ಮಹಿಳೆಯರು ಮತ್ತು ಗರ್ಭಿಣಿಯರಿಗೆ ಕೊರೊನಾ ಲಸಿಕೆ ಸುರಕ್ಷಿತವೇ?

ನವದೆಹಲಿ, ಜನವರಿ.15: ಮೊದಲು ಕೊರೊನಾವೈರಸ್ ಸೋಂಕಿಗೆ ಲಸಿಕೆ ಯಾವಾಗ ಬರುತ್ತದೆಯೋ ಎಂದು ಎದುರು ನೋಡಲಾಗುತ್ತಿತ್ತು. ದೇಶದಲ್ಲಿ ಇದೀಗ ಕೊವಿಡ್-19 ಲಸಿಕೆ ಅಭಿಯಾನದ ಹೊತ್ತಿನಲ್ಲಿ ಯಾರು ಲಸಿಕೆಯನ್ನು ಪಡೆದುಕೊಳ್ಳುವುದು ಸುರಕ್ಷಿತ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.

ದೇಶದ ಎರಡು ಪ್ರಮುಖ ಕಂಪನಿಗಳು ಉತ್ಪಾದಿಸಿರುವ ಕೊವಿಡ್-19 ಲಸಿಕೆಗಳು ಈಗಾಗಲೇ ಆರೋಗ್ಯ ಕೇಂದ್ರಗಳಿಗೆ ತಲುಪಿವೆ. ಜನವರಿ.16ರ ಬೆಳಗ್ಗೆ 10.30 ಗಂಟೆಗೆ ಕೊವಿಡ್-19 ಲಸಿಕೆ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಮೊದಲ ಹಂತದಲ್ಲಿ 3 ಕೋಟಿ ವೈದ್ಯಕೀಯ ಸಿಬ್ಬಂದಿಗೆ ಉಚಿತವಾಗಿ ಲಸಿಕೆ ನೀಡಲು ನಿರ್ಧರಿಸಲಾಗಿದೆ.

ಎರಡನೇ ಹಂತದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 50 ವರ್ಷದೊಳಗಿನ ವೃದ್ಧರಿಗೆ ಕೊರೊನಾ ಲಸಿಕೆಯನ್ನು ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಈಗಾಗಲೇ ಘೋಷಿಸಿದೆ. ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ ಕೊವಿಡ್-19 ಲಸಿಕೆ ಸುರಕ್ಷಿತವೇ. ಗರ್ಭಿಣಿಯರಿಗೆ ಈ ಲಸಿಕೆಯನ್ನು ನೀಡಬಹುದುೇ. ಗರ್ಭಿಣಿಯರಿಗೆ ಲಸಿಕೆ ನೀಡುವುದರಿಂದ ಯಾವುದೇ ಅಪಾಯವಾಗುವುದಿಲ್ಲವೇ. ಪುಟ್ಟ ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಅನುಮತಿ ಇದೆಯೇ ಎನ್ನುವುರದ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಗರ್ಭಿಣೆಯರಿಗೆ ಕೊರೊನಾ ಲಸಿಕೆಯಿಂದ ಅಪಾಯವಿಲ್ಲ

ಗರ್ಭಿಣೆಯರಿಗೆ ಕೊರೊನಾ ಲಸಿಕೆಯಿಂದ ಅಪಾಯವಿಲ್ಲ

ದೇಶದಲ್ಲಿ ಪ್ರಸ್ತುತ ಅನುಮೋದನೆ ಪಡೆದಿರುವ ಎರಡು ಕಂಪನಿಗಳ ಲಸಿಕೆಯನ್ನು ಪಡೆದುಕೊಳ್ಳುವುದರಿಂದ ಗರ್ಭಿಣಿಯರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಹೇಳಲಾಗಿದೆ. ಗರ್ಭಾವಸ್ಥೆಯಲ್ಲಿ ಸುರಕ್ಷಿತವಾಗಿದ್ದು, ಹಾನಿ ಉಂಟು ಮಾಡಿರುವ ಬಗ್ಗೆ ಯಾವುದೇ ದತ್ತಾಂಶಗಳಿಲ್ಲ. ಗರ್ಭಿಣಿಯರು ಕೊವಿಡ್-19 ಲಸಿಕೆ ಬಳಸುವುದಕ್ಕೆ ಶಿಫಾರಸ್ಸುಗಳು ಕೂಡಾ ಇಲ್ಲ.

ಕೊರೊನಾ ಲಸಿಕೆ ಬಂಜೆತನಕ್ಕೆ ಕಾರಣವಾಗುತ್ತದೆಯೇ?

ಕೊರೊನಾ ಲಸಿಕೆ ಬಂಜೆತನಕ್ಕೆ ಕಾರಣವಾಗುತ್ತದೆಯೇ?

ಕೊರೊನಾವೈರಸ್ ಲಸಿಕೆ ವಿತರಣೆಗೆ ಎಲ್ಲ ರೀತಿಯ ಸಿದ್ಧತೆಗಳು ಕೂಡಾ ನಡೆಯುತ್ತಿವೆ. ಆದರೆ, ಗರ್ಭಿಣಿಯರಿಗೆ ಲಸಿಕೆಯು ಸುರಕ್ಷಿತವೋ ಅಪಾಯವೋ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಜೊತೆಗೆ ಲಸಿಕೆ ತೆಗೆದುಕೊಳ್ಳುವದರಿಂದ ಭವಿಷ್ಯದಲ್ಲಿ ಮಹಿಳೆಯರ ಬಂಜೆತನಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗುವುದಿಲ್ಲ.

ಮಕ್ಕಳಿಗೆ ನೀಡುವುದಿಲ್ಲ ಕೊವಿಡ್-19 ಲಸಿಕೆ

ಮಕ್ಕಳಿಗೆ ನೀಡುವುದಿಲ್ಲ ಕೊವಿಡ್-19 ಲಸಿಕೆ

ಮೊದಲ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಎರಡನೇ ಹಂತದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕೊರೊನಾ ಲಸಿಕೆ ನೀಡುವುದಕ್ಕೆ ನಿರ್ಧರಿಸಲಾಗಿದೆ. ಸದ್ಯದ ಮಟ್ಟಿಗೆ 14 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಕೊವಿಡ್ ಲಸಿಕೆ ನೀಡುವಂತೆ ಸರ್ಕಾರವು ಸಲಹೆ ನೀಡುತ್ತದೆ.

ಎರಡೂ ಕಂಪನಿಗಳ ಕೊರೊನಾ ಲಸಿಕೆಗಳು ಸುರಕ್ಷಿತ

ಎರಡೂ ಕಂಪನಿಗಳ ಕೊರೊನಾ ಲಸಿಕೆಗಳು ಸುರಕ್ಷಿತ

ದೇಶದ ನಿಯಂತ್ರಕ ಸಂಸ್ಥೆಗಳು ಕೊರೊನಾ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ದೃಢಪಡಿಸಿದ ನಂತರವಷ್ಟೇ ಅನುಮೋದನೆ ನೀಡಲಾಗಿರುತ್ತದೆ. ಭಾರತದಲ್ಲಿ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ನೇತೃತ್ವದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) ಲಸಿಕೆಗೆ ಅನುಮೋದನೆ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಲಸಿಕೆ ಬೆಳವಣಿಗೆ ವಿಜ್ಞಾನವು ಲಸಿಕೆ ಸ್ವೀಕರಿಸುವವರ ದೇಹದಲ್ಲಿ ರೋಗವನ್ನು ಉಂಟು ಮಾಡುವುದಿಲ್ಲ. ಅನುಮೋದಿತ ಲಸಿಕೆಯು ಸ್ವೀಕರಿಸುವವರಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳುವ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+