ರವಿ ಬೆಳಗೆರೆ ಹೊಸ ಪುಸ್ತಕ 'ಇಡ್ಲಿ ವಡ ಡೆಡ್ಲಿ ಮರ್ಡರ್' ಬಗ್ಗೆ ಇಂಟರೆಸ್ಟಿಂಗ್ ಡೀಟೇಲ್ಸ್

ಇನ್ನೇನು ಬಿಡುಗಡೆ ಆಗಬೇಕಿರುವ ಪುಸ್ತಕದ ಬಗ್ಗೆ ರವಿ ಬೆಳಗೆರೆ ಮಾತನಾಡಿದ್ದಾರೆ. ಆ ಪುಸ್ತಕ ಬಹಳ ಹಿಂದೆಯೇ ಬರಬೇಕಿತ್ತು. ಅದಕ್ಕಾಗಿ ನಾನು ಖರ್ಚು ಮಾಡಿದ ಹಣ, ಮೀಸಲಿಟ್ಟ ಸಮಯ, ಓಡಾಡಿದ ಸ್ಥಳಗಳು ಇವೆಲ್ಲದರ ಬಗ್ಗೆ ಬರೆದರೆ ಅದೊಂದು ಪುಸ್ತಕ ಆದೀತು. 'ರಂಗವಿಲಾಸ ಬಂಗಲೆ ಕೊಲೆಗಳು' ಪುಸ್ತಕದ ನಂತರ ಆ ಥರದ ಸಬ್ಜೆಕ್ಟ್ ಬರೆಯುತ್ತಿದ್ದೇನೆ ಎಂದು ತಮ್ಮ ಹೊಸ ಪುಸ್ತಕ 'ಇಡ್ಲಿ ವಡ ಡೆಡ್ಲಿ ಮರ್ಡರ್' ಬಗ್ಗೆ ಮಾಹಿತಿ ಹಂಚಿಕೊಂಡರು ಪತ್ರಕರ್ತ-ಲೇಖಕ ರವಿ ಬೆಳಗೆರೆ.

ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಶರವಣ ಭವನ ಹೋಟೆಲ್ ಸಮೂಹದ ಮಾಲೀಕ ಪಿ.ರಾಜಗೋಪಾಲ್ ಈ ವರ್ಷ ಜುಲೈ ಒಂಬತ್ತನೇ ತಾರೀಕಿನೊಳಗೆ ಪೊಲೀಸರ ಮುಂದೆ ಶರಣಾಗಿ, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಬೇಕು. ತನ್ನದೇ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿಸಿದ ಆರೋಪ ರಾಜ್ ಗೋಪಾಲ್ ವಿರುದ್ಧ ಸಾಬೀತಾಗಿದೆ.

ಆ ಪರಿಯ ಶ್ರೀಮಂತಿಕೆ, ಯಶಸ್ಸು, ಕೀರ್ತಿ, ಇಬ್ಬರು ಪತ್ನಿಯರು, ಮಕ್ಕಳು-ಮೊಕ್ಕಳು.. ಚಂದದ ಸಂಸಾರ ಇದ್ದ ರಾಜ್ ಗೋಪಾಲ್ ವೃದ್ಧಾಪ್ಯದಲ್ಲಿ ಮಾಡಿಕೊಂಡ ಅಪಸವ್ಯ ಇದು. ಹದಿನೆಂಟು ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಶರವಣ ಭವನ್ ಹೋಟೆಲ್ ಸಮೂಹದ ಮಾಲೀಕ ರಾಜ್ ಗೋಪಾಲ್ ಅಪರಾಧಿ ಸ್ಥಾನದಲ್ಲಿದ್ದು, ಆಗಿನ ಘಟನೆಗಳನ್ನು, ಕುತೂಹಲಕಾರಿ ಮಾಹಿತಿಗಳನ್ನು ತೆರೆದಿಡುವ ಪುಸ್ತಕವೇ 'ಇಡ್ಲಿ ವಡ ಡೆಡ್ಲಿ ಮರ್ಡರ್'.

Interesting details about writer Ravi Belageres new book Idli Vada Deadly Murder

ಜೀವಜ್ಯೋತಿ ಎಂಬ ಅದಾಗಲೇ ಮದುವೆಯಾಗಿದ್ದ ಹೆಣ್ಣುಮಗಳನ್ನು ರಾಜ್ ಗೋಪಾಲ್ ಎರಡನೇ ಮದುವೆ ಆಗಲು ಕೂಡ ಸಿದ್ಧವಾಗಿ, ಅವಳ ಗಂಡನನ್ನು ಕೊಡೈಕೆನಾಲ್ ನ ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿಸಿದ್ದು ತಮಿಳುನಾಡಿನಲ್ಲಂತೂ ಭಾರೀ ಸುದ್ದಿ ಆಗಿತ್ತು. ಆ ಕೊಲೆ ನಡೆದ ಅರಣ್ಯಪ್ರದೇಶದಲ್ಲಿ ಸುತ್ತಾಡಿ, ಜೀವ ಜ್ಯೋತಿಯ ಗಂಡ ಶಾಂತಕುಮಾರ್ ನ ಸಮಾಧಿಯ ಸ್ಥಳಕ್ಕೆ ತೆರಳಿ, ಜನರನ್ನು ಮಾತನಾಡಿಸಿ ಬಂದಿದ್ದಾರೆ ರವಿ ಬೆಳಗೆರೆ.

Interesting details about writer Ravi Belageres new book Idli Vada Deadly Murder

ಇದರ ಜತೆಗೆ ಎಕ್ಸ್ ಕ್ಲೂಸಿವ್ ಫೋಟೋಗಳು ಈ ಪುಸ್ತಕದಲ್ಲಿ ಇರಲಿವೆ. ಜೀವನದಲ್ಲಿ ಎಲ್ಲವನ್ನೂ ಅನುಭವಿಸಿದ ಯಶಸ್ವಿ ಮನುಷ್ಯ ಏಕಿಷ್ಟು ಕ್ರೂರಿ ಆಗುತ್ತಾನೆ? ತನ್ನ ಮಗಳ ವಯಸ್ಸಿನವಳನ್ನು ಮದುವೆ ಆಗಲು ಆಕೆ ಗಂಡನನ್ನು ಏಕೆ ಕೊಲ್ಲಿಸುತ್ತಾನೆ? ಆ ಕೊಲೆ ಹೇಗೆ ನಡೆಯುತ್ತದೆ? ಇಂಥ ಹಲವಾರು ಪ್ರಶ್ನೆಗಳಿಗೆ ಪುಸ್ತಕದಲ್ಲಿ ಉತ್ತರ ಇದೆ ಎನ್ನುತ್ತಾರೆ ರವಿ ಬೆಳಗೆರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+