ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು ಹೇಗೆ?
2019 ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದು ಅವಶ್ಯಕ. ಜನರು ಸುಲಭವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ? ಎಂದು ಪರಿಶೀಲಿಸಬಹುದು.
ಭಾವಚಿತ್ರವಿರುವ ಮತದಾರರ ಪಟ್ಟಿ ಇರಲಿದ್ದು, ಅದರಲ್ಲಿ ಹೆಸರು ಸೇರಿರಬೇಕು. ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿಯ ಜೊತೆಗೆ ಇತರೆ 11 ಭಾವಚಿತ್ರವಿರುವ ಗುರುತಿನ ಚೀಟಿಗಳಲ್ಲಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶ ನೀಡಲಾಗಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ? ಎಂಬುದನ್ನು ಮುಂಚಿತವಾಗಿ ಖಾತರಿಪಡಿಸಿಕೊಳ್ಳಬೇಕು. ಚುನಾವಣಾ ಆಯೋಗ ಸುಲಭವಾದ ಮಾರ್ಗವನ್ನು ಕಲ್ಪಿಸಿಕೊಟ್ಟಿದ್ದು, ನಿಮ್ಮ ಹೆಸರು ಇದೆಯೇ? ಎಂದು ಪರಿಶೀಲಿಸಬಹುದು.
ಮತದಾನ ಕೆಲವು ದಿನಗಳ ಮುನ್ನ ವೋಟರ್ ಗೈಡ್ ಮೂಲಕ ಮತದಾರರಿಗೆ ಮತದಾನದ ಮಾಹಿತಿಯನ್ನು ತಲುಪಿಸಲಾಗುತ್ತದೆ. ಪ್ರತಿ ಮನೆಗೂ ಭಾವಚಿತ್ರವಿರುವ ವೋಟರ್ ಸ್ಲಿಪ್ ವಿತರಣೆ ಮಾಡಲಾಗುತ್ತದೆ.
ಇದರಲ್ಲಿ ಹೆಸರು, ಮತದಾನ ಕೇಂದ್ರದ ವಿವರ, ಕ್ರಮ ಸಂಖ್ಯೆ ಇರುತ್ತದೆ. ಆದರೆ ಇದನ್ನು ಗುರುತಿನ ಚೀಟಿಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಎಸ್‌ಎಂಎಸ್ ಮೂಲಕ ಮಾಹಿತಿ
ಮತದಾರರ ಪಟ್ಟಿಯಲ್ಲಿ ಹೆಸರನ್ನು ಹುಡುಕಲು ಮೊಬೈಲ್‍ನಿಂದ ಮೆಸೇಜ್ ಮಾಡಬಹುದಾಗಿದೆ. KAEPIC ಎಂದು ಟೈಪ್ ಮಾಡಿ ಸ್ಪೇಸ್ ಬಿಟ್ಟು ವೋಟರ್ ಐಡಿ ಸಂಖ್ಯೆಯನ್ನು ಟೈಪ್ ಮಾಡಿ 9731979899 ಸಂಖ್ಯೆಗೆ ಎಸ್ಎಂಎಸ್ ಮಾಡಬಹುದು.
ಮಾಡಿದ ಕ್ಷಣಾರ್ಧದಲ್ಲಿ ನೀವು ಮತದಾರರಾಗಿರುವ ವಿಧಾನಸಭಾ ಕ್ಷೇತ್ರದ ಸಂಖ್ಯೆ, ಹೆಸರು, ಭಾಗದ ಸಂಖ್ಯೆ, ಮತದಾನ ಕೇಂದ್ರದ ಹೆಸರು, ಮತದಾರರ ಪಟ್ಟಿಯಲ್ಲಿನ ಕ್ರಮ ಸಂಖ್ಯೆ, ಮತದಾರರ ಹೆಸರು ಸಮೇತ ವಿವರ ನಿಮ್ಮ ಮೊಬೈಲ್‍ಗೆ ಬರಲಿದೆ.

ವೆಬ್‌ಸೈಟ್ ಮೂಲಕ ಚೆಕ್ ಮಾಡಿ
ww.ceo.karnataka.kar.nic.in ವೆಬ್‍ಸೈಟ್‍ಗೆ ಹೋಗಿ ಇದರಲ್ಲಿ ಮೂರು ವಿಧದಲ್ಲಿ ನಿಮ್ಮ ಹೆಸರನ್ನು ಹುಡುಕಬಹುದು.
ಮೊದಲನೆ ಹಂತದಲ್ಲಿ ನಿಮ್ಮ ಎಪಿಕ್ ಸಂಖ್ಯೆಯ ಮೂಲಕ ಹುಡುಕಬಹುದಾಗಿದೆ. ಮೊದಲು ಇಲ್ಲಿ ಜಿಲ್ಲೆ ಆಯ್ಕೆ ಮಾಡಿ ನಂತರ ಎಪಿಕ್ ಸಂಖ್ಯೆ ಟೈಪ್ ಮಾಡಿ ಸರ್ಚ್‍ಕೊಟ್ಟಲ್ಲಿ ಹೆಸರು ಸಿಗುತ್ತದೆ.

ಜಿಲ್ಲೆಯ ಮೂಲಕ ಹುಡುಕಿ
www.ceo.karnataka.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಿ ಇತರೆ ವಿವರಗಳ ಮೂಲಕ ಅಂದರೆ ಜಿಲ್ಲೆಯ ಹೆಸರು, ಮತದಾರರ ಹೆಸರು, ಲಿಂಗ, ಕ್ಷೇತ್ರದ ಹೆಸರು ಆಯ್ಕೆ ಮಾಡುವ ಮೂಲಕ ನಿಮ್ಮ ಹೆಸರನ್ನು ಹುಡುಕಬಹುದಾಗಿದೆ.

ಮೊಬೈಲ್ ಸಂಖ್ಯೆ ಮೂಲಕ ಹುಡುಕಿ
ವೆಬ್‌ಸೈಟ್‌ಗೆ ಭೇಟಿ ನೀಡಿದ ಮೇಲೆ ಮತದಾರರ ಪಟ್ಟಿಗೆ ಹೆಸರು ಸೇರಿಸುವಾಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದ್ದರೆ ಜಿಲ್ಲೆ ಆಯ್ಕೆ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ಟೈಪ್ ಮಾಡಿ ಹುಡುಕಿದರೂ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಸಿಗಲಿದೆ.

ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು 23ರಂದು ಮತದಾನ
ಕರ್ನಾಟಕದಲ್ಲಿ ಏಪ್ರಿಲ್ 18, ಗುರುವಾರ ಮತ್ತು ಏಪ್ರಿಲ್ 23, ಬುಧವಾರ ಎರಡು ಹಂತದಲ್ಲಿ ಮತದಾನ ನಡೆಯುತ್ತಿದೆ. ಈ ಎರಡು ದಿನಗಳಲ್ಲಿ ಮತ ಹಾಕುವವರು, ತಮ್ಮ ಹೆಸರು ಮತಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಮೊದಲೇ ಖಚಿತಪಡಿಸಿಕೊಳ್ಳುವುದು ಉತ್ತಮ. ಇದರಿಂದಾಗಿ ಕೊನೆಯ ಕ್ಷಣದಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ನಮೂದಿಸಲಾದ ಸ್ಥಳ, ಮತಗಟ್ಟೆಯಲ್ಲಿ ನಿರಾತಂಕವಾಗಿ ಮತ ಚಲಾಯಿಸಬಹುದು.
-
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications