ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ ಫೀಚರ್ಸ್ ಫೋನ್ಸ್
ದಶಕದ ಹಿಂದಿನ ಮಾತು, ಆಗ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ರಾಜನಂತೆ ಮೆರೆದಿದ್ದವು ಈ ಮೊಬೈಲ್.. ಯಾರ ಕೈಯಲ್ಲಿ ನೋಡಿದರು ಕೀ ಪ್ಯಾಡ್ ಮೊಬೈಲ್‌ಗಳ ಅಬ್ಬರ ಜೋರಾಗಿತ್ತು. ಈಗ ಸ್ಮಾರ್ಟ್‌ಫೋನ್ ಬಂದ ಮೇಲೆ ಈ ಮೊಬೈಲ್‌ಗಳನ್ನು ಕೇಳುವವರೇ ಇಲ್ಲದಂತಾಗಿದೆ. ಆದರೂ ಈ ಮೊಬೈಲ್ ಪ್ರೀಯರದ್ದೇ ಒಂದು ವರ್ಗ ಇದೆ. ಅವರನ್ನೇ ಟಾರ್ಗೆಟ್ ಮಾಡಿ ನೋಕಿಯಾ ಫೋನ್ ತಯಾರಕ HMD ಗ್ಲೋಬಲ್ ಭಾರತದಲ್ಲಿ ಅಗ್ಗದ ಫೋನ್‌ಗಳನ್ನು ಲಾಂಚ್ ಮಾಡಿದೆ.
ಕಾಣಲು ಸಖತ್ ಲುಕ್ಕಿಂಗ್ ಹಾಗೂ ಸ್ಟೈಲಿಷ್ ಆಗಿರುವ ಈ ಫೋನ್‌ಗಳು ವಿವಿಧ ಬಣ್ಣಗಳಲ್ಲಿ ಲಭ್ಯ. ಈ ಫೀಚರ್ ಫೋನ್‌ಗೆ ಕಂಪನಿ HMD 110 ಮತ್ತು HMD 105 ಎಂದು ನಾಮಕರಣ ಮಾಡಿ ಮಾರುಟ್ಟೆಗೆ ಬಿಟ್ಟಿದೆ. ಇವುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ನೋಕಿಯಾ 110 ಮತ್ತು ನೋಕಿಯಾ 105 ರ ರಿ ಬ್ರ್ಯಾಂಡಿಗೆ ಆಗಿವೆ.

ಕಂಪನಿಯು ತನ್ನ ಫೋನ್ ವೈಶಿಷ್ಟ್ಯಗಳನ್ನು ನವೀಕರಿಸಿದ್ದು, ಗುಡ್ ಲುಕ್ ಹೊಂದಿದೆ. ಈ ಫೋನ್ ಒಮ್ಮೆ ಚಾರ್ಜ್ ಮಾಡಿದರೆ 18 ದಿನಗಳ ವರೆಗೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. HMD 110 ಅನ್ನು ಕಪ್ಪು ಮತ್ತು ಹಸಿರು ಬಣ್ಣದಲ್ಲಿ ಲಭ್ಯ. HMD 105 ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಸದ್ದು ಮಾಡುತ್ತಿವೆ.
ಏನೆಲ್ಲಾ ವಿಶೇಷತೆಗಳನ್ನು ಹೊಂದಿವೆ?
ಈ ಎರಡೂ ಮೊಬೈಲ್‌ಗಳು ಫೀಚರ್ಸ್‌ಗಳು ಬಹುತೇಕ ಒಂದೇ ರೀತಿಯಲ್ಲೇ ಇವೆ. ಈ ಎರಡೂ ಫೋನ್ QQVGA ಡಿಸ್ಪ್ಲೇಗಳನ್ನು ಹೊಂದಿದೆ. ಈ ಮೊಬೈಲ್‌ನಲ್ಲಿ ಎಂಪಿ3, ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯಗಳೊಂದಿಗೆ ಗ್ರಾಹಕರ ಕೈ ಸೇರಲಿದೆ. ಈ ಮೊಬೈಲ್‌ಗಳ ವಿಶೇಷತೆ ಅಂದರೆ ಈ ಮೊಬೈಲ್ UPI ವಿಶೇಷತೆಯನ್ನು ಹೊಂದಿದೆ. ಸದ್ಯ ದೇಶದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ಪೇಮೆಂಟ್ ಗಮನದಲ್ಲಿಟ್ಟುಕೊಂಡು ಕಂಪನಿ ಈ ವ್ಯವಸ್ಥೆ ನೀಡಿದೆ.
ಯುಪಿಐ ವ್ಯವಸ್ಥೆ ಇದೆಯಾ?
ಈ ಎರಡೂ ವೈಶಿಷ್ಟ್ಯದ ಫೋನ್‌ಗಳು ವೈರ್ಡ್ ಮತ್ತು ವೈರ್‌ಲೆಸ್ ಎಫ್‌ಎಂ ರೇಡಿಯೊವನ್ನು ಬೆಂಬಲಿಸುತ್ತವೆ. HMD 105 ಡ್ಯುಯಲ್ LED ಫ್ಲ್ಯಾಷ್ ಅನ್ನು ಹೊಂದಿದೆ, ಆದರೆ HMD 110 ಹಿಂಭಾಗದಲ್ಲಿ ಕ್ಯಾಮೆರಾ ಸಂವೇದಕವನ್ನು ಹೊಂದಿದೆ. ಈ ಎರಡೂ ಮೊಬೈಲ್ 1,000mAh ಬ್ಯಾಟರಿಯೊಂದಿಗೆ ಕಾರ್ಯನಿರ್ವಹಿಸಲಿವೆ. ಒಮ್ಮೆ ಚಾರ್ಜ್ ಮಾಡಿದರೆ 18 ದಿನ ಕಾರ್ಯನಿರ್ವಹಿಸಹುದು ಎಂದು ಕಂಪನಿ ಹೇಳಿಕೊಂಡಿದೆ. ಈ ಎರಡೂ ಹ್ಯಾಂಡ್‌ಸೆಟ್‌ಗಳು 9 ಭಾರತೀಯ ಭಾಷೆಯ ಇನ್‌ಪುಟ್‌ಗಳನ್ನು ಬೆಂಬಲಿಸುತ್ತವೆ.
ಬೆಲೆ ಎಷ್ಟು?
ಭಾರತದಲ್ಲಿ HMD 110 ಬೆಲೆಯನ್ನು 1,119 ರೂಪಾಯಿಗಳಲ್ಲಿ ಗ್ರಾಹಕರ ಕೈಸೇರಲಿದೆ. ಇನ್ನು HMD 105 ಬೆಲೆ 999 ರೂ.ಗೆ ಲಭ್ಯ. ಈ ಎರಡೂ ಫೀಚರ್ ಫೋನ್‌ಗಳು ಕಂಪನಿಯ ವೆಬ್‌ಸೈಟ್, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಗಳಲ್ಲಿ ಖರೀದಿಸಬಹುದು.
ದಶಕದ ಹಿಂದೆ ಮಾರುಕಟ್ಟೆಯಲ್ಲಿ ಅಬ್ಬರಿಸಿದ್ದ ಈ ಫೋನ್‌ಗಳು ಮತ್ತೆ ಹವಾ ಕ್ರಿಯೇಟ್ ಮಾಡಲಿವೆ. ಈ ಫೋನ್‌ಗಳು ಸದ್ಯ ವಿವಿಧ ಬಣ್ಣಗಳಲ್ಲಿ ಬಂದಿದ್ದು ಬಳಕೆದಾರರನ್ನು ಸೆಳೆಯುತ್ತಿವೆ.












Click it and Unblock the Notifications