ಯೂರೋಪ್ ದೇಶಗಳಲ್ಲಿ ಶಾಖದ ಅಲೆಯ ಹೊಡೆತಕ್ಕೆ ನೂರಾರು ಮಂದಿ ಸಾವು, ಅರಣ್ಯ ನಾಶ
ಉತ್ತರ ಭಾರತ, ಪಾಕಿಸ್ತಾನವನ್ನು ಕಾಡಿದ್ದ ಶಾಖದ ಅಲೆ ಯೂರೋಪ್‌ಗೆ ಕಾಲಿಟ್ಟಿದೆ. ಶಾಖದ ಅಲೆಗೆ ಯೂರೋಪ್ ರಾಷ್ಟ್ರಗಳಲ್ಲಿ ನೂರಾರು ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಯೂರೋಪ್ ಖಂಡದ ಕೆಲವು ಭಾಗಗಳಲ್ಲಿ ಶಾಖದ ಅಲೆಯಿಂದ ಕಾಡಿಗೆ ಬೆಂಕಿ ಬಿದ್ದಿದೆ. ಸತತ ಆರು ದಿನಗಳಿಂದ ಶಾಖದ ಅಲೆಗೆ ಜನ ತತ್ತರಿಸಿದ್ದಾರೆ.
ಫ್ರಾನ್ಸ್, ಪೋರ್ಚುಗಲ್, ಸ್ಪೇನ್ ಮತ್ತು ಗ್ರೀಸ್‌ನಲ್ಲಿನ ಅಗ್ನಿಶಾಮಕ ದಳದವರು ಕಾಡಿನ ಬೆಂಕಿಯನ್ನು ನಿಯಂತ್ರಿಸಲು ಹೋರಾಡುತ್ತಿದ್ದಾರೆ. ಕಾಡ್ಗಿಚ್ಚಿನಿಂದ ಸಾವಿರಾರು ಹೆಕ್ಟೇರ್ ಅರಣ್ಯ ನಾಶವಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಹಲವು ಸಿಬ್ಬಂದಿ ಜೀವ ಕಳೆದುಕೊಂಡಿದ್ದಾರೆ.
ಹವಾಮಾನ ಬದಲಾವಣೆಯೇ ಈ ದುರ್ಘಟನೆಗೆ ಕಾರಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಹವಾಮಾನದಲ್ಲಿ ಆಗುತ್ತಿರುವ ವಿಪರೀತ ಬದಲಾವಣೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಮತ್ತಷ್ಟು ಅಪಾಯಕಾರಿಯಾಗುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ವಾರಗಳ ಅವಧಿಯಲ್ಲಿ ನೈಋತ್ಯ ಯೂರೋಪಿನ ಭಾಗಗಳಲ್ಲಿ ಎರಡನೇ ಬಾರಿ ಶಾಖದ ಅಲೆ ಬಾಧಿಸುತ್ತಿದೆ.
ಸ್ಪೇನ್‌ನಲ್ಲಿ 40 ಡಿಗ್ರಿ ಸೆಲ್ಸಿಯಸ್ (104 ಡಿಗ್ರಿ ಫ್ಯಾರನ್‌ಹೀಟ್) ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಶಾಖದ ಅಲೆಯಿಂದಾಗಿ ಕನಿಷ್ಠ 360 ಜನರು ಸಾವನ್ನಪ್ಪಿದ್ದಾರೆ, ಸರ್ಕಾರಿ ಕಾರ್ಲೋಸ್ ಹೆಲ್ತ್ ಇನ್‌ಸ್ಟಿಟ್ಯೂಟ್ ಅನ್ನು ಉಲ್ಲೇಖಿಸಿ ಲಾ ವ್ಯಾನ್‌ಗಾರ್ಡಿಯಾ ಪತ್ರಿಕೆ ವರದಿ ಮಾಡಿದೆ.

ಸ್ಪೇನ್‌ನಲ್ಲಿ 123, ಪೋರ್ಚುಗಲ್‌ನಲ್ಲಿ 238 ಜನ ಸಾವು
ಶುಕ್ರವಾರ ಒಂದೇ ದಿನ, ಸ್ಪೇನ್‌ನ ಕೆಲವು ಪ್ರದೇಶಗಳಲ್ಲಿ ತಾಪಮಾನವು 45 ಡಿಗ್ರಿಗಳಿಗೆ ಹೆಚ್ಚಾಗಿತ್ತು, ತೀವ್ರತರವಾದ ಶಾಖಕ್ಕೆ ಸಂಬಂಧಿಸಿದ ಕಾರಣಗಳಿಂದ 123 ಮಂದಿ ಸಾವನ್ನಪ್ಪಿದರು. ಈ ವಾರ ಹೆಚ್ಚಿನ ತಾಪಮಾನವು ದಕ್ಷಿಣ ಯುರೋಪ್ ಅನ್ನು ಬಾಧಿಸುತ್ತಿದೆ.
ಪೋರ್ಚುಗಲ್‌ನಲ್ಲಿ, ಜುಲೈ 7 ಮತ್ತು 13 ರ ನಡುವೆ 238 ಹೆಚ್ಚು ಸಾವುಗಳು ದಾಖಲಾಗಿವೆ ಎಂದು ಲೂಸಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಸಾವುಗಳಿಗೆ ಕೊರೊನಾ ವೈರಸ್ ಕಾರಣವಲ್ಲ ಬದಲಾಗಿ ತೀವ್ರವಾದ ಶಾಖ ಕಾರಣ ಎಂದು ಹೇಳಿದೆ.
ವೃದ್ಧರು ಅಥವಾ ಅನಾರೋಗ್ಯದ ಕಾರಣ ಈಗಾಗಲೇ ದುರ್ಬಲವಾಗಿರುವವರು ಶಾಖದ ಅಲೆಗೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಶುಕ್ರವಾರ, 60 ವರ್ಷ ವಯಸ್ಸಿನ ಸ್ಪ್ಯಾನಿಷ್ ಸ್ಟ್ರೀಟ್ ಕ್ಲೀನರ್ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅವರು ಮೃತಪಟ್ಟರು. ನಂತರ ಆಸ್ಪತ್ರೆಯಲ್ಲಿ ಅವರ ದೇಹದ ಉಷ್ಣತೆಯನ್ನು ಪರೀಕ್ಷಿಸಿದಾಗ 41.6 ಡಿಗ್ರಿ ಸೆಲ್ಸಿಯಸ್ ಎಂದು ತಿಳಿದುಬಂದಿದೆ. ಶಾಖದ ತೀವ್ರತೆಯೇ ಅವರ ಸಾವಿಗೆ ಕಾರಣ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚು
ಶಾಖ ಮತ್ತು ದೀರ್ಘಕಾಲದ ಬರದ ಪರಿಣಾಮವಾಗಿ ಸ್ಪೇನ್ ಮತ್ತು ಪೋರ್ಚುಗಲ್‌ನಲ್ಲಿ ಹಲವಾರು ವಿನಾಶಕಾರಿ ಕಾಡ್ಗಿಚ್ಚುಗಳು ಸಂಭವಿಸುತ್ತಿವೆ.
ಈಶಾನ್ಯ ಪೋರ್ಚುಗಲ್‌ನಲ್ಲಿ ಅಗ್ನಿಶಾಮಕ ವಿಮಾನದ ಪೈಲಟ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಪೋರ್ಟೊದಿಂದ ಪೂರ್ವಕ್ಕೆ 200 ಕಿಲೋಮೀಟರ್ ದೂರದಲ್ಲಿರುವ ವಿಲಾ ನೋವಾ ಡಿ ಫೋಜ್ ಕೋವಾ ಪಟ್ಟಣದ ಬಳಿ ಸಿಂಗಲ್-ಎಂಜಿನ್ ಸೀಪ್ಲೇನ್ ಶುಕ್ರವಾರ ಅಪಘಾತಕ್ಕೀಡಾಯಿತು ಎಂದು ಸಿವಿಲ್ ಡಿಫೆನ್ಸ್ ಅನ್ನು ಉಲ್ಲೇಖಿಸಿ ಪತ್ರಿಕೆಯೊಂದು ವರದಿ ಮಾಡಿದೆ.
38 ವರ್ಷದ ಪೈಲಟ್ ಆಂಡ್ರೆ ಸೆರ್‍ರಾ ಶವವಾಗಿ ಪತ್ತೆಯಾಗಿದ್ದಾರೆ. "ಅವರ ಧೈರ್ಯ, ಶೌರ್ಯ ಮತ್ತು ಸಮರ್ಪಣೆಗಾಗಿ ಅವರನ್ನು ಸ್ಮರಿಸಲಾಗುವುದು" ಎಂದು ಲಿಸ್ಬನ್‌ನಲ್ಲಿರುವ ಅಧ್ಯಕ್ಷೀಯ ಕಚೇರಿಯು ಗೌರವ ಸಲ್ಲಿಸುವ ಸಮಯದಲ್ಲಿ ಹೇಳಿದೆ.

ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ
ಟೊರ್ರೆ ಡಿ ಮೊಂಕೊರ್ವೊ ಪ್ರದೇಶದಲ್ಲಿ ಕಾಡ್ಗಿಚ್ಚನ್ನು ನಂದಿಸಲು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಸಿವಿಲ್ ಡಿಫೆನ್ಸ್ ಪ್ರಕಾರ, ಜನಪ್ರಿಯ ಪ್ರವಾಸಿ ತಾಣಗಳ 13 ಪ್ರಮುಖ ಮತ್ತು ಹತ್ತಾರು ಸಣ್ಣ ಪ್ರಮಾಣದ ಬೆಂಕಿ ಆವರಿಸಿದೆ. ಸದ್ಯಕ್ಕೆ, ಪ್ರವಾಸಿ ಮತ್ತು ದೊಡ್ಡ ವಸತಿ ಪ್ರದೇಶಗಳು ಅಪಾಯದಲ್ಲಿಲ್ಲ ಎಂದು ವರದಿಯಾಗಿದೆ.
ಬೆಂಕಿ ನಂದಿಸಲು ಒಟ್ಟು 1,000 ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಕೃತಿ ಸಂರಕ್ಷಣಾ ಸಂಸ್ಥೆ ಐಸಿಎನ್‌ಎಫ್ ಪ್ರಕಾರ, ಕೇವಲ ಒಂದು ವಾರದಲ್ಲಿ ಕಾಡ್ಗಿಚ್ಚಿನಿಂದ 25 ಸಾವಿರ ಹೆಕ್ಟೇರ್ ಅರಣ್ಯ ನಾಶವಾಗಿದೆ. ಇದು 35 ಸಾವಿರ ಫುಟ್‌ಬಾಲ್ ಕ್ರೀಡಾಂಗಣಗಳಿಗೆ ಸಮಾನ ಎಂದು ತಿಳಿಸಿದೆ. ಶನಿವಾರ ಒಟ್ಟು 33 ಕಡೆ ಕಾಡ್ಗಿಚ್ಚು ಸಂಭವಿಸಿದೆ. ಅದರಲ್ಲಿ 14 ಪ್ರದೇಶದಲ್ಲಿ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ.

ಫ್ರಾನ್ಸ್‌ನಲ್ಲಿ 10,000 ಹೆಕ್ಟೇರ್ ಅರಣ್ಯ ನಾಶ
10,000 ಹೆಕ್ಟೇರ್ ಗಿಂತಲೂ ಹೆಚ್ಚು ಪ್ರದೇಶವನ್ನು ಕಬಳಿಸಿದ ಕಾಡಿನ ಬೆಂಕಿಯನ್ನು ನಿಯಂತ್ರಿಸಲು ಫ್ರಾನ್ಸ್‌ನ ನೈಋತ್ಯ ಗಿರೊಂಡೆ ಪ್ರದೇಶದ ಕರಾವಳಿ ಪಟ್ಟಣವಾದ ಅರ್ಕಾಚೋನ್‌ನಲ್ಲಿ 1,200 ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಐದು ವಿಮಾನಗಳು ಸತತವಾಗಿ ಕಾರ್ಯಾಚರಣೆ ಮಾಡುತ್ತಿವೆ.
ಗ್ರೀಸ್‌ನಲ್ಲಿ, ಮೆಡಿಟರೇನಿಯನ್ ದ್ವೀಪವಾದ ಕ್ರೀಟ್‌ನಲ್ಲಿ ಕಾಡ್ಗಿಚ್ಚನ್ನು ನಂದಿಸಲು ನಾಗರಿಕ ರಕ್ಷಣಾ ಧಾವಿಸಿತು, ಆದರೆ ಮೊರಾಕೊ ಉತ್ತರ ಪರ್ವತಗಳಲ್ಲಿ ಮಾರಣಾಂತಿಕ ಕಾಡಿನ ಬೆಂಕಿಯನ್ನು ನಂದಿಸಲು ಹೋರಾಡುತ್ತಿದೆ.
ಯುನೈಟೆಡ್ ಕಿಂಗ್‌ಡಮ್‌ನಲ್ಲಿ, ರಾಜ್ಯದ ಹವಾಮಾನ ಸಂಸ್ಥೆಯು ತೀವ್ರತರವಾದ ಶಾಖಕ್ಕೆ ಮೊದಲ ಬಾರಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಸರ್ಕಾರದ ಸಚಿವರು ಶಾಖದ ಅಲೆಯಿಂದ ಜೀವಕ್ಕೆ ಅಪಾಯ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಸೋಮವಾರ ಅಥವಾ ಮಂಗಳವಾರ ತಾಪಮಾನ 40 ಡಿಗ್ರಿ ಮೀರಬಹುದು ಎಂದು ಮೆಟ್ ಆಫೀಸ್ ಹೇಳಿದೆ, ಶಾಖದ ಅಲೆಗಳಿಂದಾಗಿ ಮುಂದಿನ ವಾರ ಶಾಲೆಗಳನ್ನು ಮುಚ್ಚಲಾಗುವುದು ಎಂದು ಅವರು ತಿಳಿಸಿದ್ದಾರೆ.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ












Click it and Unblock the Notifications