Get Updates
Get notified of breaking news, exclusive insights, and must-see stories!

ಕೆಲವೇ ದಿನಗಳಲ್ಲಿ ಭರ್ಜರಿ ಫೀಚರ್ಸ್‌ ಹೊಂದಿರುವ ಎರಡು iQOO ಮೊಬೈಲ್ಸ್‌

ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಯ ಮೊಬೈಲ್‌ಗಳು ಈಗಾಗಲೇ ಸದ್ದು ಮಾಡುತ್ತಿವೆ. ಈ ಪಟ್ಟಿಯಲ್ಲಿ ಚೀನಾ ಮೂಲದ ಕಂಪನಿಗಳೇ ಹೆಚ್ಚಿನ ಸ್ಥಾನವನ್ನು ಅಲಂಕರಿಸಿವೆ. ಗ್ರಾಹಕರನ್ನು ತನ್ನತ್ತ ಸೆಳೆಯಲು ಹಲವು ಕಂಪನಿಗಳ ಫೋನ್‌ಗಳು ಈಗಾಗಲೇ ಸಿದ್ಧತೆ ನಡೆಸಿದ್ದ, ಈ ಸಾಲಿಗೆ ಈಗ ಮತ್ತೊಂದು ಫೋನ್‌ ಲಗ್ಗೆ ಇಟ್ಟಿದೆ.

ಗ್ರಾಹಕರು ತಮ್ಮ ಅಗತ್ಯತೆಯನನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್ ಫೋನ್‌ಗಳನ್ನು ಕೊಳ್ಳುತ್ತಾರೆ. ಈ ಮೊಬೈಲ್‌ ಫೋನ್‌ಗಳು ಕ್ಲಾಸಿಕ್‌ ಲುಕ್‌ ಹಾಗೂ ಹೊಸ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಮೊಬೈಲ್‌ ಕಂಪನಿಗಳು ಹೊಸ ಫೋನ್‌ ಲಾಂಚ್ ಮಾಡುವಾಗ ಕ್ಯಾಮೆರಾ, ಮೆಮರಿ ಚಿಪ್‌, ಡಿಸ್‌ಪ್ಲೇ, ಬ್ಯಾಟರಿ, ಚಾರ್ಜರ್‌ ಹೀಗೆ ಹತ್ತು ಹಲವು ವಿಬಾಗಗಳಲ್ಲಿ ಕೆಲಸವನ್ನು ಮಾಡುತ್ತವೆ.

iQOO Z9 Pro Spotted on BIS Mid-Range Flagship with 12GB RAM and 64MP Camera Set to Launch Soon

ಎರಡು ಹೊಸ ಫೋನ್‌ ಲಾಂಚ್‌ಗೆ ಸಿದ್ಧತೆ

ಸ್ಮಾರ್ಟ್‌ಫೋನ್ ತಯಾರಕ ಕಂಪನಿ IQ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಎರಡು ಶಕ್ತಿಶಾಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. iQOO Z9 Lite ಮತ್ತು iQOO Z9 ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. IQ ನ ಮುಂಬರುವ ಸ್ಮಾರ್ಟ್‌ಫೋನ್ iQOO Z9 Pro ಬಿಡುಗಡೆಗೆ ಸಿದ್ಧತೆ ನಡೆಸಿದೆ. ವಿವೋ, ಒಪ್ಪೋ ಮತ್ತು ಸ್ಯಾಮ್‌ಸಂಗ್‌ನ ಮಧ್ಯಮ ಶ್ರೇಣಿಯ ಪ್ರಮುಖ ಸ್ಮಾರ್ಟ್‌ಫೋನ್‌ಗಳಿಗೆ ಈ ಸ್ಮಾರ್ಟ್‌ಫೋನ್ ಭರ್ಜರಿ ಪೈಪೋಟಿ ನೀಡಲಿದೆ.

ಈ ಫೋನ್‌ ಕೊಳ್ಳುವ ಆಸೆ ಇದ್ದರೆ ಕೊಂಚ ದಿನ ಕಾಯಲೇ ಬೇಕು. ಮಿಡ್‌ ರೇಂಜ್‌ ಸೆಗ್ಮೆಂಟ್‌ನಲ್ಲಿ ಈ ಫೋನ್‌ ಸದ್ದು ಮಾಡಲು ರೆಡಿಯಾಗಿದೆ. iQOO Z9 Pro ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡಬಹುದು. ಈ ಫೋನ್‌ ಬಿಳಿ ಮತ್ತು ಕಿತ್ತಳೆ ಬಣ್ಣದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಈ ಮೊಬೈಲ್‌ ದೊಡ್ಡ 12 ಜಿಬಿ ರ್ಯಾಮ್‌ ಹಾಗೂ 256 ಜಿಬಿ ಇಂರ್ಟನಲ್‌ ಸ್ಟೋರೇಜ್‌ ಹೊಂದಿರಲಿದೆ.

ಈ ಸ್ಮಾರ್ಟ್‌ಫೋನ್‌ನಲ್ಲಿ ಐಕ್ಯೂ ಅಮಲ್ಡೋ ಡಿಸ್‌ಪ್ಲೇ ಹೊಂದಿರುವ ಪ್ಯಾನೆಲ್ ಗ್ರಾಹಕರಿಗೆ ನೀಡುವ ಚಾನ್ಸ್‌ ಇದೆ. ಈ ಮೊಬೈಲ್‌ ಭರ್ಜರಿ 64 ಮೆಗಾ ಪಿಕ್ಸಲ್‌ ಕ್ಯಾಮೆರಾ ನೀಡುವ ಸಾಧ್ಯತೆ ಇದೆ. iQOO Z7 Pro ಫೋನಿನ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿದೆ. ಕಂಪನಿಯು ಈ ಫೋನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.

ಬಿಐಎಸ್‌ನಲ್ಲಿ ಕಾಣಿಸಿಕೊಂಡ ಫೋನ್‌

iQOO Z9 Pro ಬಿಡುಗಡೆಯ ಕುರಿತು IQ ಯಾವುದೇ ಮಾಹಿತಿಯನ್ನು ನೀಡಿಲ್ಲ, ಆದರೆ ಈ ಸ್ಮಾರ್ಟ್‌ಫೋನ್ ಅನ್ನು BIS ವೆಬ್‌ಸೈಟ್ ಅಂದರೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್‌ನಲ್ಲಿ ಗುರುತಿಸಲಾಗಿದೆ. ಕಂಪನಿಯು ಶೀಘ್ರದಲ್ಲೇ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದೆಂದು ಬಿಐಎಸ್ ಪಟ್ಟಿಯಿಂದ ದೃಢಪಡಿಸಲಾಗಿದೆ.

ಏನೆಲ್ಲಾ ವಿಶೇಷತೆಗಳನ್ನು ಹೊಂದಿರಬಹುದು?

ಈ ಫೋನ್‌ 6.7 ಇಂಚಿನ 3D ಕರ್ವ್ಡ್ ಅಮೊಲ್ಡ್‌ ಡಿಸ್‌ಪ್ಲೇ ಹೊಂದಿರಬಹುದು. ಸ್ಮಾರ್ಟ್ಫೋನ್ 12GB RAM ಮತ್ತು 256GB ವರೆಗೆ ಸಂಗ್ರಹಣೆಯನ್ನು ಹೊಂದಬಹುದು. ಮಿಡಿಯಾ ಟೆಕ್‌ ಡಿಮೋನ್ಸಿಟಿ 7200 ಭರ್ಜರಿ ಚಿಪ್‌ ಸೆಟ್‌ನೊಂದಿಗೆ ಮಾರುಕಟ್ಟೆಗೆ ಬರಲಿದೆ. 62 ಮೆಗಾ ಪಿಕ್ಸ್‌ಲ್‌ನ ಪ್ರೈಮರಿ ಕ್ಯಾಮೆರಾ ಹೊಂದಿರುವ ಸಾಧ್ಯತೆ ಇದೆ. ವಿಡಿಯೋ ಹಾಗೂ ಸೆಲ್ಫಿಗಾಗಿ ಈ ಫೋನ್‌ ಮುಂಭಾಗದಲ್ಲಿ 16 ಎಂಪಿ ಕ್ಯಾಮೆರಾ ನೀಡುವ ಸಂಭವವಿದೆ. ಈ ಮೊಬೈಲ್‌ 4600mAhನ ದೊಡ್ಡ ಬ್ಯಾಟರಿ ಹೊಂದಿರುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+