ಇನ್‍ಫ್ಲೂಯೆಂಜಾ ಪ್ರಕರಣ ಏರಿಕೆ; ಆರೋಗ್ಯ ಇಲಾಖೆಯಿಂದ ಜನರಿಗೆ ಸಲಹೆಗಳು

ಕರ್ನಾಟಕದಲ್ಲಿ ಫ್ಲೂ ಅಥವಾ ಇನ್‍ಫ್ಲೂಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿವೆ ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಜನರಿಗೆ ಹಲವು ಸಲಹೆಗಳನ್ನು ನೀಡಿದೆ.

ಬೆಂಗಳೂರು, ಮಾರ್ಚ್ 19; ಭಾರತದ ವಿವಿಧ ರಾಜ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಫ್ಲೂ ಅಥವಾ ಇನ್‍ಫ್ಲೂಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಋತುಮಾನದಲ್ಲಿ ರಾಜಸ್ಥಾನ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇನ್‍ಫ್ಲೂಯೆಂಜಾ ಮತ್ತು COVID-19 ಬಹುತೇಕ ಒಂದೇ ರೀತಿಯ ರೋಗ ಲಕ್ಷಣಗಳನ್ನು ಹೊಂದಿರುತ್ತದೆ. ಆದ್ದರಿಂದ ಜನರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಇನ್‍ಫ್ಲೂಯೆಂಜಾ ಪ್ರಕರಣಗಳು ಹೆಚ್ಚಾಗಿರುವ ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಪತ್ರವನ್ನು ಬರೆದಿದೆ. ಅಂಕಿ-ಅಂಶಗಳನ್ನು ವಿಶ್ಲೇಷಣೆ ಮಾಡಿ, ಹಲವು ಸೂಚನೆಗಳನ್ನು ನೀಡಲಾಗಿದೆ. ಒಸಾಮಿವಿ‌ ಆಂಟಿ-ವೈರಲ್ ಇನ್‍ಫ್ಲೂಯೆಂಜಾ ಚಿಕಿತ್ಸೆಗೆ ಉತ್ತಮ ಔಷಧವಾಗಿದ್ದು, ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಮತ್ತು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುತ್ತದೆ.

Influenza Cases Rising Karnataka Health Department Tips

ಕರ್ನಾಟಕದ ಆರೋಗ್ಯ ಇಲಾಖೆ ಇನ್‍ಫ್ಲೂಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜನರು ಹೇಗೆ? ಎಚ್ಚರಿಕೆ ವಹಿಸಬೇಕು ಎಂದು ಸಲಹೆಗಳನ್ನು ನೀಡಿದೆ. ಈ ಫ್ಲೂ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು ಜ್ವರವಿರುವ ವ್ಯಕ್ತಿಯ ಕೆಮ್ಮ ಅಥವಾ ಸೀನಿನಿಂದ ಅಥವಾ ಮೈಗಳಲ್ಲಿನ ತುಂತುರು ಹನಿಗಳ ಸಂಪರ್ಕದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸ್ವಯಂ ನಿಯಂತ್ರಣಕ್ಕೆ ಬರುವ ಈ ಸಾಂಕ್ರಾಮಿಕ ರೋಗವು 5-7ದಿನಗಳ ವರೆಗೆ ಇದ್ದು ಅತ್ಯಂತ ಕಡಿಮೆ ರೋಗಸ್ಥಿತಿ ಹಾಗೂ ಮರಣಗಳನ್ನು ಉಂಟುಮಾಡುವಂಥದ್ದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಶಿಶುಗಳು, ವಯಸ್ಸಾದವರು/ ಹಿರಿಯರು, ಗರ್ಭಿಣಿಯರು ಮತ್ತು ರೋಗ ನಿರೋಧಕ ಶಕ್ತಿ ಕುಂಠಿತಗೊಂಡವರು ಮತ್ತು ದೀರ್ಘಕಾಲದವರೆಗೆ ಔಷಧಗಳನ್ನು ಅದರಲ್ಲೂ ನಿರ್ದಿಷ್ಟವಾಗಿ ಸ್ಟಿರಾಯಿಡ್‌ಗಳನ್ನು ತೆಗೆದುಕೊಳ್ಳುತ್ತಿರುವವರು ಈ ರೋಗಕ್ಕೆ ಹೆಚ್ಚಾಗಿ ತುತ್ತಾಗಬಹುದಾಗಿದೆ. ಕೆಲವರಿಗೆ ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಬರುತ್ತದೆ. ಜ್ವರ, ಚಳಿ, ದೇಹಾಲಸ್ಯ, ಹಸಿವಾಗದಿರುವಿಕೆ, ಮೈಕೈನೋವು, ವಾಕರಿಕೆ, ಸೀನುವಿಕೆ ಮತ್ತು ಬಹುದಿನಗಳ ಒಣಕೆಮ್ಮು ಹಾಗೂ ಹಠಾತ್ ಅಸ್ವಸ್ಥತೆಗೊಳಗಾಗುವುದು ಈ ರೋಗದ ಸಾಮಾನ್ಯ ಲಕ್ಷಣಗಳಾಗಿದ್ದು, ಹೆಚ್ಚಿನ ಗಂಡಾಂತರದಲ್ಲಿರುವ ಜನಸಮುದಾಯದವರಿಗೆ ಈ ಲಕ್ಷಣಗಳು 3 ವಾರಗಳವರೆಗೂ ಕಾಣಿಸಿಕೊಳ್ಳಬಹುದು.

Influenza Cases Rising Karnataka Health Department Tips

ಇನ್‍ಫ್ಲೂಯೆಂಜಾ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಾರ್ವಜನಿಕರಿಗೆ ಈ ಕೆಳಕಂಡ ಸಲಹೆಗಳನ್ನು ಆರೋಗ್ಯ ಇಲಾಖೆ ಮೂಲಕ ನೀಡಲಾಗಿದೆ.

* ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಅಥವಾ ಟಿಶ್ಯೂ ಕಾಗದದಿಂದ ಮುಚ್ಚಿಕೊಳ್ಳುವುದು

* ಕೈಗಳನ್ನು ಸಾಬೂನಿನಿಂದ ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳುವುದು

* ಅಗತ್ಯವಿಲ್ಲದೇ ಕಣ್ಣು, ಮೂಗು ಮತ್ತು ಬಾಯಿಯನ್ನು ಕೈತೊಳೆಯದೆ ಮುಟ್ಟಬಾರದು

* ಅತಿಯಾದ ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ಕಡಿಮೆ ಮಾಡುವುದು. ಹೋಗಲೇಬೇಕಾದಲ್ಲಿ ಮುಖಗವಸು (ಮಾಸ್ಕ್) ಬಳಸುವುದು.

* ವೂ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳಿಂದ ಕನಿಷ್ಠ ದೂರವಿರುವಂತೆ ಎಚ್ಚರವಹಿಸುವುದು.

* ಚನ್ನಾಗಿ ನಿದ್ದೆ ಮಾಡುವುದು, ದೈಹಿಕ ಚಟುವಟಿಕೆಯಿಂದ ಇರುವುದು ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು

* ಸಾಕಷ್ಟು ನೀರನ್ನು ಕುಡಿಯುವುದು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು

ಏನು ಮಾಡಬಾರದು

* ಹಸ್ತಲಾಘವ, ಆಲಿಂಗನ ಮತ್ತು ಚುಂಬನದ ಮೂಲಕ ಶುಭ ಕೋರುವುದು

* ರಸ್ತೆಯಲ್ಲಿ/ ಜನರಿರುವ ಪ್ರದೇಶದಲ್ಲಿ ಉಗುಳದಿರುವುದು

* ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು/ ಆಂಟಿಬಯಾಟಿಕ್‌ಗಳನ್ನು ತೆಗೆದುಕೊಳ್ಳುವುದು

* ಅನಾವಶ್ಯಕವಾಗಿ ಜನಸಂದಣಿ ಇರುವ ಪ್ರದೇಶಗಳಿಗೆ ಭೇಟಿ ನೀಡುವುದು

ಇನ್‍ಫ್ಲೂಯೆಂಜಾ ಇದೆ ಎಂದು ಅನ್ನಿಸಿದರೆ; ಜ್ವರ, ಶೀತ, ಅಸ್ವಸ್ಥತೆ, ಹಸಿವಿಲ್ಲದಿರುವುದು, ಮೈಕೈ ನೋವು, ವಾಕರಿಕೆ, ಸೀನುವಿಕೆ ಹಾಗೂ ದೀರ್ಘಕಾಲದ ಒಣ ಕೆಮ್ಮು ಇತ್ಯಾದಿ ಇನ್‍ಫ್ಲೂಯೆಂಜಾ ರೋಗದ ಸಾಮಾನ್ಯ ಲಕ್ಷಣಗಳಾಗಿದ್ದು, ಈ ರೀತಿಯ ಲಕ್ಷಣಗಳು ಹೆಚ್ಚಾದಲ್ಲಿ ನಿರ್ಲಕ್ಷ ಮಾಡದೇ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವುದು. ವೈದ್ಯರು ಸಲಹೆ ಮಾಡಿದರೆ ಮನೆಯಲ್ಲಿಯೇ ಇರಿ, ಪ್ರಯಾಣಿಸ ಬೇಡಿ ಅಥವಾ ಕೆಲಸ/ ಶಾಲೆಗೆ ಹೋಗಬೇಡಿ. ಮುಖಗವಸು (ಮಾಸ್ಕ್) ಬಳಕೆ ಮಾಡಿರಿ. ರೋಗ ಲಕ್ಷಣಗಳು ಪ್ರಾರಂಭವಾದ ನಂತರ ಕನಿಷ್ಠ 7 ದಿನಗಳವರೆಗೆ ಅಥವಾ ನಿಮಗೆ 24 ಗಂಟೆಗಳ ಕಾಲ ರೋಗಲಕ್ಷಣಗಳಿಲ್ಲದಿರುವವರೆಗೆ (ಯಾವುದು ದೀರ್ಘಾವಧಿಯೋ ಅದು) ಇತರರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+