ಅಗ್ಗದ ಬೆಲೆಗೆ ಭರ್ಜರಿ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಆಗಲಿದೆ Infinix ಮೊಬೈಲ್
ಭಾರತದ ಮಾರುಕಟ್ಟೆಯ ಈಗಾಗಲೇ ಸದ್ದು ಮಾಡುತ್ತಿರುವ ಇನ್‌ಫಿನಿಕ್ಸ್ ಮತ್ತೊಮ್ಮೆ ಗ್ರಾಹಕರ ಚಿತ್ತ ಕದಿಯಲು ಸಕಲ ರೀತಿಯಲ್ಲಿ ತಯಾರಿ ಮಾಡಿಕೊಂಡಿದೆ. ಈ ಬಾರಿ ಅಗ್ಗದ ಬೆಲೆಯಲ್ಲಿ ಭರ್ಜರಿ ಫೀಚರ್ಸ್‌ಗಳನ್ನು ಕಂಪನಿ ನೀಡುತ್ತಿದ್ದು, ಬಜೆಟ್ ಫ್ರೆಂಡ್ಲಿ ಗ್ರಾಹಕರನ್ನು ಟಾರ್ಗೆಟ್ ಮಾಡಿಯೇ ಮೊಬೈಲ್ ವಿನ್ಯಾಸ ಗೊಳಿಸಲಾಗಿದೆ. ಈ ಫೋನ್ ಲುಕ್ ಸಖತ್ ಆಗಿದ್ದು, ಗ್ರಾಹಕ ಈ ಮೊಬೈಲ್‌ಗೆ ಮನಸೋಲುವಂತೆ ಮಾಡಿದೆ.
ಕಡಿಮೆ ಬಲೆಯಲ್ಲಿ ಇನ್‌ಫಿನಿಕ್ಸ್ ಕಂಪನಿ ನೋಟ್ 40 ಸರಣಿಯ ಫೋನ್ ಲಾಂಚ್ ಮಾಡಲು ಸಿದ್ಧತೆ ನಡೆದಿದೆ. ಈ ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲಿ ಸದ್ದು ಮಾಡಲಿವೆ. ಈ ಸರಣಿಯ ಈ ಹಿಂದೆ ಬಿಡುಗಡೆಯಾದ ಎಲ್ಲಾ ಮಾದರಿಗಳು ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ ಬರುತ್ತವೆ. ಈ ಬಜೆಟ್ ಫೋನ್‌ನ ನೋಟವು iPhone 15 Pro ನಂತೆ ಕಾಣುತ್ತದೆ..

ನೂತನ ಇನ್‌ಫಿನಿಕ್ಸ್ ಕಂಪನಿ ನೋಟ್ 40 ಸರಣಿಯ ಈ ಮೊಬೈಲ್ ಬ್ಯಾಕ್ ಸೈಡ್‌ನಲ್ಲಿ ಆಪಲ್ 15 ಪ್ರೋ ರೀತಿ ಕಾಣುತ್ತದೆ. ಐಫೋನ್‌ನಂತೆ, ಫೋನ್‌ನ ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳನ್ನು ನೀಡಲಾಗಿದೆ ಮತ್ತು ಎಲ್ಇಡಿ ಲೈಟ್ ಅನ್ನು ನೋಡಬಹುದಾಗಿದೆ. ವರದಿಯ ಪ್ರಕಾರ, ಈ ಫೋನ್ ಅನ್ನು ಭಾರತದಲ್ಲಿ ರೂ 10,000 ಕ್ಕಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಬಹುದು.
ಏನೆಲ್ಲಾ ವಿಶೇಷತೆಗಳಿವೆ?
ಈಗಾಗಲೇ ಇನ್‌ಫಿನಿಕ್ಸ್ ಕಂಪನಿ 40 ಸರಣಿಯಲ್ಲಿ, Note 40 Pro, Note 40 Pro+ ಮತ್ತು Note 40 5G ಅನ್ನು ಬಿಡುಗಡೆ ಮಾಡಿದೆ. ನೂತನವಾಗಿ ಬಿಡುಗಡೆ ಮಾಡಲಿರುವ ಫೋನ್‌ಗೆ Infinix Note 40X 5G ಹೆಸರಿಡಲಾಗಿದೆ. ಈ ಮೊಬೈಲ್ ಫೋನ್ 6.78 ಇಂಚಿನ ಫುಲ್ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಬಹುದು.

ಈ ಫೋನ್ 120Hz ಹೆಚ್ಚಿನ ರಿಫ್ರೆಶ್ ರೇಟ್ ದರವನ್ನು ಹೊಂದಿರುವ ಸಾಧ್ಯತೆ ಇದೆ. ಮಿಡಿಯಾ ಟೆಕ್ ಡಿಮೆನ್ಸಿಟಿ 6300 ಪ್ರೊಸೆಸರ್ ಅನ್ನು ಫೋನ್‌ನಲ್ಲಿ ಕಾಣಬಹುದು. ಇದರೊಂದಿಗೆ ಇದು 8GB RAM ಮತ್ತು 256GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಲಭ್ಯವಿರುತ್ತದೆ.
ಕ್ಯಾಮೆರಾ ಹೇಗಿದೆ?
ಈ ಫೋನ್‌ನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಫೋನ್ 108MP ಪ್ರೈಮರಿ ಕ್ಯಾಮೆರಾವನ್ನು ಹೊಂದಿರುತ್ತದೆ. ಇದರೊಂದಿಗೆ ಇನ್ನೂ ಎರಡು ಕ್ಯಾಮೆರಾಗಳನ್ನು ನೀಡಲಾಗುವುದು. ಈ Infinix ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 8MP ಕ್ಯಾಮೆರಾವನ್ನು ಹೊಂದಿರುತ್ತದೆ.
ಈ ಫೋನ್‌ನಲ್ಲಿ ಬ್ಲೂಟೂತ್ ಮತ್ತು NFC ಸಂಪರ್ಕ ವೈಶಿಷ್ಟ್ಯಗಳನ್ನು ಫೋನ್‌ನಲ್ಲಿ ಕಾಣಬಹುದು. ಇದಲ್ಲದೆ, ಫೋನ್ ಬಯೋಮೆಟ್ರಿಕ್ಸ್‌ಗಾಗಿ ಫಿಂಗರ್‌ಪ್ರಿಂಟ್‌ನ್ನು ಸಹ ಹೊಂದಿರುತ್ತದೆ. Infinix ನ ಈ ಫೋನ್ 5000mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ.











Click it and Unblock the Notifications