ಲೋಕ ಸಮರ: ನಿರುದ್ಯೋಗಿ ಕನ್ಹಯ್ಯಾ ಕುಮಾರ್ ಬಳಿ 6 ಲಕ್ಷ ರುಪಾಯಿ ಆಸ್ತಿ

ಪಾಟ್ನಾ (ಬಿಹಾರ), ಏಪ್ರಿಲ್ 10: ದೇಶದ ಗಮನ ಸೆಳೆದ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶ್ರೀಮಂತ ಪಕ್ಷದ ಸಚಿವರ ಎದುರು ಸ್ಪರ್ಧೆಗೆ ಇಳಿದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 8.5 ಲಕ್ಷ ರುಪಾಯಿ ವಾರ್ಷಿಕ ಆದಾಯ ತೋರಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಿಹಾರದ ಬೆಗುಸರಾಯ್ ಕ್ಷೇತ್ರದಲ್ಲಿ ಎಡಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಅವರು, ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಆ ವೇಳೆ ಅಫಿಡವಿಟ್ ನಲ್ಲಿ ಮಾಹಿತಿ ನೀಡಿದ್ದು, ಕನ್ಹಯ್ಯಾ ಕುಮಾರ್ ವಿರುದ್ಧ ಐದು ಪ್ರಕರಣಗಳಿವೆ. ಮೂರು ವರ್ಷಗಳ ಹಿಂದೆ ಕನ್ಹಯ್ಯಾರಿಗೆ ರಾತ್ರೋರಾತ್ರಿ ಹೆಸರು ತಂದ ಪ್ರಕರಣಗಳಿವು.

ಮೂರು ವರ್ಷದ ಹಿಂದೆ ಜೆಎನ್ ಯು ವಿದ್ಯಾರ್ಥಿ ಸಂಘಟನೆ ಮುಖ್ಯಸ್ಥರಾಗಿದ್ದ ಕನ್ಹಯ್ಯಾ ಕುಮಾರ್ ರನ್ನು ದೇಶದ್ರೋಹದ ಆರೋಪದ ಮೇಲೆ ಇತರ ವಿದ್ಯಾರ್ಥಿಗಳಾದ ಉಮರ್ ಖಾಲೀದ್ ಹಾಗ್ಊ ಅನಿರ್ಬನ್ ಭಟ್ಟಾಚಾರ್ಯ ಜತೆಗೂಡಿ ಬಂಧಿಸಲಾಗಿತ್ತು.

Kanhaiya Kumar has assets of around 6 lakh, says affidavit

ಈ ವರ್ಷ ಮೂವತ್ತೆರಡು ವರ್ಷದ ಕನ್ಹಯ್ಯಾ ತಮ್ಮ ತವರು ನೆಲದಿಂದ ಎಡರಂಗದ ಅಭ್ಯರ್ಥಿ ಆಗಿದ್ದಾರೆ. ಬಿಜೆಪಿಯಿಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಆರ್ ಜೆಡಿಯಿಂದಾ ತನ್ವೀರ್ ಹಸನ್ ಕಣದಲ್ಲಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ತನ್ನ ಅಫಿಡವಿಟ್ ನಲ್ಲಿ ಕನ್ಹಯ್ಯಾ ಕುಮಾರ್ ನಿರುದ್ಯೋಗಿ ಎಂದು ಘೋಷಿಸಿಕೊಂಡಿದ್ದಾರೆ. ಜೀವನಕ್ಕಾಗಿ ಫ್ರೀಲಾನ್ಸ್ ಬರಹ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕನಾಗಿ ತೆರಳುವುದಾಗಿ ಹೇಳಿದ್ದಾರೆ. ಅವರ ಬಹುತೇಕ ಆದಾಯವು 'ಬಿಹಾರ್ ಟು ತಿಹಾರ್' ಪುಸ್ತಕದ ಮಾರಾಟದಿಂದಲೇ ಬರುತ್ತದೆ.

ಅವರ ಬಳಿ ಕೈಯಲ್ಲಿ 24 ಸಾವಿರ ನಗದು ಇದೆ. ಹೂಡಿಕೆ ಮತ್ತು ಬ್ಯಾಂಕ್ ನ ಉಳಿತಾಯ ಸೇರಿ 3,57,848 ರುಪಾಯಿ ಇದೆ. ಕನ್ಹಯ್ಯಾ ಕುಮಾರ್ ರ ಅಫಿಡವಿಟ್ ಪ್ರಕಾರ, ಒಂದು ಚರಾಸ್ತಿ ಇದೆ. ಪಿತ್ರಾರ್ಜಿತವಾದ ಆಸ್ತಿ ಒಂದು ಮನೆ ಇದೆ. ಬೆಗುಸರಾಯ್ ನಲ್ಲಿ 1.5 ಡೆಸಿಮಲ್ (650 ಚದರಡಿ) ಭೂಮಿ ಇದೆ. ಅದರ ಮೌಲ್ಯ 2 ಲಕ್ಷ ರುಪಾಯಿ. ಯಾವುದೇ ಕೃಷಿ ಭೂಮಿ ಇದೆ. ಕನ್ಹಯ್ಯಾ ಅವರ ತಂದೆ ಕೃಷಿಕರು, ತಾಯಿ ಅಂಗನವಾಡಿ ಕಾರ್ಯಕರ್ತೆ.

ಅಂದಹಾಗೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕನ್ಹಯ್ಯಾ ಅವರೇನೂ ಅತ್ಯಂತ ಬಡ ಅಭ್ಯರ್ಥಿ ಏನಲ್ಲ. ತೆಲಂಗಾಣದ ಚೆವೆಲ್ಲಾ ಲೋಕಸಭಾ ಕ್ಷೇತ್ರದಿಂದ ಜೆಡಿಯು ಟಿಕೆಟ್ ನಿಂದ ಸ್ಪರ್ದಿಸುತ್ತಿರುವ ನಲ್ಲ ಪ್ರೇಮ್ ಕುಮಾರ್ 500 ರುಪಾಯಿ ತಮ್ಮ ಆಸ್ತಿ ಎಂದು ಘೋಷಿಸಿದ್ದಾರೆ. ಇನ್ನು ಒಡಿಶಾದ ಕೋರಾಪುಟ್ ಕ್ಷೇತ್ರದಿಂದ ಸಿಪಿಐ-ಎಂಎಲ್ ಅಭ್ಯರ್ಥಿ ರಾಜೇಂದ್ರ ಕೇಂದ್ರುಕಾ 565 ರುಪಾಯಿ ಆಸ್ತಿ ಘೋಷಣೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+