ಭಾರತೀಯ ಮೊಬೈಲ್ ಮಾರುಕಟ್ಟೆಗೆ ಕೆಲವೇ ದಿನಗಳಲ್ಲಿ ಎಂಟ್ರಿ ನೀಡಲಿದೆ ಎಚ್‌ಎಂಡಿ ಮೊಬೈಲ್
ಭಾರತೀಯ ಮೊಬೈಲ್ ಮಾರುಕಟ್ಟೆಗೆ ದಿನವೂ ಒಂದಿಲ್ಲಾ ಒಂದು ಕಂಪನಿಯ ಪೋನ್‌ಗಳು ಲಾಂಚ್ ಆಗುತ್ತವೆ. ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ತನ್ನ ಹವಾ ಕ್ರಿಯೇಟ್ ಮಾಡಲು Nokia ನ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ HMD (ಹ್ಯೂಮನ್ ಮೇಡ್ ಡಿವೈಸ್) ಬರಲಿದೆ.
ಭಾರತದಲ್ಲಿ HMD ತನ್ನ ಬ್ರಾಂಡ್ ಅಡಿಯಲ್ಲಿ ಮೊದಲ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಎಚ್‌ಎಂಡಿ ಯ ಈ ಸ್ಮಾರ್ಟ್‌ಫೋನ್ ಈಗಾಗಲೇ ಜಾಗತಿಕ ಮಾರುಕಟ್ಟೆಯನ್ನು ರಿಲೀಸ್ ಆಗಿದೆ. ಇದು ಭಾರತದಲ್ಲಿ ಹೊಸ ಹೆಸರಿನೊಂದಿಗೆ ಗ್ರಾಹಕರ ಕೈ ಸೇರಲಿದೆ. ಎಚ್‌ಎಂಡಿ ಪಲ್ಸ್ ಹೆಸರಿನಲ್ಲಿ ಈ ಅಗ್ಗದ ಫೋನ್ ಯುರೋಪಿಯನ್ ಜನರನ್ನು ಆಕರ್ಷಿಸಿದೆ. ಅದೇ ಸಮಯದಲ್ಲಿ, ಇದನ್ನು HMD Arrow ಹೆಸರಿನಲ್ಲಿ ಭಾರತದಲ್ಲಿ ಲಾಂಚ್ ಮಾಡುವ ಸಾಧ್ಯತೆ ಇದೆ.

ಡಿಸ್‌ಪ್ಲೇ ಹೇಗಿದೆ?
ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಫೋನ್‌ನ ವೈಶಿಷ್ಟ್ಯಗಳು ಗ್ರಾಹಕರನ್ನು ಕೈ ಬೀಸಿ ಕರೆಯುತ್ತವೆ. ಇದು 6.65 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಫೋನ್ ಎಲ್‌ಸಿಡಿ ಪರದೆಯನ್ನು ಹೊಂದಿರುತ್ತದೆ. ಇದು 600 nits ವರೆಗಿನ ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ.
ಪ್ರೊಸೆಸರ್ ಹೇಗಿದೆ?
ಎಚ್‌ಎಂಡಿ ಯ ಈ ಫೋನ್ Unisoc T606 ಚಿಪ್‌ಸೆಟ್‌ನೊಂದಿಗೆ ಬರುವ ಸಾಧ್ಯತೆ ಇದೆ. ಇದರೊಂದಿಗೆ ಇದು 8GB RAM ಮತ್ತು 128GB ವರೆಗಿನ ಇಂಟರ್ನಲ್ ಸ್ಟೋರೇಜ್ ಬೆಂಬಲಿಸುತ್ತದೆ. ಮೈಕ್ರೊ SD ಕಾರ್ಡ್ ಮೂಲಕ ಫೋನ್‌ನ ಆಂತರಿಕ ಸಂಗ್ರಹಣೆಯನ್ನು 256GB ವರೆಗೆ ಹೆಚ್ಚಿಸಿಕೊಳ್ಳಬಹುದು.
HMD Arrow ಮೊಬೈಲ್ 5000mAh ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆ ಇದೆ. ಇದರೊಂದಿಗೆ 10 ವ್ಯಾಟ್ USB ಟೈಪ್ C ಚಾರ್ಜಿಂಗ್ ವೈಶಿಷ್ಟ್ಯವು ಲಭ್ಯವಿರುತ್ತದೆ. ಈ ಮೊಬೈಲ್ ಹಿಂಭಾಗದಲ್ಲಿ ಡ್ಯೂಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಪ್ರೈಮರಿ ಕ್ಯಾಮೆರಾ 13 ಮೆಗಾ ಪಿಕ್ಸಲ್ ಹೊಂದಿರುವ ಸಂಭವವಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ರೆಕಾರ್ಡಿಂಗಾಗಿ ಕಂಪನಿ ಮುಂಭಾಗದಲ್ಲಿ 13 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಿದೆ.
ಎಚ್‌ಎಂಡಿ ಫೋನ್‌ಗೆ ಸಂಬಂಧಿಸಿದ ಇತ್ತೀಚಿನ ವರದಿಯನ್ನು ನಾವು ನಂಬಿದರೆ, ಈ ಫೋನ್ ಅನ್ನು ಈ ತಿಂಗಳು ಜುಲೈ 25 ರಂದು ಭಾರತದಲ್ಲಿ ಬಿಡುಗಡೆ ಮಾಡಬಹುದು. ಕಂಪನಿಯು ಶೀಘ್ರದಲ್ಲೇ ಈ ಫೋನ್ ಬಗ್ಗೆ ಅಧಿಕೃತ ಪ್ರಕಟಣೆಯನ್ನು ನೀಡಬಹುದು.
ಬೆಲೆ ಎಷ್ಟು ?
ಎಚ್‌ಎಂಡಿ ಯ ಈ ಫೋನ್ ಯುರೋಪ್ ಮಾರುಕಟ್ಟೆಯಲ್ಲಿ EUR140 ಅಂದರೆ ಸರಿಸುಮಾರು 12,460 ರೂಪಾಯಿಗಳಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಅಟ್ಮಾಸ್ ಬ್ಲೂ, ಡ್ರೀಮಿ ಪಿಂಕ್ ಮತ್ತು ಮೆಟಿಯರ್ ಬ್ಲ್ಯಾಕ್ ಬಣ್ಣದ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.












Click it and Unblock the Notifications