Hyundai Motor: 2030 ರ ವೇಳೆಗೆ ಐದು ಹೊಸ ಎಲೆಕ್ಟ್ರಿಕ್ ಕಾರ್‌ ಉತ್ಪಾದನೆಗೆ ಚಿಂತನೆ

ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್‌ ಕಾರ್‌ಗಳ ಸದ್ದು ಜೋರಾಗಿದೆ. ಎಲ್ಲಿ ನೋಡಿದರೂ ಮಾಲಿನ್ಯ ಮುಕ್ತ ಕಾರ್‌ಗಳನ್ನು ನೋಡಬಹುದು. ರಸ್ತೆಯಲ್ಲಿ ತಿರುಗಾಡುತ್ತಿದ್ದರೆ, ಎಲೆಕ್ಟ್ರಿಕ್‌ ಸ್ಕೂಟರ್‌ ಗಳ ಹಾವಳಿ ಭರ್ಜರಿಯಾಗಿದೆ. ಈ ಮಾರುಕಟ್ಟೆಯಷ್ಟೇ ಬೆಳೆಯುವ ಉತ್ಸಾಹದಲ್ಲಿ ಕಾರು ಕಂಪನಿಗಳು ಸಹ ಈಗ ತಮ್ಮ ಕಾರ್‌ಗಳಲ್ಲಿ ಎಲೆಕ್ಟ್ರಿಕ್‌ ಕಾರ್‌ಗಳನ್ನು ಪರಿಚಯಿಸಿದ್ದು, ಗ್ರಾಹಕ ಇವುಗಳನ್ನು ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದಾನೆ.

ಹ್ಯುಂಡೈ ಸಹ ಎಲೆಕ್ಟ್ರಿಕ್‌ ಕಾರ್‌ ಸೆಗ್ಮೆಂಟ್‌ಗಳಲ್ಲಿ ಮೊದಲಿನಿಂದಲೂ ಕೆಲಸ ಮಾಡುತ್ತಲೆ ಇದೆ. ಹ್ಯುಂಡೈ ಕಾರ್‌ 1991ರಲ್ಲಿ ತನ್ನ ಮೊದಲ ಪ್ರಾಯೋಗಿಕ ಎಲೆಕ್ಟ್ರಿಕ್‌ ಕಾರ್‌ಗಳನ್ನು ನಿರ್ಮಿಸಿತ್ತು. ಅದು ಕೇಲವ ಆರು ಕಾರ್‌ಗಳನ್ನು ಮಾತ್ರ ತಯಾರಿಸಿತ್ತು. ಇದಾದ ಬಳಿಕ ಈ ದಿಸೇಯಲ್ಲಿ ಆವಿಷ್ಕಾರ್‌ಗಳು ನಡೆದು, ಹಲವು ಪ್ರಯಗೋಗಗಳನ್ನು ಮಾಡಲಾಯಿತು. 2009ರಲ್ಲಿ ಹ್ಯುಂಡೈ ಮಾರುಕಟ್ಟೆಗೆ ತನ್ನ ಮೊದಲ ಎಲೆಕ್ಟ್ರಿಕ್ ಕಾರ್‌ ಪರಿಚಯಿಸಿತು. ಈಗ ಈ ಕಂಪನಿ ಭಾರತದ ಗ್ರಾಹಕರನ್ನು ತನ್ನತ್ತ ಸೆಳೆಯಲು ಮತ್ತೊಂದು ದೊಡ್ಡ ಪ್ಲ್ಯಾನ್ ಮಾಡಿಕೊಂಡಿದೆ.

Hyundai India Plans 5 New EVs by 2030 Debut Electric SUV in 2024

ಕಂಪನಿಯ ಯೋಜನೆ ಏನು?

ದಕ್ಷಿಣ ಕೊರಿಯಾದ ಮೂಲದ ಕಂಪನಿಯು 2030 ರ ವೇಳೆಗೆ ಪ್ರತಿ ವರ್ಷ 2 ಮಿಲಿಯನ್ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಹ್ಯುಂಡೈ ಜಾಗತಿಕ EV ಉತ್ಪಾದನೆಯನ್ನು 2023 ರ ವೇಳೆಗೆ 8% ರಿಂದ 2030 ರ ವೇಳೆಗೆ 34% ಗೆ ಹೆಚ್ಚಿಸಲು ಯೋಜಿಸಿದೆ. ಇದಕ್ಕಾಗಿ ಇವಿಗಳನ್ನು ತಯಾರಿಸಲು ಪ್ರಪಂಚದಾದ್ಯಂತ ಸ್ಥಾವರಗಳನ್ನು ನಿರ್ಮಿಸಲಾಗುವುದು ಮತ್ತು ನಂತರ ಕ್ರಮೇಣ ಪೆಟ್ರೋಲ್-ಡೀಸೆಲ್ ಕಾರುಗಳ ಬದಲಿಗೆ ಎಲೆಕ್ಟ್ರಿಕ್ ಕಾರುಗಳತ್ತ ಗಮನ ಹರಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

ಭಾರತದಲ್ಲಿ ಉತ್ಪಾದನೆಗೆ ಸಿದ್ಧತೆ

ಹ್ಯುಂಡೈ ಮೋಟಾರ್ ಗ್ರೂಪ್ 2030 ರ ವೇಳೆಗೆ ಭಾರತೀಯ ಮಾರುಕಟ್ಟೆಗೆ ಐದು ಭಾರತದಲ್ಲೇ ತಯಾರಿಸಿದ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ತನ್ನ ಯೋಜನೆಯನ್ನು ಬಹಿರಂಗಪಡಿಸಿದೆ. ಈ ಮುಂಬರುವ EV ಗಳನ್ನು ಕೊರಿಯಾದ ಹುಂಡೈ-ಕಿಯಾ ನಾಮ್ಯಾಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವು ಅಭಿವೃದ್ಧಿಪಡಿಸುತ್ತದೆ. ಹುಂಡೈ ಕ್ರೆಟಾ EV ಈ ತಂತ್ರದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ವಾಹನವಾಗಿದೆ. ಇದರ ಉತ್ಪಾದನೆಯು ಡಿಸೆಂಬರ್ 2024 ರಲ್ಲಿ ಪ್ರಾರಂಭವಾಗಲಿದೆ. ಇದು 2025 ರ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಕ್ರೆಟಾ EV ಯ ವಿಶೇಷಣಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ಇದು 45kWh ಬ್ಯಾಟರಿ ಪ್ಯಾಕ್ ಮತ್ತು ಮುಂಭಾಗದ ಆಕ್ಸಲ್‌ನಲ್ಲಿ ಒಂದೇ ಎಲೆಕ್ಟ್ರಿಕ್ ಮೋಟರ್ ಹೊಂದಿರುವ ಸಾಧ್ಯತೆ ಇದೆ. ಈ ಸೆಟಪ್ Kona EV ಅನ್ನು ಹೋಲುತ್ತದೆ. ಹುಂಡೈ ಕ್ರೆಟಾ EV ಯ ನಿರೀಕ್ಷಿತ ವ್ಯಾಪ್ತಿಯು ಪ್ರತಿ ಚಾರ್ಜ್‌ಗೆ ಸುಮಾರು 500 ಕಿಮೀ. ವೇಗವನ್ನು ಕ್ರಮಿಸುವ ಸಾಧ್ಯತೆ ಇದೆ.

ಭಾರೀ ಹೂಡಿಕೆ ಮುಂದಾದ ಕಂಪನಿ

ಹುಂಡೈ ಮೋಟಾರ್ ಇಂಡಿಯಾ ಮುಂದಿನ ಒಂಬತ್ತು ವರ್ಷಗಳಲ್ಲಿ 20,000 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ತನ್ನ EV ಉತ್ಪನ್ನದ ಬಂಡವಾಳವನ್ನು ವಿಸ್ತರಿಸಲಿದೆ. ಈ ನಿಧಿಯನ್ನು ಹೈ-ಟೆಕ್ ಇವಿ ಬ್ಯಾಟರಿ ಅಸೆಂಬ್ಲಿ ಘಟಕಗಳನ್ನು ನಿರ್ಮಿಸಲು, ಇವಿ ಉತ್ಪನ್ನಗಳನ್ನು ಹೆಚ್ಚಿಸಲು ಮತ್ತು ಹೆದ್ದಾರಿಗಳಲ್ಲಿ 100 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಬಳಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+