ಬೀದಿಬದಿ ತರಕಾರಿ ಮಾರಾಟ ಮಾಡಿ ಐಷಾರಾಮಿ ಆಡಿ ಎ4 ಕಾರು ಖರೀದಿಸಿದ ಕೇರಳದ ಕಿರಿಯ ರೈತ!
ಬೆಂಗಳೂರು, ಸೆಪ್ಟೆಂಬರ್ 29: ರೈತನೊಬ್ಬ ತಾನು ಬೆಳೆದ ತರಕಾರಿಯನ್ನು ಬೀದಿ ಬದಿಯಲ್ಲಿ ಮಾರಾಟ ಮಾಡಿ ಬಂದ ಹಣದಿಂದ ಐಷಾರಾಮಿ ಕಾರು ಆಡಿ ಎ4 ಅನ್ನು ಖರೀದಿಸಿರುವ ಅಚ್ಚರಿಯ ಘಟನೆ ನಡೆದಿದೆ.
ಸಾಮಾನ್ಯವಾಗಿ ಹೊಲಗಳಲ್ಲಿ ಕಷ್ಟಪಟ್ಟು ಕೆಲಸ ಮಾಡುವ ರೈತರು ಅಬ್ಬಬ್ಬ ಎಂದರೆ ಬೈಕು ಹೊಂದಿರಬಹುದು. ಏಕೆಂದರೆ ಅವರು ಸಾಮಾನ್ಯವಾಗಿ ಆದಾಯವು ಕಡಿಮೆಯಾಗಿರುತ್ತದೆ. ಆದರೆ ಈಗ ಕಾಲ ಬದಲಾಗಿದ್ದು, ಕಾರ್ಪೊರೇಟ್ ಪ್ರಾಬಲ್ಯವನ್ನು ಬದಿಗಿರಿಸಿ ಆಹಾರವೇ ಮಹತ್ವ ಸಾರಿ ಮತ್ತು ಉದ್ಯಮಶೀಲತೆಯನ್ನು ಅಳವಡಿಸಿಕೊಳ್ಳಲು ಹೆಚ್ಚಿನ ಯುವಕರು ಸಾವಯವ ಕೃಷಿ ಕ್ಷೇತ್ರದತ್ತ ಹೆಜ್ಜೆ ಇಡಲು ಪ್ರಾರಂಭಿಸಿದ್ದಾರೆ.

ಅಂತಹ ಒಂದು ಕೃಷಿಯಿಂದ ಕೇರಳದ ಕಿರಿಯ ರೈತ ಸುಜಿತ್ ಅವರು ರಸ್ತೆಬದಿಯ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಆಡಿ A4 ಐಷಾರಾಮಿ ಸೆಡಾನ್ ಅನ್ನು ಖರೀದಿಸಿದಾಗ ಎಲ್ಲರ ತಲೆ ಒಮ್ಮೆ ಗಿರ್ ಎಂದಿತು. ವೆರೈಟಿ ಫಾರ್ಮರ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ, ಸುಜಿತ್ ತನ್ನ ಜಮೀನಿನಿಂದ ತರಕಾರಿ ಬೆಳೆಸುವುದನ್ನು ತೋರಿಸುತ್ತದೆ. ಇದರಿಂದ ಅವರು ತಮ್ಮ ಆಡಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಾರೆ. ತರಕಾರಿಯನ್ನು ಜಾಗದ ಕೊರತೆಯಿಂದ ಆಟೋರಿಕ್ಷಾವನ್ನು ಬಳಸಿ ಅದನ್ನು ಸಾಗಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಅವರು ಪ್ಲಾಸ್ಟಿಕ್ ಶೀಟ್ ಅನ್ನು ಹಾಕಿ ತರಕಾರಿಗಳನ್ನು ಸ್ವತಃ ಮಾರಾಟ ಮಾಡುತ್ತಾರೆ. ಸ್ಥಳೀಯರು ಆಗಮಿಸಿ ಅವರ ಬಳಿ ತರಕಾರಿ ಖರೀದಿಸುತ್ತಾರೆ. ಅವರ ತರಕಾರಿಗಳು ಮಾರುಕಟ್ಟೆಯಲ್ಲಿ ಬೇಗ ಖರೀದಿಯಾಗುತ್ತವೆ. ಸಂಪೂರ್ಣ ಉತ್ಪನ್ನವನ್ನು ಮಾರಾಟ ಮಾಡಿದ ನಂತರ ಅವರು ತನ್ನ ಅದೇ ಐಷಾರಾಮಿ ಕಾರಿನಲ್ಲಿ ಹೊರಡುತ್ತಾರೆ.
ವರದಿಗಳ ಪ್ರಕಾರ, ಸುಜಿತ್ ಈ ಐಷಾರಾಮಿ ಆಡಿ ಕಾರನ್ನು ಸೆಕೆಂಡ್ ಹ್ಯಾಂಡ್ ಕಾರಾಗಿ ಖರೀದಿಸಿದ್ದಾರೆ. ಕಾರಿನ ಬಗ್ಗೆ ಮಾತನಾಡುವುದಾದರೆ, ಇದು ಹುಡ್ ಅಡಿಯಲ್ಲಿ 2.0-ಲೀಟರ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಗಿದೆ. ಇದು 204 ಎಚ್‌ಪಿ ಮತ್ತು 320 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಈ ಸೆಡಾನ್ ಕಾರಿನಲ್ಲಿರುವ ಪವರ್ ಮಿಲ್ ಅನ್ನು 7-ಸ್ಪೀಡ್ ಟಿಸಿ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಆಡಿ ಎ4 ಕೇವಲ 7.1 ಸೆಕೆಂಡ್‌ಗಳಲ್ಲಿ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಹೊಸ ಆಡಿ ಎ4 ಗಾಗಿ ಒಬ್ಬರು 44 ಲಕ್ಷದಿಂದ 52 ಲಕ್ಷದವರೆಗೆ ಖರ್ಚು ಮಾಡಬೇಕಾಗುತ್ತದೆ.












Click it and Unblock the Notifications