ಮಾವ ಎಚ್ ಡಿ ದೇವೇಗೌಡ್ರ ಬಗ್ಗೆ ಅವರ ಅಳಿಯ ಡಾ. ಸಿ ಎನ್ ಮಂಜುನಾಥ್ ಹೇಳುವುದೇನು?
Recommended Video

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ್ರು ಮತ್ತು ಚೆನ್ನಮ್ಮನವರದ್ದು ತುಂಬು ಕುಟುಂಬ. ಗೌಡ್ರ ಕುಟುಂಬದ ಸದಸ್ಯರು ರಾಜಕೀಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು.
ಗೌಡ್ರ ಮೊದಲನೇ ಮಗಳು ಅನಸೂಯ ಅವರ ಪತಿ, ಡಾ. ಸಿ ಎನ್ ಮಂಜುನಾಥ್, ಸರಕಾರೀ ಸ್ವಾಮ್ಯದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು. ಚಿಕಿತ್ಸೆ, ತಪಾಸಣೆ, ಸರ್ಜರಿ, ಶುಚಿತ್ವದ ವಿಚಾರದಲ್ಲಿ, ಸರಕಾರ ಒಡೆತನದ ಆಸ್ಪತ್ರೆಯನ್ನು ಹೀಗೂ ನಡೆಸಿಕೊಂಡು ಹೋಗಬಹುದು ಎಂದು ತೋರಿಸಿಕೊಟ್ಟವರು ಡಾ. ಮಂಜುನಾಥ್.
ಪತ್ನಿ ಬಲಾಢ್ಯ ರಾಜಕೀಯ ಕುಟುಂಬದಿಂದ ಬಂದಿದ್ದರೂ, ತಮ್ಮ ವೈದ್ಯಕೀಯ ವೃತ್ತಿಯಲ್ಲಿ, ರಾಜಕೀಯದ ನಂಟು ಸೋಂಕದಂತೆ ನೋಡಿಕೊಂಡ ಡಾ. ಮಂಜುನಾಥ್, ಜಯದೇವ ಸಂಸ್ಥೆಯನ್ನು ಇನ್ನೂ ಬೆಳೆಸುವ ಗುರಿಯನ್ನು ಹೊಂದಿದ್ದಾರೆ.
ಬೆಂಗಳೂರಿನ ರಾಜಾಜಿನಗರದಲ್ಲಿರುವ ESI, ಮೈಸೂರು ಮತ್ತು ಕಲಬುರಗಿಯಲ್ಲಿ ತಮ್ಮ ಶಾಖೆಯನ್ನು ವಿಸ್ತರಿಸಿರುವ ಜಯದೇವ ಸಂಸ್ಥೆ, ದೇಶದ ವೈದ್ಯಕೀಯ ವಲಯದಲ್ಲಿ ಮಾಡಿರದ ಹಲವು ಸಾಧನೆಗಳನ್ನು ತಮ್ಮ ಪುಟಕ್ಕೆ ಸೇರಿಸಿಕೊಂಡಿದೆ.
'ಒನ್ ಇಂಡಿಯಾ' ಜೊತೆಗಿನ ಸಂದರ್ಶನದಲ್ಲಿ, ಡಾ. ಮಂಜುನಾಥ್ ಅವರು ತಮ್ಮ ಮಾವನವರಾದ ದೇವೇಗೌಡ್ರು, ಅತ್ತೆ ಮತ್ತು ತಮ್ಮ ಕುಟುಂಬದ ಬಗ್ಗೆ ಹೇಳಿದ ಕುತೂಹಲಕಾರಿ ವಿಷಯವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಅವರಂತಹ ಅಳಿಯನನ್ನು ಪಡೆಯಲು ಪುಣ್ಯ ಮಾಡಿದ್ದೇನೆ
ಬಹಳಷ್ಟು ಸಾರ್ವಜನಿಕ ವೇದಿಕೆಯಲ್ಲಿ, ಡಾ. ಮಂಜುನಾಥ್ ಅವರಂತಹ ಅಳಿಯನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ ಎಂದು ದೇವೇಗೌಡ್ರು ಹೇಳಿದ್ದುಂಟು. ಈ ವಿಚಾರವನ್ನು ಅವರ ಬಳಿ ಪ್ರಸ್ತಾವಿಸಿದಾಗ, ಡಾ. ಮಂಜುನಾಥ್ ಹೇಳಿದ ಉತ್ತರ, 'ನನಗೂ ದೇವೇಗೌಡ್ರು ಮತ್ತು ಚೆನ್ನಮ್ಮ, ನನ್ನ ಮಾವ ಮತ್ತು ಅತ್ತೆ ಅನ್ನುವುದಕ್ಕೆ ಹೆಮ್ಮೆಯಿದೆ', ಅದಕ್ಕೆ ಕಾರಣ ಹಲವಾರು' ಎಂದು ಒಂದೊಂದೇ ವಿಚಾರವನ್ನು ಹೇಳುತ್ತಾ ಹೋದರು...

ನಾನು ಪೂರ್ವಜನ್ಮದ ಪುಣ್ಯವನ್ನು ಮಾಡಿದ್ದೇನೆ
ಅಂತಹ ಮಾವ ಮತ್ತು ಅತ್ತೆಯನ್ನು ಪಡೆಯಲು ನಾನು ಪೂರ್ವಜನ್ಮದ ಪುಣ್ಯವನ್ನು ಮಾಡಿದ್ದೇನೆ. 1982ನೇ ಇಸವಿಯಲ್ಲಿ ಗೌಡ್ರ ಕುಟುಂಬದ ಮೊದಲನೇ ಮದುವೆ ನಮ್ಮದೇ.. ಗೌಡ್ರು ಬಹಳ ಸರಳತೆಯ ಮನುಷ್ಯ ಮತ್ತು ಯಾವಾಗಲೂ ಜನರ ಬಗ್ಗೆ ಆಲೋಚನೆ ಮಾಡುತ್ತಿರುವವರು. ಹಣಕ್ಕೆ ಮತ್ತು ಶ್ರೀಮಂತಿಕೆಗೆ ಯಾವತ್ತೂ ಒತ್ತು ಕೊಟ್ಟವರಲ್ಲ.

ಗಾಯನ ಸಮಾಜದಲ್ಲಿ ಆರತಕ್ಷತೆಯಿತ್ತು
ನನ್ನ ಮದುವೆ ಒಕ್ಕಲಿಗರ ಭವನದಲ್ಲಾಯಿತು, ಗಾಯನ ಸಮಾಜದಲ್ಲಿ ಆರತಕ್ಷತೆಯಿತ್ತು. ಅವರು ಆಗ ಅಧಿಕಾರದಲ್ಲಿ ಇರಲಿಲ್ಲ. ಆರತಕ್ಷತೆಯ ವಿಡಿಯೋ ರೆಕಾರ್ಡಿಂಗ್ ಮಾಡುವ ವಿಚಾರ ಬಂತು. ಆಗ, ದುಬಾರಿ ಖರ್ಚು ಮಾಡುವುದಕ್ಕೆ ನನ್ನ ವಿರೋಧವಿದೆ ಎಂದರು, ನನ್ನ ಮದುವೆಯ ವಿಡಿಯೋ ರೆಕಾರ್ಡಿಂಗ್ ಆಗಲೇ ಇಲ್ಲ. ಇದಾದ ನಂತರ ಬೀಗರ ಔತಣಕ್ಕೆ ನಮ್ಮ ಊರು ಚನ್ನರಾಯಪಟ್ಟಣಕ್ಕೆ ಬಂದರು. ಇಡೀ ಅವರ ಕುಟುಂಬವನ್ನು ಕರೆದುಕೊಂಡು ಗವರ್ನಮೆಂಟ್ ಬಸ್ಸಿನಲ್ಲಿ ಗೌಡ್ರು ಬಂದಿದ್ದರು.

ಆಟೋರಿಕ್ಷಾದ ಮೂಲಕ ಕ್ರಮಿಸಿ ಬಂದರು
ಚನ್ನರಾಯಪಟ್ಟಣದಿಂದ ನಮ್ಮ ಊರಿಗೆ ಐದು ಕಿಲೋಮೀಟರ್, ಅದನ್ನು ಆಟೋರಿಕ್ಷಾದ ಮೂಲಕ ಕ್ರಮಿಸಿ ಬಂದರು. 2005ರಲ್ಲಿ ಜಯದೇವದಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡಿಕೊಂಡಿದ್ದೆ. ಆಗ ಆಸ್ಪತ್ರೆಯ ವಾತಾವರಣ ಚೆನ್ನಾಗಿರಲಿಲ್ಲ. ಹಾಗಾಗಿ ಜಯದೇವ ಸಂಸ್ಥೆಗೆ ರಾಜೀನಾಮೆ ಕೊಡಲು ಮುಂದಾಗಿದ್ದೆ. ಆಗ ನಮ್ಮ ಮಾವನವರು, ನೀವು ಜಯದೇವ ಬಿಟ್ಟು ಖಾಸಗಿ ಆಸ್ಪತ್ರೆಗೆ ಸೇರಿದರೆ ನಿಮಗೆ ಲಕ್ಷಾಂತರ ರೂಪಾಯಿ ಸಂಬಳ ಬರುತ್ತೆ. ಆದರೆ, ಜಯದೇವದಲ್ಲೇ ನೀವು ಮುಂದುವರಿದರೆ, ಇದೇ ಲಕ್ಷಾಂತರ ಜನರಿಗೆ ನೀವು ಸಹಾಯ ಮಾಡಬಹುದು, ಯಾಕೆಂದರೆ ನಿಮ್ಮಲ್ಲಿ ಸೇವಾ ಮನೋಭಾವವಿದೆ, ಬಡವರ ಬಗ್ಗೆ ಕಾಳಜಿಯಿದೆ ಎಂದು ಸಲಹೆ ನೀಡಿದರು. ಅವರ ಮಾತಿನಂತೆ ಮುಂದುವರಿದೆ...

ಜಯದೇವ ಸಂಸ್ಥೆಯ ನಿರ್ದೇಶಕನಾದೆ
2006ನೇ ಇಸವಿಯಲ್ಲಿ ನಾನು ಜಯದೇವ ಸಂಸ್ಥೆಯ ನಿರ್ದೇಶಕನಾದೆ. ಎಷ್ಟೇ ರಾಜಕೀಯ ಜಂಜಾಟವಿದ್ದರೂ, ಮಕ್ಕಳು ಮತ್ತು ಮೊಮ್ಮಕಳ ಬಗ್ಗೆ ತೀರಾ ಕಾಳಜಿ ಇರುವ ಮನುಷ್ಯ ಅಂದರೆ ನನ್ನ ಮಾವ ದೇವೇಗೌಡ್ರು. ನಮ್ಮ ಶ್ರೀಮತಿಯವರು ಹೋಂ ಸೈನ್ಸ್ ನಲ್ಲಿ ಪಿಎಚ್ಡಿ ಮಾಡಿದ್ದಾರೆ. ನನ್ನ ಮನೆಯಾಕೆ ಪ್ರಾಧ್ಯಾಪಕರಾಗಿ ಕೆಲಸ ಮಾಡಲು ಶುರುಮಾಡಿದ್ದರೆ, ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.

ನನ್ನ ಮಾವನವರದ್ದು ದೈವಭಕ್ತ ಕುಟುಂಬ
ನನ್ನ ಮಕ್ಕಳಿಬ್ಬರೂ, ಉತ್ತಮ ಶಿಕ್ಷಣವನ್ನು ಹೊಂದಲು ಸಾಧ್ಯವಾಗಿದ್ದು ನನ್ನ ಶ್ರೀಮತಿಯಿಂದ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಮಾವನವರದ್ದು ದೈವಭಕ್ತ ಕುಟುಂಬ, ಅಲ್ಲಿ ಸಂಸ್ಕಾರ ಅನ್ನೋದು ಇದೆ. ರಾಜಕೀಯವಾಗಿ ಹಲವಾರು ಕ್ರಾಂತಿಕಾರಿ ನಿರ್ಧಾರವನ್ನು ನಮ್ಮ ಮಾವನವರು ತೆಗೆದುಕೊಂಡಿದ್ದಾರೆ, ಆದರೆ ಅವರಿಗೆ ಸರಿಯಾದ ಪ್ರಚಾರ ಸಿಗಲಿಲ್ಲ. ಕಾಲ ಬದಲಾಗಿದೆ, ಕೆಲವರು ಅವರ ಮಾತನ್ನು ಕೇಳಬಹುದು, ಕೇಳದೇ ಇರಬಹುದು, ಆದರೆ ಅವರು ಮಾತ್ರ ಅದೇ ಸರಳತೆಯಲ್ಲಿ ಇದ್ದಾರೆ.
-
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ












Click it and Unblock the Notifications