ಮಾಜಿ ಸಿಎಂ ಆಸ್ತಿ ವಿವರ: ಚಾಂಡಿ ಬಳಿ 1000 ರು ಅಷ್ಟೇ ಇರೋದು!
ಬಹುಕೋಟಿ ಸೌರಶಕ್ತಿ ಫಲಕ ಯೋಜನೆ ಲಂಚ ಪ್ರಕರಣದ ಸುಳಿಯಲ್ಲಿ ಸಿಲುಕಿದ್ದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ಉಮ್ಮನ್ ಚಾಂಡಿ ಈ ಬಾರಿ ಚುನಾವಣೆಯಲ್ಲೂ ಸ್ಪರ್ಧಿಸಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಪುದುಪಲ್ಲಿ ಕ್ಷೇತ್ರದಿಂದ ಚಾಂಡಿ ಅವರು ಮತ್ತೊಮ್ಮೆ ವಿಧಾನಸಭೆಗೆ ಆಯ್ಕೆ ಬಯಸಿದ್ದಾರೆ. ಇತ್ತೀಚೆಗೆ ಪಾಂಬಡಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ, ಆಸ್ತಿ ವಿವರಗಳ ಅಫಿಡವಿಟ್ ನೀಡಿದ್ದಾರೆ.
ಚಾಂಡಿ ಆಸ್ತಿ ವಿವರ:
ಉಮ್ಮನ್ ಚಾಂಡಿ ಬಳಿ ಇರುವ ನಗದು : 1000 ರು
ಚಾಂಡಿ ಪತ್ನಿ ಬಳಿ : 5000 ರು ನಗದು
ಪುತ್ರನ ಬಳಿ : 7,500 ರು
ಬ್ಯಾಂಕ್ ಖಾತೆ ವಿವರ:
ಉಮ್ಮನ್ ಚಾಂಡಿ ಖಾತೆ: 67,704 ರು, ಪತ್ನಿ ಖಾತೆಯಲ್ಲಿ 24, 83,092ರು ಪುತ್ರನ ಖಾತೆಯಲ್ಲಿ 14, 58, 570 ರು ಇದೆ.

ವಾಹನ: ಚಾಂಡಿ ಬಳಿ ಯಾವುದೇ ವಾಹನವಿಲ್ಲ, ಪತ್ನಿ ಹೆಸರಿನಲ್ಲಿ ಮಾರುತಿ ಸ್ವಿಫ್ಟ್ ನೋಂದಣಿಯಾಗಿದೆ.
ಚಿನ್ನಾಭರಣ: ಉಮ್ಮನ್ ಚಾಂಡಿ ಬಳಿ 38 ಗ್ರಾಂ ಚಿನ್ನ ಇದ್ದರೆ, ಅವರ ಪತ್ನಿ ಬಳಿ 296 ಗ್ರಾಂ ಚಿನ್ನ ಇದೆ.
ಒಟ್ಟಾರೆ, ಚಾಂಡಿ ಕುಟುಂಬದ ಆಸ್ತಿ ಮೊತ್ತ: 74.37 ಲಕ್ಷ ರು.
ಸ್ಥಿರಾಸ್ತಿ: ಪುದುಪಲ್ಲಿಯಲ್ಲಿ 3.41 ಕೋಟಿ ರು ಮೌಲ್ಯದ ಜಮೀನು ಹೊಂದಿದ್ದಾರೆ. ತಿರುವನಂತಪುರಂನಲ್ಲಿ 2,200 ಚದರಡಿ ಮನೆ ಇದೆ.
ಸಾಲ: ಚಾಂಡಿ ಯಾವುದೇ ಸಾಲದ ಹೊರೆ ಹೊಂದಿಲ್ಲ. ಅವರ ಪತ್ನಿ ಮರಿಯಮ್ಮ ಉಮ್ಮನ್ ಹಾಗೂ ಪುತ್ರ ಚಾಂಡಿ ಉಮ್ಮನ್ 31, 49, 529 ರು ಸಾಲ ಹೊಂದಿದ್ದಾರೆ.












Click it and Unblock the Notifications