ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟಾಕಿಯಿಂದ ಸುಟ್ಟ ಗಾಯ; ಚಿಕಿತ್ಸೆ ಮಾಡಿಕೊಳ್ಳುವುದು ಹೇಗೆ, ಇಲ್ಲಿದೆ ವಿವರ

|
Google Oneindia Kannada News

ನವದೆಹಲಿ, ಅ.23: ಅಕ್ಟೋಬರ್ 24ಕ್ಕೆ ದೀಪಾವಳಿ ಹಬ್ಬವಿದ್ದರೂ ಕೂಡ ಈಗಾಗಲೇ ಎಲ್ಲೆಡೆ ದೀಪಗಳನ್ನು ಕೊಳ್ಳುವುದು, ಪಟಾಕಿ ಖರೀದಿ ಮತ್ತು ಪಟಾಕಿ ಸಿಡಿಸುವುದು ನಡೆಯುತ್ತಿದೆ. ಲಕ್ಷ್ಮಿ ದೇವಿಯ ಆರಾಧಕರು ಭಾನುವಾರ ಧಂತೇರಸ್ ಮತ್ತು ಸೋಮವಾರ ನರಕ ಚತುರ್ದಶಿಯನ್ನು ಉತ್ಸಾಹದಿಂದ ಆಚರಿಸುತ್ತಿದ್ದಾರೆ.

ದೀಪಾವಳಿಯು ಬೆಳಕಿನ ಆಚರಣೆಯಾಗಿದೆ. ಹೀಗಾಗಿ ಕೆಲವೊಮ್ಮೆ ನಾವು ಪಟಾಕಿ, ದೀಪಗಳು ಮತ್ತು ಮೇಣದಬತ್ತಿಗಳನ್ನು ಬೆಳಗಿಸುವಾಗ ಜಾಗರೂಕರಾಗಿರವುದನ್ನು ಮರೆಯುತ್ತೇವೆ. ಆಕಸ್ಮಿಕವಾಗಿ ಹಲವು ಅವಘಡಗಳು ಸಂಭವಿಸುತ್ತವೆ. ಹೀಗಾಗಿ ದೀಪಾವಳಿ ಸಮಯದಲ್ಲಿ ಸುಟ್ಟ ಗಾಯಗಳನ್ನು ತಪ್ಪಿಸಲು, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.

ದೀಪಾವಳಿ: ಖಾಸಗಿ ಬಸ್‌ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ: ಸಾರಿಗೆ ಇಲಾಖೆ ಶಾಮೀಲು ಶಂಕೆದೀಪಾವಳಿ: ಖಾಸಗಿ ಬಸ್‌ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ: ಸಾರಿಗೆ ಇಲಾಖೆ ಶಾಮೀಲು ಶಂಕೆ

ಸುಟ್ಟಗಾಯ ಎಷ್ಟು ತೀವ್ರವಾಗಿದೆ ಎಂಬುದರ ಮೇಲೆ ಪ್ರಥಮ ಚಿಕಿತ್ಸಾ ವಿಧಾನವನ್ನು ನಿರ್ಧರಿಸಲಾಗುತ್ತದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಸುಟ್ಟಗಾಯಗಳನ್ನು ಈ ಕೆಳಗಿನ ವಿಧಾನಗಳಲ್ಲಿ ಚಿಕಿತ್ಸೆ ನೀಡಬಹುದು.

How to Treat Burns If You Get Injured By Firecrackers

ಒಬ್ಬ ವ್ಯಕ್ತಿ ಸಣ್ಣ ಸುಟ್ಟಗಾಯಗಳಿಂದ ಬಳಲುತ್ತಿದ್ದರೆ, ಸುಟ್ಟ ಭಾಗವನ್ನು ಹರಿಯುತ್ತಿರುವ ತಣ್ಣೀರಿನ ಅಡಿಯಲ್ಲಿ ಇರಿಸಬೇಕು. ಅಥವಾ ಕೋಲ್ಡ್ ಕಂಪ್ರೆಸ್ ಅನ್ನು ಬಳಸಬೇಕು. ಇದು ಸುಟ್ಟ ಗಾಯವನ್ನು ತಂಪಾಗಿಸುವ ಮೂಲಕ ಅದು ದೊಡ್ಡ ಗಾಯವಾಗುವ, ಊದಿಕೊಳ್ಳುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಇದು ಸುಟ್ಟಗಾಯಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ಗಾಯಗೊಂಡ ಪ್ರದೇಶಕ್ಕೆ ಹತ್ತಿ ಬಳಸಿ ಸಡಿಲವಾದ ಬ್ಯಾಂಡೇಜ್ ಮಾಡಬೇಕು. ಗಾಯವನ್ನು ಮುಚ್ಚಿಟ್ಟರೆ ಬೇಗ ವಾಸಿಯಾಗುತ್ತದೆ.

ಸುಟ್ಟ ಗಾಯದ ಪ್ರದೇಶಕ್ಕೆ ತೆಳ್ಳಗೆ ಕೆನೆ ಹಚ್ಚಿ, ಇದರಿಂದ ಗುಳ್ಳೆಗಳು ಕಡಿಮೆಯಾಗುತ್ತವೆ. ನಿಮ್ಮ ವೈದ್ಯರನ್ನು ಸಂಪರ್ಕಿಸದೆ ಯಾವುದೇ ಕ್ರೀಮ್‌ಗಳು, ಲೋಷನ್‌ಗಳು ಅಥವಾ ಇತರ ಉತ್ಪನ್ನಗಳನ್ನು ಬಳಸಬೇಡಿ. ಇದು ಮತ್ತಷ್ಟು ಅನಾಹುತಕ್ಕೆ ಕಾರಣವಾಹಬಹುದು.

How to Treat Burns If You Get Injured By Firecrackers

ಇನ್ನು, ವೈದ್ಯರು ಸೂಚಿಸಿದಂತೆ ನೋವು ನಿವಾರಕಗಳನ್ನು ಮಾತ್ರ ತೆಗೆದುಕೊಳ್ಳಿ. ಸುಟ್ಟ ಗಾಯದ ಮೇಲೆ ಕಾಣಿಸಿಕೊಳ್ಳುವ ಗುಳ್ಳೆಗಳನ್ನು ಒಡೆಯಲು ಮಾತ್ರ ಪ್ರಯತ್ನಿಸಬೇಡಿ.

English summary
How can treat burns if you get injured by firecrackers in Deepavali celebrations. here some details. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X