Jio 5.5G: ರಿಲಯನ್ಸ್ ಜಿಯೋ 5.5G ಹೊಸ ಸೂಪರ್ ಫಾಸ್ಟ್ ನೆಟ್‌ವರ್ಕ್, ಏನಿದರ ಲಾಭ ?
ಮುಖೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಬಂಪರ್ ಆಫರ್‌ವೊಂದನ್ನು ಕೊಟ್ಟಿದೆ. ನೆಟ್ ವರ್ಕ್ ಅಪ್‌ಡೇಟ್ ಎನ್ನುವುದು ದೇಶದಲ್ಲಿ ಮುಂದುವರಿಯುತ್ತಲ್ಲೇ ಇದೆ. ವಿಶ್ವದಲ್ಲೇ ನೆಟ್‌ವರ್ಕ್ ಮೇಲೆ ಭರ್ಜರಿ ಕೆಲಸ ನಡೆಯುತ್ತಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗಾಗಿ 5.5G ನೆಟ್‌ವರ್ಕ್ ಅನ್ನು ಅನಾವರಣಗೊಳಿಸಿದೆ. 10Gbps ವರೆಗೆ ಡೌನ್‌ಲೋಡ್ ವೇಗವನ್ನು ನೀಡುತ್ತದೆ. ಹಾಗಾದರೆ ಜಿಯೋದ 5.5ಜಿ ನೆಟ್ ವರ್ಕ್ ಎಂದರೇನು. ಈ ನೆಟ್ ವರ್ಕ್ ಹೆಂಗೆ ಕೆಲಸ ಮಾಡುತ್ತದೆ. ಹೊಸ ನೆಟ್‌ವರ್ಕ್‌ನಿಂದ ಯಾವ ರೀತಿ ಡೌನ್‌ಲೋಡ್ ವೇಗವಾಗಲಿದೆ ಎನ್ನುವ ಡೀಟೆಲ್ಸ್ ಇಲ್ಲಿದೆ.
ಮೊಬೈಲ್ ನೆಟ್‌ವರ್ಕ್ ದುನಿಯಾದಲ್ಲಿ ಜಿಯೋ ಬೃಹತ್ ಉದ್ಯಮವಾಗಿ ಬೆಳೆದಿದೆ. ಇದೀಗ ಜಿಯೋದ ಹೊಸ ಆಫರ್ ಸಿಕ್ಕಾಪಟ್ಟೆ ಟ್ರೆಂಡ್ ಕ್ರಿಯೇಟ್ ಮಾಡಿದೆ ಜಿಯೋ 5.5ಜಿ ನೆಟ್ ವರ್ಕ್‌ನ ವಿವರ ಇಲ್ಲಿದೆ.

ಜಿಯೋದಿಂದ 5.5G ನೆಟ್‌ವರ್ಕ್: ಜಿಯೋ ತನ್ನ 5.5ಜಿ ನೆಟ್‌ವರ್ಕ್ ಪರಿಚಯಿಸಿದೆ. ಈ ನೆಟ್‌ವರ್ಕ್ ಈಗ ಮಾರುಕಟ್ಟೆಯಲ್ಲಿ ಇರುವ ಪ್ರಮುಖ ನೆಟ್‌ವರ್ಕ್‌ಗಳಲ್ಲಿ ಒಂದಾಗಿದೆ. 5Gಯ ಅಭಿವೃದ್ಧಿ ಮಾಡಿದ ವರ್ಶನ್ ಜಿಯೋದ 5.5G ಆಗಿದೆ. ಇದರಿಂದ ವೇಗವಾಗಿ ನೆಟ್‌ವರ್ಕ್ ಸಿಗುತ್ತದೆ. ನೆಟ್‌ವರ್ಕ್‌ನಲ್ಲಿ ಸಮಸ್ಯೆ ಆಗುವುದಿಲ್ಲ. ಅಲ್ಲದೆ ಮೂರು ನೆಟ್‌ವರ್ಕ್ ಸೆಲ್‌ಗಳ ಕನೆಕ್ಟಿವಿಟಿ ಇರುತ್ತದೆ.
ಅಲ್ಲದೆ ಇದರ ಇನ್ನಷ್ಟು ವಿಶೇಷತೆಗಳೆಂದರೆ 10Gbps ವರೆಗೆ ಡೌನ್‌ಲೋಡ್ ವೇಗ ಇರಲಿದೆ. ಇದರಿಂದ ನೀವು ಹಾಡು, ಸಿನಿಮಾ ಅಥವಾ ನಿಮಗೆ ಇಷ್ಟವಾದ ಸ್ಟೇಟಸ್‌ಗಳನ್ನು ಅತ್ಯಂತ ವೇಗವಾಗಿ ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶ ಸಿಗುತ್ತದೆ. ಅಪ್‌ಲೋಡ್ ಸ್ಪೀಡ್1Gbps ಇರಲಿದೆ. ನೆಟ್‌ವರ್ಕ್ ವೇಗವಾಗಿ ಹಾಗೂ ಸ್ಥಿರವಾಗಿ ಇರಲಿದೆ. ಇದರಿಂದ ಜಿಯೋದ ಗ್ರಾಹಕರು ಹೊಸ ಅನುಭವವನ್ನು ಹೊಂದಲಿದ್ದಾರೆ ಅಂತ ಜಿಯೋ ಹೇಳಿಕೊಂಡಿದೆ.

5Gಗಿಂತ 5.5G ಹೇಗೆ ಭಿನ್ನವಾಗಿದೆ: 5ಜಿಗೆ ಹೋಲಿಕೆ ಮಾಡಿದರೆ 5.5ಜಿ ಇನ್ನಷ್ಟು ಉತ್ತಮ ವೇಗವನ್ನು ಹಾಗೂ ನಿಖರ ನೆಟ್‌ವರ್ಕ್ ಕೊಡುವ ನೆಟ್ ವರ್ಕಿಂಗ್ ಸಿಸ್ಟಂ ಆಗಿದೆ. ಇದರ ವೇಗವು ಡೌನ್‌ಲೋಡ್‌ಗೆ 10Gbps ಹಾಗೂ ಅಪ್‌ಲೋಡ್‌ಗೆ 1Gbps ವರೆಗೆ ಇರಲಿದೆ.
ಹಲವು ಟವರ್‌ಗಳಿಗೆ ಏಕಕಾಲಿಕದಲ್ಲಿ ಈ ನೆಟ್ ವರ್ಕ್ ಲಿಂಕ್ ಮಾಡುತ್ತವೆ. ನೆಟ್ ವರ್ಕ್‌ನಲ್ಲಿ ಯಾವುದೇ ಸಮಸ್ಯೆಗಳು ಆಗುವುದಿಲ್ಲ ಅಂತ ಜಿಯೋ ಹೇಳಿಕೊಂಡಿದೆ.
ಒಂದು ಹೆಜ್ಜೆ ಮುಂದೆ: ದೇಶದಲ್ಲಿ ವಿವಿಧ ನೆಟ್‌ವರ್ಕ್‌ಗಳು ಇನ್ನೂ 5ಜಿಗೆ ಕಾಲಿಡುತ್ತಿದ್ದಾರೆ. ಈ ರೀತಿ ಇರುವಾಗಲೇ ಜಿಯೋ 5.5ಜಿ ಸೂಪರ್ ಫಾಸ್ಟ್ ನೆಟ್ ವರ್ಕ್‌ಗೆ ಕಾಲಿರಿಸುತ್ತಿದೆ. ಇದರಿಂದ ವೇಗವಾದ ನೆಟ್ ವರ್ಕ್ ಸಿಗಲಿದೆ. ಇನ್ನು ನೀವು ಕೆಲವು ನೆಟ್ ವರ್ಕ್‌ಗಳನ್ನು ಬಳಸುವಾಗ ಯಾವುದಾರು ಜನನಿಬಿಡಿ ಪ್ರದೇಶ, ಅಂಡರ್‌ಗ್ರೌಂಡ್ ಇಲ್ಲವೇ ನಗರದಿಂದ ಸ್ವಲ್ಪ ದೂರ ಇದ್ದರೆ ನೆಟ್ ವರ್ಕ್ ಸಮಸ್ಯೆ ಆಗುಬಹುದು. ಆದರೆ, ಜಿಯೋ ಹೊಸ ನೆಟ್‌ವರ್ಕ್ ಈ ರೀತಿಯ ಸಮಸ್ಯೆಗಳಿಂದ ಬಳಕೆದಾರರಿಗೆ ಮುಕ್ತಿ ಕೊಡುತ್ತದೆ. ಈ ಎಲ್ಲಾ ಕಾರಣಗಳಿಗೆ ಜಿಯೋ 5.5ಜಿ ನೆಟ್ ವರ್ಕ್ ಬೆಸ್ಟ್ ಆಗಿದೆ.












Click it and Unblock the Notifications