಧಾರ ರಹಿತವಾಗಿದೆ, ಸುಳ್ಳು ಪ್ರಚಾರಕ್ಕೆ ಸೃಷ್ಟಿಸಲಾಗಿದೆ. ಈ ವರದಿಯಲ್ಲಿರುವ ಅಂಶಗಳು ಸತ್ಯಕ್ಕೆ ದೂರವಾಗಿವೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.

"ಈ ದೇಶದಲ್ಲಿ ವಿನಾಕಾರಣ ಬಂಧನ, ಹತ್ಯೆಗೆ ಅವಕಾಶ ಇಲ್ಲ. ಇಮಥ ಅಪರಾಧ ಎಸಗುವವರಿಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ತಾಲಿಬಾನ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಎರಡು ದಶಕಗಳ ಹಿಂದೆ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡುವ ಮುನ್ನ ಅಲ್ಲಿ ತಾಲಿಬಾನ್ ಆಡಳಿತವೇ ಇದ್ದದ್ದು. 1996ರಿಂದ 2001ರವರೆಗೂ ತಾಲಿಬಾನ್ ಅಧಿಕಾರದಲ್ಲಿತ್ತು. ಅಗ ಅತ್ಯುಗ್ರ ರೀತಿಯಲ್ಲಿ ಇಸ್ಲಾಮಿಕ್ ಕಾನೂನನ್ನು ಜಾರಿಗೆ ತರಲಾಗಿತ್ತು. ಹೆಣ್ಮಕ್ಕಳು ಆರನೇ ತರಗತಿಯವರೆಗೆ ಮಾತ್ರ ಓದಲು ಅವಕಾಶ ಇತ್ತು. ಕಣ್ಣು ಬಿಟ್ಟು ಉಳಿದ ದೇಹದ ಯಾವ ಭಾಗವೂ ಸಾರ್ವಜನಿಕರಿಗೆ ಕಾಣಿಸದ ರೀತಿಯಲ್ಲಿ ಹೆಣ್ಮಕ್ಕಳು ಉಡುಪು ಧರಿಸಬೇಕು ಎಂಬಿತ್ಯಾದಿ ಕಟ್ಟಳೆಗಳನ್ನು ವಿಧಿಸಲಾಗಿತ್ತು.

ಅಮೆರಿಕ ಬೆಂಬಲಿತ ಅಡಳಿತದಲ್ಲಿ ಅಫ್ಘಾನಿಸ್ತಾನೀಯರಿಗೆ ಮತ್ತೆ ಬಹುತೇಕ ಸ್ವಾತಂತ್ರ್ಯ ಪ್ರಾಪ್ತವಾಗಿತ್ತು. ಅದರೆ, ಇಷ್ಟು ವರ್ಷಗಳವರೆಗೆ ಸೇನಾ ಪಡೆಗಳನ್ನು ಅಫ್ಘಾನಿಸ್ತಾನದಲ್ಲಿ ನೆಲೆಯೂರಿಸಿದ್ದ ಅಮೆರಿಕ ವಿವಿಧ ಒತ್ತಡ ಮತ್ತು ಕಾರಣಗಳಿಂದ ಕಳೆದ ವರ್ಷ ಅಲ್ಲಿಂದ ಸೈನಿಕರನ್ನು ವಾಪಸ್ ಪಡೆಯಿತು. ತಾಲಿಬಾನ್ ಬಹಳ ಕ್ಷಿಪ್ರವಾಗಿ ಅಧಿಕಾರ ಆಕ್ರಮಿಸಿಕೊಂಡಿತು.

 ಅಫ್ಗಾನ್ ಜನರಿಗೆ ಭಾರತವೇ ಇಷ್ಟ

ಅಫ್ಗಾನ್ ಜನರಿಗೆ ಭಾರತವೇ ಇಷ್ಟ

ಅಫ್ಘಾನಿಸ್ತಾನ ಹಲವು ದಶಕಗಳಿಂದ ಭಾರತದ ಜೊತೆ ಸೌಹಾರ್ದ ಸಂಬಂಧ ಹೊಂದಿದೆ. ತಾಲಿಬಾನ್ ಆಡಳಿತದಲ್ಲಿದ್ದಾಗ್ಯೂ ಅಲ್ಲಿನ ಜನರು ಈಗಲೂ ಭಾರತದ ಬಗ್ಗೆ ಒಲವು ಹೊಂದಿರುವ ವಿಚಾರ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ

ಬೆಲ್ಜಿಯಂ ಮೂಲದ ಇಯು ರಿಪೋರ್ಟರ್ ಎಂಬ ವೆಬ್‌ಸೈಟ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಇದರ ಪ್ರಕಾರ, ಶೇ. 69ರಷ್ಟು ಆಫ್ಗಾನ್ ಜನರು ಭಾರತವನ್ನು ಅತ್ಯುತ್ತಮ ಸ್ನೇಹಿತ ರಾಷ್ಟ್ರ ಎಂದು ಪರಿಗಣಿಸುತ್ತಾರಂತೆ.

ಹಾಗೆಯೇ, ಅಮೆರಿಕ ಅಫ್ಗಾನಿಸ್ತಾನದಿಂದ ಕಾಲ್ತೆಗೆದುಹೋದ ಸಂದರ್ಭ ಸರಿಯಾಗಿರಲಿಲ್ಲ. ಪರ್ಯಾಯ ವ್ಯವಸ್ಥೆ ಮಾಡದೆಯೇ ಬಿಟ್ಟುಹೋಯಿತು. ಇದರಿಂದ ಪಾಕಿಸ್ತಾನ ಮತ್ತು ಚೀನಾ ನೆರವಿನಿಂದ ತಾಲಿಬಾನ್ ಅಧಿಕಾರಕ್ಕೆ ಏರಿತು ಎಂಬ ಅಭಿಪ್ರಾಯವನ್ನು ಶೇ. 67 ಮಂದಿ ವ್ಯಕ್ತಪಡಿಸಿದ್ದಾರೆ.

 ತಾಲಿಬಾನ್ ಪರದಾಟ

ತಾಲಿಬಾನ್ ಪರದಾಟ

ಕೋವಿಡ್ ಬಂದ ಬಳಿಕ ವಿಶ್ವದ ಬಹುತೇಕ ದೇಶಗಳು ನಲುಗಿಹೋಗಿವೆ. ಇದಕ್ಕೆ ಅಫ್ಘಾನಿಸ್ತಾನ ಹೊರತಾಗಿಲ್ಲ. ತಾಲಿಬಾನ್ ಸರಕಾರದ ಮೇಲೆ ಅಮೆರಿಕ ಹಾಗೂ ಅನೇಕ ದೇಶಗಳು ವಿವಿಧ ನಿರ್ಬಂಧಗಳನ್ನು ವಿಧಿಸಿವೆ. ಅಫ್ಘಾನಿಸ್ತಾನಕ್ಕೆ ಹಣಕಾಸು ನೆರವು ಯಾವುದೇ ಸಿಗದಂತಾಗಿದೆ. ಔಷಧ ಇತ್ಯಾದಿಗೂ ಅದರು ಪರದಾಡಬೇಕಾದ ಪರಿಸ್ಥಿತಿ ಇದೆ. ಮಾನವೀಯ ದೃಷ್ಟಿಯಿಂದ ಅಫ್ಘಾನಿಸ್ತಾನಕ್ಕೆ ಸಹಾಯ ಮಾಡಬೇಕೆಂದು ತಾಲಿಬಾನ್ ಸರಕಾರ ಇತ್ತೀಚೆಗೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದುಂಟು.

(ಒನ್ಇಂಡಿಯಾ ಸುದ್ದಿ)

English summary
UN report says Afghanistan has seen numerous human rights violations of various kinds during 10 month regime of Taliban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X