ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಅಧ್ಯಕ್ಷ ಪುಟಿನ್‌ ಸಂಪತ್ತು ಎಷ್ಟಿದೆ?

|
Google Oneindia Kannada News

ಮಾಸ್ಕೋ, ಫೆಬ್ರವರಿ 25: ಉಕ್ರೇನ್‌ ಮೇಲೆ ದಾಳಿ ನಡೆಸಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧ ನಿರ್ಬಂಧವನ್ನು ಹೇರಲು ವಿಶ್ವ ನಾಯಕರು ನಿರ್ಧಾರ ಮಾಡಿದ್ದಾರೆ. ಈ ನಡುವೆ ರಷ್ಯಾದ ಅಧ್ಯಕ್ಷರ ನಿವ್ವಳ ಮೌಲ್ಯವು ಚರ್ಚೆಯ ವಿಷಯವಾಗಿದೆ.

ಕ್ರೆಮ್ಲಿನ್‌ನ ಅಧಿಕೃತ ಮಾಹಿತಿ ಪ್ರಕಾರ ರಷ್ಯಾದ ಅಧ್ಯಕ್ಷರು 140,000 ಡಾಲರ್‌ ಆದಾಯವನ್ನು ಗಳಿಸುತ್ತಿದ್ದು, ಮೂರು ಕಾರುಗಳು, ಟ್ರೈಲರ್ ಮತ್ತು 800 ಚದರ ಅಡಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಮಾಸ್ಕೋದಲ್ಲಿ 1,600 ಚದರ ಅಡಿ ಅಪಾರ್ಟ್ಮೆಂಟ್ ಅನ್ನು ಸಹ ಹೊಂದಿದ್ದಾರೆ.

 ರಷ್ಯಾದ ವಿರುದ್ಧ ಸೈಬರ್‌ ದಾಳಿ ಘೋಷಣೆ: ರಾಷ್ಟ್ರದ ಸುದ್ದಿ ವೆಬ್‌ಸೈಟ್‌ ನಿಷ್ಕ್ರಿಯ ರಷ್ಯಾದ ವಿರುದ್ಧ ಸೈಬರ್‌ ದಾಳಿ ಘೋಷಣೆ: ರಾಷ್ಟ್ರದ ಸುದ್ದಿ ವೆಬ್‌ಸೈಟ್‌ ನಿಷ್ಕ್ರಿಯ

ಈ ನಡುವೆ ಪುಟಿನ್‌ ಆಂತರಿಕ ವಲಯವು ಅತ್ಯಂತ ಶ್ರೀಮಂತವಾಗಿದೆ. ರಷ್ಯಾ ರಾಜಧಾನಿ ಮಾಸ್ಕೋ ಕ್ರೆಮ್ಲಿನ್‌ಗಿಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಶ್ರೀಮಂತರಾಗಿದ್ದಾರೆ ಎಂದು ವರದಿ ಹೇಳಿದೆ. ಇನ್ನು ಈಗಾಗಲೇ ಸೋರಿಕೆ ಆಗಿರುವ ಪನಾಮ ಪೇಪರ್ಸ್ ಮತ್ತು ಪಂಡೋರಾ ಪೇಪರ್ಸ್‌ಗಳು ಪುಟಿನ್ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ರಷ್ಯಾದ ವ್ಯಕ್ತಿಗಳು ನೂರಾರು ಮಿಲಿಯನ್ ಡಾಲರ್‌ಗಳವರೆಗೆ ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂದು ಬಹಿರಂಗಪಡಿಸಿದೆ. ಹಾಗಾದರೆ ರಷ್ಯಾ ಅಧ್ಯಕ್ಷ ಪುಟಿನ್‌ ಸಂಪತ್ತು ಎಷ್ಟು ಇರಬಹುದು? ಇಲ್ಲಿದೆ ವಿವರ ಮುಂದೆ ಓದಿ..

 ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಪುಟಿನ್‌

ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಪುಟಿನ್‌

ಇನ್ನು ಪುಟಿನ್ ಮೇಲೆ ವೈಯಕ್ತಿಕ ನಿರ್ಬಂಧಗಳ ಪರಿಣಾಮಗಳ ಬಗ್ಗೆ ಕೇಳಿದಾಗ, ಕ್ರೆಮ್ಲಿನ್ ವಕ್ತಾರ ಪೆಸ್ಕೋವ್, ರಷ್ಯಾದಲ್ಲಿ ರಾಜ್ಯ ಅಧಿಕಾರಿಗಳು ವಿದೇಶಿ ಬ್ಯಾಂಕ್ ಖಾತೆಗಳನ್ನು ಹಿಡಿದಿಟ್ಟುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ ಎಂದು ಉಲ್ಲೇಖ ಮಾಡಿದ್ದಾರೆ. ಈ ನಡುವೆ ಪುಟಿನ್‌ ನೈಜ ಆಸ್ತಿ ಬಗ್ಗೆ ಕೆಲವು ಅಂದಾಜುಗಳಿವೆ. ಮಾಹಿತಿ ಪ್ರಕಾರ ರಷ್ಯಾದ ಅಧ್ಯಕ್ಷರನ್ನು ವಿಶ್ವದ ಶ್ರೀಮಂತ ಜನರಲ್ಲಿ ಒಬ್ಬರು ಆಗಿದ್ದಾರೆ.

 2012 ರಲ್ಲಿ 70 ಶತಕೋಟಿ ಡಾಲರ್‌ ನಿವ್ವಳ ಆದಾಯ?

2012 ರಲ್ಲಿ 70 ಶತಕೋಟಿ ಡಾಲರ್‌ ನಿವ್ವಳ ಆದಾಯ?

ರಷ್ಯಾದ ರಾಜಕೀಯ ವಿಶ್ಲೇಷಕ ಮತ್ತು ಪುಟಿನ್ ವಿಮರ್ಶಕ ಸ್ಟಾನಿಸ್ಲಾವ್ ಬೆಲ್ಕೊವ್ಸ್ಕಿ, 2012 ರಲ್ಲಿ ಪುಟಿನ್‌ 70 ಶತಕೋಟಿ ಡಾಲರ್‌ ನಿವ್ವಳ ಆದಾಯವನ್ನು ಹೊಂದಿದ್ದರು ಎಂದು ಅಂದಾಜು ಮಾಡಿದ್ದಾರೆ. ರಷ್ಯಾದ ಅಧ್ಯಕ್ಷರು ರಷ್ಯಾದ ತೈಲ ಮತ್ತು ಅನಿಲ ಕಂಪನಿಗಳಾದ ಗಾಜ್‌ಪ್ರೊಮ್ ಮತ್ತು ಸುರ್ಗುಟ್ನೆಫ್ಟೆಗಾಸ್‌ನಲ್ಲಿ ಪಾಲನ್ನು ಹೊಂದಿದ್ದಾರೆ ಎಂಬ ಆಧಾರದ ಮೇಲೆ ಈ ಸಂಪತ್ತು ಅಂದಾಜು ಮಾಡಲಾಗಿದೆ.

 100-150 ಬಿಲಿಯನ್ ಸಂಪತ್ತು ಹೊಂದಿದ್ದಾರೆ!

100-150 ಬಿಲಿಯನ್ ಸಂಪತ್ತು ಹೊಂದಿದ್ದಾರೆ!

ಸ್ವೀಡಿಷ್ ಅರ್ಥಶಾಸ್ತ್ರಜ್ಞ ಮತ್ತು ರಷ್ಯಾಸ್‌ ಕ್ರೋನಿ ಕ್ಯಾಪಿಟಲಿಸಂ: ದಿ ಪಾತ್ ಫ್ರಮ್ ಮಾರ್ಕೆಟ್ ಎಕಾನಮಿ ಟು ಕ್ಲೆಪ್ಟೋಕ್ರಸಿ ಲೇಖಕ ಆಂಡರ್ಸ್ ಅಸ್ಲುಂಡ್ ಪ್ರಕಾರ, ಪುಟಿನ್ ಬಳಿ ಸುಮಾರು 100 ಬಿಲಿಯನ್ ಡಾಲರ್‌ನಿಂದ 150 ಬಿಲಿಯನ್ ಡಾಲರ್‌ವರೆಗೂ ಆಸ್ತಿ ಇದೆ. ಅಸ್ಲುಂಡ್ ತನ್ನ ಲೆಕ್ಕಾಚಾರವನ್ನು ಪುಟಿನ್ ಅವರ ನಿಕಟವರ್ತಿಗಳ ಸಂಪತ್ತಿನ ಮೇಲೆ ಆಧರಿಸಿ ಹೇಳಿದ್ದಾರೆ. ರಷ್ಯಾದ ಅಧ್ಯಕ್ಷ ಪುಟಿನ್‌ ಸ್ನೇಹಿತರು 500 ಮಿಲಿಯನ್ ಡಾಲರ್‌ ಮತ್ತು 2 ಬಿಲಿಯನ್ ಡಾಲರ್‌ ನಡುವೆ ಸಂಪತ್ತನ್ನು ಹೊಂದಿದ್ದಾರೆ ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

 200 ಶತಕೋಟಿ ಡಾಲರ್‌ ಆದಾಯವೇ?

200 ಶತಕೋಟಿ ಡಾಲರ್‌ ಆದಾಯವೇ?

ರಷ್ಯಾದ ಅಧ್ಯಕ್ಷರ ತೀವ್ರ ವಿಮರ್ಶಕ ಮತ್ತು ಮ್ಯಾಗ್ನಿಟ್ಸ್ಕಿ ಕಾಯಿದೆಯ ಪ್ರಮುಖ ಪ್ರತಿಪಾದಕರಲ್ಲಿ ಒಬ್ಬರಾದ ಫೈನಾನ್ಶಿಯರ್ ಬಿಲ್ ಬ್ರೌಡರ್, ಪುಟಿನ್‌ ಸಂಪತ್ತನ್ನು ಅತ್ಯಧಿಕವೆಂದು ಅಂದಾಜು ಮಾಡಿದ್ದಾರೆ. ಪ್ರಪಂಚದ ಅತ್ಯಂತ ಶ್ರೀಮಂತ ಪುರುಷರಲ್ಲಿ ಪುಟಿನ್‌ ಕೂಡಾ ಒಬ್ಬರು ಎಂದಿದ್ದಾರೆ. ಪುಟಿನ್‌ ಒಟ್ಟು ಸಂಪತ್ತು 200 ಶತಕೋಟಿ ಡಾಲರ್‌ರಷ್ಟು ಆಸ್ತಿಯನ್ನು ಹೊಂದಿದ್ದಾರೆ ಎಂದು ಅವರು ಅಂದಾಜು ಮಾಡಿದ್ದಾರೆ. ಇದರ ಪ್ರಕಾರ ಪುಟಿನ್ ಜೆಫ್ ಬೆಜೋಸ್, ಬಿಲ್ ಗೇಟ್ಸ್ ಮತ್ತು ಎಲೋನ್ ಮಸ್ಕ್ ಗಿಂತ ಶ್ರೀಮಂತರಾಗಿದ್ದಾರೆ. 2003 ರಲ್ಲಿ ತೈಲ ಕಂಪನಿ ಯುಕೋಸ್‌ನ ಸಂಸ್ಥಾಪಕ ಮತ್ತು ವಂಚನೆಗಾಗಿ ಜೈಲಿನಲ್ಲಿದ್ದ ರಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮಿಖಾಯಿಲ್ ಖೊಡೊರ್ಕೊವ್ಸ್ಕಿಯನ್ನು 2003 ರಲ್ಲಿ ಬಂಧಿಸಿದ ಹಿನ್ನೆಲೆಯಲ್ಲಿ ಪುಟಿನ್ ರಷ್ಯಾದ ಶ್ರೀಮಂತ ವ್ಯಕ್ತಿಗಳಿಗೆ ತಮ್ಮ ಅರ್ಧದಷ್ಟು ಸಂಪತ್ತನ್ನು ನೀಡುವಂತೆ ಆದೇಶಿಸಿದರು ಎಂಬ ಆಧಾರದ ಮೇಲೆ ಬಿಲ್ ಬ್ರೌಡರ್ ಈ ಲೆಕ್ಕಾಚಾರ ಮಾಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

ಭಾರತದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಉಕ್ರೇನ್‌‌ನ್ನು ಯಾಕೆ ಆಯ್ಕೆ ಮಾಡಿಕೊಳ್ತಾರೆ? | Oneindia Kannada

English summary
Ukraine-Russia War: How rich is Russia President Putin, Explained In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X