Infinix: ಸಖತ್ ಬ್ಯಾಟರಿ, 108 MP ಕ್ಯಾಮೆರಾದೊಂದಿಗೆ ಕೈಗೆಟಕುವ ದರದಲ್ಲಿ ಬಿಡುಗಡೆಗೆ ಸಿದ್ಧ
ಸ್ಮಾರ್ಟ್ ಫೋನ್ ಕಂಪನಿಗಳಿಗೆ ಭಾರತ ದೊಡ್ಡ ಮಾರುಕಟ್ಟೆ. ವರ್ಷದ ಹನ್ನೆರಡು ತಿಂಗಳು, ಕಂಪನಿಗಳು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ. ಎಲ್ಲ ಗ್ರಾಹಕರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕಂಪನಿಗಳು ಮೊಬೈಲ್ ತಯಾರಿಸುತ್ತವೆ. ಇದರಲ್ಲಿ ಬೇರೆ ಬೇರೆ ರೂಪಾಂತರಗಳು ಇರುತ್ತವೆ. ಗ್ರಾಹಕ ತನಗೆ ಇಷ್ಟದ ಮೊಬೈಲ್ ಪಡೆಯಲು ಸಹಾಯಕ.
ಒಂದು ವೇಳೆ ಈ ತಿಂಗಳಿನಲ್ಲಿ ನೀವೇನಾದ್ರೂ ಫೋನ್ ತೆಗೆದುಕೊಳ್ಳುವ ಆಸೆಯನ್ನು ಹೊಂದಿದ್ದರೆ, ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನ್ನು ನೀವು ಟಾರ್ಗೆಟ್ ಮಾಡುತ್ತಾ ಇದ್ದರೆ, ಈ ಫೋನ್ ನಿಮಗೆ ಬೆಸ್ಟ್ ಚಾಯ್ಸ್. ಟೆಕ್ ಕಂಪನಿ ಇನ್ಫಿನಿಕ್ಸ್ ಜೂನ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯ ಮುಂಬರುವ ಸ್ಮಾರ್ಟ್‌ಫೋನ್ ಇನ್ಫಿನಿಕ್ಸ್ ನೋಟ್ 40 5 ಜಿ ಜೂನ್‌ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯ.

ಬಿಡುಗಡೆ ಯಾವಾಗ?
Infinix ಕಂಪನಿಯು Infinix Note 40 5G ಅನ್ನು ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಫೋನ್ ಫೀಚರ್ಸ್ ಈಗ ಬಹಿರಂಗವಾಗಿವೆ. ಈ ಮೊಬೈಲ್ ಉತ್ತಮ ಬ್ಯಾಟರಿ ಸೇವರ್‌ನೊಂದಿಗೆ ಬರಲಿದ್ದು, ಬೆಸ್ಟ್ ಪ್ರೊಸೆಸರ್ ಹೊಂದಿರಲಿದೆ. ಈ ಮೊಬೈಲ್‌ನ್ನು ಕಂಪನಿ ಜೂನ್ 21, 2024 ರಂದು ಭಾರತದಲ್ಲಿ Infinix Note 40 5G ಅನ್ನು ಬಿಡುಗಡೆ ಮಾಡಲಿದೆ. ಈ ಮೊಬೈಲ್ 190 ಗ್ರಾಮ್ ತೂಕವನ್ನು ಹೊಂದಿದೆ.
ಡಿಸ್‌ಪ್ಲೇ ಹೇಗೆದೆ?
ಈ ಮೊಬೈಲ್ 6.7 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮಲೋಡ್ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ 120 HZ ರಿಫ್ರೇಶ ದರ ಹೊಂದಿದ್ದು, 1300 ನೀಟ್ ಬ್ರೈಟ್ ನೆಸ್ ಹೊಂದಿದೆ. ಕವರ್ಡ್ ಡಿಸ್‌ಪ್ಲೇಯನ್ನು ಹೊಂದಿದೆ.

ವಿಶೇಷತೆ ಏನು?
ಈ ಮೊಬೈಲ್ MediaTek ಡೈಮೆನ್ಸಿಟಿ 7020 ಚಿಪ್‌ಸೆಟ್ ಅನ್ನು ಹೊಂದಿದ್ದು, ಈ ಸ್ಮಾರ್ಟ್‌ಫೋನ್ ಆಂಡ್ರಾಯಡ್ 14 ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಮೊಬೈಲ್ 8GB RAM ಮತ್ತು 256GB ಇಂಟರ್ನಲ್ ಸ್ಟೊರೇಜ್ ಹೊಂದಿದೆ.
ಬ್ಯಾಟರಿ ಹೇಗಿದೆ?
ಇನ್ಫಿನಿಕ್ಸ್ ನೋಟ್ 40 5 ಜಿ 4500mAh ಬ್ಯಾಟರಿ ಹೊಂದಿದ್ದು, 45 ವ್ಯಾಟ್ ಚಾರ್ಜ ಹೊಂದಿರಲಿದೆ. ನೀವು ಮೊಬೈಲ್ ಚಾರ್ಜ್ ಮಾಡುವಾಗ ನಿಮಗೆ ಬ್ಯಾಟರಿ ಯಾವ ರೀತಿಯಲ್ಲಿ ಚಾರ್ಜ್ ಆಗಬೇಕು ಎಂಬುದನ್ನು ಈ ಮೊಬೈಲ್ ಕೇಳುತ್ತದೆ. ಇದರಲ್ಲಿ ಮೂರು ಆಕ್ಷನ್ ನೀಡಲಾಗಿದೆ. ಅಲ್ಲದೆ ವೈರ್‌ಲೆಸ್ ಚಾರ್ಜರ್ ಸಹ ಇದರೊಂದಿಗೆ ಲಭ್ಯ.
ಕ್ಯಾಮೆರಾ ಕ್ವಾಲಿಟಿ ಹೇಗಿದೆ?
ಈ ಮೊಬೈಲ್ ಪ್ರೈಮರಿ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸಂವೇದಕದೊಂದಿಗೆ ಬರುತ್ತದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 32-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರಲಿದೆ.

ಬಾಕ್ಸ್‌ನಲ್ಲಿ ಏನಿದೆ?
ಡಾಕ್ಯೂಮೆಂಟ್
ಮೊಬೈಲ್
45 ವ್ಯಾಟ್ ಚಾರ್ಜರ್
ಟೈಪ್ ಎ ಟು ಟೈಪ್ ಸಿ ಚಾರ್ಜರ್
ಸಿಮ್ ಕಾರ್ಡ್ ಟೂಲ್
ಸ್ಕ್ರೀನ್ ಗಾರ್ಡ್
ಮ್ಯಾಗ್ನೆಟಿಕ್ ಕೇಸ್
ಮೊಬೈಲ್ ಕೆಳಭಾಗದಲ್ಲಿ ಏನಿದೆ?
ಸಿಮ್ ಕಾರ್ಡ್ ಟ್ರೆ
ಮೈಕ್ರೋ ಫೋನ್
ಯುಎಸ್‌ಬಿ ಟೈಪ್ ಸಿ ಚಾರ್ಜರ್ ಸ್ಲಾಟ್
ಸ್ಪೀಕರ್ ಗ್ರಿಲ್
ಬಲಭಾಗದಲ್ಲಿ ಏನಿದೆ?
ವ್ಯಾಲ್ಯೂಮ್ ಬಟನ್
ಪವರ್ ಆನ್ & ಅಫ್
ಮೇಲಭಾಗದಲ್ಲಿ ಏನಿದೆ?
ನಾಯ್ಸ್ ಕ್ಯಾನ್ಸಲಿಂಗ್ ಮೈಕ್ರೋಫೋನ್
ಸ್ಪೀಕರ್ ಗ್ರೀಲ್












Click it and Unblock the Notifications