ಬಿಜೆಪಿ ವಿರುದ್ಧ ಸಿಡಿದೆದ್ದು ನಿಂತ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಆಸ್ತಿ 138 ಕೋಟಿ ರೂ.
ಹೊಸಕೋಟೆ, ನವೆಂಬರ್ 15: ಹೊಸಕೋಟೆ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಂಸದ ಬಿ.ಎನ್. ಬಚ್ಚೇಗೌಡ ಅವರ ಮಗ ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಕೆಯ ವೇಳೆ ತಮ್ಮ ಆಸ್ತಿ ವಿವರ ಬಹಿರಂಗಪಡಿಸಿದ್ದಾರೆ.
ತಮ್ಮ ಬದ್ಧ ವಿರೋಧಿಯಾಗಿದ್ದ ಕಾಂಗ್ರೆಸ್‌ನ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಕೆಟ್ ನೀಡುವುದಾದರೆ ಪಕ್ಷದ ವಿರುದ್ಧವೇ ಹೋಗುವುದಾಗಿ ಎಚ್ಚರಿಕೆ ನೀಡಿದ್ದ ಶರತ್, ತಮ್ಮ ಮಾತನ್ನು ಬಿಜೆಪಿ ಕಡೆಗಣಿಸಿದ್ದಕ್ಕೆ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಇಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಜೆಡಿಎಸ್, ಶರತ್ ಬಚ್ಚೇಗೌಡ ಅವರಿಗೆ ನೇರ ಬೆಂಬಲ ನೀಡಿದೆ. ಗುರುವಾರ ನಾಮಪತ್ರ ಸಲ್ಲಿಸಿದ ಶರತ್ ಬಚ್ಚೇಗೌಡ, ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದಾರೆ.
ನಾಮಪತ್ರ ಸಲ್ಲಿಕೆಯ ವೇಳೆ ಅವರು ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರಗಳ ಮಾಹಿತಿಯನ್ನು ನೀಡಿದ್ದಾರೆ. ಅದರಲ್ಲಿ ಅವರ ಅಸ್ತಿ ಮೌಲ್ಯವು ಕಳೆದ ಒಂದೂವರೆ ವರ್ಷದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅವರು, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂಟಿಬಿ ನಾಗರಾಜ್ ವಿರುದ್ಧ ಏಳು ಸಾವಿರ ಮತಗಳಿಂದ ಸೋಲಿಸಿದ್ದರು. 2019ರ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಶರತ್ ಬಚ್ಚೇಗೌಡ, ಹೊಸಕೋಟೆಯಲ್ಲಿ ಗೆಲುವಿಗಾಗಿ ಹವಣಿಸುತ್ತಿದ್ದಾರೆ. ಅವರ ಆಸ್ತಿ ವಿವರದ ಮಾಹಿತಿ ಇಲ್ಲಿದೆ.

40 ಕೋಟಿ ರೂ. ಆಸ್ತಿ ಏರಿಕೆ
ಶರತ್ ಬಚ್ಚೇಗೌಡ ಅವರು 2018ರ ವಿಧಾನಸಭೆ ಚುನಾವಣೆ ವೇಳೆ 90.15 ಕೋಟಿ ರೂ ಆಸ್ತಿ ಘೋಷಣೆ ಮಾಡಿದ್ದರು. ಈ ಬಾರಿ 138.15 ಕೋಟಿ ರೂ. ಆಸ್ತಿ ಇದೆ ಎಂದು ಮಾಹಿತಿ ನೀಡಿದ್ದಾರೆ. ಕಳೆದ 18 ತಿಂಗಳಿನಲ್ಲಿ ಅವರ ಆಸ್ತಿ 40 ಕೋಟಿ ರೂ.ನಷ್ಟು ಹೆಚ್ಚಾಗಿದೆ. ಶರತ್ ಅವರ ಬಳಿ 52.24 ಲಕ್ಷ ರೂ ಮೌಲ್ಯದ ಒಟ್ಟು ಎರಡು ಕಾರುಗಳಿವೆ. ಅವರ ಪತ್ನಿ ಪ್ರತಿಭಾ ಶರತ್ ಗೌಡ ಬಳಿ 52 ಲಕ್ಷ ರೂ. ಮೌಲ್ಯದ ಕಾರು ಇದೆ.

100 ಕೋಟಿ ರೂ. ಸ್ಥಿರ, 38.15 ಕೋಟಿ ರೂ ಚರಾಸ್ತಿ
ಶರತ್ ಅವರ ಸ್ಥಿರಾಸ್ತಿ ಮೌಲ್ಯ 100 ಕೋಟಿ ರೂ. 38.15 ಕೋಟಿ ರೂ ಮೌಲ್ಯದ ಚರಾಸ್ತಿ ಅವರ ಬಳಿ ಇದೆ. 11 ಲಕ್ಷ ರೂ.ನಗದು ಅವರ ಬಳಿ ಇದೆ. ಬ್ಯಾಂಕ್‌ನಲ್ಲಿ 1.37 ಲಕ್ಷ ರೂ. ಠೇವಣಿ ಇರಿಸಿದ್ದಾರೆ. 27.22 ಲಕ್ಷ ರೂಪಾಯಿ ಹಣವನ್ನು ಸಾಲ ನೀಡಿದ್ದಾರೆ. 1.30 ಕೋಟಿ ರೂ. ಮೊತ್ತದ ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳು ಅವರ ಬಳಿ ಇದೆ.

9.48 ಕೋಟಿ ರೂ. ಹೂಡಿಕೆ
ಅಪರಿಮಿತ ಪವರ್ ವೆಂಚರ್ಸ್ ಸಂಸ್ಥೆಯಲ್ಲಿ ಶರತ್ ಅವರು 9.48 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. 2.14 ಕೋಟಿ ರೂ ಬ್ಯಾಂಕ್ ಸಾಲ ಹೊಂದಿದ್ದಾರೆ. ಶರತ್ ಮತ್ತು ಅವರ ಪತ್ನಿ ಹೆಸರಿನಲ್ಲಿ ಸುಮಾರು 20 ಎಕರೆ ಕೃಷಿ ಜಮೀನು ಇದ್ದು, ಇದ್ಯಾವುದೂ ಸ್ವಯಾರ್ಜಿತವಲ್ಲ ಎಂದು ತಿಳಿಸಿದ್ದಾರೆ. ಹಾಗೆಯೇ ತಮ್ಮ ಬಳಿ ಕೃಷಿಯೇತರ ಜಮೀನು ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

ಮೂರು ಕಂಪೆನಿಗಳ ಒಡೆತನ
ಶರತ್ ಹೆಸರಿನಲ್ಲಿ ಮೂರು ವಾಣಿಜ್ಯ ಕಟ್ಟಡಗಳಿದ್ದು ಸುಮಾರು 43 ಕೋಟಿ ರೂ ಮೌಲ್ಯದ್ದಾಗಿವೆ. ಜತೆಗೆ ಬೆಂಗಳೂರಿನಲ್ಲಿ ಒಂದು ಫ್ಲಾಟ್ ಮತ್ತು ಮಂಡೂರು ಗ್ರಾಮದಲ್ಲಿ ಆರು ವಿಲ್ಲಾಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಮೆ. ತ್ರಿಶೂಲ್ ಪವರ್ ಪ್ರೈ.ಲಿ., ಮೆ. ಶ್ರೀಸಾಯಿದೀಪ್ತಿ ಪವರ್ ಪ್ರೈ ಲಿ., ಮತ್ತು ಅಪರಿಮಿತ ಪವರ್ ವೆಂಚರ್ಸ್ ಪ್ರೈ.ಲಿ ಕಂಪೆನಿಗಳು ಅವರ ಒಡೆತನದಲ್ಲಿವೆ.

ವಾಹನ ಖರೀದಿಗಾಗಿ ಸಾಲ
ಫಾರ್ಚೂನರ್ ಕಾರು ಖರೀದಿಗೆ ಎಸ್‌ಬಿಐನಲ್ಲಿ 12 ಲಕ್ಷ ರೂ., ಇನ್ನೋವಾ ಕ್ರಿಸ್ಟಾ ಖರೀದಿಗೆ ಟೊಯೊಟೊ ಫೈನಾನ್ಷಿಯಲ್ ಸರ್ವಿಸಸ್‌ನಲ್ಲಿ 18 ಲಕ್ಷ ರೂ ಸಾಲ ಪಡೆಯಲಾಗಿದೆ. ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಎರಡು ಕೋಟಿ ರೂ ಗೃಹ ಸಾಲ ಪಡೆಯಲಾಗಿದೆ. ಪತ್ನಿಯ ಹೆಸರಿನಲ್ಲಿ ಮರ್ಸಿಡೆಸ್ ಬೆಂಜ್ ಖರೀದಿಗೆ 35 ಲಕ್ಷ ರೂ ಸಾಲ ಪಡೆಯಲಾಗಿದೆ.

ಅಮೆರಿಕದಲ್ಲಿ ಎಂಎಸ್
ಬೆಂಗಳೂರಿನ ಪಿಇಎಸ್ ತಾಂತ್ರಿಕ ಕಾಲೇಜಿನಲ್ಲಿ ಬಿ.ಇ. ಪದವಿ ಪಡೆದಿರುವ ಶರತ್, ಅಮೆರಿಕದಲ್ಲಿ ಎಂಎಸ್ ಪೂರೈಸಿದ್ದಾರೆ. ಅವರ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳು ಬಾಕಿ ಇಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
-
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್












Click it and Unblock the Notifications